For Quick Alerts
  ALLOW NOTIFICATIONS  
  For Daily Alerts

  ಶೂಟಿಂಗ್ ವೇಳೆ ಗಾಯಗೊಂಡ ಸಲ್ಮಾನ್ ಖಾನ್

  |

  ದಬಾಂಗ್- 2 ಚಿತ್ರೀಕರಣದ ವೇಳೆ ಲಘು ಸ್ಪೋಟ ಸಂಭವಿಸಿ ನಟ ಸಲ್ಮಾನ್ ಖಾನ್ ಗಾಯಗೊಂಡಿದ್ದಾರೆ. ಮುಂಬೈನ ಮೆಬೂಬ್ ಸ್ಟುಡಿಯೋದಲ್ಲಿ ಈ ಘಟನೆ ನಡೆದಿದೆ. ಸಲ್ಮಾನ್ ಖಾನ್ ನಾಯಕತ್ವದ ದಬಾಂಗ್, ಬಾಲಿವುಡ್ ಇತಿಹಾಸದಲ್ಲಿ ಸೂಪರ್ ಹಿಟ್ ದಾಖಲಿಸಿದ ಚಿತ್ರ. ಈಗ, ಇದೇ ಹೆಸರಿನ ಭಾಗ-2 ಚಿತ್ರೀಕರಣ ಹಂತದಲ್ಲಿದೆ. ಈ ಚಿತ್ರಕ್ಕೂ ಸಲ್ಮಾನ್ ಖಾನ್ ನಾಯಕರು.

  ಚಿತ್ರೀಕರಣದ ವೇಳೆ ಲಘು ಸ್ಪೋಟ ಸಂಭವಿಸಿದೆ. ಕಾರಿನ ಮೂಲಕ ನಡೆಯುತ್ತಿದ್ದ ಸಾಹಸದೃಶ್ಯಗಳ ಶೂಟಿಂಗ್ ನಡೆಯುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದ್ದು ನಟ ಸಲ್ಮಾನ್ ಖಾನ್ ಸೇರಿದಂತೆ ನಾಲ್ವರಿಗೆ ಗಾಯವಾಗಿದೆ. ಶಾರ್ಟ್ ಸರ್ಕ್ಯೂಟ್ ನಿಂದ ಈ ಸ್ಫೋಟ ಸಂಬವಿಸಿದ್ದು ಗಾಯಾಳುಗಳನ್ನು ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ.

  ತಾವು ಸ್ವತಃ ಗಾಯಗೊಂಡಿದ್ದರೂ ಅದನ್ನು ಲೆಕ್ಕಿಸದ ಸಲ್ಮಾನ್ ಖಾನ್, ಇತರ ಮೂವರನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ನೆರವಾಗಿದ್ದಾರೆ. ಚಿತ್ರದ ಸ್ಟಂಟ್ ಮನ್ ರೂಪೇಶ್ ಮಂತ್ರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು ಅವರನ್ನು ತೀವ್ರ ನಿಗಾ ಘಟಕಕ್ಕೆ ದಾಖಿಲಿಸಲಾಗಿದೆ.

  ಘಟನೆ ಬಗ್ಗೆ ತಿಳಿದ ಕೂಡಲೇ ದಬಾಂಗ್-2 ನಿರ್ದೇಶಕ ಹಾಗೂ ನಿರ್ಮಾಪಕ ಅರ್ಬಾಝ್ ಖಾನ್, ಆಸ್ಪತ್ರಗೆ ಧಾವಿಸಿದ್ದಲ್ಲದೇ ಗಾಯಾಳುಗಳ ಯೋಗಕ್ಷೇಮ ಚಿಚಾರಿಸಿ ಚಿಕಿತ್ಸೆಗೆ ನೆರವಾಗಿದ್ದಾರೆ. ನಟ ಸಲ್ಮಾನ್ ಖಾನ್ ತಮಗಾದ ಗಾಯವನ್ನು ಚಿಕ್ಕದೆಂದು ಹೇಳಿ ಚಿಕಿತ್ಸೆ ಪಡೆದಿದ್ದಾರೆ.

  ಈ ಮಧ್ಯೆ, ತಮ್ಮ ಮೊದಲಿನ 'ಬಾಲಿವುಡ್ ಬ್ಯಾಡ್ ಬಾಯ್'ಇಮೇಜ್ ಬದಲಿಸಿಕೊಳ್ಳಲು ನಟ ಸಲ್ಲೂ ಅವಕಾಶ ಸಿಕ್ಕಾಗಲೆಲ್ಲಾ ಪ್ರಯತ್ನಿಸುತ್ತಾರೆ. ಅದು ಒಳ್ಳೆಯ ಬೆಳವಣಿಗೆ ಕೂಡ. ಇತ್ತೀಚಿಗೆ ತಮ್ಮ ವೃತ್ತಿಜೀವನದಲ್ಲಿ ಕೂಡ ಸಲ್ಮಾನ್ ಸಿಕ್ಕಾಪಟ್ಟೆ ಮೇಲೇರಿದ್ದಾರೆ, ಎನ್ನೂ ಏರುತ್ತಲೇ ಇದ್ದಾರೆ. ಒಟ್ಟಿನಲ್ಲಿ ದಬಾಂಗ್-2 ಚಿತ್ರೀಕರಣಕ್ಕೆ ಚಿಕ್ಕದೊಂದು ಬ್ರೇಕ್ ಬಿದ್ದಿದೆ. ಸದ್ಯದಲ್ಲೇ ಶೂಟಿಂಗ್ ಮುಂದುವರಿಯಲಿದೆ. (ಏಜೆನ್ಸೀಸ್)

  English summary
  Bollywood Actor Salman Khan and others three are Injured in Shooting of Dabang 2 Movie at Mumbai. In Mehboob studio, there was car based action and stunts going on. From short Circuit, this incident happened as the source are revealed. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X