ಮತ್ತೆ ಥಿಯೇಟರ್‌ಗೆ ಬರುತ್ತಿದೆ ಆಮಿರ್ ಖಾನ್ ಐಕಾನಿಕ್ ಸಿನಿಮಾ 'ಲಗಾನ್'

ಭಾರತೀಯ ಚಿತ್ರರಂಗದ ಐಕಾನಿಕ್ ಸಿನಿಮಾಗಳಲ್ಲೊಂದು 'ಲಗಾನ್'. ಆಮಿರ್ ಖಾನ್ ವೃತ್ತಿ ಬದುಕಿನ ಅತ್ಯದ್ಭುತ ಸಿನಿಮಾಗಳಲ್ಲಿ ಇದೂ ಒಂದು. 2001ರಲ್ಲಿ ರಿಲೀಸ್ ಆಗಿದ್ದ ಈ ಸಿನಿಮಾ ಮತ್ತೆ ಥಿಯೇಟರ್‌ಗಳಿಗೆ ಲಗ್ಗೆ ಇಡುವುದಕ್ಕೆ ಸಜ್ಜಾಗಿದೆ. ಆಮಿರ್ ಖಾನ್ 3ನೇ ಮದುವೆ ಆಗುತ್ತಿರುವ ಖುಷಿಯಲ್ಲಿ ಇದ್ದಾರೆ. ಇದೇ ವೇಳೆ ಅವರೇ ನಟಿಸಿದ 'ಲಗಾನ್' ಬಿಡುಗಡೆಗೆ ಸಜ್ಜಾಗಿದೆ.

ಸ್ವಾತಂತ್ರ್ಯ ಪೂರ್ವದ ಕ್ರೀಡಾ ಆಧಾರಿತ ಸಿನಿಮಾ ಬಿಡುಗಡೆಯಾಗಿ ಸುಮಾರು 25 ವರ್ಷಗಳನ್ನು ಪೂರೈಸಿದೆ. ಈ ಬೆನ್ನಲ್ಲೇ ಪ್ರೇಕ್ಷಕರಿಗೆ ಬಿಗ್ ಸ್ಕ್ರೀನ್ ಅನುಭವ ನೀಡುವುದಕ್ಕೆ ಮತ್ತೆ ರಿ-ರಿಲೀಸ್ ಆಗುತ್ತಿದೆ. ಮೂರು ದಿನಗಳ ಕಾಲ ಈ ಸಿನಿಮಾವನ್ನು ಥಿಯೇಟರ್‌ಗಳಲ್ಲಿ ಪ್ರೇಕ್ಷಕರು ನೀಡಬಹುದಾಗಿದೆ. 'ಆಮಿರ್ ಖಾನ್ ಪ್ರೊಡಕ್ಷನ್ಸ್' ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ಸುದ್ದಿಯನ್ನು ಹಂಚಿಕೊಂಡಿದೆ.

Aamir Khan s Lagaan Once Upon a Time in India to return cinemas on its 25th anniversary

ಪ್ರೇಕ್ಷಕರು ಈ ಕ್ಲಾಸಿಕ್ ಸಿನಿಮಾವನ್ನು ಇದೇ ತಿಂಗಳು ಅಂದರೆ, ಜೂನ್ 12, 13 ಹಾಗೂ 14 ರಂದು ಥಿಯೇಟರ್‌ಗಳಲ್ಲಿ ಮತ್ತೊಮ್ಮೆ ವೀಕ್ಷಿಸಬಹುದಾಗಿದೆ. ಹೀಗಾಗಿ ಆಮಿರ್ ಖಾನ್ ನಿರ್ಮಾಣ ಸಂಸ್ಥೆ ಹೊಸ ಟ್ರೈಲರ್ ಅನ್ನು ಸಹ ಬಿಡುಗಡೆ ಮಾಡಿದೆ. ಮತ್ತೆ ಸಿನಿ ಪ್ರಿಯರಲ್ಲಿ 'ಲಾಗನ್' ಲೆಗಸಿಯನ್ನು ನೆನಪಿಸುವ ಸಾಹಸಕ್ಕೆ ಕೈ ಹಾಕಿದೆ. ಈ ವೇಳೆ 'ಲಗಾನ್' ಕುರಿತ 6 ರೋಚಕ ಸಂಗತಿಗಳು ಇಲ್ಲಿವೆ.

