Sitaare Zameen Par:ಮೊದಲ ದಿನ 1000 ಸಾವಿರ ಟಿಕೆಟ್ ಕೂಡ ಸೇಲ್ ಆಗಿಲ್ಲ; ಆಮಿರ್ ಖಾನ್ ಸಿನಿಮಾ ಕಥೆಯೇನು?
'ಲಾಲ್ ಸಿಂಗ್ ಚಡ್ಡ' ಹೀನಾಯ ಸೋಲಿನ ಬಳಿಕ ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮಿರ್ ಖಾನ್ ತಣ್ಣಗಾಗಿದ್ದರು. ಈ ಬಾರಿ ಪ್ರೇಕ್ಷಕರಿಗೆ ಹೇಗಾದರೂ ಮಾಡಿ ಮನರಂಜಿಸಲೇ ಬೇಕು ಎಂದು ಶಪತ ಮಾಡಿ ಕೂತಿದ್ದ ಆಮಿರ್ ಖಾನ್ ಆಯ್ಕೆ ಮಾಡಿಕೊಂಡಿದ್ದು 'ಸಿತಾರೆ ಜಮೀನ್ ಪರ್'. ಈ ಸಿನಿಮಾ ಇನ್ನೆರಡು ದಿನಗಳಲ್ಲಿ ವಿಶ್ವದಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ. ಹೀಗಾಗಿ ವಿದೇಶಗಳಲ್ಲಿ ಅಡ್ವಾನ್ಸ್ ಬುಕಿಂಗ್ ಅನ್ನು ಓಪನ್ ಮಾಡಲಾಗಿದೆ.
'ಸಿತಾರೆ ಜಮೀನ್ ಪರ್' ಬಾಲಿವುಡ್‌ನ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ. ಹೀನಾಯ ಸೋಲಿನ ಬಳಿಕ ಆಮಿರ್ ಖಾನ್ ಮತ್ತೊಂದು ಗೆಲುವನ್ನು ಎದುರು ನೋಡುತ್ತಿದ್ದು, ಅವರಿಗೂ ಈ ಸಿನಿಮಾ ಗೆಲ್ಲಲೇ ಬೇಕಿದೆ. ಈ ಸಿನಿಮಾದಲ್ಲಿ ಆಮಿರ್ ಖಾನ್ ಬಾಸ್ಕೆಟ್ ಬಾಲ್ ಕೋಚ್ ಪಾತ್ರದಲ್ಲಿ ನಟಿಸಿದ್ದಾರೆ. ವಿಶೇಷ ಚೇತನ ಮಕ್ಕಳಿಗೆ ಬಾಸ್ಕೆಟ್ ಬಾಲ್ ತರಬೇತಿ ನೀಡುವ ಪಾತ್ರವಿದು. ಹೀಗಾಗಿ ಈ ಸಿನಿಮಾದ ಮೇಲೆ ನಿರೀಕ್ಷೆಯಿದೆ.

ಸಿನಿಮಾ ರಿಲೀಸ್‌ಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ ಎನ್ನುವಾಗಲೇ ಅಡ್ವಾನ್ಸ್ ಬುಕಿಂಗ್ ಓಪನ್ ಆಗಿತ್ತು. ನಿನ್ನೆಯಿಂದ (ಜೂನ್ 17) ವಿದೇಶಗಳಲ್ಲಿ 'ಸಿತಾರೆ ಜಮೀನ್ ಪರ್' ಟಿಕೆಟ್ ಬುಕಿಂಗ್ ಮಾಡುವುದಕ್ಕೆ ಅವಕಾಶ ನೀಡಲಾಗಿತ್ತು. ಆದರೆ, ಅಲ್ಲಿಂದ ಮೊದಲ ದಿನವೇ ನೀರಸ ಪ್ರತಿಕ್ರಿಯೆ ಸಿಕ್ಕಿದೆ ಎಂದು ವರದಿಗಳಾಗಿವೆ. ಆಮಿರ್ ಖಾನ್ ಸಿನಿಮಾ ಈ ಮಟ್ಟಿಗೆ ಹಿಂದೆಂದೂ ಪ್ರತಿಕ್ರಿಯೆ ಸಿಕ್ಕಿಲ್ಲ ಎನ್ನಲಾಗಿದೆ.
ವಿದೇಶಗಳಲ್ಲಿ 'ಸಿತಾರೆ ಜಮೀನ್ ಪರ್' ಸಿನಿಮಾಗೆ ಅಡ್ವಾನ್ಸ್ ಬುಕಿಂಗ್ ಓಪನ್ ಆಗಿದೆ. ಆದರೆ, ವಿದೇಶದಲ್ಲಿ ಭಾರತೀಯರು ಈ ಸಿನಿಮಾ ನೋಡುವುದಕ್ಕೆ ಅಷ್ಟು ಆಸಕ್ತಿ ತೋರಿಲ್ಲ ಎಂದು ಪಿಂಕ್‌ವಿಲ್ಲ ವರದಿ ಮಾಡಿದೆ. ಟಿಕೆಟ್ ಬುಕಿಂಗ್ ಓಪನ್ ಮಾಡಿದ ಮೊದಲ ದಿನ 1000 ಸಾವಿರ ಟಿಕೆಟ್ ಕೂಡ ಸೇಲ್ ಆಗಿರಲಿಲ್ಲ. ಆಮಿರ್ ಸಿನಿಮಾಗಳಿಗೆ ವಿದೇಶದಲ್ಲಿ ಬಹುಬೇಡಿಕೆ ಇರುತ್ತೆ. ಆದರೆ, ಈ ಸಿನಿಮಾ ಯಾಕೆ ಹೀಗಾಯ್ತು ಅನ್ನೋದು ಅಚ್ಚರಿ ಮೂಡಿದೆ.
ಸಾಮಾನ್ಯವಾಗಿ ಬಾಲಿವುಡ್ ಸಿನಿಮಾಗಳಿಗೆ ಆಸ್ಟ್ರೇಲಿಯಾ, ಯುಎಸ್‌ಎ ಹಾಗೂ ಕೆನಡಾಗಳಲ್ಲಿ ಒಳ್ಳೆಯ ರೆಸ್ಪಾನ್ಸ್ ಸಿಗುತ್ತೆ. ಅಲ್ಲಿರುವ ಭಾರತೀಯರು ಮುಗಿಬಿದ್ದು ಸಿನಿಮಾವನ್ನು ನೋಡುತ್ತಾರೆ. ಆದರೆ, 'ಸಿತಾರೆ ಜಮೀನ್ ಪರ್' ಸಿನಿಮಾ ಮೊದಲ ದಿನ ಇಲ್ಲೂ ಅಷ್ಟೊಂದು ಉತ್ತಮ ಪ್ರತಿಕ್ರಿಯೆ ಸಿಕ್ಕಿಲ್ಲ. ಒಂದು ವೇಳೆ ಇನ್ನು ಎರಡು ದಿನಗಳಲ್ಲಿ ಅಡ್ವಾನ್ಸ್ ಬುಕಿಂಗ್ ಆಗದೇ ಹೋದರೆ, ಈ ಸಿನಿಮಾದ ಬಾಕ್ಸಾಫೀಸ್ ಕಲೆಕ್ಷನ್‌ನಲ್ಲಿ ಭಾರೀ ನಷ್ಟವನ್ನು ಕಾಣಬಹುದೆಂದು ಟ್ರೇಡ್ ಎಕ್ಸ್‌ಪರ್ಟ್‌ಗಳು ಲೆಕ್ಕ ಹಾಕಿದ್ದಾರೆ.

