»   » ಅಮೀರ್ ಖಾನ್ ಚಿತ್ರಕ್ಕೆ ನಾಯಕಿ ಆಗಲಿದ್ದಾರೆ ಸೈಫ್ ಮಗಳು?

ಅಮೀರ್ ಖಾನ್ ಚಿತ್ರಕ್ಕೆ ನಾಯಕಿ ಆಗಲಿದ್ದಾರೆ ಸೈಫ್ ಮಗಳು?

Posted By:
Subscribe to Filmibeat Kannada

ಬಾಲಿವುಡ್ ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್ 'ದಂಗಲ್' ನಂತರ ಯಾವ ಚಿತ್ರದಲ್ಲಿ ಅಭಿನಯಿಸಲಿದ್ದಾರೆ ಎಂಬ ಕುತೂಹಲಕ್ಕೆ ಕಳೆದ ವರ್ಷವೇ ಬ್ರೇಕ್ ಹಾಕಿದ್ದರು.['ದಂಗಲ್' ನಂತರ ಹೊಸ ಸಾಹಸಕ್ಕೆ ರೆಡಿಯಾದ ಅಮೀರ್ ಖಾನ್]

'ದಂಗಲ್' ಸಿನಿಮಾ ಗೆ ತೂಕ ಹೆಚ್ಚಿಸಿಕೊಂಡಿದ್ದ ಅಮೀರ್ ಖಾನ್, ಈಗ ಸ್ಲಿಮ್ ಆಗಿದ್ದು ಪೊಗರಸ್ತಾದ ಮೀಸೆ ಮತ್ತು ಉದ್ದನೆಯ ಗಡ್ಡ ಬಿಟ್ಟು 'ಥಗ್ಸ್ ಆಫ್ ಹಿಂದೂಸ್ತಾನ್' ಚಿತ್ರಕ್ಕೆ ರೆಡಿಯಾಗಿದ್ದಾರೆ. ಆದರೆ ಈ ಚಿತ್ರದಲ್ಲಿ ಮಹಿಳಾ ಪಾತ್ರದ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಲಿರುವ ನಟಿ ಯಾರು ಎಂಬುದಕ್ಕೆ ಸ್ಪಷ್ಟನೆ ಸಿಕ್ಕಿರಲಿಲ್ಲ. ಈ ಬಗ್ಗೆ ಈಗ ಹೊಸ ಸುದ್ದಿಯೊಂದು ಹರಿದಾಡುತ್ತಿದ್ದು ಅಮೀರ್ ಖಾನ್, ಸೈಫ್ ಅಲಿ ಖಾನ್ ಮಗಳನ್ನು ಚಿತ್ರಕ್ಕೆ ಕರೆತರುವ ಪ್ಲಾನ್ ಮಾಡುತ್ತಿದ್ದಾರಂತೆ.

'ಥಗ್ಸ್ ಆಫ್ ಹಿಂದೂಸ್ತಾನ್'

ಬಾಲಿವುಡ್ ನ ಈ ವರ್ಷದ ಬಹು ನಿರೀಕ್ಷಿತ ಸಿನಿಮಾ ಆಗಿ ಯಸ್ ರಾಜ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಮೂಡಿಬರಲಿರುವ 'ಥಗ್ಸ್ ಆಫ್ ಹಿಂದೂಸ್ತಾನ್' ಕಳೆದ ವರ್ಷ ಟೈಟಲ್ ಪ್ರಕಟಗೊಂಡ ದಿನದಿಂದಲೂ ಸಿನಿ ಪ್ರಿಯರ ಗಮನಸೆಳೆದಿದೆ. ಕಾರಣ ಮೊಟ್ಟ ಮೊದಲ ಬಾರಿಗೆ ಅಮೀರ್ ಖಾನ್ ಜೊತೆಗೆ ಬಾಲಿವುಡ್ ನ ಬಿಗ್ ಬಿ ಅಮಿತಾಬ್ ಬಚ್ಚನ್ ತೆರೆ ಹಂಚಿಕೊಳ್ಳಲಿದ್ದಾರೆ.

