ಆಮಿರ್ ಖಾನ್ ವಿವಾಹ ಆಗ್ತಿರೋ ಗೌರಿ ಸ್ಟ್ರಾಟ್ ಮೊದಲ ಪತಿ ಇವ್ರೇನಾ?ತೊಡೆಯ ಮೇಲೆ ಕೂರಿಸಿಕೊಂಡಿರೊ ವ್ಯಕ್ತಿ ಯಾರು?

ಬಾಲಿವುಡ್‌ನಲ್ಲಿ ನಾಳೆ (ಜುಲೈ 5) ಮದುವೆ ಸಂಭ್ರಮ. ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮಿರ್ ಖಾನ್ ಮೂರನೇ ಬಾರಿಗೆ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಸುಮಾರು ಎರಡು ದಶಕಗಳಿಂದ ಪರಿಚಯವಿರುವ ಗೆಳತಿ ಗೌರಿ ಸ್ಟ್ರಾಟ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಈ ಕಾರಣಕ್ಕೆ ಈ ಜೋಡಿಯ ವಿವಾಹವನ್ನು ಕಣ್ತುಂಬಿಕೊಳ್ಳುವುದಕ್ಕೆ ಬಾಲಿವುಡ್ ಕೂಡ ಎದುರು ನೋಡುತ್ತಿದೆ.

ಮುಂಬೈನ ಪಾಲಿ ಹಿಲ್ಸ್‌ನಲ್ಲಿರುವ ಆಮಿರ್ ಖಾನ್ ನಿವಾಸದಲ್ಲಿ ಈ ಮದುವೆ ಜರುಗಲಿದೆ. ಅವರ ಮನೆಯಲ್ಲಿ ಸರಳವಾಗಿ ಕೇವಲ ಕುಟುಂಬಸ್ಥರು ಹಾಗೂ ಆತ್ಮೀಯರೊಂದಿಗೆ ಆಮಿರ್ ಖಾನ್-ಗೌರಿ ಸ್ಟ್ರಾಟ್ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಹೀಗಾಗಿ ಈ ಸಮಾರಂಭ ಖಾಸಗಿಯಾಗಿದ್ದು, ವಿಶೇಷ ಆಹ್ವಾನಿತರು ಮಾತ್ರ ಭಾಗವಹಿಸಲಿದ್ದಾರೆ.

Aamir Khan s soon-to-be wife Gauri Spratt s first husband alleged old photo Grabs Attention

ಒಂದ್ಮೇಲೆ ಆಮಿರ್ ಖಾನ್ ಹಾಗೂ ಗೌರಿ ಸ್ಟ್ರಾಟ್ ಮದುವೆ ಬಗ್ಗೆ ಚರ್ಚೆಯಾಗುತ್ತಿದ್ದರೆ, ಇದ್ದಕ್ಕಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಗೌರಿಯ ಹಳೆಯ ಫೋಟೊ ವೈರಲ್ ಆಗುತ್ತಿದೆ. ನೆಟ್ಟಿಗರು ಇದನ್ನು ಗೌರಿ ಸ್ಟ್ಟಾಟ್ ಅವರ ಮೊದಲ ಪತಿ ಎಂದು ಹೇಳುತ್ತಿದ್ದಾರೆ. ಅಸಲಿಗೆ ಆ ವ್ಯಕ್ತಿ ಯಾರು? ನಿಜಕ್ಕೂ ಅವರು ಗೌರಿ ಸ್ಪ್ರಾಟ್ ಅವರ ಮೊದಲ ಪತಿನೇನಾ? ತಿಳಿಯುವುದಕ್ಕೆ ಮುಂದೆ ಓದಿ.

ವಿಶೇಷ ವಿವಾಹ ಕಾಯ್ದೆ ಅಡಿ ಮದುವೆ

ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮಿರ್ ಖಾನ್ ಮದುವೆ ವಿಶೇಷ ವಿವಾಹ ಕಾಯ್ದೆಯ ಅಡಿ ಜರುಗಲಿದ್ದು, ಇಬ್ಬರೂ ರಿಜಿಸ್ಟರ್ ಮ್ಯಾರೇಜ್ ಆಗಲಿದ್ದಾರೆಂದು ವರದಿಯಾಗಿವೆ. ಹೀಗಾಗಿ 63 ವರ್ಷ ಆಮಿರ್ ಖಾನ್ ಹಾಗೂ 47 ವರ್ಷದ ಗೌರಿ ಸ್ಟ್ರಾಟ್ ವಿವಾಹವನ್ನು ಬಾಲಿವುಡ್ ವಿಶೇಷವಾಗಿ ಸಂಭ್ರಮಿಸುತ್ತಿದೆ. ಇಂತಹ ವಿವಾಹ ಅವರ ವಿಶೇಷ ಅಲ್ಲದೇ ಹೋದರೂ, 60 ದಾಟಿದ ಆಮಿರ್ ಮದುವೆ ನೋಡುವುದಕ್ಕೆ ಕಾತುರರಾಗಿದ್ದಾರೆ. ಈ ಮಧ್ಯೆ ಗೌರಿ ಸ್ಟ್ರಾಟ್ ಅವರ ಹಳೆಯ ಫೋಟೊ ವೈರಲ್ ಆಗುತ್ತಿದೆ.

