'ರವಿಮಾಮ'ನ ಅರಗಿಣಿ ನಗ್ಮಾ ಜೊತೆ ಅಫೇರ್:"ಹೆಂಡ್ತಿ ಅಂದ್ರೆ ಭಯ.. ಆಕೆಯ ಕಾಲಿಗೂ ಬೀಳ್ತೀನಿ"– ನಟ ರವಿಕಿಶನ್

ಸಿನಿಮಾರಂಗನೇ ಹಾಗೆ ಕಲಾವಿದರ ಸುತ್ತಮುತ್ತ ಗಾಳಿ ಸುದ್ದಿಗಳು ಪ್ರತಿದಿನ ಹರಿದಾಡುತ್ತಲೇ ಇರುತ್ತೆ. ಅಫೇರ್‌ಗಳು, ಅಕ್ರಮ ಸಂಬಂಧಗಳು, ಈ ಫೀಲ್ಡ್‌ನಲ್ಲಿ ಹೊಸದೇನು ಅಲ್ಲ. ಅದರಲ್ಲೂ ಅದಾಗಲೇ ವಿವಾಹವಾಗಿದ್ದ ನಟರೊಂದಿಗೆ ನಟಿಯರು ಅಫೇರ್ ಇಟ್ಟುಕೊಂಡ ಪ್ರಕರಣಗಳೂ ಇದ್ದವು.

ಬಾಲಿವುಡ್ ನಟಿ ನಗ್ಮಾ ಹಾಗೂ ಭೋಜ್‌ಪುರಿ ಸೂಪರ್‌ಸ್ಟಾರ್ ರವಿಕಿಶನ್ ನಡುವೆ ಅಫೇರ್ ಇದೆ ಅನ್ನೋ ಸುದ್ದಿ ಹರಿದಾಡಿತ್ತು. ಆಗ ಈ ಜೋಡಿ ಸಿನಿಮಾ ವಿಚಾರಕ್ಕಷ್ಟೇ ಅಲ್ಲ. ಅಫೇರ್‌ಗಳ ವಿಚಾರಕ್ಕೂ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಈಗ ನಟಿ ನಗ್ಮಾ ಜೊತೆಗಿನ ಅಫೇರ್ ಬಗ್ಗೆ ಬೋಜ್‌ಪುರಿ ನಟ ರವಿಕಿಶನ್ ಪ್ರತಿಕ್ರಿಯೆ ನೀಡಿದ್ದಾರೆ.

Actor and Politician Ravi Kishan Reacted rumours on extra marital affair with Nagma

ರಾಜಕೀಯ ಮುಖಂಡ ಹಾಗೂ ನಟ ರವಿಕಿಶನ್ ಇತ್ತೀಚೆಗೆ ಆಪ್‌ ಕಿ ಅದಾಲತ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ನಗ್ಮಾ ಜೊತೆಗಿನ ಅಫೇರ್ ಬಗ್ಗೆ ಪ್ರಶ್ನೆ ಮಾಡಲಾಗಿತ್ತು. ಈ ಬಗ್ಗೆ ರವಿಕಿಶನ್ ಮುಕ್ತವಾಗಿ ಮಾತಾಡಿದ್ದಾರೆ.

"ಹೆಂಡ್ತಿ ಅಂದರೆ ಭಯ"

