'ಅತಿಲೋಕ ಸುಂದರಿ' ಶ್ರೀದೇವಿ, ದಿವ್ಯಾ ಭಾರತಿ ಸಾವಿನ ಅಸಲಿ ವಿಲನ್ ಯಾರು? ಆ ನಟ ಬಿಚ್ಚಿಟ್ಟ ಗುಟ್ಟೇನು?
ಬಾಲಿವುಡ್‌ನಲ್ಲಿ ಅತೀ ಕಡಿಮೆ ಸಮಯದಲ್ಲಿ ಸ್ಟಾರ್ ಪಟ್ಟಕ್ಕೆ ಏರಿದ ನಟಿ ದಿವ್ಯಾ ಭಾರತಿ. ಆದರೆ, ಎಷ್ಟು ಬೇಗ ಯಶಸ್ಸಿನ ಉತ್ತುಂಗಕ್ಕೆ ಏರಿದರೋ, ಅಷ್ಟೇ ಬೇಗ ಈ ಲೋಕದಿಂದಲೇ ಕಣ್ಮರೆಯಾದರು. ಅತೀ ಚಿಕ್ಕ ವಯಸ್ಸಿನಲ್ಲಿಯೇ ದಿವ್ಯಾ ಭಾರತಿ ಸಾವು ಬಾಲಿವುಡ್ ಮಂದಿಯನ್ನು ಕಾಡಿತ್ತು. ಈ ನಟಿಯ ಸಾವು ಇಂದಿಗೂ ಬಿಡಿಸಲಾರದ ಕಗ್ಗಂಟಾಗಿದೆ.
ಅದೇ ಇನ್ನೊಂದು ಕಡೆ ಬಾಲಿವುಡ್‌ನ ಅತಿಲೋಕ ಸುಂದರಿ ಶ್ರೀದೇವಿ ಸಾವು ಕೂಡ ಅಷ್ಟೇ ನಿಗೂಢವೆನಿಸಿದೆ. ಇವರಿಬ್ಬರ ಸಾವು ಸಹಜ ಸಾವು ಅಲ್ಲ ಎನ್ನುವವರ ಸಂಖ್ಯೆ ಕೂಡ ಬಹಳ ದೊಡ್ಡದಿದೆ. ಆದರೆ, ದಿವ್ಯಾ ಭಾರತಿ ಜೊತೆ ನಾಯಕನಾಗಿ ನಟಿಸಿದ್ದ ಬಾಲಿವುಡ್ ನಟ ಕಮಲ್ ಸಾದ್ನಾ ಇವರಿಬ್ಬರ ಸಾವಿಗೆ ಅಸಲಿ ಕಾರಣವೇನು ಅನ್ನೋದನ್ನು ಹೇಳಿಕೊಂಡಿದ್ದಾರೆ.

ಭಾರತೀಯ ಚಿತ್ರರಂಗದಲ್ಲಿ ಕೆಲವು ನಟ- ನಟಿಯ ಸಾವಿನ ರಹಸ್ಯ ಇನ್ನೂ ಭೇದಿಸಲು ಇನ್ನೂ ಸಾಧ್ಯವಾಗಿಲ್ಲ. ಅದರಲ್ಲಿ ಪ್ರಮುಖವಾಗಿ ನಿಲ್ಲುವ ಹೆಸರುಗಳು ದಿವ್ಯಾ ಭಾರತಿ, ಶ್ರೀದೇವಿ, ಸುಶಾಂತ್ ಸಿಂಗ್ ರಜಪೂತ್, ಸಿಲ್ಕ್ ಸ್ಮಿತಾ. ದಿವ್ಯಾ ಭಾರತಿ ಸಾವು ಆಕಸ್ಮಿಕವಲ್ಲ ಕೊಲೆ ಅಂತ ಹೇಳುವವರಿದ್ದಾರೆ. ಶ್ರೀದೇವಿ ಬಾತ್ ಟಬ್‌ನಲ್ಲಿ ಮುಳುಗಿ ಸತ್ತಿಲ್ಲ. ಅದು ಕೊಲೆ ಅನ್ನುವ ವಾದವಿದೆ. ಹಾಗೇ ಸುಶಾಂತ್ ಸಿಂಗ್ ರಜಪೂತ್ ಹಾಗೂ ಸಿಲ್ಕ್ ಸ್ಮಿತಾ ಇಬ್ಬರದ್ದು ಆತ್ಮಹತ್ಯೆ ಅಲ್ಲ ಮರ್ಡರ್ ಅಂತಲೇ ಚರ್ಚೆಯಾಗುತ್ತಲೇ ಇದೆ.
ದಿವ್ಯಾ ಭಾರತಿ 90ರ ದಶಕದಲ್ಲಿ ಬಾಲಿವುಡ್‌ನ ಸ್ಟಾರ್ ನಟಿ. ಚಿಕ್ಕ ವಯಸ್ಸಿನಲ್ಲೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ನಟಿ ಬ್ಯುಸಿ ನಟಿಯಾಗಿಬಿಟ್ಟರು. ಬಾಲಿವುಡ್ ಸೂಪರ್‌ಸ್ಟಾರ್‌ಗಳಿಗೆ ದಿವ್ಯಾ ಭಾರತಿ ನಾಯಕಿಯಾಗಿ ಬರಬೇಕಿತ್ತು. ಆ ಮಟ್ಟಿಗೆ ಬೇಡಿಕೆ ಗಿಟ್ಟಿಸಿಕೊಂಡಿದ್ದರು. ಆದರೆ, 1993ರಲ್ಲಿ ದಿವ್ಯಾ ಭಾರತಿ ಯಶಸ್ಸಿನ ಉತ್ತುಂಗದಲ್ಲಿ ಇರುವಾಗಲೇ ತನ್ನ ಫ್ಲ್ಯಾಟ್‌ಯ ಬಾಲ್ಕನಿಯಿಂದ ಬಿದ್ದು ಸಾವನ್ನಪ್ಪಿದ್ದರು.
ಈಕೆಯ ಸಾವಿನ ಬಳಿಕ ಹಲವು ಊಹಾ ಪೋಹಗಳು ಹುಟ್ಟಿಕೊಂಡಿದ್ದವು. ದಿವ್ಯಾ ಭಾರತಿ ತನ್ನ ಮನೆಯ ಬಾಲ್ಕನಿಯಿಂದ ಬೀಳುವಾಗ ಮಧ್ಯ ಸೇವನೆ ಮಾಡಿದ್ದರು. ಹೀಗಾಗಿ ಆಯಾತಪ್ಪಿ ಬಿದ್ದು ಸಾವನ್ನಪ್ಪಿದ್ದಾರೆಂದು ವರದಿಯಾಗಿತ್ತು. ಆದರೆ, ಇದು ಆಕಸ್ಮಿಕವಲ್ಲ ಕೊಲೆಯೆಂಬ ಚರ್ಚೆಯಾಗಿತ್ತು. ಮುಂಬೈನ ಭೂಗತಲೋಕದ ಕೈವಾಡ ಶಂಕೆ ವ್ಯಕ್ತಪಡಿಸಿದ್ದರು. ಹಾಗೇ ನಿರ್ಮಾಪಕ ಸಾಜಿದ್ ನಾಡಿಯದ್ವಾಲಾ ಮೇಲೂ ಬೆರಳು ತೋರಿಸಲಾಗಿತ್ತು.

