For Quick Alerts
  ALLOW NOTIFICATIONS  
  For Daily Alerts

  ಅಮೀರ್ ಖಾನ್ ಫ್ಯಾಮಿಲಿ ನೋಡುವ ಕುತೂಹಲ ನಿಮಗಿದ್ಯಾ..?

  By Suneel
  |

  ಸಿನಿ ತಾರೆಯರ ಪರ್ಸನಲ್ ಲೈಫ್ ಹೇಗಿರುತ್ತೆ.. ತೆರೆ ಮೇಲೆ ಮಿಂಚುತ್ತಾ ಎಲ್ಲರಿಗೂ ಮನರಂಜನೆ ನೀಡುವ ಅವರು ವೈಯಕ್ತಿಕ ಜೀವನದಲ್ಲೂ ಅಷ್ಟೆ ಸೂಪರ್ ಆಗಿ ಮೋಜು ಮಸ್ತಿ ಮಾಡುತ್ತಾರಾ? ಇಂತಹ ಹಲವು ಪ್ರಶ್ನೆಗಳು ಮತ್ತು ಅವರ ಬಗ್ಗೆ ತಿಳಿದು ಕೊಳ್ಳುವ ಕುತೂಹಲ ಹಲವು ಸ್ಟಾರ್ ಗಳ ಅಭಿಮಾನಿಗಳಿಗೆ ಇದ್ದೇ ಇರುತ್ತೆ.['ದಂಗಲ್' ಬಗ್ಗೆ ಈ ಮಟ್ಟದ ನಿರೀಕ್ಷೆಯನ್ನು ಅಮೀರ್ ಸಹ ಮಾಡಿರಲಿಲ್ಲ..!]

  ನೀವು ಬಾಲಿವುಡ್ ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್ ಅಭಿಮಾನಿಯೇ.. ಹಾಗಿದ್ರೆ ಇಂದು ಅವರ ಕ್ಯೂಟ್ ಫ್ಯಾಮಿಲಿ ಹೇಗಿದೆ ಎಂಬುದನ್ನು ನೋಡಬಹುದು.

  ಹೌದು. ಇದುವರೆಗೂ ಇತರೆ ತಾರೆಯರಂತೆ ತಮ್ಮ ಪರ್ಸನಲ್ ಲೈಫ್ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡದ ಅಮೀರ್ ಖಾನ್, ನಿನ್ನೆ ತಾವು ತಮ್ಮ ಕುಟುಂಬದೊಂದಿಗೆ ಇರುವ ಹಲವು ಫೋಟೋಗಳನ್ನು ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದಾರೆ. ಅವರ ಫ್ಯಾಮಿಲಿ ನೋಡುವ ಕುತೂಹಲ ನಿಮಗೂ ಇದ್ದಲ್ಲಿ ಮುಂದೆ ಓದಿರಿ..

  ಅಮೀರ್ ಖಾನ್ ಫ್ಯಾಮಿಲಿ

  ಅಮೀರ್ ಖಾನ್ ಫ್ಯಾಮಿಲಿ

  ಅಮೀರ್ ಖಾನ್ ನಿನ್ನೆ (ಜೂನ್ 18) ಟ್ವಿಟ್ಟರ್ ಖಾತೆಯಲ್ಲಿ ತಮ್ಮ ಕುಟುಂಬದೊಂದಿಗೆ ಅವರು ಇರುವ ಕೆಲವು ಫೋಟೋಗಳನ್ನು ಶೇರ್ ಮಾಡಿದ್ದಾರೆ. ಅದರಲ್ಲಿ ಈ ಮೇಲಿನ ಫೋಟೋದಲ್ಲಿ ಅಮೀರ್ ತಮ್ಮ ಕಿರಿಯ ಮಗ ಅಜಾದ್ ಖಾನ್ ರೊಂದಿಗೆ ಆಟವಾಡುತ್ತಿರುವುದನ್ನು ನೋಡಬಹುದು. ಮಗ ಅಜಾದ್ ಖಾನ್ ನನ್ನು ಎತ್ತುಕೊಂಡಿರುವ ಅಮೀರ್ ಪತ್ನಿ ಕಿರಣ್ ರಾವ್ ಬಹಳ ಸಂತೋಷದಿಂದ ನಗುತ್ತಿರುವುದನ್ನು ನೋಡಬಹುದು.

  ವರ್ಕ್‌ ಔಟ್ ನಲ್ಲಿ ಬ್ಯುಸಿ ಇದ್ದ ವೇಳೆ

  ವರ್ಕ್‌ ಔಟ್ ನಲ್ಲಿ ಬ್ಯುಸಿ ಇದ್ದ ವೇಳೆ

  ಅಮೀರ್ ತಮ್ಮ ಹಿರಿಯ ಮಗ ಜುನೈದ್ ಖಾನ್ ಮತ್ತು ಕಿರಿಯ ಮಗ ಅಜಾದ್ ಖಾನ್ ರೊಂದಿಗೆ ವರ್ಕ್ ಔಟ್ ಮಾಡುವ ವೇಳೆ ಕ್ಲಿಕ್ಕಿಸಿರುವ ಫೋಟೋ ನೋಡಿ.

  ಮಗಳ ಜೊತೆ ಮಿಸ್ಟರ್ ಪರ್ಫೆಕ್ಷನಿಸ್ಟ್

  ಮಗಳ ಜೊತೆ ಮಿಸ್ಟರ್ ಪರ್ಫೆಕ್ಷನಿಸ್ಟ್

  ಅಮೀರ್ ಖಾನ್ ತಮ್ಮ ಮಗಳು ಇರಾ ಖಾನ್ ರೊಂದಿಗೆ ಸೆಲ್ಫಿ ತೆಗೆದುಕೊಂಡ ಕ್ಷಣ.

  'ಫಾದರ್ಸ್ ಡೇ' ವಿಶೇಷತೆ

  'ಫಾದರ್ಸ್ ಡೇ' ವಿಶೇಷತೆ

  'ದಂಗಲ್' ಸ್ಟಾರ್ ಅಮೀರ್ ಖಾನ್ 'ಫಾದರ್ಸ್ ಡೇ' ಪ್ರಯುಕ್ತ ಅವರು ಮಗುವಾಗಿದ್ದಾಗ ತಮ್ಮ ತಂದೆ ತಹೀರ್ ಹುಸೇನ್ ರೊಂದಿಗೆ ಇರುವ ಈ ಮೇಲಿನ ರೇರ್ ಫೋಟೋವೊಂದನ್ನು ಸಹ ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದಾರೆ.

  English summary
  Aamir Khan took to his official Twitter account to share a few moments with his three children - Junaid, Ira and Azad. The pictures shared by the actor look adorable, especially the one of Aamir, Junaid and Azad captured in the same frame.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X