ಆಮಿರ್ ಖಾನ್ ಮಾಜಿ ಪತ್ನಿಗೆ ಸ್ತ್ರೀಯರು ದ್ವೇಷಿಸಿದ್ದ 'ಅನಿಮಲ್' ಸಿನಿಮಾ ನೋಡುವ ಆಸೆ; ಯಾಕೆ ಗೊತ್ತಾ?

ಸಂದೀಪ್ ರೆಡ್ಡಿ ವಂಗಾ ನಿರ್ದೇಶಿಸಿದ 'ಅನಿಮಲ್' ಸಿನಿಮಾ ವಿವಾದ ಸುಳಿಯಲ್ಲಿ ಸಿಲುಕಿತ್ತು. ಅದೆಷ್ಟೇ ವಿವಾದಗಳಲ್ಲಿ ಸಿಲುಕಿದ್ದರೂ 2023ರಲ್ಲಿ ಬಾಕ್ಸಾಫೀಸ್‌ನಲ್ಲಿ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾಗಳಲ್ಲಿ ಪಟ್ಟಿಯಲ್ಲಿದೆ. ರಣ್‌ಬೀರ್ ಕಪೂರ್, ರಶ್ಮಿಕಾ ಮಂದಣ್ಣ, ತೃಪ್ತಿ ದಿಮ್ರಿ ನಟಿಸಿದ ಈ ಸಿನಿಮಾ 900 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಕಂಡು ದಾಖಲೆ ಬರೆದಿತ್ತು.

'ಅನಿಮಲ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಅದೆಷ್ಟೇ ಸದ್ದು ಮಾಡಿದರೂ, ಮಹಿಳೆಯ ವಿರೋಧವನ್ನು ಕಟ್ಟಿಕೊಂಡಿತ್ತು. ನಿರ್ದೇಶಕ ಸಂದೀಪ್ ರೆಡ್ಡಿ ವಂಗಾಗೆ ದೇಶದ ಮೂಲೆ ಮೂಲೆಯಲ್ಲಿ ವಿರೋಧ ವ್ಯಕ್ತವಾಗಿತ್ತು. ಆದರೆ, ಆಮಿರ್ ಖಾನ್ ಮಾಜಿ ಪತ್ನಿ ಕಿರಣ್ ರಾವ್ ಮಾತ್ರ 'ಅನಿಮಲ್' ಸಿನಿಮಾ ನೋಡುವುದಾಗಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

Aamir Khan wife Kiran Rao said she wants to watch Sandeep Reddy Vanga s Animal

ಆಮಿರ್ ಖಾನ್ ಮಾಜಿ ಪತ್ನಿ ಕಿರಣ್ ರಾವ್ ನಿರ್ದೇಶಿಸಿದ 'ಲಾಪತಾ ಲೇಡೀಸ್' ಸಿನಿಮಾ ರಿಲೀಸ್ ಆಗಿದೆ. ಈ ಸಿನಿಮಾಗೆ ಪ್ರೇಕ್ಷಕರು ಹಾಗೂ ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದೇ ಖುಷಿಯಲ್ಲಿರುವ ಕಿರಣ್ ರಾವ್ ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ವೇಳೆ 'ಅನಿಮಲ್' ಸಿನಿಮಾ ಬಗ್ಗೆ ಪ್ರಶ್ನೆ ಮಾಡಲಾಗಿತ್ತು. ಆ ವೇಳೆ ಸಂದೀಪ್ ರೆಡ್ಡಿ ವಂಗಾ ನಿರ್ದೇಶಿಸಿದ ವಿವಾದಾತ್ಮಕ ಸಿನಿಮಾವನ್ನು ವೀಕ್ಷಿಸುವುದಾಗಿ ಹೇಳಿಕೊಂಡಿದ್ದಾರೆ.

'ಅನಿಮಲ್' ಸಿನಿಮಾವನ್ನು ಇದೂವರೆಗೂ ನೋಡಿಲ್ಲ. ಯಾಕಂದ್ರೆ ಇದು ತನ್ನ ಅಭಿರುಚಿಗೆ ತಕ್ಕಂತಹ ಸಿನಿಮಾ ಅಲ್ಲ. ಆದರೂ ಪ್ರೇಕ್ಷಕರು ಇಷ್ಟ ಪಟ್ಟಿದ್ದರಿಂದ ಚಿತ್ರವನ್ನು ವೀಕ್ಷಿಸುವುದಾಗಿ ಹೇಳಿಕೊಂಡಿದ್ದಾರೆ. ತಾವು ನಿರ್ದೇಶಿಸಿದ 'ಲಾಪತಾ ಲೇಡೀಸ್' ಸಿನಿಮಾದ ಯಶಸ್ಸಿನ ಬಗ್ಗೆ ಕಿರಣ್ ರಾವ್ ಖುಷಿಯಾಗಿದ್ದಾರೆ. ಈ ಖುಷಿಯನ್ನು ಹಂಚಿಕೊಳ್ಳುವಾಗ 'ಅನಿಮಲ್' ಸಿನಿಮಾ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

