"ನಾನು ರಜನಿ ಸರ್ ಹುಚ್ಚು ಅಭಿಮಾನಿ"; ತಲೈವಾ, ಉಪೇಂದ್ರ ಜೊತೆ ನಟಿಸಿದ ಅನುಭವ ಬಿಚ್ಚಿಟ್ಟ ಆಮಿರ್ ಖಾನ್

ಬಾಲಿವುಡ್ ಸೂಪರ್‌ಸ್ಟಾರ್ ಆಮಿರ್ ಖಾನ್ ತಮ್ಮ ಹೊಸ ಸಿನಿಮಾದ ಬಗ್ಗೆ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. 'ಲಾಲ್ ಸಿಂಗ್ ಚಡ್ಡ' ಬಳಿಕ ನಟಿಸಿರುವ 'ಸಿತಾರೆ ಜಮೀನ್ ಪರ್' ಸಿನಿಮಾ ರಿಲೀಸ್‌ಗೆ ರೆಡಿಯಾಗಿದ್ದು, ಆಮಿರ್ ಖಾನ್ ಸಂದರ್ಶನಗಳನ್ನು ನೀಡುತ್ತಿದ್ದಾರೆ. ಈ ವೇಳೆ ಅವರು ನಟಿಸಿದ 'ಕೂಲಿ' ಸಿನಿಮಾದ ಬಗ್ಗೆನೂ ಕೆಲವು ಇಂಟ್ರೆಸ್ಟಿಂಗ್ ವಿಷಯಗಳನ್ನು ರಿವೀಲ್ ಮಾಡಿದ್ದಾರೆ.

ಆಮಿರ್ ಖಾನ್ ಸಿನಿಮಾಗಳನ್ನು ಅಳೆದು ತೂಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ಬಾಲಿವುಡ್ ಸಿನಿಮಾ ಮಾಡುವಾಗಲೂ ಅಷ್ಟೇ ವರ್ಷಕ್ಕೊಂದು ಸಿನಿಮಾ ಮಾಡುವುದಕ್ಕೆ ಹೋಗುವುದಿಲ್ಲ. ಒಂದಿಷ್ಟು ದಿನ ಗ್ಯಾಪ್ ಕೊಟ್ಟು ಒಂದೊಳ್ಳೆ ಕಥೆಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಹೀಗಿದ್ದರೂ 'ಲಾಲ್ ಸಿಂಗ್ ಚಡ್ಡ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗಿತ್ತು. ಹೀಗಾಗಿ ಲಾಂಗ್ ಗ್ಯಾಪ್ ಕೊಟ್ಟು 'ಸಿತಾರೆ ಜಮೀನ್ ಪರ್' ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ.

Aamir Khan talks about working with Rajinikanth Upendra in Lokesh Kanagaraj movie Coolie

ಈ ಸಿನಿಮಾದೊಂದಿಗೆ ಆಮಿರ್ ಖಾನ್ ತಮಿಳು ಚಿತ್ರರಂಗಕ್ಕೂ ಎಂಟ್ರಿ ಕೊಟ್ಟಿದ್ದಾರೆ. ಲೋಕೇಶ್ ಕನಗರಾಜ್ ನಿರ್ದೇಶಿಸಿರುವ 'ಕೂಲಿ' ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಬಗ್ಗೆ ಹಿರಿಯ ಪತ್ರಕರ್ತ ಭಾರದ್ವಾಜ್ ರಂಗನ್‌ಗೆ ನೀಡಿದ ಸಂದರ್ಶನದಲ್ಲಿ ಸೂಪರ್‌ಸ್ಟಾರ್ ರಜನಿಕಾಂತ್, ರಿಯಲ್‌ಸ್ಟಾರ್ ಉಪೇಂದ್ರ ಜೊತೆ ನಟಿಸಿದ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಅದೇನು ಅಂತ ತಿಳಿಯುವುದಕ್ಕೆ ಮುಂದೆ ಓದಿ.

ಈ ಸಂದರ್ಶನದಲ್ಲಿ ಸೂಪರ್‌ಸ್ಟಾರ್ ರಜನಿಕಾಂತ್ ನಟಿಸುತ್ತಿರುವ 'ಕೂಲಿ' ಸಿನಿಮಾದಲ್ಲಿ ನಟಿಸಿದ್ದನ್ನು ಕನ್ಫರ್ಮ್ ಮಾಡಿದ್ದಾರೆ. ಅಲ್ಲದೆ ಕಥೆಯನ್ನೇ ಕೇಳದೆ ಸಿನಿಮಾದಲ್ಲಿ ನಟಿಸಿದ್ದಾಗಿ ಆಮಿರ್ ಖಾನ್ ಹೇಳಿದ್ದಾರೆ. ಅದು ಕೇವಲ ರಜನಿಕಾಂತ್ ಫ್ಯಾನ್ ಆಗಿದ್ದರಿಂದ ಮಾತ್ರ ಎಂದೂ ಹೇಳಿದ್ದಾರೆ. ಹಾಗೇ ಲೋಕೇಶ್ ಕನಗರಾಜ್ ಜೊತೆ ಕೆಲಸ ಮಾಡಿದ ಖುಷಿಯನ್ನು ಹಂಚಿಕೊಂಡಿದ್ದಾರೆ.

