ಆಮಿರ್ ಖಾನ್ ಸಿನಿಮಾ 'ಸಿತಾರೆ ಜಮೀನ್ ಪರ್' ಬಾಯ್‌ಕಾಟ್‌ಗೆ ಒತ್ತಾಯ; ನೆಟ್ಟಿಗರ ಕಣ್ಣುಗಳು ಮತ್ತೆ ಕೆಂಪಾಗಿದ್ದೇಕೆ?

ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮಿರ್ ಖಾನ್ ಹೊಸ ಸಿನಿಮಾ ಟ್ರೈಲರ್ ರಿಲೀಸ್ ಆಗಿದೆ. 2022ರಲ್ಲಿ ನಟಿಸಿದ 'ಲಾಲ್ ಸಿಂಗ್ ಚಡ್ಡ' ಹೀನಾಯ ಸೋಲು ಕಂಡ ಬಳಿಕ ಆಮಿರ್ ಖಾನ್ ನಟನೆಯಿಂದ ದೂರ ಉಳಿದಿದ್ದರು. ಈಗ ಮೂರು ವರ್ಷಗಳ ಬಳಿಕ ಮತ್ತೆ ಆಮಿರ್ ಖಾನ್ ನಟನೆಯ ಸಿನಿಮಾ ಬಿಡುಗಡೆ ಸಜ್ಜಾಗಿದೆ. ಬಹಳ ನಿರೀಕ್ಷೆಯಿಂದ ಕಾಯುತ್ತಿದ್ದ ಅವರ ಅಭಿಮಾನಿಗಳಿಗಂತೂ ಖುಷಿ ಕೊಟ್ಟಿದೆ. ಅದರ ಬೆನ್ನಲ್ಲೇ ಬಾಯ್‌ಕಾಟ್ ಬಿಸಿ ಕೂಡ ತಟ್ಟಿದೆ.

ಆಮಿರ್ ಖಾನ್ ಸಿನಿಮಾ 'ಸಿತಾರೆ ಜಮೀನ್ ಪರ್' ಟ್ರೈಲರ್ ರಿಲೀಸ್ ಆಗುತ್ತಿದ್ದಂತೆ ನೆಟ್ಟಿಗರ ಕಣ್ಣುಗಳು ಕೆಂಪಾಗಿವೆ. 'ಎಕ್ಸ್' (ಟ್ವಿಟರ್‌)ನಲ್ಲಿ ಬಾಯ್‌ಕಾಟ್ ಸಿತಾರೆ ಜಮೀನ್ ಪರ್ ಹ್ಯಾಶ್‌ಟ್ಯಾಗ್ ಟ್ರೆಂಡಿಂಗ್‌ನಲ್ಲಿ ಇದೆ. ಈ ಸಿನಿಮಾದಲ್ಲಿ ಆಮಿರ್ ಖಾನ್ ಬಾಸ್ಕೆಟ್ ಬಾಲ್ ಕೋಚ್ ಆಗಿ ನಟಿಸಿದ್ದಾರೆ. ಈ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆಗಳಂತೂ ಇದ್ದೇ ಇದೆ. ಆದರೆ, ಚಿತ್ರತಂಡಕ್ಕೀಗ ಬಾಯ್‌ಕಾಟ್ ಟ್ರೆಂಡ್ ತಲೆನೋವಾಗಿಬಿಟ್ಟಿದೆ.

Aamir Khan s Sitaare Zameen Par Faces Boycott Calls on X Here s Why

'ಸಿತಾರೆ ಜಮೀನ್ ಪರ್' ಟ್ರೈಲರ್ ರಿಲೀಸ್ ಕ್ಷಣದಿಂದ ಯೂಟ್ಯೂಬ್‌ನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ರಿಲೀಸ್ ಆದ ಕೇವಲ 15 ಗಂಟೆಗಳಲ್ಲಿ 'ಸಿತಾರೆ ಜಮೀನ್ ಪರ್' ಟ್ರೈಲರ್ ಅನ್ನು 20 ಮಿಲಿಯನ್ ಮಂದಿ ವೀಕ್ಷಣೆ ಮಾಡಿದ್ದಾರೆ. ಸಿನಿಪ್ರಿಯರಿಂದ ಯಾವ ಮಟ್ಟಿಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆಯೋ ಅಷ್ಟೇ ನೆಟ್ಟಿಗರಿಂದ ಬಾಯ್‌ಕಾಟ್‌ಗೂ ಒತ್ತಡ ಹೆಚ್ಚಾಗುತ್ತಿದೆ. ಅಷ್ಟಕ್ಕೂ ಮತ್ತೇನು ಮಾಡಿದರು ಆಮಿರ್ ಖಾನ್? ಸಿತಾರೆ ಜಮೀನ್ ಪರ್ ಬಾಯ್‌ಕಾಟ್‌ಗೆ ಒತ್ತಡವೇಕೆ? ಎಂದು ತಿಳಿದುಕೊಳ್ಳುವುದಕ್ಕೆ ಮುಂದೆ ಓದಿ.

