ಗಂಗಾ ಘಾಟ್‌ನಲ್ಲಿ ಮಲಗಿರುವ 'ಕಪಿಲ್ ಶರ್ಮಾ ಶೋ'ನ ಸುನಿಲ್ ಗ್ರೋವರ್; ವಿಡಿಯೋ ವೈರಲ್.. ಮೆಚ್ಚಿದ ಫ್ಯಾನ್ಸ್

ಭಾರತದ ಜನಪ್ರಿಯ 'ಕಪಿಲ್ ಶರ್ಮಾ ಶೋ'ನ ಪ್ರಮುಖ ಆಕರ್ಷಣೆ ಈ ನಟ. ತಮ್ಮ ಪ್ರತಿಭೆಯಿಂದ ಈಗಾಗಲೇ ಅಪಾರ ಪ್ರಮಾಣದಲ್ಲಿ ಅಭಿಮಾನಿಗಳನ್ನು ಗಿಟ್ಟಿಸಿಕೊಂಡಿದ್ದಾರೆ. ಇವರು ಮಾಡುವ ಮಿಮಿಕ್ರಿಗೆ ವಿಶ್ವದ ಮೂಲೆ ಮೂಲೆಯಲ್ಲಿ ಪ್ರಶಂಸೆಗಳು ಹರಿದು ಬರುತ್ತಿವೆ. ಅದರಲ್ಲೂ ಇತ್ತೀಚೆಗೆ ಮಿಮಿಕ್ರಿಗೆ ಹೊಸ ಶೈಲಿಯನ್ನು ನೀಡಿರೋ ಈ ನಟ ಬಾಲಿವುಡ್ ಸೂಪರ್‌ಸ್ಟಾರ್ ಫೇವರಿಟ್.

ಅಂದ್ಹಾಗೆ ಈ ನಟ ಮತ್ಯಾರೂ ಅಲ್ಲ ಸುನಿಲ್ ಗ್ರೋವರ್. ಹಾಸ್ಯವನ್ನು ಇಷ್ಟ ಪಡುವವರಿಗೆ ಸುನಿಲ್ ಗ್ರೋವರ್ ಪ್ರತಿಭೆ ಬಗ್ಗೆ ಮೆಚ್ಚುಗೆ ಇದ್ದೇ ಇರುತ್ತೆ. ಆಮಿರ್ ಖಾನ್, ಶಾರುಖ್ ಖಾನ್, ಸಲ್ಮಾನ್ ಖಾನ್ ಸೇರಿದಂತೆ ಹಿಂದಿ ಚಿತ್ರರಂಗದ ಎಲ್ಲಾ ಸ್ಟಾರ್‌ಗಳಿಗೂ ಸುನಿಲ್ ಗ್ರೋವರ್ ತುಂಬಾನೇ ಇಷ್ಟ. ಇತ್ತೀಚೆಗೆ ಸ್ಟಾರ್‌ಗಳ ಹಾವ-ಭಾವವನ್ನು ಇಟ್ಟುಕೊಂಡು ಮಿಮಿಕ್ರಿ ಮಾಡುವ ಇವರ ಪ್ರತಿಭೆಗೆ ಪ್ರಶಂಸೆಯ ಸುರಿಮಳೆಯೇ ಬಂದಿದೆ.

Actor and comedian Sunil Grover video sleeping on the Ganga ghat at night has gone viral

ಸದ್ಯ ಈಗ ಈ ನಟ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆಯಲ್ಲಿ ಇದ್ದಾರೆ. ಆದರೆ, ಅವರು ಮಾಡುವ ಕಾಮಿಡಿಯಿಂದ ಅಲ್ಲ. ಬದಲಾಗಿ ಅವರ ಸರಳತೆಯಿಂದ. ಕಾಮಿಡಿ ಶೋಗಳಿಂದ ಬ್ರೇಕ್ ಸಿಕ್ಕರೆ, ಸುನಿಲ್ ಗ್ರೋವರ್ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿ ಬಿಡುತ್ತಾರೆ. ಸಾಮಾನ್ಯ ಜನರೊಂದಿಗೆ ಬೆರೆತು ಆ ಲೈಫ್ ಅನ್ನು ಎಂಜಾಯ್ ಮಾಡುತ್ತಾರೆ. ಅಂತಹದ್ದೇ ಒಂದು ವಿಡಿಯೋಗ ಈಗ ವೈರಲ್ ಆಗುತ್ತಿದೆ.