"ನಾನು ಕೂಲಿ ಸಿನಿಮಾದಲ್ಲಿ ನಟಿಸಿದ್ದೇನೆ. ಅದರಲ್ಲಿ ಪ್ರಮುಖವಾದ ಅತಿಥಿ ಪಾತ್ರದಲ್ಲಿ ನಟಿಸಿದ್ದೇನೆ. ನನ್ನ ಪಾತ್ರ ಸಿನಿಮಾ ಕೊನೆಯಲ್ಲಿ ಕಾಣಿಸಿಕೊಳ್ಳುತ್ತೆ. ಲೋಕೇಶ್ ನನಗೆ ಆಫರ್ ಮಾಡಿದಾಗ ಇದು ರಜನಿ ಸರ್ ಸಿನಿಮಾ ಎಂದು ಹೇಳಿದರು. ನಾನು ರಜನಿ ಸರ್ ಅವರ ದೊಡ್ಡ ಅಭಿಮಾನಿ. ನಾನು ಅವರನ್ನು ಹುಚ್ಚನಂತೆ ಪ್ರೀತಿಸುತ್ತೇನೆ. ಅದಕ್ಕಾಗಿ ನಾನು ಲೋಕೇಶ್‌ಗೆ ಕಥೆ ಹೇಳುವುದು ಬೇಡ ನಿಲ್ಲಿಸು ಎಂದಿದ್ದೆ. ಅದೇನೇ ಇದ್ದರೂ ನಾನು ಮಾಡುತ್ತೇನೆ. ರಜನಿ ಸರ್ ಸಿನಿಮಾ ಆಗಿದ್ದರಿಂದ ನಾನು ಆದಷ್ಟು ಬೇಗ ಆ ನಿರ್ಧಾರವನ್ನು ತೆಗೆದುಕೊಂಡೆ." ಎಂದು ಆಮಿರ್ ಖಾನ್ ಹೇಳಿದ್ದಾರೆ.

Aamir Khan talks about working with Rajinikanth Upendra in Lokesh Kanagaraj movie Coolie

'ಕೂಲಿ' ಸಿನಿಮಾದ ಕೊನೆಯಲ್ಲಿ ಆಮಿರ್ ಖಾನ್ ಕಾಣಿಸಿಕೊಳ್ಳುವುದಾಗಿ ಹೇಳಿಕೊಂಡಿದ್ದಾರೆ. ಚಿಕ್ಕ ಪಾತ್ರವಾಗಿದ್ದರೂ ಪ್ರಮುಖವಾಗಿದೆ. ರಜನಿಕಾಂತ್ ಜೊತೆ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದಕ್ಕೆ ಆಮಿರ್ ಖಾನ್ ಥ್ರಿಲ್ ಆಗಿದ್ದಾರೆ. ಇಷ್ಟೇ ಅಲ್ಲದೆ ರಿಯಲ್ ಸ್ಟಾರ್ ಉಪೇಂದ್ರ ಜೊತೆ ಕೆಲಸ ಮಾಡಿದ್ದು ಖುಷಿ ಕೊಟ್ಟಿದೆ. ಈ ಸಿನಿಮಾ ದೊಡ್ಡ ಮಟ್ಟಕ್ಕೆ ಹಿಟ್ ಆಗುತ್ತೆ ಎಂದು ಮಿಸ್ಟರ್ ಪರ್ಫೆಕ್ಷನಿಸ್ಟ್ ಭವಿಷ್ಯ ನುಡಿದಿದ್ದಾರೆ.

"ಲೋಕೇಶ್ ಜೊತೆ ಕೆಲಸ ಮಾಡಿದ್ದು, ರಜನಿಕಾಂತ್ ಜೊತೆ ಕೆಲಸ ಮಾಡಿದ್ದು, ಉಪೇಂದ್ರ ಜೊತೆ ಕೆಲಸ ಮಾಡಿದ್ದು ಖುಷಿ ಕೊಟ್ಟಿತ್ತು. ಇಡೀ ತಂಡದೊಂದಿಗೆ ಕೆಲಸ ಮಾಡಿದ್ದು ಅದ್ಭುತ ಅನುಭವ. ಎಲ್ಲಕ್ಕಿಂತ ಹೆಚ್ಚಾಗಿ ರಜನಿ ಸರ್. ಅವರನ್ನು ನಾನು ತುಂಬಾನೇ ಗೌರವಿಸುತ್ತೇನೆ. ಅವರೊಂದಿಗೆ ಕೂತು ಮಾತಾಡುವುದು, ಅವರೊಂದಿಗೆ ನಟಿಸುವುದು ಅದ್ಭುತ. ನಾನು ಆ ಸಿನಿಮಾದ ಒಂದು ಚಿಕ್ಕ ಭಾಗವಾಗಿದ್ದೇನೆ. ಆದರೆ, ಅದೊಂದು ಬಹುಮುಖ್ಯ ಭಾಗ ಕೂಡ ಹೌದು. ನನಗೆ ಅನಿಸುತ್ತೆ ಕೂಲಿ ದೊಡ್ಡ ಸಿನಿಮಾ ಆಗುತ್ತೆ." ಎಂದು ಆಮಿರ್ ಖಾನ್ ಹೇಳಿದ್ದಾರೆ.

More from Filmibeat

English summary
Aamir Khan talks about working with Rajinikanth, Upendra in Lokesh Kanagaraj movie Coolie.
Read more about: aamir khan rajinikanth upendra
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X