'ಬಾಹುಬಲಿ 2' ಜೊತೆ 'ದಂಗಲ್' ಹೋಲಿಸಬೇಡಿ: ಅಮೀರ್ ಖಾನ್

By Suneel

ಎಸ್.ಎಸ್.ರಾಜಮೌಳಿ ನಿರ್ದೇಶನದ 'ಬಾಹುಬಲಿ 2' ಚಿತ್ರದ ಬಾಕ್ಸ್ ಆಫೀಸ್ ದಾಖಲೆಯನ್ನು ಯಾವ ಚಿತ್ರವು ಮುರಿಯಲು ಸಾಧ್ಯವಿಲ್ಲ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ಅಮೀರ್ ಖಾನ್ ಅಭಿನಯದ 'ದಂಗಲ್' ಚಿತ್ರ 'ಬಾಹುಬಲಿ 2' ಚಿತ್ರದಷ್ಟೇ ಬಾಕ್ಸ್ ಆಫೀಸ್ ಗಳಿಕೆಯ ಹಿಂದೆ ಬಿದ್ದಿದೆ.['ಬಾಹುಬಲಿ'ಯ 1500 ಕೋಟಿ ದಾಖಲೆ ಉಡೀಸ್.!]

'ಬಾಹುಬಲಿ 2' ಚಿತ್ರ ಪ್ರಸ್ತುತ ಲೆಕ್ಕಾಚಾರದ ಪ್ರಕಾರ 1577 ಕೋಟಿ ರೂ ಗಳಿಸಿದೆ. ಅಂತೆಯೇ ಅಮೀರ್ ಖಾನ್ 'ದಂಗಲ್' ಚಿತ್ರವು 1546 ಕೋಟಿ ರೂ ಗಳಿಸಿದ್ದು, ಚೀನಾದಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಹೀಗಿರುವಾಗ ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್ 'ಬಾಹುಬಲಿ 2' ಚಿತ್ರದ ಜೊತೆ 'ದಂಗಲ್' ಚಿತ್ರ ಹೋಲಿಸಬೇಡಿ ಎಂದು ಹೇಳಿದ್ದಾರೆ. ಅಮೀರ್ ಈ ರೀತಿ ಹೇಳಿದ್ದಾದರೂ ಏಕೆ? ತಿಳಿಯಲು ಮುಂದೆ ಓದಿರಿ..

ಎರಡು ಚಿತ್ರಗಳನ್ನು ಹೋಲಿಕೆ ಮಾಡುವುದು ಸರಿಯಲ್ಲ

ಎರಡು ಚಿತ್ರಗಳನ್ನು ಹೋಲಿಕೆ ಮಾಡುವುದು ಸರಿಯಲ್ಲ

ಅಂದಹಾಗೆ ಮೊನ್ನೆಯಷ್ಟೇ 'ಸಚಿನ್ ಎ ಬಿಲಿಯನ್ ಡ್ರೀಮ್ಸ್' ಚಿತ್ರ ಪ್ರೀಮಿಯರ್ ಶೋ ನಂತರ ಅಮೀರ್ ಖಾನ್ ಮಾಧ್ಯಮದವರೊಂದಿಗೆ ಮಾತಿಗೆ ಸಿಕ್ಕಿದ್ದರು. ಈ ವೇಳೆ ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಅಮೀರ್ ಖಾನ್, "ಎಸ್.ಎಸ್.ರಾಜಮೌಳಿ ಅವರ 'ಬಾಹುಬಲಿ 2' ಚಿತ್ರದ ಜೊತೆ 'ದಂಗಲ್' ಚಿತ್ರ ಹೋಲಿಸುವುದು ಸರಿಯಲ್ಲ" ಎಂದು ಹೇಳಿದರು.

2 ಸಿನಿಮಾಗಳು ಉತ್ತಮ ಗಳಿಕೆ ಕಂಡಿವೆ

2 ಸಿನಿಮಾಗಳು ಉತ್ತಮ ಗಳಿಕೆ ಕಂಡಿವೆ

"ಎರಡು ಚಿತ್ರಗಳು ಸಹ ವಿಶ್ವದಾದ್ಯಂತ 1500 ಕೋಟಿ ರೂ ಗಿಂತ ಹೆಚ್ಚು ಬಾಕ್ಸ್ ಆಫೀಸ್ ಗಳಿಕೆ ಕಂಡಿವೆ, ಆದರೂ ಸಹ ಎರಡು ಚಿತ್ರಗಳು ತಮ್ಮದೇ ಆದ ವಿಭಿನ್ನ ಸ್ಪೇಸ್ ಹೊಂದಿವೆ" -ಅಮೀರ್ ಖಾನ್['ಬಾಹುಬಲಿ' ನಂತರ 1000 ಕೋಟಿ ಗಳಿಸಿದ ಭಾರತದ ಮತ್ತೊಂದು ಚಿತ್ರ]

