For Quick Alerts
  ALLOW NOTIFICATIONS  
  For Daily Alerts

  'ಬಾಹುಬಲಿ'ಯ 1500 ಕೋಟಿ ದಾಖಲೆ ಉಡೀಸ್.!

  By Bharath Kumar
  |

  ದಾಖಲೆಗಳು ಶಾಶ್ವತ ಅಲ್ಲ....ನಿನ್ನೆ ಮಾಡಿದ್ದ ದಾಖಲೆಯನ್ನ ಇಂದು ಅಳಿಸಿಹಾಕ್ತಾರೆ. ಇಂದು ಮಾಡಿದ ದಾಖಲೆಯನ್ನ ನಾಳೆ ಮುರಿದುಹಾಕ್ತಾರೆ. ಅದೇ ರೀತಿ ಬಾಕ್ಸ್ ಆಫೀಸ್ ನಲ್ಲಿ ಯಾವ ಚಿತ್ರದ ದಾಖಲೆನೂ ಉಳಿಯಲ್ಲ.

  ಆದ್ರೆ, 'ಬಾಹುಬಲಿ'ಯ ಕಲೆಕ್ಷನ್ ನೋಡಿದ ಬಾಕ್ಸ್ ಆಫೀಸ್ ಪಂಡಿತರು ಈ ದಾಖಲೆಯನ್ನ ಹಿಂದಿಕ್ಕಲು ಯಾರಿಂದಲೂ ಸಾಧ್ಯವಿಲ್ಲ ಎನ್ನುತ್ತಿದ್ದರು. ಈಗ ನೋಡಿ, 'ಬಾಹುಬಲಿ' ಚಿತ್ರವನ್ನ ಹಿಂದಿಕ್ಕುವತ್ತಾ 'ದಂಗಲ್' ಹೆಜ್ಜೆ ಇಟ್ಟಿದೆ. ಕೇವಲ 31 ಕೋಟಿ ಗಳಿಸಿದ್ರೆ, 'ದಂಗಲ್' ಭಾರತದ ನಂಬರ್-1 ಸಿನಿಮಾ ಆಗಲಿದೆ.['ಬಾಹುಬಲಿ' ನಂತರ 1000 ಕೋಟಿ ಗಳಿಸಿದ ಭಾರತದ ಮತ್ತೊಂದು ಚಿತ್ರ]

  ಹಾಗಾದ್ರೆ, 'ಬಾಹುಬಲಿ' ಇದುವರೆಗೂ ಎಷ್ಟು ಗಳಿಸಿದೆ? ಅಮೀರ್ ಖಾನ್ 'ದಂಗಲ್' ಎಷ್ಟು ಗಳಿಸಿದೆ? ಇವರೆಡರಲ್ಲಿ ಯಾವ ಚಿತ್ರ ನಂಬರ್-1 ಆಗುತ್ತೆ ಅಂತ ಮುಂದೆ ಓದಿ......

  'ಬಾಹುಬಲಿ-2' ಕಲೆಕ್ಷನ್

  'ಬಾಹುಬಲಿ-2' ಕಲೆಕ್ಷನ್

  ಏಪ್ರಿಲ್ 28 ರಂದು ವರ್ಲ್ಡ್ ವೈಡ್ ಬಿಡುಗಡೆಯಾಗಿದ್ದ 'ಬಾಹುಬಲಿ-2' ಸದ್ಯ ಬಾಕ್ಸ್ ಆಫೀಸ್ ನಲ್ಲಿ 1500 ಕೋಟಿ ಗಡಿದಾಟಿದೆ. ಈಗಿನ ಲೆಕ್ಕಾಚಾರದ ಪ್ರಕಾರ 'ಬಾಹುಬಲಿ' ಇದುವರೆಗೂ 1577 ಕೋಟಿ ಗಳಿಸಿದೆ.['ಬಾಹುಬಲಿ'ಯ 1000 ಕೋಟಿ ದಾಖಲೆಯನ್ನ ಬೆನ್ನತ್ತಿ ಹೊರಟಿರುವ 'ದಂಗಲ್']

  'ದಂಗಲ್' ಗಳಿಕೆ ಎಷ್ಟು?

  'ದಂಗಲ್' ಗಳಿಕೆ ಎಷ್ಟು?

