ಬಾಲಿವುಡ್ ಸಾಹಸ ನಿರ್ದೇಶಕ ಪರ್ವೇಜ್ ಖಾನ್ ಹೃದಯಾಘಾತದಿಂದ ನಿಧನ

ಬಾಲಿವುಡ್‌ನಲ್ಲಿ ಆಕ್ಷನ್ ಡೈರೆಕ್ಟರ್ ಆಗಿ ಗುರುತಿಸಿಕೊಂಡಿದ್ದ ಪರ್ವೇಜ್ ಖಾನ್ (55) ತೀವ್ರ ಹೃದಯಾಘಾತದಿಂದ ಸೋಮವಾರ ನಿಧನರಾದರು.

Recommended Video

Aishwarya Rai ಗೆ ಸಂತಸದ ಸುದ್ದಿ! | Filmibeat Kannada

ಅಂಧಾಧುನ್, ಬದ್ಲಾಪುರ್, ಬಾಜಿಗರ್, ಖಿಲಾಡಿ ಸೇರಿದಂತೆ ಅನೇಕ ಸಿನಿಮಾಗಳಿಗೆ ಅವರು ಸಾಹಸ ನಿರ್ದೇಶಕರಾಗಿ ಕೆಲಸ ಮಾಡಿದ್ದರು. 1986ರಿಂದಲೂ ಅವರು ಚಿತ್ರರಂಗದಲ್ಲಿದ್ದರು. 'ಸೋಮವಾರ ಬೆಳಿಗ್ಗೆ ಅವರಿಗೆ ತೀವ್ರ ಹೃದಯಾಘಾತ ಉಂಟಾಯಿತು. ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಆಗಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದರು. ಅವರಿಗೆ ಯಾವುದೇ ಆರೋಗ್ಯ ಸಮಸ್ಯೆಗಳು ಇರಲಿಲ್ಲ. ಆದರೆ ಕಳೆದ ರಾತ್ರಿ ಎದೆ ನೋವಿನ ಅನುಭವ ಆಗಿತ್ತು' ಎಂದು ಅವರ ಆಪ್ತ ನಿಶಾಂತ್ ಖಾನ್ ತಿಳಿಸಿದ್ದಾರೆ.

Action Director Parvez Khan Passes Away Due To Massive Heart Attack

ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರ 'ಶಾಹಿದ್'ನಲ್ಲಿ 2013ರಲ್ಲಿ ಪರ್ವೇಜ್ ಜತೆ ಕೆಲಸ ಮಾಡಿದ್ದ ನಿರ್ದೇಶಕ ಹನ್ಸಲ್ ಮೆಹ್ತಾ ಸಂತಾಪ ಸೂಚಿಸಿದ್ದಾರೆ. 'ಆಕ್ಷನ್ ಡೈರೆಕ್ಟರ್ ಪರ್ವೇಜ್ ಖಾನ್ ಇನ್ನಿಲ್ಲ ಎಂಬ ಸುದ್ದಿ ಈಗಷ್ಟೇ ತಿಳಿಯಿತು. ನಾವು ಶಾಹಿದ್ ಚಿತ್ರದಲ್ಲಿ ಜತೆಗೆ ಕೆಲಸ ಮಾಡಿದ್ದೆವು. ಗಲಭೆಯ ದೃಶ್ಯವನ್ನು ಒಂದೇ ಟೇಕ್‌ನಲ್ಲಿ ಬರುವಂತೆ ಸಂಯೋಜಿಸಿದ್ದರು. ಅವರು ಬಹಳ ಕೌಶಲ ಮತ್ತು ಉತ್ಸಾಹಿಯಾಗಿದ್ದರು. ನಿಮ್ಮ ಧ್ವನಿ ಇನ್ನೂ ನನ್ನ ಕಿವಿಗಳಲ್ಲಿ ಗುಂಗುಡುತ್ತಿದೆ. ನಿಮ್ಮ ಅತ್ಮಕ್ಕೆ ಶಾಂತಿ ಸಿಗಲಿ' ಎಂದು ಅವರು ಹೇಳಿದ್ದಾರೆ.

ಅಕ್ಬರ್ ಬಕ್ಷಿ ಅವರ ಬಳಿ ಸಹಾಯಕ ಸಾಹಸ ನಿರ್ದೇಶಕರಾಗಿ ವೃತ್ತಿ ಬದುಕು ಆರಂಭಿಸಿದ ಪರ್ವೇಜ್, 2004ರಲ್ಲಿ ರಾಮ್ ಗೋಪಾಲ್ ವರ್ಮಾ ಅವರ 'ಅಬ್ ತಕ್ ಛಪ್ಪನ್' ಚಿತ್ರದಿಂದ ಸ್ವತಂತ್ರವಾಗಿ ಸಾಹಸ ನಿರ್ದೇಶನಕ್ಕೆ ಇಳಿದರು. ಜಾನಿ ಗದ್ದರ್, ಏಜೆಂಟ್ ವಿನೋದ್, ಬದ್ಲಾಪುರ್ ಮುಂತಾದ ಸಿನಿಮಾಗಳಿಗೆ ಕೆಲಸ ಮಾಡಿದ್ದಾರೆ. ಪತ್ನಿ, ಮಗ, ಸೊಸೆ ಮತ್ತು ಮೊಮ್ಮಗಳನ್ನು ಅವರು ಅಗಲಿದ್ದಾರೆ.

More from Filmibeat

English summary
Bollywood action director Parvez Khan (55) who worked films like Andhadhun, Badlapur dies due to massive heart attack.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X