'ಲಾಲ್ ಸಿಂಗ್ ಚಡ್ಡ': 2022ರಲ್ಲಿ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾ ಅಂದ್ರೆ ನಂಬ್ತಿರಾ?
ಬಹು ನಿರೀಕ್ಷಿತ ಬಾಲಿವುಡ್ ಸಿನಿಮಾ 'ಲಾಲ್ ಸಿಂಗ್ ಚಡ್ಡ' ಸೋಲುಂಡಿದೆ ಅನ್ನೋದನ್ನು ಬಾಲಿವುಡ್ ಟ್ರೇಡ್ ಅನಲಿಸ್ಟ್‌ಗಳೆ ಒಪ್ಪಿಕೊಂಡಿದ್ದಾರೆ. ಈ ಮಧ್ಯೆ ಬಾಕ್ಸಾಫೀಸ್‌ನಲ್ಲಿ ಆಮಿರ್ ಖಾನ್ ಸಿನಿಮಾ ಗಳಿಸೋ ಗಳಿಕೆನೇ ಅಲ್ಲ ಅಂತಾನೂ ಹೇಳಿದ್ದೂ ಆಗಿದೆ. ಈ ಮೂಲಕ ಬಾಲಿವುಡ್ ಇಟ್ಟಿದ್ದ ದೊಡ್ಡ ನಿರೀಕ್ಷೆನೇ ಸುಳ್ಳಾಗಿದೆ.
'ಲಾಲ್ ಸಿಂಗ್ ಚಡ್ಡ' ಬಿಡುಗಡೆಯಾದ ಬಳಿಕ ದೊಡ್ಡ ಮಟ್ಟಕ್ಕೆ ಸದ್ದು ಮಾಡುತ್ತೆ ಎಂದೇ ಹೇಳಲಾಗಿತ್ತು. ಆದರೆ, ಬಾಕ್ಸಾಫೀಸ್‌ನಲ್ಲಿ ದುಬಾರಿ ಕಲೆಕ್ಷನ್ ಮಾಡುವಲ್ಲಿ ಈ ಸಿನಿಮಾ ಸೋತಿದೆ. ಹೀಗಿದ್ದರೂ, ಲಾಲ್ ಸಿಂಗ್ ಚಡ್ಡ ದಾಖಲೆ ಬರೋದ್ರಲ್ಲಿ ಮಾತ್ರ ಹಿಂದೆ ಬಿದ್ದಿಲ್ಲ. ಆ ದಾಖಲೆ ಬಗ್ಗೆನೇ ಈಗ ಬಾಲಿವುಡ್‌ನಲ್ಲಿ ಚರ್ಚೆಯಗುತ್ತಿದೆ.
ಆಮಿರ್ ಖಾನ್ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮೋಡಿ ಮಾಡುವಲ್ಲಿ ಹಿಂದೆ ಬಿದ್ದಿದೆ. ಬಾಲಿವುಡ್ ಮಂದಿನೇ ಈ ಸಿನಿಮಾ ಉಳಿಸಿಕೊಳ್ಳುವುದಕ್ಕೆ ಮುಂದಾಗಿದ್ದರೂ, ಅದೂ ವರ್ಕೌಟ್ ಆಗಿಲ್ಲ. ಆದ್ರೀಗ ಬಾಲಿವುಡ್ ಮಂದಿಗೆ ಸಮಾಧಾನ ನೀಡುವಂತಹ ಸುದ್ದಿಯೊಂದು ಓಡಾಡುತ್ತಿದೆ. ಅದೇನು ಅಂತ ತಿಳಿಯಲು ಮುಂದೆ ಓದಿ.

ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾ
'ಲಾಲ್ ಸಿಂಗ್ ಚಡ್ಡ' 2022ರಲ್ಲಿ ಬಾಲಿವುಡ್‌ನಲ್ಲಿ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾ ಎಂದ್ರೆ ನಂಬ್ತಿರಾ? ಕಳೆದ ಹಲವು ದಿನಗಳಿಂದ ಬರ್ತಿರೋ ರಿಪೋರ್ಟ್ ನೋಡ್ತಿದ್ರೆ, 'ಲಾಲ್ ಸಿಂಗ್ ಚಡ್ಡ' ಅತಿ ಹೆಚ್ಚು ಗಳಿಕೆ ಕಂಡ ಸಿನಿಮಾ ಅಂತ ಹೇಳುವುದಕ್ಕೆ ಸಾಧ್ಯವೇ ಇಲ್ಲ. ಇದು ಸುಳ್ಳು ಇರಬಹುದು ಅಂತ ಅಂದುಕೊಳ್ಳೋರಿಗೇನು ಕಮ್ಮಿಯಿಲ್ಲ. ಆದರೆ, ಈ ಸುದ್ದಿ ಅಕ್ಷರಶ: ನಿಜ. 'ಲಾಲ್ ಸಿಂಗ್ ಚಡ್ಡ' ವಿದೇಶದ ಬಾಕ್ಸಾಫೀಸ್‌ನಲ್ಲಿ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾ ಎನಿಸಿಕೊಂಡಿದೆ.

ವಿದೇಶದಲ್ಲಿ ಸಿನಿಮಾ ಗಳಿಸಿದ್ದೆಷ್ಟು?
'ಲಾಲ್ ಸಿಂಗ್ ಚಡ್ಡ' ಭಾರತದಲ್ಲಿ ಸೋಲುಂಡರೂ ವಿದೇಶದಲ್ಲಿ ಖುಷಿ ಕೊಡುವಂತಹ ಗಳಿಕೆ ಕಾಣುತ್ತಿದೆ. ಓವರ್‌ಸೀಸ್ ಬಾಕ್ಸಾಫೀಸ್‌ನಲ್ಲಿ ಎರಡು ವಾರದ ಅಂತ್ಯಕ್ಕೆ 'ಲಾಲ್ ಸಿಂಗ್ ಚಡ್ಡ' ಸುಮಾರು 7.5 ಮಿಲಿಯನ್ ಡಾಲರ್‌ನಷ್ಟು ಹಣ ಗಳಿಸಿದೆ. ಅಂದ್ರೆ ಭಾರತದ ಲೆಕ್ಕಾಚಾರದ ಪ್ರಕಾರ, ಸುಮಾರು 59.89 ಕೋಟಿ ರೂ. ಕಲೆಕ್ಷನ್ ಮಾಡಿದೆ. ಈ ಮೂಲಕ ಬಾಲಿವುಡ್‌ನ ಗಂಗೂಬಾಯಿ ಕಾಠಿಯಾವಾಡಿ, ದಿ ಕಾಶ್ಮೀರ್ ಫೈಲ್ಸ್, ಭುಲ್ ಭುಲಯ್ಯದಂತಹ ಸಿನಿಮಾಗಳನ್ನು ಹಿಂದಿಕ್ಕಿದೆ.

ಯಾವ್ಯಾವ ಸಿನಿಮಾಗೆಷ್ಟು ಗಳಿಕೆ?
'ಲಾಲ್ ಸಿಂಗ್ ಚಡ್ಡ' ಓವರ್‌ಸೀಸ್ ಬಾಕ್ಸಾಫೀಸ್‌ನಲ್ಲಿ 7.5 ಮಿಲಿಯನ್ ಡಾಲರ್ ಗಳಿಸಿದ್ದು, 2022ರ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾ ಪಟ್ಟಿಗೆ ಸೇರಿದೆ. ಅದಕ್ಕೆ ಬಾಲಿವುಡ್‌ನಲ್ಲಿ ಈ ವಾರ ಹೆಚ್ಚು ಗಳಿಕೆ ಕಂಡ ಟಾಪ್ 5 ಸಿನಿಮಾಗಳ ಪಟ್ಟಿ ಹೀಗಿದೆ.
ಲಾಲ್ ಸಿಂಗ್ ಚಡ್ಡ $7.5 ಮಿಲಿಯನ್
ಗಂಗೂಬಾಯಿ ಕಾಠಿಯಾವಾಡಿ $7.47 ಮಿಲಿಯನ್
ಭುಲ್ ಭುಲಯ್ಯ 2 $5.88 ಮಿಲಿಯನ್
ದಿ ಕಾಶ್ಮೀರ್ ಫೈಲ್ಸ್ $5.7 ಮಿಲಿಯನ್
ಜುಗ್ ಜುಗ್ ಜೀಯೊ $4.33 ಮಿಲಿಯನ್

ಆಮಿರ್ ಸಿನಿಮಾ ಗಳಿಕೆ ಎಷ್ಟು?
ಆಮಿರ್ ಖಾನ್ ಸಿನಿಮಾ 'ಲಾಲ್ ಸಿಂಗ್ ಚಡ್ಡ' ಪಂಜಾಬ್ ಸೇರಿದಂತೆ ಕೆಲವೆಡೆ ಮಾತ್ರ ಉತ್ತಮ ರೆಸ್ಪಾನ್ಸ್ ಸಿಕ್ಕಿತ್ತು. ದೆಹಲಿ, ಉತ್ತರ ಪ್ರದೇಶ ಹಾಗೂ ಪಂಜಾಬ್‌ನಲ್ಲಿ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಪಾಸಿಟಿವ್ ಪ್ರತಿಕ್ರಿಯೆ ನೀಡಿತ್ತು. ಆಗಸ್ಟ್ 22ರಂದು ಈ ಸಿನಿಮಾ 50 ಲಕ್ಷ ಕಲೆಹಾಕಿತ್ತು. ಈ ಮೂಲಕ 'ಲಾಲ್ ಸಿಂಗ್ ಚಡ್ಡ' ಇದೂವರೆಗೂ 60 ಕೋಟಿ ರೂ. ಗಳಿಕೆ ಮಾಡಿದೆ ಎನ್ನಲಾಗಿದೆ. ಎರಡನೇ ವಾರ ಕೇವಲ 6.25 ಕೋಟಿ ರೂ.ಯಷ್ಟೇ ಕಲೆಕ್ಷನ್ ಮಾಡಿದೆ ಅಂತಿದ್ದಾರೆ ಟ್ರೇಡ್ ಅನಲಿಸ್ಟ್.


Click it and Unblock the Notifications