'ಲಾಲ್ ಸಿಂಗ್ ಚಡ್ಡ' ಸಿನಿಮಾದ ಸೋಲಿನ ಬಳಿಕವೂ ಆಮಿರ್ ಖಾನ್ ಎಕ್ಸ್‌ಪೆರಿಮೆಂಟ್ ಮಾಡುವುದಕ್ಕೆ ಹಿಂದೇಟು ಹಾಕಿಲ್ಲ. ಶಾರುಖ್ ಖಾನ್, ಸಲ್ಮಾನ್ ಖಾನ್‌ರಂತೆ ಸಾವಿರ ಕೋಟಿ ಬಾಕ್ಸಾಫೀಸ್ ಗಳಿಕೆ ಮೇಲೆ ಕಣ್ಣಿಟ್ಟಂತೆ ಕಾಣುತ್ತಿಲ್ಲ. ಆದರೆ, ಈ ಸಿನಿಮಾ ಪ್ರೇಕ್ಷಕರಿಗೆ ಇಷ್ಟ ಆಗಿದ್ದಲ್ಲಿ ಮೌತ್ ಪಬ್ಲಿಸಿಟಿಯಿಂದಲೇ ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ಆಗಬಹುದೆಂದು ಟ್ರೇಡ್ ಎಕ್ಸ್‌ಪರ್ಟ್‌ಗಲು ಲೆಕ್ಕ ಹಾಕಿದ್ದಾರೆ. ಆಮಿರ್ ಖಾನ್ ಇತ್ತೀಚೆಗೆ ಎಮೋಷನಲ್ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಾಗಿ 'ಸಿತಾರೆ ಜಮೀನ್ ಪರ್' ರಿಲೀಸ್ ಆದ್ಮೇಲೆ ದೊಡ್ಡ ಯಶಸ್ಸು ಕಾಣಬಹುದೆಂದು ಅಂದಾಜಿಸಲಾಗಿದೆ.
ಪ್ರೇಕ್ಷಕರು ಥಿಯೇಟರ್‌ನಲ್ಲಿ ರೆಗ್ಯೂಲರ್ ಕಮರ್ಷಿಯಲ್ ಸಿನಿಮಾಗಳನ್ನು ಬಿಟ್ಟು ಫೀಲ್ ಗುಡ್ ಮುವೀಸ್ ನೋಡಲಿ ಎನ್ನುವ ಉದ್ದೇಶದಲ್ಲಿದ್ದಾರೆ. ಹೀಗಾಗಿ ಉತ್ತಮ ರಿಸಲ್ಟ್ ಸಿಕ್ಕರೆ ಇನ್ನೊಂದಿಷ್ಟು ಇಂತಹ ಸಿನಿಮಾಗಳು ಸಿಗಬಹುದೆಂದು ನಿರೀಕ್ಷೆ ಮಾಡಲಾಗಿದೆ. ಹಾಗೇ ಭಾರತದಲ್ಲಿ ಅಡ್ವಾನ್ಸ್ ಬುಕಿಂಗ್‌ಗೆ ಯಾವ ಮಟ್ಟಿಗೆ ರೆಸ್ಪಾನ್ಸ್ ಸಿಗಬಹುದೆಂಬ ಎದುರು ನೋಡಲಾಗುತ್ತಿದೆ. ಇದೇ ಜೂನ್ 20ರಂದು 'ಸಿತಾರೆ ಜಮೀನ್ ಪರ್' ಸಿನಿಮಾ ಗ್ರ್ಯಾಂಡ್ ಆಗಿ ರಿಲೀಸ್ ಆಗುತ್ತಿದೆ.


Click it and Unblock the Notifications











