'ಲಾಲ್‌ ಸಿಂಗ್ ಚಡ್ಡ' ಮೂರನೇ ದಿನ ಬಾಕ್ಸಾಫೀಸ್‌ನಲ್ಲಿ ಚೇತರಿಕೆ ಕಂಡರೂ ಸಾಕಾಗಲ್ಲ!

ಆಮಿರ್ ಖಾನ್ ಸಿನಿಮಾ 'ಲಾಲ್ ಸಿಂಗ್ ಚಡ್ಡ' ಮೇಲೆ ಬಾಲಿವುಡ್ ದೊಡ್ಡ ನಿರೀಕ್ಷೆಯನ್ನೇ ಇಟ್ಟಿತ್ತು. ಆದರೆ, ಬಿಡುಗಡೆಯಾದ ಬಳಿಕ ಸಿನಿಮಾ ಅಂದುಕೊಂಡಷ್ಟು ಸದ್ದು ಮಾಡುತ್ತಿಲ್ಲ. ಬಾಕ್ಸಾಫೀಸ್‌ನಲ್ಲಿ ದೊಡ್ಡ ಮೊತ್ತ ಕಲೆ ಹಾಕುವಲ್ಲಿ ಈ ಸಿನಿಮಾ ವಿಫಲವಾಗಿದೆ.

'ಲಾಲ್ ಸಿಂಗ್ ಚಡ್ಡ'ಗೆ ಮೊದಲೆರಡು ದಿನ ನೀರಸ ಪ್ರತಿಕ್ರಿಯೆ ಸಿಕ್ಕಿತ್ತು. ಹೀಗಾಗಿ ಸಿನಿಮಾ ಬಾಕ್ಸಾಫೀಸ್ ಡಿಸಾಸ್ಟರ್ ಅಂತಲೇ ಭವಿಷ್ಯ ನುಡಿದಿದ್ದರು. ಆದರೆ, ಮೂರನೇ ದಿನ ಬಾಕ್ಸಾಫೀಸ್ ಕಲೆಕ್ಷನ್‌ನಲ್ಲಿ ಕೊಂಚ ಏರಿಕೆ ಕಂಡಿದೆ. ಬಾಲಿವುಡ್ ಟ್ರೇಡ್ ಅನಲಿಸ್ಟ್‌ಗಳು ಪ್ರಕಾರ 'ಲಾಲ್ ಸಿಂಗ್ ಚಡ್ಡ' ಮೂರನೇ ದಿನ ಶೇ. 20ರಷ್ಟು ಏರಿಕೆ ಕಂಡಿದೆ.

ಆಮಿರ್ ಖಾನ್ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಹಿನ್ನೆಲೆ ಅನುಭವಿಸಿದ್ದೇನೋ ನಿಜ. ಆದರೆ, ಬಾಲಿವುಡ್ ಮಂದಿ ಈ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಹೃತಿಕ್ ರೋಷನ್‌ನಿಂದ ಹಿಡಿದು ಬಾಲಿವುಡ್‌ ದಿಗ್ಗಜರು 'ಲಾಲ್‌ ಸಿಂಗ್ ಚಡ್ಡ' ಬಗ್ಗೆ ಮೆಚ್ಚುಗೆ ಮಾತುಗಳನ್ನಾಗಿದ್ದಾರೆ. ಸದ್ಯ ಮೂರನೇ ದಿನ ಏರಿಕೆ ಕಂಡರೂ ಬಿಗ್ ಬಜೆಟ್ ಸಿನಿಮಾಗೆ ಈ ಚೇತರಿಕೆ ಎಲ್ಲೂ ಸಾಗಲ್ಲ ಎನ್ನಲಾಗಿದೆ. ಅಷ್ಟಕ್ಕೂ 'ಲಾಲ್‌ ಸಿಂಗ್ ಚಡ್ಡ' ಮೂರು ದಿನಗಳ ಬಾಕ್ಸಾಫೀಸ್ ಕಲೆಕ್ಷನ್ ಲಿಸ್ಟ್ ಇಲ್ಲಿದೆ.

ಆಮಿರ್ ಸಿನಿಮಾ 3ನೇ ದಿನದ ಕಲೆಕ್ಷನ್ ಎಷ್ಟು?

ಆಮಿರ್ ಸಿನಿಮಾ 3ನೇ ದಿನದ ಕಲೆಕ್ಷನ್ ಎಷ್ಟು?

ಆಮಿರ್ ಖಾನ್ 'ಲಾಲ್ ಸಿಂಗ್ ಚಡ್ಡ' ಈ ವರ್ಷ ಬಾಲಿವುಡ್‌ನ ಅತೀ ಹೆಚ್ಚು ಗಳಿಕೆ ಮಾಡುವ ಸಿನಿಮಾ ಮಾಡಬಹುದು ಅನ್ನೋ ನಿರೀಕ್ಷೆ ಹುಸಿಯಾಗಿದೆ. ಮೊದಲ ದಿನವೇ ಈ ಸಿನಿಮಾದ ಕಲೆಕ್ಷನ್ ಶಾಕ್ ಕೊಟ್ಟಿತ್ತು. ಅಂದ್ಹಾಗೆ ಮೊದಲ ಎರಡು ದಿನ ಬಾಕ್ಸಾಫೀಸ್‌ನಲ್ಲಿ ಹೇಳಿಕೊಳ್ಳುವಂತಹ ಮೋಡಿ ಮಾಡಿರಲಿಲ್ಲ. ಆದರೆ ಮೂರನೇ ದಿನ 'ಲಾಲ್ ಸಿಂಗ್ ಚಡ್ಡ' ಕಲೆಕ್ಷನ್‌ನಲ್ಲಿ ಕೊಂಚ ಏರಿಕೆ ಕಂಡಿದೆ. ಸುಮಾರು 8.74 ಕೋಟಿ ರೂ. ಕಲೆಕ್ಷನ್ ಮಾಡಿದ್ದು, ಎರಡನೇ ದಿನಕ್ಕೆ ಹೋಲಿಸಿದರೆ ಶೇ.20ರಷ್ಟು ಏರಿಕೆ ಆಗಿದೆ ಎನ್ನಲಾಗಿದೆ.

