»   » 'ದಂಗಲ್' ನಂತರ ಹೊಸ ಸಾಹಸಕ್ಕೆ ರೆಡಿಯಾದ ಅಮೀರ್ ಖಾನ್

'ದಂಗಲ್' ನಂತರ ಹೊಸ ಸಾಹಸಕ್ಕೆ ರೆಡಿಯಾದ ಅಮೀರ್ ಖಾನ್

Posted By:
Subscribe to Filmibeat Kannada

'ದಂಗಲ್' ನಂತರ ಅಮೀರ್ ಖಾನ್ 'ಭಾರತದ ಮೋಸ್ಟ್ ಇಂಟೆಲಿಜೆಂಟ್ ಆಕ್ಟರ್' ಎಂದು ಕರೆಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ತಮ್ಮ ಅಭಿನಯದಿಂದ ಮೋಡಿ ಮಾಡಿದ್ದ ಮಿಸ್ಟರ್ ಪರ್ಫೆಕ್ಷನಿಸ್ಟ್ ಈಗ ಹೊಸ ಸಾಹಸ ವೊಂದಕ್ಕೆ ಮುಂದಾಗಿದ್ದಾರೆ.['ಅಮೀರ್ ಖಾನ್ ಭಾರತದ ಮೋಸ್ಟ್ ಇಂಟೆಲಿಜೆಂಟ್ ಆಕ್ಟರ್': ಹೇಳಿದ್ದು ಯಾರು?]

ಭಾರತೀಯ ಸಿನಿಮಾ ರಂಗಕ್ಕೆ 'ತಾರೆ ಝಮೀನ್ ಪರ್', 'ರಂಗ್ ದೆ ಬಸಂತಿ', 'ಲಗಾನ್', 'ದಿಲ್ ಛಾಹ್ತ ಹೈ', 'ದಂಗಲ್' ನಂತಹ ಹೊಸ ಆಯಾಮಗಳ ಚಿತ್ರವನ್ನು ಅಮೀರ್ ಖಾನ್ ನೀಡಿದ್ದಾರೆ. ಅವರ ಮುಂದಿನ ಸಿನಿಮಾ ಯಾವುದು ಎಂದು ನಿರೀಕ್ಷಿಸುವ ಮುನ್ನವೇ, ಅಮೀರ್ ಖಾನ್ ಮುಂದಿನ ಸಿನಿಮಾದ ಫಸ್ಟ್ ಲುಕ್ ಬಿಡುಗಡೆ ಆಗಿದೆ.

ಹೊಸ ಸಾಹಸದಲ್ಲಿ ಅಮೀರ್ ಖಾನ್

'ದಂಗಲ್' ಚಿತ್ರದ ಗ್ರೇಟ್ ನೆಸ್ ಅನ್ನು ಪಕ್ಕಕ್ಕೆ ಸರಿಸಿ, ಅಮೀರ್ ಖಾನ್ ತಮ್ಮ ಮುಂದಿನ ಸಿನಿಮಾದಲ್ಲಿ ತೊಡಗಿಕೊಂಡಿದ್ದಾರೆ.['ದಂಗಲ್', 'ಸುಲ್ತಾನ್' ಚಿತ್ರಕ್ಕೆ 'ರಯೀಸ್' ಹೋಲಿಸುವುದಿಲ್ಲ: ಶಾರುಖ್]

ಅಮೀರ್ ಮುಂದಿನ ಸಿನಿಮಾ ಹೆಸರೇನು?

ಅಮೀರ್ ಖಾನ್ ನಟಿಸಲಿರುವ ಮುಂದಿನ ಸಿನಿಮಾ ಹೆಸರು 'ಥಗ್ಸ್ ಆಫ್ ಹಿಂದೂಸ್ತಾನ್'. ಈ ಚಿತ್ರದಲ್ಲಿ ಅಮೀರ್ ಖಾನ್ ಪಾತ್ರದ ಫಸ್ಟ್ ಲುಕ್ ಈಗ ಬಿಡುಗಡೆ ಆಗಿದ್ದು, ಬಾಲಿವುಡ್ ಸಿನಿಪ್ರಿಯರಲ್ಲಿ ಚಿತ್ರದ ಬಗ್ಗೆ ಹೆಚ್ಚು ಕುತೂಹಲ ಕೆರಳಿಸಿದೆ.