ಇತ್ತ ಶ್ರೀದೇವಿ ಸಾವು ಕೂಡ ಬಾಲಿವುಡ್ ಮಂದಿಗೆ ಶಾಕ್ ಕೊಟ್ಟಿತ್ತು. ದುಬೈನ್ ಐಷಾರಾಮಿ ಹೊಟೇಲ್‌ನ ಬಾತ್‌ಟಬ್‌ನಲ್ಲಿ ಮುಳುಗಿ ಸಾವನ್ನಪ್ಪಿದ್ದ ನಟಿಯ ಸಾವನ್ನು ಆಕಸ್ಮಿಕ ಎಂದು ಒಪ್ಪಿಕೊಳ್ಳಲು ತಯಾರಿಲ್ಲ. ಆದರೆ, ಇದೇ ದಿವ್ಯಾ ಭಾರತಿ ಜೊತೆ ನಾಯಕನಾಗಿ ನಟಿಸಿದ್ದ ಕಮಲ್ ಸಾದ್ನಾ ಇಬ್ಬರ ಸಾವಿನ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಕಮಲ್ ಸಾದ್ನಾ ನೀಡಿದ ಸಂದರ್ಶನದಲ್ಲಿ ದಿವ್ಯಾ ಭಾರತಿ ಸಾವಿನ ಬಗ್ಗೆ ಕೆಲವು ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ದಿವ್ಯಾ ಭಾರತಿ ಸಾವು ಆತ್ಮಹತ್ಯೆ ಅಥವಾ ಕೊಲೆ ಅನ್ನೋದನ್ನು ಅವರು ಒಪ್ಪುತ್ತಿಲ್ಲ. ಬಾಲ್ಕನಿಯಿಂದ ಬೀಳುವುದಕ್ಕೂ ಮುನ್ನ ದಿವ್ಯಾ ಕುಡಿದದ್ದಳು ಎಂದು ಭಾವಿಸುತ್ತೇನೆ. ಅಲೆದಾಡುವಾಗ ಆಕೆ ಆಯಾತಪ್ಪಿ ಬಿದ್ದಿದ್ದಾಳೆ. ಇದು ಕೇವಲ ಆಕ್ಸಿಡೆಂಟ್ ಅಷ್ಟೇ. ಸಾಯುವುದಕ್ಕೂ ಮುನ್ನ ಒಟ್ಟಿಗೆ ಸಿನಿಮಾದಲ್ಲಿ ನಟಿಸಿದ್ದು, ಅವರಿಗೆ ಯಾವುದೇ ಸಮಸ್ಯೆ ಇರಲಿಲ್ಲ ಎಂದಿದ್ದಾರೆ.
ದಿವ್ಯಾ ಭಾರತಿ ಹಾಗೂ ಶ್ರೀದೇವಿ ಇಬ್ಬರ ಸಾವಿನಲ್ಲೂ ವಿಲನ್ ಆಗಿದ್ದು ಮದ್ಯ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಶ್ರೀದೇವಿ ಕೂಡ ಕುಡಿದು ಬಾತ್ ಟಟ್‌ನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಇವರ ಸಾವಿನ ನಂತರವೂ ಹಲವು ಬಗೆಯ ವದಂತಿಗಳು ಹಬ್ಬಿದ್ದವು ಎಂದು ಬಾಲಿವುಡ್ ನಟ ಅಭಿಪ್ರಾಯ ಪಟ್ಟಿದ್ದಾರೆ.


Click it and Unblock the Notifications