ಗಂಗಾ ಘಾಟ್‌ನಲ್ಲಿ ಸಾಮಾನ್ಯರಂತೆ ನಿದ್ದೆ

ಹಾಸ್ಯನಟ ಮತ್ತು ಬಾಲಿವುಡ್ ನಟ ಸುನಿಲ್ ಗ್ರೋವರ್ ರಾತ್ರಿ ವೇಳೆ ಗಂಗಾ ನದಿಯ ಘಾಟ್‌ನಲ್ಲಿ ಸಾಮಾನ್ಯರಂತೆ ಮಲಗಿದ್ದಾರೆ. ಈ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಅವರು ಶೇರ್ ಮಾಡಿದ್ದಾರೆ. ಅಲ್ಲಿಂದ ಅವರ ಅಭಿಮಾನಿಗಳು ಹಾಗೂ ನೆಟ್ಟಿಗರು ಆಕ್ಟಿವ್ ಆಗಿದ್ದಾರೆ. ಸದ್ಯ ಅದೇ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ಕಾಮೆಂಟ್‌ಗಳ ಮೇಲೆ ಕಾಮೆಂಟ್‌ಗಳನ್ನು ಮಾಡಿ, ವಿಡಿಯೋವನ್ನು ಶೇರ್ ಮಾಡುತ್ತಿದ್ದಾರೆ.

ಹಾಸ್ಯ ನಟ ಸುನಿಲ್ ಗ್ರೋವರ್ ಗಂಗಾ ಘಾಟ್‌ನಲ್ಲಿ ಮಲಗಿರುವ ವಿಡಿಯೋಗೆ 'ತಾರೆ ಜಮೀನ್ ಪರ್' ಎಂದು ಟೈಟಲ್ ಕೊಟ್ಟಿದ್ದರು. ಜೊತೆಗೆ ಬ್ಯಾಕ್‌ಗ್ರೌಂಡ್‌ನಲ್ಲಿ ಭಕ್ತಿ ಗೀತೆ ಬೇರೆ ಕೇಳುವುದಕ್ಕೆ ಸಿಗುತ್ತಿದೆ. ವಿಡಿಯೋ ಅಪ್‌ಲೋಡ್ ಮಾಡುತ್ತಿದ್ದಂತೆ ಸುನಿಲ್ ಗ್ರೋವರ್‌ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈಗಾಗಲೇ ಈ ವಿಡಿಯೋಗೆ ಮಿಲಿಯನ್‌ಗಟ್ಟಲೆ ವೀವ್ಸ್ ಬೇರೆ ಸಿಕ್ಕಿದೆ. ಗಂಗಾ ಘಾಟ್‌ನಲ್ಲಿ ಎಲ್ಲಿ ಮಲಗಿದ್ದರು ಅನ್ನೋ ಮಾಹಿತಿ ಇಲ್ಲದೇ ಹೋದರೂ, ಇದು ರಿಷಿಕೇಶ ಅಥವಾ ಹರಿದ್ವಾರ ಇರಬಹುದು ಎಂದು ಅವರ ಅಭಿಮಾನಿಗಳು ಗೆಸ್ ಮಾಡುತ್ತಿದ್ದಾರೆ.

ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ

ಸುನಿಲ್ ಗ್ರೋವರ್ ವಿಡಿಯೋಗೆ ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅವರ ಸರಳತೆಗೆ ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ. ಆದರೆ, ಕೆಲವರು ಮಾತ್ರ ನೆಗೆಟಿವ್ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಕೆಲವರು "ಇದು ಸುಮ್ಮನೆ ತೋರಿಕೆಗೆ ಮಾಡಿದ ವಿಡಿಯೋ" ಎಂದು ಕಾಮೆಂಟ್ ಮಾಡಿದ್ದಾರೆ. ಅದೇ ಮತ್ತೆ ಕೆಲವರು "ವಿಡಿಯೋ ಶೂಟ್ ಮುಗಿಯಿತು ಡಾಕ್ಟರ್ ಸಾಹೇಬ್ರೇ, ಇನ್ನು ಹೋಟೆಲ್‌ಗೆ ಹೊರಡಿ" ಎಂದು ಕಾಮೆಂಟ್ ಮಾಡುವ ಮೂಲಕ ಕಾಲೆಳೆದಿದ್ದಾರೆ.

ಹಾಗಂತ ಸುನಿಲ್ ಗ್ರೋವರ್ ಇಂತಹ ವಿಡಿಯೋಗಳನ್ನು ಮಾಡುವುದು ಹೊಸದೇನು ಅಲ್ಲ. ಈ ಹಿಂದೆ ಕೂಡ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಲವು ವಿಡಿಯೋಗಳನ್ನು ಶೇರ್ ಮಾಡಿದ್ದಾರೆ. ಈ ಹಿಂದೆ ಹ್ಯಾಂಡ್‌ಪಂಪ್ ಮಾಡಿ ಬಟ್ಟೆ ಒಗೆದಿದ್ದು, ಹಳ್ಳಿ ಮನೆಯ ಒಲೆಯ ಮುಂದೆ ಕೂತು ರೊಟ್ಟಿ ಮಾಡಿದ ವಿಡಿಯೋಗಳಿಗೂ ಮೆಚ್ಚುಗೆ ವ್ಯಕ್ತವಾಗಿದ್ದವು. ಸದ್ಯ ಸುನಿಲ್ ಗ್ರೋವರ್ ನೆಟ್‌ಫ್ಲಿಕ್ಸ್‌ನ 'ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ'ನಲ್ಲಿ ತಮ್ಮ ಹಾಸ್ಯದಿಂದ ವೀಕ್ಷಕರನ್ನು ರಂಜಿಸುತ್ತಿದ್ದಾರೆ.

Read more about: comedian
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X