ಬಾಲಿವುಡ್‌ ನಟಿ ನಗ್ಮಾ ಹಾಗೂ ರವಿಕಿಶನ್ ಹಲವು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಬೋಜ್‌ಪುರಿಯಲ್ಲಿ ಈ ಜೋಡಿಯ ಹಲವು ಸಿನಿಮಾಗಳು ಬ್ಲಾಕ್‌ ಬಸ್ಟರ್ ಲಿಸ್ಟ್ ಸೇರಿವೆ. ಇದೇ ವೇಳೆ ರವಿಕಿಶನ್ ಹಾಗೂ ನಗ್ಮಾ ನಡುವಿನ ಅಫೇರ್ ಇದೆ ಅನ್ನೋ ಸುದ್ದಿ ಬೇಜಾನ್ ಸದ್ದು ಮಾಡಿತ್ತು. " ನಾವಿಬ್ಬರೂ ಒಟ್ಟಿಗೆ ಸಿನಿಮಾಗಳನ್ನು ಮಾಡುತ್ತಿದ್ದೆವು. ನಮ್ಮ ಸಿನಿಮಾಗಳು ಬ್ಲಾಕ್‌ಬಸ್ಟರ್ ಹಿಟ್ ಆಗಿದ್ದವು. ಅಲ್ಲದೆ ನಾವು ಉತ್ತಮ ಸ್ನೇಹಿತರೂ ಕೂಡ ಹೌದು. ಎಲ್ಲಕ್ಕಿಂತ ಮಿಗಿಲಾಗಿದೆ ನನಗೆ ಮದುವೆ ಆಗಿದೆ ಅಂತ ಎಲ್ಲರಿಗೂ ಗೊತ್ತಿತ್ತು." ಎಂದು ರವಿ ಕಿಶನ್ ಹೇಳಿದ್ದಾರೆ.

"ನಾನು ನನ್ನ ಹೆಂಡ್ತಿ ಪ್ರೀತಿ ಶುಕ್ಲಾ ಅವರನ್ನು ತುಂಬಾನೇ ಗೌರವಿಸುತ್ತೇನೆ. ನನಗೆ ನನ್ನ ಹೆಂಡ್ತಿ ಅಂದ್ರೆ ಭಯ. ನಾನು ಆಕೆಯ ಕಾಲನ್ನೂ ಮುಟ್ಟುತ್ತೇನೆ ಎಂದು ಈ ಹಿಂದೆನೂ ಹೇಳಿದ್ದೆ. ನನ್ನ ಹೆಂಡತಿ ನನ್ನ ಬಳಿ ಹಣವಿಲ್ಲದ ಸಮಯದಿಂದಲೂ ನನ್ನೊಂದಿಗೆ ಇದ್ದಾಳೆ." ಎಂದು ಆಪ್‌ ಕಿ ಅದಾಲತ್‌ನಲ್ಲಿ ಹೇಳಿದ್ದಾರೆ.

Actor and Politician Ravi Kishan Reacted rumours on extra marital affair with Nagma

ಅಫರ್ ಬಗ್ಗೆ ನಗ್ಮಾ ಏನು ಹೇಳಿದ್ದರು?

ನಟಿ ನಗ್ಮಾ ಹಿಂದಿ ಅಷ್ಟೇ ಅಲ್ಲ. ದಕ್ಷಿಣ ಭಾರತದ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ತಮಿಳು, ಕನ್ನಡದಲ್ಲೂ ನಟಿಸಿದ್ದಾರೆ. ಆದರೆ, ಭೋಜ್‌ಪುರಿ ಸಿನಿಮಾದಲ್ಲಿ ಅತೀ ಸಕ್ಸಸ್ ಕಂಡಿದ್ದರು. ಈ ವೇಳೆ ರವಿಕಿಶನ್ ಹಾಗೂ ನಗ್ಮಾ ನಡುವಿನ ಅಫೇರ್ ದೊಡ್ಡ ಸಂಚಲನವನ್ನೇ ಸೃಷ್ಟಿಸಿತ್ತು. ಈ ವದಂತಿಗಳ ಬಗ್ಗೆ 2009 ರಲ್ಲಿ ದಿ ಟೆಲಿಗ್ರಾಫ್‌ಗೆ ಪ್ರತಿಕ್ರಿಯೆ ನೀಡಿದ್ದರು.