3 ದಿನಗಳ ಕಲೆಕ್ಷನ್ ಎಷ್ಟು?

3 ದಿನಗಳ ಕಲೆಕ್ಷನ್ ಎಷ್ಟು?

'ಲಾಲ್‌ ಸಿಂಗ್ ಚಡ್ಡ' ಕೆಲಕ್ಷನ್ ಆಶಾದಾಯಕವಾಗಿಲ್ಲ. ಬಿಗ್ ಬಜೆಟ್ ಸಿನಿಮಾ ಮೊದಲ ಮೂರು ದಿನಗಳಲ್ಲಿ ನೂರು ಕೋಟಿ ಕ್ಲಬ್ ಸೇರಬೇಕಿತ್ತು. ಆದರೆ, 50 ಕೋಟಿ ರೂ. ಕ್ಲಬ್ ಅನ್ನೂ ಸೇರಿಲ್ಲ. 'ಲಾಲ್ ಸಿಂಗ್ ಚಡ್ಡ' ಮೊದಲ ದಿನ ಗಳಿಸಿದ ಗಳಿಕೆ ಹೀಗಿದೆ.
ಮೊದಲ ದಿನ 11.70 ಕೋಟಿ ರೂ.
ಎರಡನೇ ದಿನ 07.26 ಕೋಟಿ ರೂ.
ಮೂರನೇ ದಿನ 08.74 ಕೋಟಿ ರೂ.

ಒಟ್ಟು 27.70 ಕೋಟಿ ರೂ.

ಪಂಜಾಬ್‌ನಲ್ಲಿ ಸೂಪರ್ ರೆಸ್ಪಾನ್ಸ್

ಪಂಜಾಬ್‌ನಲ್ಲಿ ಸೂಪರ್ ರೆಸ್ಪಾನ್ಸ್

ಆಮಿರ್ ಖಾನ್ ಸಿನಿಮಾ 'ಲಾಲ್ ಸಿಂಗ್ ಚಡ್ಡ' ಪಂಜಾಬ್‌ನಲ್ಲಿ ಸಖತ್ ರೆಸ್ಪಾನ್ಸ್ ಸಿಗುತ್ತಿದೆ. ದೆಹಲಿ, ಉತ್ತರ ಪ್ರದೇಶ ಹಾಗೂ ಪಂಜಾಬ್‌ನಲ್ಲಿ ಶನಿವಾರ (ಆಗಸ್ಟ್ 13) ಶೇ. 40ರಷ್ಟು ಏರಿಕೆಯಾಗಿದೆ. ಆದರೆ, ಭಾರತದ ಮೇಜರ್ ಸಿಟಿಗಳಲ್ಲಿ ಈ ಸಿನಿಮಾಗೆ ಉಲ್ಟಾ ರೆಸ್ಪಾನ್ಸ್ ಸಿಕ್ಕಿದೆ. ಮಹಾರಾಷ್ಟ್ರ ಹಾಗೂ ಗುಜರಾತ್ ಅಂತಹ ಏರಿಯಾಗಳಲ್ಲಿ ಸಿನಿಮಾಗೆ ಉತ್ತಮ ಗಳಿಕೆ ಕಾಣುತ್ತಿಲ್ಲ. ಹೀಗಾಗಿ ಈ ಎಲ್ಲಾ ಏರಿಯಾಗಳಲ್ಲಿ ಸಿನಿಮಾ ಎದ್ದು ನಿಲ್ಲಬೇಕಿದೆ. ಟ್ರೇಡ್ ಅನಲಿಸ್ಟ್‌ಗಳ ಪ್ರಕಾರ, ಲಾಲ್‌ ಸಿಂಗ್ ಚಡ್ಡ 5 ದಿನಗಳಲ್ಲಿ 50 ಕೋಟಿ ರೂ. ಗಳಿಕೆ ಮಾಡಬಹುದು ಎನ್ನಲಾಗಿದೆ.

ವಿವಾದಗಳೇ ವಿಲನ್

ವಿವಾದಗಳೇ ವಿಲನ್

'ಲಾಲ್ ಸಿಂಗ್ ಚಡ್ಡ' ಬಿಡುಗಡೆಗೆ ಕೆಲವೇ ದಿನಗಳು ಕೆಲವು ಜನರು ಸೋಶಿಯಲ್ ಮೀಡಿಯಾದಲ್ಲಿ ಬಾಯ್‌ಕಾಟ್ ಸೋಶಿಯಲ್ ಮೀಡಿಯಾ ಆರಂಭಿಸಿದ್ದರು. ಅಲ್ಲದೆ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ್ದು ಹಾಗೂ ಭಾರತೀಯ ಸೇನೆಯನ್ನು ಕೆಟ್ಟದಾಗಿ ತೋರಿಸಿದ್ದಾರೆ ಎನ್ನುವ ಆರೋಪ ಈ ಸಿನಿಮಾ ಮೇಲಿದೆ. ಈ ಕಾರಣಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಸಿನಿಮಾ ನೋಡದೆ ಇರಲು ಕೆಲವು ವರ್ಗ ನಿರ್ಧರಿಸಿತ್ತು.

More from Filmibeat

English summary
Aamir Khan Starrer Laal Singh Chaddha Worldwide Box Office Collection Day 3, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X