ಆಮಿರ್, ಆಲಿಯಾ, ಹೃತಿಕ್; ಅಂದಿನ ಬಾಲ ನಟರೇ.. ಈಗಿನ ಸ್ಟಾರ್‌ ನಟರು.. 5 ದಿಗ್ಗಜರ ಸಿನಿಮಾಗಳಿವೇ!

ಸಿನಿಮಾರಂಗನೇ ಹಾಗೆ.. ಒಮ್ಮೆ ಎಂಟ್ರಿ ಕೊಟ್ಟರೆ, ಬಣ್ಣ ನಂಟು ಬಿಟ್ಟು ಹೋಗುವುದೇ ಇಲ್ಲ. ಸೋಲಲಿ, ಗೆಲ್ಲಲಿ ಮತ್ತೆ ಮತ್ತೆ ಬಣ್ಣ ಹಚ್ಚಿ ನಟನೆ ಮಾಡುತ್ತಲೇ ಇರುತ್ತಾರೆ. ಇಂದು ಬಾಲಿವುಡ್‌ನಲ್ಲಿ ಸ್ಟಾರ್‌ಗಳಾಗಿ ಮೆರೆಯುತ್ತಿರುವವರು ಬಾಲ್ಯದಲ್ಲಿಯೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಅಲ್ಲಿಂದ ಶುರುವಾಗಿದ್ದ ಅವರ ಚಿತ್ರರಂಗದ ನಂಟು ಇಂದಿಗೂ ಯಶಸ್ವಿಯಾಗಿ ಮುಂದುವರೆದಿದೆ.

ಬಾಲಿವುಡ್‌ನ ಸ್ಟಾರ್ ನಟ-ನಟಿಯರು ಚೊಚ್ಚಲ ಬಾರಿಗೆ ಪ್ರಮುಖ ಪಾತ್ರಗಳಲ್ಲಿ ನಟಿಸುವುದಕ್ಕೂ ಮುನ್ನವೇ ಕ್ಯಾಮರಾ ಫೇಸ್ ಮಾಡಿದ್ದಾರೆ. ಚಿಕ್ಕ ಮಯಸ್ಸಿನಲ್ಲಿಯೇ ಶೂಟಿಂಗ್ ಸೆಟ್‌ನ ಅನುಭವನ್ನು ಪಡೆದುಕೊಂಡಿದ್ದಾರೆ. ಇಂದು ಸ್ಟಾರ್‌ಗಳಾಗಿ ಮೆರೆಯುತ್ತಿರುವ ಅವರ ಬಾಲ್ಯದಲ್ಲಿ ನಟಿಸಿದ ಪಾತ್ರಗಳು ಅಷ್ಟು ಸುಲಭವಕ್ಕೆ ಕಣ್ಣಿಗೆ ಬೀಳುವುದಿಲ್ಲ. ಆದರೆ, ಸೂಕ್ಷ್ಮವಾಗಿ ಗಮನಿಸಿದೆ, ಅವರ ನಟನೆ ಇಂದಿನ ಪೀಳಿಗೆಯ ಹುಬ್ಬೇರಿಸುತ್ತದೆ.

Aamir Khan to Alia Bhatt Bollywood Celebs how acted as child actors

ಹ್ಯಾಂಡ್‌ಸಮ್ ಹಂಕ್ ಹೃತಿಕ್ ರೋಷನ್, ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮಿರ್ ಖಾನ್, ಆಲಿಯಾ ಭಟ್ ರಿಂದ ಹಿಡಿದು ಆರಂಭದಲ್ಲೇ ಬಾಲನಟರಾಗಿ ಬಾಲಿವುಡ್‌ಗೆ ಆಕಸ್ಮಿಕವಾಗಿ ಪಾದಾರ್ಪಣೆ ಸ್ಟಾರ್‌ಗಳು, ಅವರ ಸಿನಿಮಾಗಳು, ತೆರೆಕಂಡ ವರ್ಷದ ಬಗ್ಗೆ ಚುಟುಕು ಮಾಹಿತಿ ಇಲ್ಲಿದೆ.