ಉತ್ತಮ ರೆಸ್ಪಾನ್ಸ್ ಸಿಕ್ಕಿದೆ

ಉತ್ತಮ ರೆಸ್ಪಾನ್ಸ್ ಸಿಕ್ಕಿದೆ

" 'ದಂಗಲ್' ಚಿತ್ರಕ್ಕೆ ಚೀನಾ ಸೇರಿದಂತೆ ಪ್ರಪಂಚದಾದ್ಯಂತ ಉತ್ತಮ ರೆಸ್ಪಾನ್ಸ್ ಸಿಕ್ಕಿರುವುದು ಖುಷಿಯಾಗಿದೆ. 'ಬಾಹುಬಲಿ 2' ದೊಡ್ಡ ಮಟ್ಟದ ಯಶಸ್ವಿ ಸಿನಿಮಾ. ಹಾಗಂತ ಎರಡು ಚಿತ್ರಗಳನ್ನು ಹೋಲಿಸುವ ಅಗತ್ಯವಿಲ್ಲ" -ಅಮೀರ್ ಖಾನ್

'ಬಾಹುಬಲಿ 2' ಚಿತ್ರ ನೋಡಿಲ್ಲ

'ಬಾಹುಬಲಿ 2' ಚಿತ್ರ ನೋಡಿಲ್ಲ

"ನಾನು ಇದುವರೆಗೂ 'ಬಾಹುಬಲಿ 2' ಸಿನಿಮಾ ವೀಕ್ಷಿಸಿಲ್ಲ. ಆದರೇ ನನ್ನ ಸುತ್ತಮುತ್ತಲ ಹಲವರಿಂದ ಚಿತ್ರದ ಬಗ್ಗೆ ಒಳ್ಳೆಯ ವಿಷಯಗಳನ್ನು ಕೇಳಿದ್ದೇನೆ. ರಾಜಮೌಳಿ ಮತ್ತು ಅವರ ಟೀಮ್ ಗೆ ಅಭಿನಂದನೆಗಳನ್ನು ಹೇಳಲು ಬಯಸುತ್ತೇನೆ" - ಅಮೀರ್ ಖಾನ್

ಭಾರತದ ಹೆಮ್ಮೆಯ ಚಿತ್ರಗಳು

ಭಾರತದ ಹೆಮ್ಮೆಯ ಚಿತ್ರಗಳು

ಮಾಧ್ಯಮದವರ ಪ್ರಶ್ನೆಗೆ ಉತ್ತರಿಸುತ್ತ ಅಮೀರ್ ಖಾನ್ " 'ದಂಗಲ್' ಮತ್ತು 'ಬಾಹುಬಲಿ 2' ಎರಡು ಚಿತ್ರಗಳು ಭಾರತೀಯ ಸಿನಿಮಾಗಳಾಗಿದ್ದು, ಅವುಗಳದ್ದೇ ಆದ ವಿಭಿನ್ನ ಪ್ರಾಧಾನ್ಯತೆಯನ್ನು ಹೊಂದಿವೆ. ಆದ್ದರಿಂದ ನಾವು ಎರಡನ್ನು ಹೋಲಿಸಬಾರದು. ಈ ಚಿತ್ರಗಳು ಪ್ರಪಂಚದಾದ್ಯಂತ ತಮ್ಮದೇ ಆದ ಗುರುತು ಪಡೆಯುತ್ತಿವೆ. ಬಾಹುಬಲಿ ಚಿತ್ರದ ಬಗ್ಗೆಯೂ ನಾನು ಹೆಮ್ಮೆ ಪಡುತ್ತೇನೆ" ಎಂದು ಹೇಳಿದ್ದಾರೆ.

More from Filmibeat

English summary
Bollywood Actor Aamir Khan Said 'Don’t compare Dangal with Baahubali 2' in a statement with Media at 'Sachin A Billion Dreams' Movie Premere Show on May 25th. Here you can know why Aamir Khan said like that
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X