'ಸಿತಾರೆ ಜಮೀನ್ ಪರ್'ನಲ್ಲೇನಿದೆ?

2007ರಲ್ಲಿ 'ತಾರೆ ಜಮೀನ್ ಪರ್' ಸಿನಿಮಾ ರಿಲೀಸ್ ಆಗಿತ್ತು. ಇದನ್ನು ಸ್ವತ: ಆಮಿರ್ ಖಾನ್ ನಿರ್ದೇಶನ ಮಾಡಿದ್ದರು. ಈಗ ಸುಮಾರು 18 ವರ್ಷಗಳ ಬಳಿಕ ಸೀಕ್ವೆಲ್ 'ಸಿತಾರೆ ಜಮೀನ್ ಪರ್' ರಿಲೀಸ್‌ಗೆ ರೆಡಿಯಾಗಿದೆ. ಹಾಗಂತ ಇದು 'ತಾರೆ ಜಮೀನ್ ಪರ್' ಸಿನಿಮಾದ ಮುಂದುವರೆದ ಭಾಗ ಅಲ್ಲ. ಇಲ್ಲಿ ಆಮಿರ್ ಖಾನ್ ವಿಷೇಶ ಚೇತನ ಮಕ್ಕಳಿಗೆ ಫುಟ್‌ಬಾಲ್ ಹೇಳಿಕೊಡುವ ಕೋಚ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆಮಿರ್ ಖಾನ್ ಅವರೇ ಈ ಸಿನಿಮಾವನ್ನು ನಿರ್ಮಾಣ ಕೂಡ ಮಾಡಿದ್ದಾರೆ. ಹೀಗಿದ್ದರೂ, ಬಾಯ್‌ಕಾಟ್ ಯಾಕೆ?

ಆಮಿರ್ ಸಿನಿಮಾಗೆ ಬಾಯ್‌ಕಾಟ್ ಯಾಕೆ?

'ಸಿತಾರೆ ಜಮೀನ್ ಪರ್' ಸಿನಿಮಾ ಸಮಾಜಕ್ಕೆ ಉತ್ತಮ ಸಂದೇಶವನ್ನು ಕೊಡುವ ಸಿನಿಮಾ. ಇದರಲ್ಲಿ ವಿವಾದ ಮಾಡುವಂತಹ ಯಾವುದೇ ಅಂಶಗಳು ಟ್ರೈಲರ್‌ನಲ್ಲಿ ಕಾಣಿಸುತ್ತಿಲ್ಲ. ಹೀಗಿದ್ದರೂ ಎಕ್ಸ್‌ನಲ್ಲಿ ಈ ಸಿನಿಮಾವನ್ನು ಬಾಯ್‌ಕಾಟ್‌ ಮಾಡುವಂತೆ ಯಾಕೆ ಒತ್ತಡ ಹೇರಲಾಗುತ್ತಿದೆ? ಆಮಿರ್ ಖಾನ್ ಟರ್ಕಿಯ ಪ್ರಥಮ ಮಹಿಳೆಯನ್ನು 2020ರಲ್ಲಿ ಭೇಟಿಯಾಗಿದ್ದು ಇದಕ್ಕೆ ಕಾರಣ. 2020ರಲ್ಲಿ 'ಲಾಲ್‌ ಸಿಂಗ್ ಚಡ್ಡ' ಸಿನಿಮಾದ ಕೆಲವು ಭಾಗಗಳನ್ನು ಶೂಟಿಂಗ್ ಮಾಡಲಾಗಿತ್ತು. ಈ ವೇಳೆ ಟರ್ಕಿಯ ಪ್ರಥಮ ಮಹಿಳೆಯನ್ನು ಭೇಟಿ ಮಾಡಿದ್ದರು. ಆ ಫೋಟೊಗಳು ವೈರಲ್ ಆಗಿತ್ತು. ಈಗ ಭಾರತ ಹಾಗೂ ಪಾಕಿಸ್ತಾನದ ನಡುವಿನ ಸಂಘರ್ಷ ನಡೆದಿತ್ತು. ಈ ವೇಳೆ ಟರ್ಕಿ ನೇರವಾಗಿ ಪಾಕಿಸ್ತಾನಕ್ಕೆ ಸಹಾಯ ಹಸ್ತ ಚಾಚಿದ ಹಿನ್ನೆಲೆಯಲ್ಲಿ ನೆಟ್ಟಿಗರು ಆಮಿರ್ ಖಾನ್ ಮೇಲೆ ಕೆಂಡ ಕಾರಿದ್ದಾರೆ.