" ನಟನೊಬ್ಬರ ತನ್ನ ಸಹ ನಟಿಯೊಂದಿಗೆ ಏಕೆ ಉತ್ತಮ ಸಂಬಂಧ ಹೊಂದಲು ಸಾಧ್ಯವಿಲ್ಲ. ನಾವಿಬ್ಬರೂ ಆರಾಮಾಗಿದ್ದರೆ, ಅದರಲ್ಲೇನು ತಪ್ಪಿದೆ. ಪರದೆ ಮೇಲೆ ನಾವು ಗಂಡ-ಹೆಂಡತಿ ಅಥವಾ ಪ್ರೇಮಿಗಳಂತೆ ನಟಿಸುತ್ತೇವೆ. ಹೀಗಾಗಿ ಕ್ಯಾಮರಾದಿಂದನೂ ಉತ್ತಮ ಬಾಂಧವ್ಯನೂ ಇರಬೇಕಾಗುತ್ತೆ" ಎಂದು ನಟಿ ನಗ್ಮಾ ಪ್ರತಿಕ್ರಿಯೆ ನೀಡಿದ್ದರು.

"ತನ್ನಲ್ಲಿದ್ದ ದುರಹಂಕಾರದ ಬಗ್ಗೆನೂ ಮಾತು"

ಬಾಲಿವುಡ್‌ ನಟಿ ನಗ್ಮಾ ಜೊತೆಗಿನ ಅಫೇರ್ ಬಗ್ಗೆ ಅಷ್ಟೇ ಅಲ್ಲ. ತನ್ನಲ್ಲಿದ್ದ ದುರಹಂಕಾರದ ಬಗ್ಗೆನೂ ಮನಬಿಚ್ಚಿ ಮಾತಾಡಿದ್ದಾರೆ. ಬಿಗ್‌ಬಾಸ್ ಮನೆಯೊಳಗೆ ಹೋಗಿ ಬರುತ್ತಿದ್ದಂತೆ ಎಲ್ಲವೂ ಬದಲಾಯ್ತು ಎಂದಿದ್ದಾರೆ. " ಸೂಪರ್ ಸ್ಟಾರ್ ಆದ ಬಳಿಕ ಅಹಂಕಾರ ಆವರಿಸಿತ್ತು ಎಂದು ರವಿ ಕಿಶನ್ ಒಪ್ಪಿಕೊಂಡಿದ್ದಾರೆ. ನನಗೆ ಬಿಗ್ ಬಾಸ್‌ಗೆ ಹೋಗುವಂತೆ ಪತ್ನಿಯೇ ಸಲಹೆ ನೀಡಿದ್ದಳು." ಎಂದು ರವಿಕಿಶನ್ ಹೇಳಿದ್ದಾರೆ.

"ಬಿಗ್ ಬಾಸ್‌ಗೆ ಸೇರುವಂತೆ ನನ್ನ ಪತ್ನಿಯೇ ಸಲಹೆ ನೀಡಿದ್ದಳು. ಆರಂಭದಲ್ಲಿ ನನಗೆ ಅಷ್ಟೊಂದು ಆಸಕ್ತಿ ಇರಲಿಲ್ಲ. ಆದರೂ ನಾನು ಬಿಗ್‌ಬಾಸ್‌ಗೆ ಹೋದೆ. ಮೂರು ತಿಂಗಳ ಕಾಲ ಮನೆಯೊಳಗಿದ್ದು ಹೊರಬಂದಾಗ, ನಾನು ಸಂಪೂರ್ಣ ಬದಲಾಗಿದ್ದೆ. ಫೆಮಸ್ ಅಷ್ಟೇ ಅಲ್ಲ. ಸಾಮಾನ್ಯ ವ್ಯಕ್ತಿಯಂತಾಗಿದ್ದೇನೆ." ಎಂದು ಹೇಳಿದ್ದಾರೆ.

More from Filmibeat

English summary
Actor and Politician Ravi Kishan Reacted rumours on extra marital affair with Nagma. He also says that he loves his wife a lot, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X