For Quick Alerts
  ALLOW NOTIFICATIONS  
  For Daily Alerts

  1000 ಕೋಟಿ ಬಜೆಟ್ 'ಮಹಾಭಾರತ' ಚಿತ್ರದಲ್ಲಿ ಆಮೀರ್ ಖಾನ್ ಪಾತ್ರವೇನು.?

  By Harshitha
  |

  ಎಸ್.ಎಸ್.ರಾಜಮೌಳಿ ನಿರ್ದೇಶನದ 'ಬಾಹುಬಲಿ' ಸಿನಿಮಾ ಸೂಪರ್ ಡ್ಯೂಪರ್ ಹಿಟ್ ಆದ್ಮೇಲೆ, ಭಾರತೀಯ ಚಿತ್ರರಂಗದಲ್ಲಿ ಪೌರಾಣಿಕ ಚಿತ್ರಗಳ ಟ್ರೆಂಡ್ ಶುರು ಆಗಿದೆ. ಇತ್ತ ಸ್ಯಾಂಡಲ್ ವುಡ್ ನಲ್ಲಿ 'ಕುರುಕ್ಷೇತ್ರ' ಸಿನಿಮಾ ಮೂಡಿಬರಲಿದ್ರೆ, ಅತ್ತ ಬಾಲಿವುಡ್ ನಲ್ಲಿ 'ಮಹಾಭಾರತ' ಸಿನಿಮಾ ಮಾಡುವ ತಯಾರಿ ಆರಂಭವಾಗಿದ್ಯಂತೆ.

  ಬರೋಬ್ಬರಿ 1000 ಕೋಟಿ ಬಜೆಟ್ ನಲ್ಲಿ ತಯಾರಾಗುವ 'ಮಹಾಭಾರತ' ಚಿತ್ರದಲ್ಲಿ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್ ನಟಿಸುವುದು ಪಕ್ಕಾ ಆಗಿದ್ಯಂತೆ. 'ಥಗ್ಸ್ ಆಫ್ ಹಿಂದುಸ್ತಾನ್' ಸಿನಿಮಾ ಬಳಿಕ 'ಮಹಾಭಾರತ' ಚಿತ್ರದಲ್ಲಿ ನಟಿಸಲು ಆಮೀರ್ ಖಾನ್ ಮನಸ್ಸು ಮಾಡಿದ್ದಾರಂತೆ.

  ಇಂತಹ ಅಂತೆ-ಕಂತೆಗಳು ಬಾಲಿವುಡ್ ಗಲ್ಲಿಗಲ್ಲಿಗಳಲ್ಲಿ ರೆಕ್ಕೆ ಪುಕ್ಕ ಕಟ್ಟಿಕೊಂಡು ಹಾರಾಡುತ್ತಿರುವಾಗಲೇ, 'ಮಹಾಭಾರತ' ಚಿತ್ರದ ಬಗ್ಗೆ ಆಮೀರ್ ಖಾನ್ ಮಾತನಾಡಿದ್ದಾರೆ. ಹಾಗಾದ್ರೆ, 'ಮಹಾಭಾರತ' ಬಗ್ಗೆ ಆಮೀರ್ ಏನು ಹೇಳ್ತಾರೆ.? ಸಿನಿಮಾದಲ್ಲಿ ಆಮೀರ್ ಖಾನ್ ನಿರ್ವಹಿಸುವ ಪಾತ್ರ ಯಾವುದು.? ಎಂಬ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ ಓದಿರಿ...

  'ಮಹಾಭಾರತ'ವೇ ಡ್ರೀಮ್ ಪ್ರಾಜೆಕ್ಟ್

  'ಮಹಾಭಾರತ'ವೇ ಡ್ರೀಮ್ ಪ್ರಾಜೆಕ್ಟ್

  'ಸೀಕ್ರೆಟ್ ಸೂಪರ್ ಸ್ಟಾರ್' ಚಿತ್ರದ ಪ್ರಚಾರ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ನಟ ಆಮೀರ್ ಖಾನ್, ''ಮಹಾಭಾರತ'ವನ್ನ ತೆರೆಗೆ ತರುವುದೇ ನನ್ನ ಕನಸು. ಆದ್ರೆ ಈ ಪ್ರಾಜೆಕ್ಟ್ ಶುರು ಮಾಡುವುದಕ್ಕೆ ನನಗೆ ಹೆದರಿಕೆ ಇದೆ. ಯಾಕಂದ್ರೆ, ಅದಕ್ಕೆ ಕನಿಷ್ಟ ಅಂದರೂ 15-20 ವರ್ಷಗಳು ಬೇಕು'' ಎಂದಿದ್ದಾರೆ.