'ಥಗ್ಸ್ ಆಫ್ ಹಿಂದೂಸ್ತಾನ್'ನಲ್ಲಿ ಸೈಫ್ ಮಗಳು

ಮುಂಬೈ ಮಿರರ್ ವರದಿ ಪ್ರಕಾರ, ಮಿಸ್ಟರ್ ಪರ್ಫೆಕ್ಷನಿಸ್ಟ್, ಸೈಫ್ ಅಲಿ ಖಾನ್ ಮಗಳು ಸಾರಾ ಅಲಿ ಖಾನ್ ರನ್ನು 'ಥಗ್ಸ್ ಆಫ್ ಹಿಂದೂಸ್ತಾನ್' ಗೆ ಸೇರಿಸಿಕೊಳ್ಳಲು ಮನಸ್ಸು ಮಾಡಿದ್ದಾರೆ. ಚಿತ್ರಕ್ಕೆ ಯಂಗ್ ಮತ್ತು ಹೊಸ ಪ್ರತಿಭೆ ಬೇಕು ಎನ್ನುವ ಕಾರಣದಿಂದ ಅಮೀರ್ ಈ ನಿರ್ಧಾರ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಸಾರಾ ಈ ಚಿತ್ರದಲ್ಲಿ ನಟಿಸಿದರೆ 'ಥಗ್ಸ್ ಆಫ್ ಹಿಂದೂಸ್ತಾನ್' ಅವರ ಚೊಚ್ಚಲ ಸಿನಿಮಾ ಆಗಲಿದೆ.

ಈ ಹಿಂದೆ ಇವರನ್ನೆಲ್ಲಾ ಚಿತ್ರದ ಹೀರೋಯಿನ್ ಎನ್ನಲಾಗಿತ್ತು...

ಈ ಹಿಂದೆ 'ಥಗ್ಸ್ ಆಫ್ ಹಿಂದೂಸ್ತಾನ್' ಚಿತ್ರದಲ್ಲಿ ಅಮೀರ್ ಖಾನ್ ಗೆ ನಾಯಕಿ ಆಗಿ ವಾಣಿ ಕಪೂರ್, ಅಲಿಯಾ ಭಟ್ ಮತ್ತು ಶ್ರದ್ಧಾ ಕಪೂರ್ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು.

ಸಾರಾ ಅಲಿ ಖಾನ್ ಮೊದಲ ಸಿನಿಮಾ ಯಾವುದಾಗಲಿದೆ?

ಅಂದಹಾಗೆ ಸೈಫ್ ಅಲಿ ಖಾನ್ ಮಗಳು ಸಾರಾ ಅಲಿ ಖಾನ್, 'ಸ್ಟೂಡೆಂಟ್ ಆಫ್ ದಿ ಇಯರ್ 2' ಚಿತ್ರದಲ್ಲಿ ಟೈಗರ್ ಶ್ರಾಫ್ ಎದುರಾಗಿ ನಟಿಸಲಿದ್ದಾರೆ ಎಂದು ವರದಿ ಆಗಿತ್ತು. ಆದ್ದರಿಂದ ಸಾರಾ ಅಲಿ ಖಾನ್ ಅವರ ಚೊಚ್ಚಲ ಸಿನಿಮಾ 'ಥಗ್ಸ್ ಆಫ್ ಹಿಂದೂಸ್ತಾನ್' ಅಥವಾ ''ಸ್ಟೂಡೆಂಟ್ ಆಫ್ ದಿ ಇಯರ್ 2' ಎರಡರಲ್ಲಿ ಯಾವುದಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

English summary
Bollywood Actor Aamir Khan Keen To Cast Saif's Daughter Sara Ali Khan In Thugs Of Hindostan?

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X