ಮತ್ತೆ ಮೂರು ಕೋಟಿ ರೂ ದೇಣಿಗೆ ನೀಡಿದ ಬಾಲಿವುಡ್ ನಟ ಅಕ್ಷಯ್ ಕುಮಾರ್
ಕೊರೊನಾ ವೈರಸ್ ವಿರುದ್ಧದ ದೇಶದ ಹೋರಾಟಕ್ಕೆ 25 ಕೋಟಿ ರೂ.ಗಳ ದೊಡ್ಡ ಮೊತ್ತದ ದೇಣಿಗೆ ನೀಡುವ ಮೂಲಕ ಉದಾರತೆ ಮೆರೆದಿದ್ದ ಬಾಲಿವುಡ್ ನಟ ಅಕ್ಷಯ್ ಕುಮಾರ್, ಅಷ್ಟಕ್ಕೇ ಸುಮ್ಮನಾಗಿಲ್ಲ. ತಮ್ಮ ದುಡಿಮೆಯಯ ಇನ್ನೊಂದು ಭಾಗವನ್ನು ಅವರು ಜನರ ಸಂಕಷ್ಟಕ್ಕೆ ಮಿಡಿಯಲು ನೀಡುವ ಮೂಲಕ ಮಾನವೀಯತೆಯನ್ನು ಪ್ರದರ್ಶಿಸಿದ್ದಾರೆ.
ನಾವಲ್ ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ನೆರವಾಗಲು ಅಕ್ಷಯ್ ಕುಮಾರ್ 25 ಕೋಟಿ ರೂ ಹಣವನ್ನು ಪಿಎಂ ಕೇರ್ಸ್ ಫಂಡ್‌ಗೆ ದೇಣಿಗೆಯಾಗಿ ನೀಡಿದ್ದರು. ಕೊರೊನಾ ವೈರಸ್ ಹಾವಳಿ ತೀವ್ರವಾಗಿರುವ ಮುಂಬೈ ನಗರಕ್ಕೆ ಪ್ರತ್ಯೇಕವಾಗಿ ಸಹಾಯ ಮಾಡಲು ಧಾವಿಸಿದ್ದಾರೆ. ಬೃಹನ್ ಮುಂಬೈ ಮಹಾನಗರ ಪಾಲಿಕೆಗೆ (ಬಿಎಂಸಿ) ಹೆಚ್ಚುವರಿಯಾಗಿ 3 ಕೋಟಿ ರೂ ಆರ್ಥಿಕ ನೆರವು ಕೊಟ್ಟಿದ್ದಾರೆ. ಮುಂದೆ ಓದಿ...
ಪಿಪಿಇ ತಯಾರಿಸಲು ನೆರವು
ಬೃಹನ್ ಮುಂಬೈ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಆರೋಗ್ಯ ಕಾರ್ಯಕರ್ತರು ಮತ್ತು ಪೌರ ಕಾರ್ಮಿಕರಿಗೆ ವೈಯಕ್ತಿಕ ಸುರಕ್ಷತಾ ಸಾಧನಗಳನ್ನು (ಪಿಪಿಇ) ತಯಾರಿಸಲು ಸಹಾಯ ಮಾಡುವ ಉದ್ದೇಶದಿಂದ ಅಕ್ಷಯ್ ಕುಮಾರ್ ಹಣವನ್ನು ದೇಣಿಗೆಯಾಗಿ ನೀಡಿದ್ದಾರೆ.
ಕಷ್ಟ ಪಡುತ್ತಿರುವವರಿಗೆ ಕೃತಜ್ಞತೆ
ಇಷ್ಟಲ್ಲದೆ ಅಕ್ಷಯ್ ಸ್ಥಳೀಯ ಅಧಿಕಾರಿಗಳಿಗೆ ಇತರೆ ಸಹಾಯಗಳನ್ನು ಮಾಡಲು ಸಹ ಮುಂದಾಗಿದ್ದಾರೆ ಎಂದು ವರದಿಯಾಗಿದೆ. ಗುರುವಾರ ಅಕ್ಷಯ್ ಕುಮಾರ್ 'ಹೃದಯದಾಳದಿಂದ ಧನ್ಯವಾದಗಳು' ಎಂದು ಬರೆದಿದ್ದ ಬಿತ್ತಿಪತ್ರ ಪ್ರದರ್ಶಿಸಿ ಟ್ವೀಟ್ ಮಾಡಿದ್ದರು. ಈ ಸಂಕಷ್ಟದ ಸಂದರ್ಭದಲ್ಲಿ ನಿರಂತರವಾಗಿ ಶ್ರಮಿಸುತ್ತಿರುವ ಎಲ್ಲ ಅಗತ್ಯ ವಸ್ತು ಸೇವೆಗಳ ಪೂರೈಕೆದಾರರಿಗೆ ಅವರು ಕೃತಜ್ಞತೆ ಸಲ್ಲಿಸಿದ್ದರು.
ಧನ್ಯವಾದ ಹೇಳೋಣ
ಇದರ ಜತೆಗೆ ಅಕ್ಷಯ್ ಮತ್ತೊಂದು ವಿಡಿಯೋ ಟ್ವೀಟ್ ಮಾಡಿದ್ದು, 'ಜನರು ಹಗಲು ರಾತ್ರಿ ಸೇನೆಯಂತೆ ಕೆಲಸ ಮಾಡಿ ನಮ್ಮನ್ನು ಮತ್ತು ನಮ್ಮಕುಟುಂಬಗಳನ್ನು ಸುರಕ್ಷಿತವಾಗಿರಿಸುತ್ತಿದ್ದಾರೆ. ಎಲ್ಲರೂ ಒಟ್ಟಿಗೆ ಹೃದಯದಿಂದ ಧನ್ಯವಾದ ಹೇಳೋಣ. ನಮ್ಮಿಂದ ಮಾಡಲಾಗುವ ಕಿಂಚಿತ್ ಕೆಲಸ ಅದು' ಎಂದಿದ್ದಾರೆ.
ಮುಸ್ಕುರಾಯೇಗಾ ಇಂಡಿಯಾ ಹಾಡು
ಬಾಲಿವುಡ್‌ನ ಅನೇಕ ಸೆಲೆಬ್ರಿಟಿಗಳನ್ನು 'ಮುಸ್ಕುರಾಯೇಗಾ ಇಂಡಿಯಾ' ಎಂಬ ಮ್ಯೂಸಿಕ್ ವಿಡಿಯೋಗಾಗಿ ಅವರು ಒಂದೆಡೆ ಸೇರಿಸಿದ್ದಾರೆ. ಈ ವಿಡಿಯೋದಲ್ಲಿ ಸೆಲೆಬ್ರಿಟಿಗಳು ಹಾಡುತ್ತಾ ಜನರನ್ನು ನಗುತ್ತಾ ಇರುವಂತೆ ಉತ್ತೇಜನ ನೀಡಿದ್ದಾರೆ. ಮಾರಕ ವೈರಸ್ ವಿರುದ್ಧದ ಹೋರಾಟದಲ್ಲಿ ನಿಮ್ಮ ಪ್ರೀತಿಪಾತ್ರದ ಜತೆಗಿರುವಂತೆ ಸಲಹೆ ನೀಡಿದ್ದಾರೆ.


Click it and Unblock the Notifications