ಹೃತಿಕ್ ರೋಷನ್

ಬಾಲಿವುಡ್‌ನ ಹ್ಯಾಂಡ್‌ಸಮ್ ಹೀರೋ ಹೃತಿಕ್ ರೋಷನ್ ಇಂದು ಸೂಪರ್‌ಸ್ಟಾರ್ ಆಗಿ ಮೆರೆಯುತ್ತಿರಬಹುದು. ಆದರೆ, ಅವರಿಗೆ 6 ವರ್ಷದವರಿದ್ದಾಗಲೇ 1980ರಲ್ಲಿ ತೆರೆಕಂಡಿದ್ದ 'ಆಶಾ' ಸಿನಿಮಾ ಮೂಲಕ ಬಾಲನಟನಾಗಿ ತೆರೆಯ ಮೇಲೆ ಕಾಣಿಸಿಕೊಂಡಿದ್ದರು. ಈ ಸಿನಿಮಾ ಬಳಿಕ ಕೆಲವು ಸಣ್ಣ ಪುಟ್ಟ ಪಾತ್ರಗಳನ್ನೂ ಮಾಡಿದ್ದರು. ಬಳಿಕ ಲಾಂಗ್ ಗ್ಯಾಪ್ ಕೊಟ್ಟಿದ್ದ ಹೃತಿಕ್ ರೋಷನ್ 2000ರಲ್ಲಿ 'ಕಹೋ ನಾ... ಪ್ಯಾರ್ ಹೈ' (Kaho Naa Pyaar Hai) ಸಿನಿಮಾದ ಮೂಲಕ ಹೀರೋ ಆಗಿ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದರು. ನಾಯಕನಾಗಿ ನಟಿಸಿದ ಚೊಚ್ಚಲ ಸಿನಿಮಾದಲ್ಲಿಯೇ ಭರ್ಜರಿ ಯಶಸ್ಸು ಕಂಡು, ಭಾರತೀಯ ಚಿತ್ರರಂಗದ ಅತ್ಯಂತ ಜನಪ್ರಿಯ ನಟನಾಗಿ ಹೊರ ಹೊಮ್ಮಿದ್ದಾರೆ.

ಹೃತಿಕ್ ರೋಷನ್ ಯಶಸ್ಸಿಗೆ ಹಲವು ಕಾರಣಗಳಿವೆ. ಅವರ ಡ್ಯಾನ್ಸ್, ನಟನೆ, ಆಕ್ಷನ್ ಹಾಗೇ ಅವರ ಸ್ಕ್ರೀನ್ ಪ್ರೆಸೆನ್ಸ್ ಮೂಲಕ ಅಪಾರ ಅಭಿಮಾನಿಗಳನ್ನು ಸೆಳೆದಿದ್ದಾರೆ. ಇದೂವರೆಗೂ ವಿವಿಧ ಶೈಲಿಯ ಸಿನಿಮಾಗಳಲ್ಲಿ ಎಂದೆಂದಿಗೂ ನೆನಪಿನಲ್ಲಿ ಉಳಿದುಕೊಳ್ಳುವ ಪ್ರದರ್ಶನ ನೀಡುತ್ತಾ ಬಂದಿದ್ದಾರೆ.

ಆಲಿಯಾ ಭಟ್

ಬಾಲಿವುಡ್‌ನಲ್ಲಿ ಅತ್ಯಂತ ಹೆಚ್ಚು ಯಶಸ್ಸು ಕಂಡ ನಟಿಯರಲ್ಲಿ ಆಲಿಯಾ ಭಟ್ ಕೂಡ ಒಬ್ಬರು. ಇವರು ಕೂಡ ಬಾಲ ನಟಿಯಾಗಿ ನಟಿಸಿದ್ದಾರೆ. 1999ರಲ್ಲಿ ಬಿಡುಗಡೆಯಾಗಿದ್ದ'ಸಂಘರ್ಷ್'(Sangharsh) ಸಿನಿಮಾದಲ್ಲಿ ನಟಿಸಿದಾಗ ಅವರಿಗೆ ಸರಿ ಸುಮಾರು 6 ವರ್ಷ. ನಟಿ ಪ್ರೀತಿ ಜಿಂಟಾ ಅವರ ಬಾಲ್ಯದ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಬಾಲಿವುಡ್‌ನ ಜನಪ್ರಿಯ ನಿರ್ಮಾಪಕ ಮಹೇಶ್ ಭಟ್ ಅವರ ಪುತ್ರಿ ಆಲಿಯಾ ಭಟ್ 2012ರಲ್ಲಿ 'ಸ್ಟೂಡೆಂಟ್ ಆಫ್ ದಿ ಇಯರ್' (Student of the Year) ಸಿನಿಮಾದ ಮೂಲಕ ನಾಯಕಿಯಾಗಿ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದರು.

ಆಲಿಯಾ ಭಟ್ ಇಂದಿನ ಪೀಳಿಗೆಯ ಅತ್ಯಂತ ಯಶಸ್ವಿ ನಟಿಯರಲ್ಲಿ ಒಬ್ಬರಾಗಿದ್ದಾರೆ. ಕಮರ್ಷಿಯಲ್ ಮತ್ತು ಕಂಟೆಂಟ್ ಆಧಾರಿತ ಸಿನಿಮಾಗಳಲ್ಲಿ ತಮ್ಮ ನಟನೆಯ ತಾಕತ್ತೇನು ಅನ್ನೋದನ್ನು ಸಾಬೀತುಪಡಿಸಿದ್ದಾರೆ.