ಕಥೆ ತಿರಸ್ಕರಿಸಿದ್ದ ಆಮಿರ್ ಖಾನ್

'ಲಗಾನ್' ಕಥೆಯನ್ನು ಆಮಿರ್ ಖಾನ್‌ಗೆ ನಿರ್ದೇಶಕ ಅಶುತೋಷ್ ಗೋವಾರಿಕರ್ ಹೇಳಿದಾಗ ಅದನ್ನು ತಿರಸ್ಕರಿಸಿದ್ದರು. ಆದರೆ, ಛಲ ಬಿಡದೆ ಅಶುತೋಷ್ ಎರಡು ವರ್ಷ ತೆಗೆದುಕೊಂಡು ಸ್ಕ್ರಿಪ್ಟ್ ಅನ್ನು ಪೂರ್ಣಗೊಳಿಸಿದ್ದರು. ಆಗ ಮತ್ತೆ ರಿಡಿಂಗ್ ಕೊಟ್ಟಾಗ ಆಮಿರ್ ಖಾನ್‌ಗೆ ಇಷ್ಟ ಆಗಿತ್ತು. ಹೀಗಾಗಿ ಅವರೇ ತಮ್ಮದೇ ಆಮಿರ್ ಖಾನ್ ಪ್ರೊಡಕ್ಷನ್ಸ್‌ನಲ್ಲಿ ನಿರ್ಮಾಣ ಮಾಡುವುದಕ್ಕೆ ನಿರ್ಧರಿಸಿದ್ದರು.

Also Read
Yash About Lagaan: 'ಕೆಜಿಎಫ್ 2' ಪ್ರಚಾರದ ವೇಳೆ ಯಶ್ 'ಲಗಾನ್' ಸಿನಿಮಾ ಎಳೆದು ತಂದಿದ್ದೇಕೆ?
Yash About Lagaan: 'ಕೆಜಿಎಫ್ 2' ಪ್ರಚಾರದ ವೇಳೆ ಯಶ್ 'ಲಗಾನ್' ಸಿನಿಮಾ ಎಳೆದು ತಂದಿದ್ದೇಕೆ?

10 ಸಾವಿರ ಗ್ರಾಮಸ್ಥರ ಬಳಕೆ

'ಲಾಗನ್' ಸಿನಿಮಾದ ಕ್ಲೈಮ್ಯಾಕ್ಸ್ ಸೀನ್‌ನಲ್ಲಿ ಕ್ರಿಕೆಟ್ ಪಂದ್ಯದ ದೃಶ್ಯವಿದೆ. ಹೀಗಾಗಿ ಕ್ರೀಡಾಂಗಣದಲ್ಲಿ ಜನರನ್ನು ಸೇರಿಸಬೇಕಿತ್ತು. ಹೀಗಾಗಿ ಗುಜರಾತ್‌ನ ಭುಜ್ ಮತ್ತು ಸುತ್ತಮುತ್ತಲಿನ ಹಳ್ಳಿಗಳಿಂದ ಸುಮಾರು 10,000 ಕ್ಕೂ ಹೆಚ್ಚು ಜನರನ್ನು ಕರೆತರಲಾಗಿತ್ತು. ಪ್ರತಿದಿನ ಬೆಳಿಗ್ಗೆ ಅಷ್ಟು ಜನರನ್ನು ನಿರ್ವಹಿಸುವುದು ಚಿತ್ರತಂಡಕ್ಕೆ ಬಹುದೊಡ್ಡ ಸವಾಲಾಗಿತ್ತು.

ಕಷ್ಟದ ದಿನಗಳು

ಸಿನಿಮಾಗೆ ಬೇಕಿದ್ದ ಬ್ರಿಟಿಷ್ ಕಲಾವಿದರನ್ನು ವಿಶೇಷವಾಗಿ ಲಂಡನ್‌ನಿಂದ ಆಡಿಷನ್ ಮಾಡಿ ಕರೆಯಿಸಲಾಗಿತ್ತು. ಗುಜರಾತ್‌ನ ಭುಜ್‌ನ ತೀವ್ರ ಬಿಸಿಲಿನಲ್ಲಿ ಹೋಟೆಲ್ ಸೌಲಭ್ಯಗಳು ಇಲ್ಲದೇ ಇದ್ದಿದ್ದರಿಂದ ಇಡೀ ಚಿತ್ರತಂಡ ಅಪಾರ್ಟ್‌ಮೆಂಟ್‌ಗಳನ್ನು ಬಾಡಿಗೆಗೆ ಪಡೆದು ನೆಲೆಸಿತ್ತು. ಬ್ರಿಟಿಷ್ ನಟರು ಈ ದಿನಗಳಲ್ಲಿ ಚಿತ್ರತಂಡಕ್ಕೆ ಸಹಕಾರ ನೀಡಿದ್ದರು.

