»   » 'ದಂಗಲ್' ಬಗ್ಗೆ ಈ ಮಟ್ಟದ ನಿರೀಕ್ಷೆಯನ್ನು ಅಮೀರ್ ಸಹ ಮಾಡಿರಲಿಲ್ಲ..!

'ದಂಗಲ್' ಬಗ್ಗೆ ಈ ಮಟ್ಟದ ನಿರೀಕ್ಷೆಯನ್ನು ಅಮೀರ್ ಸಹ ಮಾಡಿರಲಿಲ್ಲ..!

Posted By:
Subscribe to Filmibeat Kannada

ಅಮೀರ್ ಖಾನ್ ಅಭಿನಯದ 'ದಂಗಲ್' ಚಿತ್ರ ಮೇ 5 ರಂದು ಚೀನದಲ್ಲಿ ಬಿಡುಗಡೆ ಆಗಿತ್ತು. ಕೇವಲ 36 ದಿನಗಳ ಅಂತರದಲ್ಲಿ ಚೀನವೊಂದರಲ್ಲೇ 1,100 ಕೋಟಿ ರೂಗಿಂತ ಅಧಿಕ ಮೊತ್ತ ಗಳಿಸಿದೆ. ಅಲ್ಲದೇ ಭಾರತದ ಚಿತ್ರವೊಂದು ಚೀನದಲ್ಲಿ ಇಷ್ಟು ದೊಡ್ಡ ಮಟ್ಟದ ಗಳಿಕೆ ಪಡೆದ ಚಿತ್ರವಾಗಿ ದಾಖಲೆ ಬರೆದಿದೆ.

'ಬಾಹುಬಲಿ 2' ಜೊತೆ 'ದಂಗಲ್' ಹೋಲಿಸಬೇಡಿ: ಅಮೀರ್ ಖಾನ್

ಅಂದಹಾಗೆ 'ದಂಗಲ್' ಚಿತ್ರದ ಬಗ್ಗೆ ಅಮೀರ್ ಖಾನ್ ಸಹ ನಿರೀಕ್ಷೆ ಮಾಡಿರದ ಒಂದು ಶುಭ ಸುದ್ದಿ ಕೇಳಿಬಂದಿದೆ. ಅದೇನಂದ್ರೆ ಚಿತ್ರವನ್ನು ಚೀನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ರವರು ನೋಡಿದ್ದಾರೆ. ಕೇವಲ ಜನ-ಸಾಮಾನ್ಯರು ಮಾತ್ರವಲ್ಲದೇ ಭಾರತದ ಚಿತ್ರವನ್ನು ಅಲ್ಲಿನ ಅಧ್ಯಕ್ಷ ನೋಡಿರುವುದು ವಿಶೇಷವಾಗಿದೆ. ಅಷ್ಟೇ ಅಲ್ಲದೇ ಕ್ಸಿ ಜಿನ್‌ಪಿಂಗ್ ತಾವು ಸಿನಿಮಾ ನೋಡಿದ ಬಗ್ಗೆ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಜೊತೆ ಹಂಚಿಕೊಂಡಿದ್ದಾರೆ.

Chinese President Xi Jinping praises Aamir Khan's Dangal' movie

ಕಜಕಿಸ್ತಾನದ ಅಸ್ತಾನಾದಲ್ಲಿ ನಡೆಯುತ್ತಿರುವ ಶೃಂಗಸಭೆಯಲ್ಲಿ ನಿನ್ನೆ(ಜೂನ್ 9) ನರೇಂದ್ರ ಮೋದಿ ಜೊತೆ ಮಾತುನಾಡುವ ಸಂದರ್ಭದಲ್ಲಿ ಚೀನ ಅಧ್ಯಕ್ಷ ಕ್ಸಿ ಜಿನ್ ಪಿಂಗ್, "ನಾನು ಅಮೀರ್ ಖಾನ್ ಅಭಿನಯದ 'ದಂಗಲ್' ಚಿತ್ರ ನೋಡಿದೆ. ಅದ್ಭುತವಾಗಿ ಮೂಡಿಬಂದಿದೆ. ತುಂಬಾ ಇಷ್ಟವಾಯಿತು. ಪ್ರತಿಯೊಬ್ಬರ ನಟನೆ ಸೂಪರ್ ಆಗಿದೆ" ಎಂದು ಹೇಳಿದ್ದಾರೆ.

'ಬಾಹುಬಲಿ' ನಂತರ 1000 ಕೋಟಿ ಗಳಿಸಿದ ಭಾರತದ ಮತ್ತೊಂದು ಚಿತ್ರ

'ದಂಗಲ್' ಚಿತ್ರ ಚೀನದಲ್ಲಿ ಅತಿಹೆಚ್ಚು ಬಾಕ್ಸ್ ಆಫೀಸ್ ಗಳಿಕೆಕಂಡ 20 ಚಿತ್ರಗಳ ಪೈಕಿ ಒಂದಾಗಿದೆ. ಅಲ್ಲದೇ ಚೀನದಲ್ಲಿ ಹಾಲಿವುಡ್ ಚಿತ್ರ ಹೊರತುಪಡಿಸಿ ಸಾವಿರ ಕೋಟಿ ರೂ ಗಳಿಕೆ ದಾಟಿದ 33ನೇ ಚಿತ್ರವಾಗಿ 'ದಂಗಲ್' ಹೊರಹೊಮ್ಮಿದೆ. ನಿತೇಶ್ ತಿವಾರಿ ನಿರ್ದೇಶನ ಮಾಡಿರುವ 'ದಂಗಲ್' ಚಿತ್ರ ಈ ಮಟ್ಟದ ಯಶಸ್ಸು ಮತ್ತು ಪ್ರಶಂಸೆ ಪಡೆಯುತ್ತದೆ ಎಂದು ಬಹುಶಃ ನಟ ಅಮೀರ್ ಖಾನ್ ಸಹ ನಿರೀಕ್ಷೆ ಮಾಡಿಲಿಲ್ಲ ಎನ್ನಬಹುದು.

English summary
Yesterday(June 9) Chinese President Xi Jinping told Prime Minister Narendra Modi at the Shanghai Cooperation Organisation that he has watched Dangal and liked it.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada