Breaking ಚಿತ್ರರಂಗಕ್ಕೆ ಮತ್ತೊಂದು ಆಘಾತ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ
ಬಾಲಿವುಡ್‌ನಿಂದ ಮತ್ತೊಂದು ಆಘಾತಕಾರಿ ಸಾವಿನ ಸುದ್ದಿ ಹೊರಬಂದಿದೆ. ಖ್ಯಾತ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ (34) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Recommended Video
ಮುಂಬೈನ ತಮ್ಮ ನಿವಾಸದಲ್ಲಿ ಸುಶಾಂತ್ ಸಿಂಗ್ ರಜಪೂತ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಸ್ಫುರದ್ರೂಪಿ ನಟ ಸುಶಾಂತ್ ಆತ್ಮಹತ್ಯೆ ಬಾಲಿವುಡ್‌ಗೆ ಆಘಾತ ಮೂಡಿಸಿದೆ. ಬಿಹಾರದ ಪಟ್ನಾದವರಾದ ಸುಶಾಂತ್, 1986ರ ಜನವರಿ 21ರಂದು ಜನಿಸಿದ್ದರು.
ರಿಷಿ ಕಪೂರ್, ಇರ್ಫಾನ್ ಖಾನ್, ವಾಜಿದ್ ಖಾನ್ ಅವರ ಸಾವಿನ ಆಘಾತದ ನೋವಿನಿಂದ ಚೇತರಿಸಿಕೊಳ್ಳುವ ಮುನ್ನವೇ ಬಾಲಿವುಡ್‌ಗೆ ಮತ್ತೊಂದು ಸಾವಿನ ಸುದ್ದಿ ತಟ್ಟಿದೆ. ಯುವ ನಟ ಸುಶಾಂತ್ ತಮ್ಮ ಅಭಿನಯ ಹಾಗೂ ಮಾತಿನ ಮೂಲಕ ಹೆಸರು ಗಳಿಸಿದ್ದರು. ಮುಂದೆ ಓದಿ...

ಹಲವು ಸಿನಿಮಾಗಳಲ್ಲಿ ನಟನೆ
ಕಾಯ್ ಪೋಚೆ, ಶುದ್ಧ್ ದೇಸಿ ರೊಮ್ಯಾನ್ಸ್, ಎಂಎಸ್ ಧೋನಿ, ಚಿಚೋರೆ, ಕೇದಾರ್‌ನಾಥ್, ಪಿ.ಕೆ., ವೆಲ್ಕಂ ಟು ನ್ಯೂಯಾರ್ಕ್, ಸೊಂಚಿರಿಯಾ ಮುಂತಾದ ಚಿತ್ರಗಳಲ್ಲಿ ಸುಶಾಂತ್ ಖ್ಯಾತಿ ಗಳಿಸಿದ್ದರು. ಅವರು ಬಣ್ಣದ ಲೋಕಕ್ಕೆ ಪ್ರವೇಶಿದ್ದು ಕಿರುತೆರೆ ಮೂಲಕ.

ಧಾರಾವಾಹಿ ಮೂಲಕ ಹೆಸರು
'ಕಿಸ್ ದೇಶ್ ಮೇನ್ ಹೈ ಮೇರಾ ದಿಲ್ ಧಾರಾವಾಹಿ ಮೂಲಕ ವೃತ್ತಿ ಬದುಕು ಆರಂಭಿಸಿದ್ದ ಸುಶಾಂತ್, ಪವಿತ್ರಾ ರಿಷ್ತಾ ಧಾರಾವಾಹಿಯಿಂದ ಹೆಸರು ಗಳಿಸಿದ್ದರು. ಲಾಕ್ ಡೌನ್ ಅವಧಿಯಲ್ಲಿ ಮನೆಯಲ್ಲಿಯೇ ಸಮಯ ಕಳೆಯುತ್ತಿದ್ದ ಸುಶಾಂತ್ ಸಿಂಗ್ ಕೆಲವು ದಿನಗಳಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎಂದು ಹೇಳಲಾಗಿದೆ.

ದಿಶಾ ಸಾಲಿಯಾನ್ ಆತ್ಮಹತ್ಯೆ
ಕೆಲವು ದಿನಗಳ ಹಿಂದೆಯಷ್ಟೇ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಕಾರ್ಯದರ್ಶಿ ದಿಶಾ ಸಾಲಿಯಾನ್ ಮಲಾಡ್ ಕಟ್ಟಡದ ಮೇಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದರು. ಸುಶಾಂತ್ ಮತ್ತು ವರುಣ್ ಶರ್ಮಾ ಸೇರಿದಂತೆ ವಿವಿಧ ಕಲಾವಿದರಿಗೆ ಮ್ಯಾನೇಜರ್ ಆಗಿ ಅವರು ಕೆಲಸ ಮಾಡಿದ್ದರು. ದಿಶಾ ಆತ್ಮಹತ್ಯೆಗೆ ಸುಶಾಂತ್ ಸಂತಾಪ ವ್ಯಕ್ತಪಡಿಸಿದ್ದರು.


Click it and Unblock the Notifications