'ಥಗ್ಸ್ ಆಫ್ ಹಿಂದೂಸ್ತಾನ್' ನಲ್ಲಿ ಅಮೀರ್ ಲುಕ್

'ದಂಗಲ್' ಸಿನಿಮಾ ಗೆ ತೂಕ ಹೆಚ್ಚಿಸಿ ಕೊಂಡಿದ್ದ ಅಮೀರ್ ಖಾನ್, 'ಥಗ್ಸ್ ಆಫ್ ಹಿಂದೂಸ್ತಾನ್' ಚಿತ್ರಕ್ಕಾಗಿ ಸ್ಲಿಮ್ ಆಗಿದ್ದಾರೆ. ತಲೆ ಮೇಲೆ ಕೆಂಪು ಬಣ್ಣದ ಟರ್ಬನ್ ಧರಿಸಿ, ಪೊಗರಸ್ತಾನ ಮೀಸೆ ಮತ್ತು ಉದ್ದನೆಯ ಗಡ್ಡದಿಂದ ಮಿಂಚುತ್ತಿದ್ದಾರೆ. ಆದ್ದರಿಂದ ಚಿತ್ರ ಹೇಗಿರಬಹುದು ಎಂಬ ಕ್ಯೂರಿಯಾಸಿಟಿ ಅಮೀರ್ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.

ಕಾದಂಬರಿ ಆಧಾರಿತ ಸಿನಿಮಾ

ಅಮೀರ್ ಖಾನ್ ಅಭಿನಯಿಸುತ್ತಿರುವ 'ಥಗ್ಸ್ ಆಫ್ ಹಿಂದೂಸ್ತಾನ್', 1839 ರಲ್ಲಿ ಬಿಡುಗಡೆ ಆದ ಫಿಲಿಪ್ ಮೀಡೋಸ್ ಟೇಲರ್ ಬರೆದ 'ಕನ್ಫೆಶನ್ಸ್ ಆಫ್ ಎ ಥಗ್' ನಾವೆಲ್ ಆಧರಿತ ಚಿತ್ರವಾಗಿದೆ.

'ಥಗ್ಸ್ ಆಫ್ ಹಿಂದೂಸ್ತಾನ್' ಚಿತ್ರದಲ್ಲಿ ಬಿಗ್ ಬಿ

'ಥಗ್ಸ್ ಆಫ್ ಹಿಂದೂಸ್ತಾನ್' ಚಿತ್ರದಲ್ಲಿ ಅಮೀರ್ ಖಾನ್ ಮಾತ್ರವಲ್ಲದೇ, ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಸಹ ನಟಿಸಲಿದ್ದಾರೆ.

ಚಿತ್ರ ಕೃಪೆ: DABBOO RATNANI Photography

ನಾಯಕಿ ಯಾರು?

ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳಾದ ಧೂಮ್ ಸೀರೀಸ್ ಚಿತ್ರಗಳ ನಿರ್ದೇಶಕ ವಿಜಯ್ ಕೃಷ್ಟ ಆಚಾರ್ಯ 'ಥಗ್ಸ್ ಆಫ್ ಹಿಂದೂಸ್ತಾನ್' ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ಸದ್ಯದಲ್ಲಿ ನಾಯಕಿಗಾಗಿ ಹುಟುಕಾಟ ನಡೆಸುತ್ತಿರುವ ಡೈರೆಕ್ಟರ್ ಶ್ರದ್ಧಾ ಕಪೂರ್ ಅನ್ನು ಆಯ್ಕೆ ಮಾಡುವ ಸಾಧ್ಯತೆಗಳು ಇವೆಯಂತೆ.

English summary
Thugs of Hindostan: Everyone has been excited ever since it was confirmed that Amitabh Bachchan and Aamir Khan are coming together in a movie. Now, the much-awaited look of the actor for the multi-starrer Thugs of Hindostan has astonished everyone.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada