ಮೊದಲು ರಿಜಿಸ್ಟರ್ ಮ್ಯಾರೇಜ್.. ಆಮೇಲೆ ಸಾಂಪ್ರದಾಯಿಕ ಮದುವೆ; ಆಮಿರ್ ಮಗಳ ವಿವಾಹಕ್ಕೆ ಬಂದಿದ್ಯಾರು?
ಕಳೆದ ಕೆಲವು ದಿನಗಳಿಂದ ಬಾಲಿವುಡ್ ಪರ್ಫೆಕ್ಷನಿಸ್ಟ್ ಆಮಿರ್ ಖಾನ್ ಮಗಳ ಮದುವೆ ಬಗ್ಗೆನೇ ಚರ್ಚೆ ಆಗುತ್ತಿತ್ತು. ಆಮಿರ್ ಖಾನ್ ಮೊದಲ ಪತ್ನಿಯ ಪುತ್ರಿಯಾಗಿರೋ ಇರಾ ಖಾನ್ ಕೆಲವು ವರ್ಷಗಳಿಂದ ನೂಪುರ್ ಶಿಖಾರೆ ಜೊತೆ ಡೇಟಿಂಗ್ ಮಾಡುತ್ತಿದ್ದರು. ಈ ವಿಷಯ ಜಗತ್ತಿಗೆ ಗೊತ್ತಾದ ದಿನದಿಂದಲೂ ಆಮಿರ್ ಖಾನ್ ಮಗಳ ಮದುವೆ ಬಗ್ಗೆನೇ ಚರ್ಚೆಯಾಗುತ್ತಿತ್ತು.
ಹಲವು ದಿನಗಳಿಂದ ಒಟ್ಟಿಗೆ ಸುತ್ತಾಡುತ್ತಿದ್ದ ಈ ಜೋಡಿ ಮದುವೆ ಬಗ್ಗೆ ಪ್ರತಿ ದಿನ ಒಂದೊಂದು ಅಪ್‌ಡೇಟ್ ಸಿಗುತ್ತಲೇ ಇತ್ತು. ಇಬ್ಬರ ಡೇಟಿಂಗ್ ಮ್ಯಾಟರ್ ಹೊರಬಿದ್ದ ಹಲವು ವರ್ಷಗಳ ಬಗ್ಗೆ ವೈವಾಹಿಕ ಜೀವನಕ್ಕೆ ಕಾಲಿಡುವುದಕ್ಕೆ ನಿರ್ಧರಿಸಿದ್ದರು. ಅದರಂತೆ ನಿನ್ನೆ (ಜನವರಿ 3)ರಂದು ಇರಾ ಖಾನ್ ತಮ್ಮ ಬಾಯ್‌ಫ್ರೆಂಡ್ ನೂಪುರ್ ಶಿಖಾರೆ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಇರಾ ಖಾನ್ ಹಾಗೂ ನೂಪುರ್ ಶಿಖಾರೆ ಪ್ರಾಕ್ಟಿಕಲ್ ಆಗಿ ಮದುವೆ ಆಗಿದ್ದಾರೆಂದು ನೆಟ್ಟಿಗರು ಬಣ್ಣಿಸುತ್ತಿದ್ದಾರೆ. ಮುಂಬೈನ ಖಾಸಗಿ ಹೋಟೆಲ್‌ನಲ್ಲಿ ಮೊದಲು ಈ ಜೋಡಿ ರಿಜಿಸ್ಟರ್ ಮ್ಯಾರೇಜ್ ಆಗಿದ್ದರು. ಆ ಬಳಿಕ ಕೇವಲ ಆಪ್ತರೊಂದಿಗೆ ಸಂಪ್ರದಾಯ ಬದ್ಧವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಇವರಿಬ್ಬರ ಮದುವೆ ಫೋಟೊಗಳು ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ರಿಜಿಸ್ಟರ್ ಮ್ಯಾರೇಜ್ ವೇಳೆ ಆಮಿರ್ ಖಾನ್ ಅಳಿಯ ನೂಪುರ್ ಶಿಖಾರೆ ಬನಿಯಾನ್ ಹಾಗೂ ಶಾರ್ಟ್ಸ್ ತೊಟ್ಟು ಸಹಿ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಇದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಕೆಲ ನೆಟ್ಟಿಗರಿಂದ ವಿರೋಧವೂ ವ್ಯಕ್ತವಾಗಿದೆ. ಎಲ್ಲರೂ ಸಾಂಪ್ರದಾಯಿಕ ಉಡುಗೆಯಲ್ಲಿದ್ದಾಗ, ನೂಪುರ್ ಶಿಖಾರೆ ಹಾಗೇ ಇರಬೇಕಿತ್ತು ವಾದ ಮಾಡುತ್ತಿದ್ದಾರೆ.