Aamir Khan wife Kiran Rao said she wants to watch Sandeep Reddy Vanga s Animal

"ಲಾಪತಾ ಲೇಡೀಸ್ ಸಿನಿಮಾವನ್ನು ಪ್ರೇಕ್ಷಕರು ಇಷ್ಟಪಟ್ಟಿದ್ದಾರೆ. ಈ ಬಗ್ಗೆ ನನಗೆ ಸಿಕ್ಕಾಪಟ್ಟೆ ಖುಷಿಯಿದೆ. ವಿಮರ್ಶಕರು ಕೂಡ ಈ ಸಿನಿಮಾವನ್ನು ಇಷ್ಟ ಪಟ್ಟಿದ್ದಾರೆ. ಪ್ರೇಕ್ಷಕರಿಗೆ ಆಕ್ಷನ್ ಸಿನಿಮಾಗಳು ಇಷ್ಟ. ಆ ಸಿನಿಮಾಗಳಲ್ಲಿ ವಿಎಫ್‌ಎಕ್ಸ್ ಹೆಚ್ಚಿರಬೇಕು. ಅಂತಹದ್ದನ್ನು ಇಷ್ಟ ಪಡುತ್ತಾರೆ. ಅನಿಮಲ್ ಅಂತಹ ಸಿನಿಮಾವನ್ನು ನಾನು ನೋಡಲೇ ಬೇಕಿದೆ. ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ತುಂಬಾ ಚೆನ್ನಾಗಿ ಓಡಿದೆ, ಆ ಮಟ್ಟಿಗೆ ಜನರು ಇಷ್ಟ ಪಟ್ಟಿದ್ದಾರೆ. ಸಂದೀಪ್ ರೆಡ್ಡಿ ವಂಗಾ ನಿರ್ದೇಶನ ತುಂಬಾನೇ ಚೆನ್ನಾಗಿದೆ ಎಂದು ನಾನು ಕೇಳಿದ್ದೇನೆ. ರಣ್‌ಬೀರ್ ಕಪೂರ್ ಕೂಡ ಉತ್ತಮ ನಟ. ಪ್ರೇಕ್ಷಕರು ಇಷ್ಟ ಪಟ್ಟ ಈ ಸಿನಿಮಾವೊಂದು ಅದ್ಭುತ ವೀಕ್ಷಣೆಯಾಗುತ್ತೆಂದು ಭಾವಿಸಿದ್ದೇನೆ" ಎಂದು ಕಿರಣ್ ರಾವ್ ಹೇಳಿದ್ದಾರೆ.

ಕಿರಣ್ ರಾವ್ ಸಮಾರಂಭವೊಂದರಲ್ಲಿ ಸಂದೀಪ್ ರೆಡ್ಡಿ ವಂಗಾ ನಿರ್ದೇಶಿಸಿದ 'ಕಬೀರ್ ಸಿಂಗ್' ಸಿನಿಮಾದ ಬಗ್ಗೆ ಕಮೆಂಟ್ ಮಾಡಿದ್ದರು ಎನ್ನಲಾಗಿತ್ತು. ಈಗ ಅದೇ ಸುದ್ದಿಯನ್ನಿಟ್ಟುಕೊಂಡು ಕಿರಣ್ ರಾವ್ ಅನ್ನು ಕಮೆಂಟ್ ಮಾಡುತ್ತಿದ್ದಾರೆ. ಆದರೆ, ಅಂದು ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಬಗ್ಗೆ ಕಮೆಂಟ್ ಮಾಡಿದ್ದಾರೆ ಎನ್ನಲಾಗಿದ್ದ ಸುದ್ದಿಯನ್ನು ಕಿರಣ್ ರಾವ್ ಅಲ್ಲಗೆಳೆದಿದ್ದರು.

ಸಂದೀಪ್ ರೆಡ್ಡಿ ವಂಗಾ ನಿರ್ದೇಶಿಸಿದ 'ಕಬೀರ್ ಸಿಂಗ್' ಸಿನಿಮಾವನ್ನು ನಾನು ನೋಡಿಲ್ಲ. ಹಾಗಾಗಿ ಅವರ ಬಗ್ಗೆ ಕಮೆಂಟ್ ಮಾಡಿಲ್ಲ ಎಂದು ಹೇಳಿಕೆ ಕೊಟ್ಟಿದ್ದರು. ಸದ್ಯ ಮಹಿಳೆಯರೆಲ್ಲರೂ 'ಅನಿಮಲ್' ಸಿನಿಮಾವನ್ನು ಖಂಡಿಸುತ್ತಿದ್ದರೆ, ಇತ್ತ ಕಿರಣ್ ರಾವ್ ಮಾತ್ರ ಸಿನಿಮಾ ನೋಡುತ್ತೇನೆ ಎಂದು ಹೇಳುವ ಮೂಲಕ ಹಲ್‌ಚಲ್ ಎಬ್ಬಿಸಿದ್ದಾರೆ.

More from Filmibeat

English summary
Aamir Khan wife Kiran Rao wants to watch Animal
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X