Aamir Khan s Lagaan Once Upon a Time in India to return cinemas on its 25th anniversary

'ಸಿಂಕ್ ಸೌಂಡ್' ಟೆಕ್ನಾಲಜಿ

ಹಿಂದೆಲ್ಲ ಶೂಟಿಂಗ್ ಮುಗಿದ ನಂತರ ಸ್ಟುಡಿಯೋದಲ್ಲಿ ಡಬ್ಬಿಂಗ್ ಮಾಡಲಾಗುತ್ತಿತ್ತು. ಆದರೆ 'ಲಗಾನ್' ಸಿನಿಮಾ ಶೂಟಿಂಗ್ ವೇಳೆ ಭಾರತದಲ್ಲೇ ಮೊದಲ ಬಾರಿಗೆ 'ಸಿಂಕ್ ಸೌಂಡ್' ಟೆಕ್ನಾಲಜಿಯನ್ನು ಬಳಸಿದ್ದರು. ಅಂದರೆ, ಶೂಟಿಂಗ್ ಸ್ಪಾಟ್‌ನಲ್ಲೇ ಕಲಾವಿದರ ಧ್ವನಿ ಹಾಗೂ ಸಂಭಾಷಣೆಯನ್ನು ರೆಕಾರ್ಡ್ ಮಾಡಲಾಗುತ್ತೆ.

ಅತೀ ಉದ್ದನೇ ಸಿನಿಮಾ

'ಲಗಾನ್' ಆಗಿನ ಕಾಲಕ್ಕೆ ಅತ್ಯಂತ ಉದ್ದದ ಸಿನಿಮಾ ಎನಿಸಿಕೊಂಡಿದೆ. ಇದರ ರನ್‌ ಟೈಮ್ (Runtime) ಬರೋಬ್ಬರಿ 3 ಗಂಟೆ 44 ನಿಮಿಷಗಳು. ಆದರೂ ಅಶುತೋಷ್ ಗೋವರಿಕರ್ ಸ್ಕ್ರೀನ್‌ಪ್ಲೇ ಅನ್ನು ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದರು. ಇದು ಪ್ರೇಕ್ಷಕರಿಗೆ ಎಲ್ಲೂ ಬೋರ್ ಅನಿಸಲಿಲ್ಲ.

ಭೂಕಂಪದಿಂದ ಎಸ್ಕೇಪ್

ಗುಜರಾತ್‌ನ ಭುಜ್‌ನಲ್ಲಿ 'ಲಗಾನ್' ಶೂಟಿಂಗ್ ಮಾಡಲಾಗಿತ್ತು. ಇದು ಮುಗಿದ ಕೆಲವೇ ತಿಂಗಳುಗಳಲ್ಲಿ ಅಂದರೆ, ಜನವರಿ 2001 ರಂದು ಅಲ್ಲಿ ಭೀಕರ ಭೂಕಂಪ ಸಂಭವಿಸಿತ್ತು. ಚಿತ್ರೀಕರಣ ಮಾಡಿದ ಸಂಪೂರ್ಣ ಹಳ್ಳಿ ನಾಶವಾಯಿತು. ಸಿನಿಮಾ ರಿಲೀಸ್ ಬಳಿಕ ಆಮೀರ್ ಖಾನ್ ಮತ್ತು ತಂಡದವರು ಆ ಹಳ್ಳಿಯ ಪುನರ್ ನಿರ್ಮಾಣಕ್ಕೆ ಭಾರಿ ಮೊತ್ತದ ಹಣವನ್ನು ದೇಣಿಗೆಯಾಗಿ ನೀಡಿದ್ದರು.

ಆಸ್ಕರ್‌ಗೆ ಎಂಟ್ರಿ

'ಲಗಾನ್' ಆಸ್ಕರ್ ಗೆಲ್ಲುವ ಭಾರತದ ಆಶಾಕಿರಣವಾಗಿತ್ತು. 74ನೇ ಅಕಾಡೆಮಿ ಪ್ರಶಸ್ತಿಯಲ್ಲಿ (Oscars) 'ಅತ್ಯುತ್ತಮ ವಿದೇಶಿ ಭಾಷಾ ಚಿತ್ರ' ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಿತ್ತು. ಅಂತಿಮ ಐದರ ಪಟ್ಟಿಯಲ್ಲಿ ನಾಮನಿರ್ದೇಶನಗೊಂಡಿತ್ತು.

English summary
Aamir Khan's Lagaan: Once Upon a Time in India to return cinemas on its 25th anniversary.
Read more about: aamir khan lagaan
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X