  ಇಷ್ಟದ ಪಾತ್ರ ಯಾವುದು.?

  ಇಷ್ಟದ ಪಾತ್ರ ಯಾವುದು.?

  ''ಮಹಾಭಾರತ'ದಲ್ಲಿ ನನ್ನ ಅಚ್ಚುಮೆಚ್ಚಿನ ಪಾತ್ರ ಕರ್ಣ. ಆದ್ರೆ, ನನ್ನ ಮೈಕಟ್ಟಿನಿಂದಾಗಿ ಕರ್ಣ ಪಾತ್ರಕ್ಕೆ ನ್ಯಾಯ ಒದಗಿಸುವ ಬಗ್ಗೆ ನನಗೆ ಅನುಮಾನ ಇದೆ. ಸಿನಿಮಾದಲ್ಲಿ ನಾನು ಕೃಷ್ಣನ ಪಾತ್ರ ನಿರ್ವಹಿಸಬಹುದು. ನನಗೆ ಅರ್ಜುನ ಪಾತ್ರ ಕೂಡ ತುಂಬಾ ಇಷ್ಟ'' ಎಂದಿದ್ದಾರೆ ನಟ ಆಮೀರ್ ಖಾನ್.

  ಹಾಗಾದ್ರೆ, ಶ್ರೀಕೃಷ್ಣ ಆಗ್ತಾರಾ ಆಮೀರ್ ಖಾನ್.?

  ಹಾಗಾದ್ರೆ, ಶ್ರೀಕೃಷ್ಣ ಆಗ್ತಾರಾ ಆಮೀರ್ ಖಾನ್.?

  ಆಮೀರ್ ಖಾನ್ ಆಡಿರುವ ಮಾತುಗಳನ್ನು ಕೇಳಿದರೆ, 'ಮಹಾಭಾರತ' ಸಿನಿಮಾದಲ್ಲಿ ಶ್ರೀಕೃಷ್ಣ ಆಗುವುದಕ್ಕೆ ಮನಸ್ಸು ಮಾಡಿರುವ ಹಾಗಿದೆ.

  ಚಿತ್ರಕ್ಕೆ ಬಂಡವಾಳ ಹಾಕ್ತಾರಾ ಮುಖೇಶ್ ಅಂಬಾನಿ.?

  ಚಿತ್ರಕ್ಕೆ ಬಂಡವಾಳ ಹಾಕ್ತಾರಾ ಮುಖೇಶ್ ಅಂಬಾನಿ.?

  'ಮಹಾಭಾರತ' ಚಿತ್ರಕ್ಕೆ ಸಾವಿರ ಕೋಟಿ ಬಂಡವಾಳ ಹಾಕಲು ಮುಖೇಶ್ ಅಂಬಾನಿ ಮುಂದೆ ಬಂದಿದ್ದಾರೆ ಎಂದು ವರದಿ ಆಗಿದೆ.

  ಯಾವುದೂ ಕನ್ ಫರ್ಮ್ ಇಲ್ಲ!

  ಯಾವುದೂ ಕನ್ ಫರ್ಮ್ ಇಲ್ಲ!

  ''ಒಂದಲ್ಲ ಒಂದು ದಿನ 'ಮಹಾಭಾರತ' ಚಿತ್ರವನ್ನ ತೆರೆಗೆ ತಂದೇ ತರುವೆ'' ಎನ್ನುತ್ತಾರೆ ಆಮೀರ್ ಖಾನ್. ಅಲ್ಲಿಗೆ, 'ಮಹಾಭಾರತ' ಸಿನಿಮಾ ಮಾಡುವ ಇಚ್ಛೆ ಆಮೀರ್ ಖಾನ್ ಗಿದೆ. ಆದ್ರೆ, 'ಥಗ್ಸ್ ಆಫ್ ಹಿಂದೂಸ್ತಾನ್' ಬಳಿಕ 'ಮಹಾಭಾರತ' ಸೆಟ್ಟೇರುವುದು, ಚಿತ್ರದಲ್ಲಿ ಶ್ರೀಕೃಷ್ಣನಾಗಿ ಆಮೀರ್ ಖಾನ್ ಅಭಿನಯಿಸುವುದು, ಮುಖೇಶ್ ಅಂಬಾನಿ ಬಂಡವಾಳ ಹಾಕುವುದು ಕನ್ ಫರ್ಮ್ ಆಗಿಲ್ಲ. ಎಲ್ಲವೂ ಅಂತೆ-ಕಂತೆ ಅಷ್ಟೇ.

  English summary
  Will Aamir Khan play Lord Krishna in 1000 crore film 'Mahabharatha'.?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X