60ನೇ ವಯಸ್ಸಿನಲ್ಲಿ ಎರಡನೇ ಮದುವೆಯಾದ ನಟ ಆಶಿಶ್ ವಿದ್ಯಾರ್ಥಿ: ಪತ್ನಿ ಹೆಸರು, ಹಿನ್ನೆಲೆ ಏನು?

ಬಾಲಿವುಡ್, ಕನ್ನಡ, ತೆಲುಗು, ತಮಿಳು ಭಾಷೆಯಲ್ಲಿ ಖಳನಾಯಕನಾಗಿ ನಟಿಸಿರುವ ಅಶಿಶ್ ವಿದ್ಯಾರ್ಥಿ. ಅದರಲ್ಲೂ ಮಾಲಾಶ್ರೀ ಸಿನಿಮಾಗಳನ್ನು ಇಷ್ಟ ಪಡುವವರಿಗೆ ಆಶಿಶ್ ವಿದ್ಯಾರ್ಥಿ ಯಾರು ಅನ್ನೋದು ಗೊತ್ತೇ ಇದೆ. ಈ ಹಿರಿಯ ನಟನೀಗ 60ನೇ ವಯಸ್ಸಿನಲ್ಲಿ ಎರಡನೇ ಮದುವೆಯಾಗಿದ್ದಾರೆ.

ಗುವಾಹಾಟಿ ಮೂಲದ ಫ್ಯಾಷನ್ ಉದ್ಯಮಿ ರೂಪಾಲಿ ಬರುವ ಅವರನ್ನು ಕೊಲ್ಕತ್ತಾ ಕ್ಲಬ್‌ನಲ್ಲಿ ಗುರುವಾರ (ಮೇ 25) ವಿವಾಹವಾಗಿದ್ದಾರೆ. ಆಶಿಶ್ ವಿದ್ಯಾರ್ಥಿ ಹಾಗೂ ರೂಪಾಲಿ ಬರುವಾ ಸ್ನೇಹಿತರು ಹಾಗೂ ಆತ್ಮೀಯರ ಸಮ್ಮುಖದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ರಾಷ್ಟ್ರಪ್ರಶಸ್ತಿ ವಿಜೇತ ಆಶಿಶ್ ವಿದ್ಯಾರ್ಥಿ ಈ ಹಿಂದೆ ಆಜೋಶಿ ಬರುವ ಅವರನ್ನು ವಿವಾಹವಾಗಿದ್ದರು. ಇವರು ಖ್ಯಾತ ನಟಿ ಶಾಕುಂತಲಾ ಬರುವ ಅವರ ಪುತ್ರಿಯಾಗಿದ್ದರು. ಈಗ ವಿವಾಹವಾಗಿರುವ ರುಪಾಲಿ ಬರುವ ಕೊಲ್ಕತ್ತಾದ ಫ್ಯಾಷನ್ ಸ್ಟೋರ್ ಒಂದರ ಜೊತೆ ಕೈ ಜೋಡಿಸಿ ಕೆಲಸ ಮಾಡುತ್ತಿದ್ದಾರೆ.

Actor Ashish Vidyarthi married at the age of 60 with fashion entrepreneur Rupali Barua at Kolkata

ಆಶಿಶ್ ವಿದ್ಯಾರ್ಥಿ ಹಾಗೂ ರುಪಾಲಿ ರಿಜಿಸ್ಟರ್ ಮದುವೆಯಾಗಿದ್ದಾರೆ. ಈ ವೇಳೆ ಎರಡು ಸಂಸ್ಕೃತಿಯ ಪ್ರಕಾರ ವಿವಾಹವಾಗಿದ್ದು, ಗಮನ ಸೆಳೆದಿದೆ. ರೂಪಾಲಿ ಅಸ್ಸಾಂನ ವೈಟ್ ಹಾಗೂ ಗೋಲ್ಡನ್ ಕಲರ್ ಮಿಶ್ರಿತ ಸೀರೆಯಲ್ಲಿ ಮಿಂಚಿದರೆ, ಆಶಿಶ್ ವಿದ್ಯಾರ್ಥಿ ಕೇರಳ ಶೈಲಿಯ ಖುರ್ತಾ ಹಾಗೂ ಪಂಚೆಯನ್ನು ಧರಿಸಿದ್ದರು.

