ತಂದೆಯನ್ನು ನೆನೆದು ಭಾವುಕರಾದ ರಿತೇಶ್ ದೇಶ್‌ಮುಖ್: ಹೃದಯಸ್ಪರ್ಶಿ ವಿಡಿಯೋ
ತಂದೆ, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದಿವಂಗತ ವಿಲಾಸ್ ರಾವ್ ದೇಶ್ ಮುಖ್ ಅವರ 75ನೇ ಜನ್ಮದಿನದ ಸಂದರ್ಭದಲ್ಲಿ ನಟ ರಿತೇಶ್ ದೇಶ್ ಮುಖ್ ನೆನಪಿಸಿಕೊಂಡು ಭಾವುಕರಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ರಿತೇಶ್ ಹಂಚಿಕೊಂಡಿರುವ ವಿಡಿಯೋ ಹೃದಯ ಕಲಕುವಂತಿದೆ.
Recommended Video
ತಂದೆಯನ್ನು ಎಷ್ಟರಮಟ್ಟಿಗೆ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂಬುದನ್ನು ರಿತೇಶ್ ಈ ವಿಡಿಯೋದಲ್ಲಿ ಚಿತ್ರಿಸಿದ್ದಾರೆ. ಹ್ಯಾಂಗರ್‌ನಲ್ಲಿ ನೇತು ಹಾಕಿರುವ ತಂದೆಯ ಕುರ್ತಾದ ಸ್ಲೀವ್ ಒಳಗೆ ಒಂದು ಕೈ ತೂರಿಸುವ ರಿತೇಶ್, ಅಪ್ಪನನ್ನು ಅಪ್ಪಿಕೊಳ್ಳುವ ಭಾವ ಮೂಡುವಂತೆ ತಮ್ಮನ್ನೇ ಆಲಂಗಿಸಿಕೊಂಡಿದ್ದಾರೆ. ಈ ವಿಡಿಯೋದ ಹಿನ್ನೆಲೆಯಲ್ಲಿ 2012ರ ಅಗ್ನಿಪಥ್ ಚಿತ್ರದ 'ಅಭಿ ಮುಜ್ ಮೇನ್ ಕಹಿನ್' ಹಾಡು ಕೇಳಿಬರುತ್ತದೆ.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿರುವ ರಿತೇಶ್, 'ಹ್ಯಾಪಿ ಬರ್ಥಡೇ ಪಪ್ಪಾ... ನಿಮ್ಮನ್ನು ಪ್ರತಿ ದಿನವೂ ಮಿಸ್ ಮಾಡಿಕೊಳ್ಳುತ್ತಿದ್ದೇನೆ' ಎಂದು ಹೇಳಿಕೊಂಡಿದ್ದಾರೆ.

ರಿತೇಶ್ ಪತ್ನಿ, ನಟಿ ಜೆನಿಲಿಯಾ ಡಿ ಸೋಜಾ ಮಾವನನ್ನು ಸ್ಮರಿಸಿಕೊಂಡಿದ್ದಾರೆ. ವಿಲಾಸ್ ರಾವ್ ದೇಶ್‌ಮುಖ್ ಅವರ ಪ್ರತಿಮೆಯ ವಿಡಿಯೋ ಹಾಕಿರುವ ಜೆನಿಲಿಯಾ, 'ರಿಯಾನ್‌ನ (ಮಗ) ಶಿಕ್ಷಕರು ಕೇಳಿದ್ದರಂತೆ, 'ನೀನು ಯಾವುದರ ಬಗ್ಗೆ ಅತಿ ಹೆಚ್ಚು ಹೆಮ್ಮೆ ಪಡುತ್ತೀಯಾ?' ಎಂದು. ಅದಕ್ಕೆ ಆತನ ಉತ್ತರ 'ನನ್ನ ತಾತ' ಎಂದಾಗಿತ್ತು.
ನೀವು ನಮ್ಮ ಹೆಮ್ಮೆ ಪಪ್ಪಾ.. ನೀವು ಪ್ರತಿದಿನವೂ ನಮ್ಮ ಜತೆ ಇದ್ದಂತೆ ಅನಿಸುತ್ತದೆ. ನೀವು ಎಲ್ಲಿದ್ದೀರೋ ಅಲ್ಲಿಂದಲೇ ನಮ್ಮನ್ನು ಯಾವಾಗಲೂ ನೋಡುತ್ತಿರುತ್ತೀರಿ ಎನ್ನುವುದು ನನಗೆ ಗೊತ್ತು. ನೀವು ನಮ್ಮಲ್ಲಿ ಜೀವಂತವಾಗಿದ್ದೀರಿ. ನಿಮ್ಮೊಂದಿಗೆ ನಾವು ಪ್ರತಿ ದಿನವನ್ನೂ ಸಂಭ್ರಮದಿಂದ ಕಳೆಯುತ್ತಿದ್ದೇವೆ. ಹ್ಯಾಪಿ ಬರ್ಥಡೇ ಪಪ್ಪಾ' ಎಂದು ಬರೆದಿದ್ದಾರೆ.


Click it and Unblock the Notifications