ರಿಜಿಸ್ಟರ್ ಮ್ಯಾರೇಜ್ ಆಗುತ್ತಿರುವ ಈ ವಿಡಿಯೋದಲ್ಲಿ ಆಮಿರ್ ಖಾನ್, ಪುತ್ರಿ ಇರಾ ಖಾನ್, ಮೊದಲನೇ ಪತ್ನಿ ರೀನಾ ದತ್ತ, ಎರಡನೇ ಪತ್ನಿ ಕಿರಣ್ ರಾವ್ ಹಾಗೂ ನೂಪುರ್ ಕುಟುಂಬದ ಉಪಸ್ಥಿತಿ ಎದ್ದು ಕಾಣುತ್ತಿತ್ತು. ಇರಾ ಹಾಗೂ ನೂಪುರ್ ಶಿಖಾರೆ ಮಹಾರಾಷ್ಟ್ರದ ಸಂಪ್ರದಾಯಿಕ ಶೈಲಿಯಲ್ಲಿ ಮದುವೆ ನಡೆದಿದೆ. ಮೂಲಗಳ ಪ್ರಕಾರ ರಾಜಸ್ಥಾನದಲ್ಲಿ ಅದ್ದೂರಿಯಾಗಿ ಆರತಕ್ಷತೆ ಕಾರ್ಯಕ್ರಮ ಮಾಡಲು ಆಮಿರ್ ಖಾನ್ ನಿರ್ಧರಿಸಿದ್ದಾರೆಂದು ಹೇಳಲಾಗುತ್ತಿದೆ.
ಈ ಮದುವೆ ಸಮಾರಂಭಕ್ಕೆ ಉದ್ಯಮಿಗಳಾದ ಮುಕೇಶ್ ಅಂಬಾನಿ, ನೀತಾ ಅಂಬಾನಿ ಹಾಗೂ ಬಾಲಿವುಡ್ ತಾರೆಯರು ಆಗಮಿಸಿದ್ದರು. ಇನ್ನೊಂದು ಮೂಲದ ಪ್ರಕಾರ, ಆತ್ಮೀಯರು ಹಾಗೂ ಸೆಲೆಬ್ರಿಟಿಗಳಿಗಾಗಿ ದೆಹಲಿ, ಜೋದ್ಪುರ್ ಹಾಗೂ ಮುಂಬೈನಲ್ಲಿ ರಿಸೆಪ್ಷನ್ ನಡೆಯಲಿದೆ ಎಂದೂ ಹೇಳಲಾಗುತ್ತಿದೆ. ಜನವರಿ 8ರಂದು ಜೋದ್‌ಪುರದಲ್ಲಿ ಮತ್ತೊಮ್ಮೆ ಮದುವೆ ಸಮಾರಂಭ ನಡೆಯಲಿದೆ. ಹಾಗೇ ಜನವರಿ 13ರಂದು ಮುಂಬೈನಲ್ಲಿ ಅದ್ಧೂರಿ ರಿಸೆಪ್ಷನ್ ನಡೆಯಲಿದೆ ಎನ್ನಲಾಗಿದೆ.
ಅಂದ್ಹಾಗೆ 25 ವರ್ಷದ ಇರಾ ಖಾನ್ ಅಗತ್ಸು ಫೌಂಡೇಷನ್‌ಗೆ ಸಿಇಓ ಆಗಿದ್ದು, ಈ ಸಂಸ್ಥೆ ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದೆ. ಈ ಸಂಸ್ಥೆಯನ್ನು 2021ರಲ್ಲಿ ಆರಂಭಿಸಿದ್ದಾರೆ. ಇನ್ನು ಇರಾ ಖಾನ್ ಪತಿ ನೂಪುರ್ ಶಿಖಾರೆ ಸೆಲೆಬ್ರೆಟಿ ಫಿಟ್ನೆಸ್ ಟ್ರೈನರ್ ಆಗಿದ್ದಾರೆ. ಈ ಜೋಡಿ ಕಳೆದ ಮೂರು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು.


Click it and Unblock the Notifications