Take a Poll

ಏನಂತಾರೆ ನೆಟ್ಟಿಗರು?

ಭಾರತ ಹಾಗೂ ಪಾಕಿಸ್ತಾನ ಸಂಘರ್ಷ ಬೆನ್ನಲ್ಲೇ ನಮ್ಮ ವೈರಿ ರಾಷ್ಟ್ರಕ್ಕೆ ಟರ್ಕಿ ಸಹಾಯ ಮಾಡಿತ್ತು. ಹೀಗಾಗಿ ಟರ್ಕಿಯನ್ನು ಬಾಯ್‌ಕಾಟ್‌ ಮಾಡುವ ಅಭಿಯಾನ ಶುರುವಾಗಿದೆ. ಇದರೊಂದಿಗೆ ಆಮಿರ್ ಖಾನ್ ಸಿನಿಮಾವನ್ನು ಬಾಯ್‌ಕಾಟ್‌ ಮಾಡಲು ಅಭಿಯಾನ ಶುರುವಾಗಿದೆ. ನೆಟ್ಟಿಗರೊಬ್ಬರು " ಟರ್ಕಿ ಟೂರಿಸಂ ಅನ್ನು ಯಶಸ್ವಿಯಾಗಿ ಬಾಯ್‌ಕಾಟ್ ಮಾಡಿದ ಬೆನ್ನಲ್ಲೇ ಈಗ ಆಮಿರ್ ಖಾನ್ ಸಿನಿಮಾ 'ಸಿತಾರೆ ಜಮೀನ್ ಪರ್' ಅನ್ನು ಬಾಯ್‌ಕಾಟ್ ಮಾಡುವ ಸಮಯ ಬಂದಿದೆ. ಟರ್ಕಿ ಹೋಗಿ ಅಲ್ಲಿನ ಅಧ್ಯಕ್ಷ ಹಾಗೂ ಅವರ ಪತ್ನಿಯನ್ನು ಭೇಟಿ ಮಾಡಿ ಬಂದಿದ್ದಾರೆ. ಟರ್ಕಿ ಪಾಕಿಸ್ತಾನಕ್ಕೆ ಸಪೋರ್ಟ್ ಮಾಡಿದೆ" ಎಂದು ಬರೆದುಕೊಂಡಿದ್ದಾರೆ.

'ಸಿತಾರೆ ಜಮೀನ್ ಪರ್' ಬಾಯ್‌ಕಾಟ್ ಮಾಡುವ ಸಮಯ

"ಬಾಯ್‌ಕಾಟ್ ಟರ್ಕಿ, ಬಾಯ್‌ಕಾಟ್ ಅಜೆರ್ಬೈಜಾನ್ ಮಾಡಿದ್ದನ್ನು ನಾವು ಪ್ರಶಂಸಿಸುತ್ತೇವೆ. ಈಗ ಸಿತಾರೆ ಜಮೀರ್ ಪರ್ ಸಿನಿಮಾವನ್ನು ಬಾಯ್‌ಕಾಟ್ ಮಾಡುವ ಸಮಯ. ಯಾಕಂದ್ರೆ, ಬಾಲಿವುಡ್ ಮಂದಿಗೆ ಭಾರತದ ಬಗ್ಗೆ ಮಾತಾಡುವುದಕ್ಕೆ ಸಮಯವಿಲ್ಲ. ಹಾಗೇ ಪಾಕಿಸ್ತಾನದ ಅಭಿಮಾನಿಗಳನ್ನು ನೋಯಿಸುವುದಕ್ಕೆ ಇಷ್ಟವಿಲ್ಲ. ಇವರಿಗೆ ಅನುಕಂಪ ಎನ್ನುವುದನ್ನು ಕೊಡಬಾರದು. ನಟ, ನಟಿಯರು ಹಾಗೂ ಅವರ ಸಿನಿಮಾಗಳಿಗೆ ಬೆಂಬಲ ನೀಡಬಾರದು" ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.

More from Filmibeat

English summary
Aamir Khan's Sitaare Zameen Par Faces Boycott Calls on 'X': Here's Why;
Read more about: aamir khan boycott
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X