"ನನ್ನ ಬದುಕಿನ ಈ ಹಂತದಲ್ಲಿ ರುಪಾಲಿಯನ್ನು ವಿವಾಹವಾಗಿದ್ದು ಅದ್ಭುತ ಎಂದು ಅನಿಸುತ್ತಿದೆ. ಇಂದು ಬೆಳಗ್ಗೆ ನಾವು ಕೋರ್ಟ್ ಮ್ಯಾರೇಜ್ ಆಗಿದ್ದು, ಸಂಜೆ ಆತ್ಮೀಯರಿಗಾಗಿ ಔತಣಕೂಟವಿದೆ" ಎಂದು ಆಶಿಶ್ ವಿದ್ಯಾರ್ಥಿ ಹೇಳಿದ್ದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಆಶಿಶ್ ವಿದ್ಯಾರ್ಥಿ ಮದುವೆ ವಿಚಾರ ಕೇಳುತ್ತಿದ್ದಂತೆ ಅವರ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಇಬ್ಬರ ಭೇಟಿ ಆಗಿದ್ದೇಗೆ? ಅನ್ನೋದನ್ನು ತಿಳಿದುಕೊಳ್ಳಲು ಕಾತರರಾಗಿದ್ದಾರೆ. ಈ ಪ್ರಶ್ನೆಗೆ ಪ್ರತಿಕ್ರಿಯಿಸಿರೋ ಆಶಿಶ್ ವಿದ್ಯಾರ್ಥಿ ಪತ್ನಿ ರುಪಾಲಿ " ಕೆಲವು ಸಮಯದ ಹಿಂದೆ ನಾವು ಭೇಟಿಯಾಗಿದ್ದವು. ಈಗ ನಾವು ಇದನ್ನು ಇನ್ನೊಂದು ಹಂತಕ್ಕೆ ತೆಗೆದುಕೊಂಡು ಹೋಗಲಿ ನಿರ್ಧರಿಸಿದ್ದೇವೆ. ಆದರೆ, ನಾವಿಬ್ಬರೂ ಮದುವೆಯನ್ನು ಸಿಂಪಲ್ ಆಗಿ ಆಗಬೇಕೆಂದು ಅಂದುಕೊಂಡಿದ್ದೆವು" ಎಂದು ಮಾಹಿತಿ ನೀಡಿದ್ದಾರೆ.

ಹಿರಿಯ ನಟ ಆಶಿಶ್ ವಿದ್ಯಾರ್ಥಿ ತಮ್ಮ ಇಳಿವಯಸ್ಸಿನಲ್ಲಿ ಎರಡನೇ ಮದುವೆ ಆಗಿರೋ ಸುದ್ದಿ ಹೊರ ಬೀಳುತ್ತಿದ್ದಂತೆ ಅಭಿಮಾನಿಗಳು ಈ ಜೋಡಿ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. ಆಶಿಶ್ ವಿದ್ಯಾರ್ಥಿ ದೆಹಲಿ ಮೂಲದವರಾಗಿದ್ದು, ಜೂನ್ 19, 1962ರಲ್ಲಿ ಜನಿಸಿದ್ದಾರೆ.

ಆಶಿಶ್ ವಿದ್ಯಾರ್ಥಿ 1986ರಲ್ಲಿ ತಮ್ಮ ವೃತ್ತಿ ಬದುಕನ್ನು ಆರಂಭ ಮಾಡಿದ್ದರು. ಹಿಂದಿ, ತೆಲುಗು, ತಮಿಳು, ಕನ್ನಡ, ಮಲಯಾಳಂ, ಇಂಗ್ಲಿಷ್, ಒಡಿಯಾ, ಮರಾಠಿ ಹಾಗೂ ಬೆಂಗಾಲಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೂವರೆಗೂ ಸುಮಾರು 11 ಭಾಷೆಗಳಲ್ಲಿ 300ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ.

More from Filmibeat

English summary
Actor Ashish Vidyarthi married at the age of 60 with fashion entrepreneur Rupali Barua at Kolkata, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X