ಇಂಥ ಕೆಟ್ಟ ಮನಃಸ್ಥಿತಿಗಳಿಗೆ ಏನಂತ ಹೇಳೋದು.?!

By Harshitha

Recommended Video

ಬದಲಾಗಬೇಕಿದೆ ಜನರ ಯೋಚನಾ ಲಹರಿ | FIlmibeat Kannada

ಸೋಷಿಯಲ್ ಮೀಡಿಯಾದಲ್ಲಿ ತಾರೆಯರು ಟ್ರೋಲ್ ಆಗುವುದು ಹೊಸದೇನಲ್ಲ. ಮಲೈಕಾ ಅರೋರ, ಐಶ್ವರ್ಯ ರೈ ಬಚ್ಚನ್, ಅಭಿಶೇಕ್ ಬಚ್ಚನ್, ಸೋನಂ ಕಪೂರ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಟ್ರೋಲ್ ಆಗಿದ್ದಾರೆ. ಈಗ ಅದೇ ಲಿಸ್ಟ್ ಗೆ ಹೊಸ ಸೇರ್ಪಡೆ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್.

ಮೊನ್ನೆಯಷ್ಟೇ ಸಂಬಂಧಿ ಮನ್ಸೂರ್ ಖಾನ್ ರವರ 60ನೇ ವರ್ಷದ ಹುಟ್ಟುಹಬ್ಬ ಸೆಲೆಬ್ರೇಟ್ ಮಾಡಲು ಅವರ ಫಾರ್ಮ್ ಹೌಸ್ ಗೆ ಇಡೀ ಆಮೀರ್ ಖಾನ್ ಕುಟುಂಬ ಭೇಟಿ ಕೊಟ್ಟಿತ್ತು.

ಈ ವೇಳೆ ಕ್ಲಿಕ್ ಮಾಡಿದ ಕೆಲ ಫೋಟೋಗಳನ್ನು ಆಮೀರ್ ಖಾನ್ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಶೇರ್ ಮಾಡಿದ್ದರು. ಹಾಗೆ ಆಮೀರ್ ಖಾನ್ ಶೇರ್ ಮಾಡಿದ್ದ ಐದಾರು ಫೋಟೋಗಳ ಪೈಕಿ ಒಂದು ಫೋಟೋ ಇದೀಗ ಕೆಲವರ ಕೆಂಗಣ್ಣಿಗೆ ಗುರಿಯಾಗಿದೆ.

Aamir Khan gets slammed for posting a picture with Daughter Ira Khan

ಫೋಟೋದಲ್ಲಿ ಆಮೀರ್ ಖಾನ್ ಮೇಲೆ ಪುತ್ರಿ ಇರಾ ಖಾನ್ ಕುಳಿತಿದ್ದಾರೆ. ಇದನ್ನ ಕಂಡ ಕೆಲವರು, ''ಆಮೀರ್ ಖಾನ್ ಮುಸ್ಲಿಂ ಧರ್ಮ ಪಾಲಿಸುತ್ತಿಲ್ಲ. ಪುತ್ರಿ ಇರಾ ಕುಳಿತಿರುವ ಭಂಗಿ ಸರಿಯಿಲ್ಲ'' ಅಂತೆಲ್ಲ ಕಾಮೆಂಟ್ ಮಾಡಿದ್ದಾರೆ. ಸಾಲದಕ್ಕೆ ಇರಾ ಧರಿಸಿರುವ ಬಟ್ಟೆ ಬಗ್ಗೆಯೂ ಸಂಪ್ರದಾಯವಾದಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

1000 ಕೋಟಿ ಬಜೆಟ್ 'ಮಹಾಭಾರತ' ಚಿತ್ರದಲ್ಲಿ ಆಮೀರ್ ಖಾನ್ ಪಾತ್ರವೇನು.?
ಸಾಲು ಸಾಲು ನೆಗೆಟಿವ್ ಕಾಮೆಂಟ್ಸ್ ನೋಡಿದ್ಮೇಲೆ, ಆಮೀರ್ ಖಾನ್ ಅಭಿಮಾನಿಗಳು 'ಮಿಸ್ಟರ್ ಪರ್ಫೆಕ್ಷನಿಸ್ಟ್' ಪರ ಬ್ಯಾಟಿಂಗ್ ಆರಂಭಿಸಿದ್ದಾರೆ. ''ಅಪ್ಪ-ಮಗಳ ಅನ್ಯೋನ್ಯತೆ ಕಂಡು ಹೊಗಳುವ ಬದಲು, ಅದರಲ್ಲೂ ಹುಳುಕು ಹುಡುಕುವವರು ಕೆಟ್ಟ ಮನಃಸ್ಥಿತಿ ಉಳ್ಳವರು'' ಎನ್ನುತ್ತ ಆಮೀರ್ ಖಾನ್ ಪರ ಅಭಿಮಾನಿಗಳು ದನಿ ಎತ್ತಿದ್ದಾರೆ.

ಒಟ್ನಲ್ಲಿ ಆಮೀರ್ ಖಾನ್ ಶೇರ್ ಮಾಡಿದ ಒಂದು ಫೋಟೋ ಇದೀಗ ಇಷ್ಟೆಲ್ಲ ರಾದ್ಧಾಂತಕ್ಕೆ ಕಾರಣವಾಗಿದೆ.

More from Filmibeat

English summary
Aamir Khan gets slammed for posting a picture with Daughter Ira Khan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X