ಆಮಿರ್ ಖಾನ್

ಬಾಲಿವುಡ್‌ನಲ್ಲಿ ಮಿಸ್ಟರ್ ಪರ್ಫೆಕ್ಟ್‌ಶನಿಸ್ಟ್ ಅಂತಲೇ ಜನಪ್ರಿಯರಾಗಿರುವ ನಟ ಆಮಿರ್ ಖಾನ್. ಆಮಿರ್ ಖಾನ್ ತಮ್ಮ 8ನೇ ವಯಸ್ಸಿನಲ್ಲಿಯೇ 1973ರಲ್ಲಿ ತೆರೆಕಂಡಿದ್ದ 'ಯಾದೋಂ ಕಿ ಬಾರಾತ್' (Yaadon Ki Baaraat) ಸಿನಿಮಾದ ಮೂಲಕ ಮೊದಲ ಬಾರಿಗೆ ತೆರೆಮೇಲೆ ಕಾಣಿಸಿಕೊಂಡಿದ್ದರು. ಆ ನಂತರ 1988ರಲ್ಲಿ 'ಖಯಾಮತ್ ಸೆ ಖಯಾಮತ್ ತಕ್' (Qayamat Se Qayamat Tak) ಸಿನಿಮಾದ ಮೂಲಕ ನಾಯಕ ನಟನಾಗಿ ಎಂಟ್ರಿ ಕೊಟ್ಟಿದ್ದರು. ಚಿತ್ರಕಥೆಗೆ ಹಾಗೂ ವಿಭಿನ್ನ ಪಾತ್ರಗಳ ಮೂಲಕ ಆಮಿರ್ ಖಾನ್ ಚಿತ್ರರಂಗದಲ್ಲಿ ವಿಶಿಷ್ಟ ಪ್ರಭಾವ ಬೀರಿದ್ದಾರೆ.

ಕುನಾಲ್ ಖೇಮು

ಬಾಲನಟನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ಮತ್ತೊಬ್ಬ ನಟ ಕುನಾಲ್ ಖೇಮು. 1993ರಲ್ಲಿ ತೆರೆಕಂಡಿದ್ದ 'ಸರ್' (Sir) ಸಿನಿಮಾದ ಮೂಲಕ ಬಾಲನಟನಾಗಿ ತಮ್ಮ ಜರ್ನಿ ಆರಂಭಿಸಿದರು. ಬಳಿಕ 'ರಾಜಾ ಹಿಂದುಸ್ತಾನಿ' (Raja Hindustani) ಸಿನಿಮಾದಲ್ಲಿ ಆಮಿರ್ ಖಾನ್ ಅವರ ಬಾಲ್ಯದ ಪಾತ್ರದಲ್ಲಿ ನಟಿಸಿದ್ದರು. 2005ರಲ್ಲಿ ತೆರೆಕಂಡ 'ಕಲಿಯುಗ್' (Kalyug) ಮೂಲಕ ಹೀರೋ ಆಗಿ ಕಮ್‌ಬ್ಯಾಕ್ ಮಾಡಿದ್ದರು.

ವೀರ್ ಹಿರಾನಿ

'ಮುನ್ನಾಭಾಯ್ ಎಂ.ಬಿ.ಬಿ.ಎಸ್' (Munna Bhai M.B.B.S.) ಸಿನಿಮಾದಲ್ಲಿ ಬಾಲ ನಟನಾಗಿ ವೀರ್ ಹಿರಾನಿ ನಟಿಸಿದ್ದರು. ನಟ ಅರ್ಷದ್ ವಾರ್ಸಿ ಅವರ ಮಗನಾಗಿ ಕಾಣಿಸಿಕೊಂಡಿದ್ದರು. ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಅವರ ಮಗನಾಗಿರೋದ್ರಿಂದ ಬಾಲ್ಯದಲ್ಲೇ ಚಿತ್ರರಂಗಕ್ಕೆ ಎಂಟ್ರಿ ಕೊಡುವ ಅವಕಾಶ ಸಿಕ್ಕಿತ್ತು. ಲಾಂಗ್ ಗ್ಯಾಪ್‌ನ ನಂತರ ಇವರು ಜಿಯೋಹಾಟ್‌ಸ್ಟಾರ್‌ನ (JioHotstar) 'ಪ್ರೀತಮ್ ಆಂಡ್ ಪೆಡ್ರೊ' (Pritam and Pedro) ವೆಬ್ ಸೀರಿಸ್ ಮೂಲಕ ನಾಯಕ ನಟನಾಗಿ ಹೊಸ ಅಧ್ಯಾಯ ಆರಂಭಿಸಲಿದ್ದಾರೆ.

English summary
Aamir Khan to Alia Bhatt Bollywood Celebs how acted as child actors. Long before making an official debut or landing major roles, a few actors got their very first taste of a movie set when they were just kids.
Read more about: actors aamir khan alia bhatt
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X