Also Read
Aamir Khan Marriage:3ನೇ ಮದುವೆಗೆ ಸಜ್ಜಾದ ಆಮಿರ್ ಖಾನ್; ಇಬ್ಬರು ಮಾಜಿ ಹೆಂಡಿರ ಮುಂದೆ 3ನೇ ವಿವಾಹ
Aamir Khan Marriage:3ನೇ ಮದುವೆಗೆ ಸಜ್ಜಾದ ಆಮಿರ್ ಖಾನ್; ಇಬ್ಬರು ಮಾಜಿ ಹೆಂಡಿರ ಮುಂದೆ 3ನೇ ವಿವಾಹ

ಫೋಟೊದಲ್ಲಿರೋದು ಮೊದಲ ಪತಿನಾ?

ಮದುವೆಯ ಹೊಸ್ತಿಲಲ್ಲಿ ಇರುವ ಗೌರಿ ಸ್ಟ್ರಾಟ್ ಅವರದ್ದೇ ಎನ್ನಲಾದ ಫೋಟೊ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಫೋಟೊದಲ್ಲಿ ವ್ಯಕ್ತಿಯೊಬ್ಬರ ತೊಡೆಯ ಮೇಲೆ ಗೌರಿ ಕೂತಿದ್ದಾರೆ. ಅದು ಗೌರಿ ಅವರ ಮಾಜಿ ಪತಿಯೇ ಎಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಮಾಡಲಾಗುತ್ತಿದೆ. ಅಸಲಿ ಈ ಫೋಟೊದಲ್ಲಿ ಇರೋದು ಅವರ ಮಾಜಿ ಪತಿನೇನಾ? ಇಲ್ಲ ಬೇರೆಯವರಾ? ಈ ಬಗ್ಗೆ ಖಚಿತ ಮಾಹಿತಿ ಇಲ್ಲ.

Aamir Khan s soon-to-be wife Gauri Spratt s first husband alleged old photo Grabs Attention

ಹಳೆಯ ಫೋಟೋ ವೈರಲ್ ಆಗಿದ್ದೇಕೆ?

ಆಮಿರ್ ಖಾನ್ ಹಾಗೂ ಗೌರಿ ಸ್ಟ್ರಾಟ್ ಮದುವೆ ವಿಷಯ ಹೊರ ಬೀಳುತ್ತಿದ್ದಂತೆ ಈ ಫೋಟೊ ವೈರಲ್ ಆಗಿದೆ. ಈ ಹಿಂದೆ ಗೌರಿ ಸ್ಟ್ರಾಟ್ ಅವರಿಗೆ ಮದುವೆ ಆಗಿತ್ತು. ಅವರಿಗೆ ಕ್ವಿನ್ ಎಂಬ ಏಳು ವರ್ಷದ ಮಗನಿದ್ದಾನೆ. ಆದರೆ, ಮೊದಲ ಮದುವೆ ಮುರಿದು ಬಿದ್ದ ಬಳಿಕ ಗೌರಿ ಹಾಗೂ ಅವರ ಪತಿ ಇಬ್ಬರೂ ಮಗನಿಗೆ ಸಮಾನ ಪ್ರೀತಿ ಕೊಟ್ಟು ಪೋಷಕರ ಪ್ರೀತಿಯನ್ನು ನೀಡುತ್ತಿದ್ದಾರೆ. ಆದರೆ, ತಮ್ಮ ಮೊದಲ ಮದುವೆ, ಮಾಜಿ ಪತಿ ಹಾಗೂ ಮಗನ ಕುರಿತ ವಿಷಯವನ್ನು ಖಾಸಗಿಯಾಗಿ ಇಟ್ಟಿದ್ದಾರೆ.

ಯಾರೀ ಗೌರಿ ಸ್ಪ್ರ್ಯಾಟ್?

47 ವರ್ಷದ ಗೌರಿ ಸ್ಪ್ರ್ಯಾಟ್ ಮೂಲತಃ ಬೆಂಗಳೂರಿನವರು. ತಮಿಳು-ಬ್ರಿಟಿಷ್ ಮೂಲದ ತಂದೆ ರಾಬರ್ಟ್ ಸ್ಪ್ರ್ಯಾಟ್ ಹಾಗೂ ಪಂಜಾಬಿ-ಐರಿಶ್ ಮೂಲದ ತಾಯಿ ರೀಟಾ ಇವರ ಪೋಷಕರು. ಅಂದ್ಹಾಗೆ ಇವರ ತಾತ ಫಿಲಿಪ್ ಸ್ಪ್ರ್ಯಾಟ್ ಬ್ರಿಟನ್ ಮೂಲದವರಾಗಿದ್ದು, ಭಾರತದ ಸ್ವಾತಂತ್ರ್ಯ ಹೋರಾಟದಲ್ಲೂ ಭಾಗವಹಿಸಿದ್ದರು. ಗೌರಿ ಸ್ಟ್ರಾಟ್ ಒಬ್ಬ ಉದ್ಯಮಿಯಾಗಿ ಗುರುತಿಸಿಕೊಂಡಿದ್ದರು. 'BBlunt' ಸಲೂನ್‌ನ ಸಹ-ಮಾಲೀಕರಾಗಿದ್ದರು. ಸದ್ಯಕ್ಕೀಗ ಆಮಿರ್ ಖಾನ್ ಅವರ ನಿರ್ಮಾಣ ಸಂಸ್ಥೆಯಲ್ಲಿ ಇವರು ಕೆಲಸ ಮಾಡುತ್ತಿದ್ದಾರೆ.

English summary
Aamir Khan's soon-to-be wife Gauri Spratt's first husband alleged old photo Grabs Attention.
Read more about: aamir khan wedding wife
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X