  ಮಿಸ್ಟರ್ ಫರ್ಫೆಕ್ಷನಿಸ್ಟ್ ಅಮೀರ್ ಖಾನ್ ಅಭಿನಯದ 'ದಂಗಲ್' ಚಿತ್ರ 1500 ಕೋಟಿ ಗಳಿಸುವ ಮೂಲಕ ಭಾರತೀಯ ಬಾಕ್ಸ್ ಆಫೀಸ್ ನಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸಿದೆ. ಇದುವರೆಗೂ 'ದಂಗಲ್' 1546 ಕೋಟಿ ಗಳಿಸಿದೆ.[ರಾಜಮೌಳಿ 'ಬಾಹುಬಲಿ'ಯಿಂದ ಅಮೀರ್ 'ದಂಗಲ್' ದಾಖಲೆ ಬ್ರೇಕ್!]

  ಬಾಕ್ಸ್ ಆಫೀಸ್ ನಲ್ಲಿ ಮೆಗಾಫೈಟ್

  ಬಾಕ್ಸ್ ಆಫೀಸ್ ನಲ್ಲಿ ಮೆಗಾಫೈಟ್

  'ದಂಗಲ್' ಹಾಗೂ 'ಬಾಹುಬಲಿ' ಮಧ್ಯೆ ಕೇವಲ 31 ಕೋಟಿ ಮಾತ್ರ ವ್ಯತ್ಯಾಸ ಇದೆ. ಹೀಗಾಗಿ, 'ದಂಗಲ್' ಹಾಗೂ 'ಬಾಹುಬಲಿ' ಇವರೆಡು ಚಿತ್ರಗಳಲ್ಲಿ ಯಾವ ಚಿತ್ರ ಅತಿ ಹೆಚ್ಚು ಕಲೆಕ್ಷನ್ ಮಾಡುತ್ತೆ ಎಂಬ ಕುತೂಹಲ ಇಡೀ ಚಿತ್ರಜಗತ್ತನ್ನೆ ಕಾಡುತ್ತಿದೆ.

  ಚೀನಾದಲ್ಲಿ 'ದಂಗಲ್' ದಾಖಲೆ

  ಚೀನಾದಲ್ಲಿ 'ದಂಗಲ್' ದಾಖಲೆ

  ಚೀನಾದಲ್ಲಿ ಅಮೀರ್ ಖಾನ್ ಅಭಿನಯದ 'ದಂಗಲ್' ಚಿತ್ರಕ್ಕೆ ಭರ್ಜರಿ ಯಶಸ್ಸು ಸಿಕ್ಕಿದೆ. ಇದುವರೆಗೂ ಚೀನಾದಲ್ಲಿ ಯಾವ ಚಿತ್ರವೂ ಮಾಡಿರದ ಕೆಲಕ್ಷನ್ 'ದಂಗಲ್' ಮಾಡಿದೆಯಂತೆ. ಚೀನಾದಲ್ಲಿ 'ದಂಗಲ್' ಸಿನಿಮಾ ಬರೋಬ್ಬರಿ 778 ಕೋಟಿ ಗಳಿಸಿದೆ. ಮೇ ತಿಂಗಳ ಮೊದಲ ವಾರದಲ್ಲಿ 'ದಂಗಲ್' ಚೀನಾದಲ್ಲಿ ಬಿಡುಗಡೆಯಾಗಿತ್ತು.[ಚೀನಾದಲ್ಲಿ 'ಪಿ.ಕೆ' ದಾಖಲೆ ಉಡೀಸ್: ಹೊಸ ಇತಿಹಾಸ ಸೃಷ್ಟಿಸಿದ 'ದಂಗಲ್']

  ಹಾಲಿವುಡ್ ಚಿತ್ರವನ್ನ ಮೀರಿಸಿದ ಅಮೀರ್ ಖಾನ್!

  ಹಾಲಿವುಡ್ ಚಿತ್ರವನ್ನ ಮೀರಿಸಿದ ಅಮೀರ್ ಖಾನ್!

  ದಾಖಲೆಗಳ ಪ್ರಕಾರ ಚೀನಾ ಬಾಕ್ಸ್ ಆಫೀಸ್ ನಲ್ಲಿ ಹಾಲಿವುಡ್ ಚಿತ್ರಗಳ ದಾಖಲೆಯನ್ನ ಕೂಡ ಅಮೀರ್ ಖಾನ್ 'ದಂಗಲ್' ಬ್ರೇಕ್ ಮಾಡಿದೆಯಂತೆ. ಮೂಲಕ ಚೀನಾದಲ್ಲಿ 'ದಂಗಲ್' ಚಿತ್ರದ ಕಲೆಕ್ಷನ್ ಕಿಂಗ್ ಆಗಿದೆಯಂತೆ.

  English summary
  Aamir Khan Starrer Dangal Movie Enters Rs 1,500 Crore club, it Will Overtake Baahubali 2's box office collection Very Soon. Baahubali 2 Total Collection is 1577 Crore.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X