ಗೋವಾದಲ್ಲಿ ಸಪ್ತಪದಿ ತುಳಿದ 'ಗಿಲ್ಲಿ' ನಟಿ ರಕುಲ್ ಪ್ರೀತ್ ಸಿಂಗ್; ಮದುವೆ ವಿಶೇಷತೆ ಏನು?

ಕನ್ನಡದ 'ಗಿಲ್ಲಿ' ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ರಕುಲ್ ಪ್ರೀತ್ ಸಿಂಗ್. ದೆಹಲಿ ಮೂಲದ ಪಂಜಾಬಿ ಕುಟುಂಬದಲ್ಲಿ ಜನಿಸಿದ್ದರೂ, ವೃತ್ತಿ ಬದುಕು ಆರಂಭ ಮಾಡಿದ್ದು ಸ್ಯಾಂಡಲ್‌ವುಡ್ ಸಿನಿಮಾದಿಂದಲೇ. ಬಳಿಕ ತೆಲುಗು ಹಾಗೂ ತಮಿಳು ಭಾಷೆಗಳಲ್ಲಿಯೇ ಹೆಚ್ಚು ನಟಿಸಿದ್ದರು. ಹೀಗಾಗಿ ದಕ್ಷಿಣ ಭಾರತದಲ್ಲಿ ರಕುಲ್ ಪ್ರೀತ್ ಸಿಂಗ್ ಜನಪ್ರಿಯ ನಟಿ. ತೆಲುಗು, ತಮಿಳು ಬಳಿಕ ಹಿಂದಿ ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದರು.

ದಕ್ಷಿಣ ಭಾರತದಲ್ಲಿ ಸಿಕ್ಕಂತಹ ಯಶಸ್ಸು ರಕುಲ್ ಪ್ರೀತ್ ಸಿಂಗ್‌ಗೆ ಹಿಂದಿಯಲ್ಲಿ ಸಿಗಲಿಲ್ಲ. ಇದೇ ನಟಿ ಇಂದು (ಫೆಬ್ರವರಿ 21) ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಾಲಿವುಡ್ ನಟ ಹಾಗೂ ನಿರ್ಮಾಪಕ ಜಾಕಿ ಭಗ್ನಾನಿಯೊಂದಿಗೆ ಗೋವಾದಲ್ಲಿ ಹಸೆಮಣೆ ಏರಿದ್ದಾರೆ. ಕಳೆದ ಎರಡು ದಿನಗಳಿಂದ ಗೋವಾದಲ್ಲಿ ರಕಲ್ ಪ್ರೀತ್ ಸಿಂಗ್ ಹಾಗೂ ಜಾಕಿ ಭಗ್ನಾನಿ ಮದುವೆ ಸಮಾರಂಭಗಳು ನಡೆಯುತ್ತಿದ್ದವು.

Actors Rakul Preet Singh and Jackky Bhagnani got married in Goa

ರಕುಲ್ ಪ್ರೀತ್ ಸಿಂಗ್ ಪಂಜಾಬಿ ಕುಟುಂಬದಿಂದ ಬಂದವರಾದ್ದರಿಂದ ಮೊದಲು ಪಂಜಾಬಿ ಸಂಪ್ರದಾಯದಂತೆ (ಆನಂದ್ ಕರಾಜ್) ಮದುವೆ ನೆರವೇರಿದೆ. ಆ ಬಳಿಕ ಸಿಂಧಿ ಸಂಪ್ರದಾಯದಂತೆ ಮದುವೆ ಸಮಾರಂಭ ನಡೆದಿದೆ ಎಂದು ವರದಿಗಳಾಗಿವೆ.

ರಕುಲ್ ಪ್ರೀತ್ ಸಿಂಗ್ ಹಾಗೂ ಜಾಕಿ ಭಗ್ನಾನಿ ಜೋಡಿ ಫೆಬ್ರವರಿ 19ರಂದು ಗೋವಾದಲ್ಲಿ ಅರಿಶಿಣ ಶಾಸ್ತ್ರವನ್ನು ಇಟ್ಟುಕೊಂಡಿದ್ದರು. ಆ ಬಳಿಕ ಈ ಜೋಡಿ ಮೆಹೆಂದಿ ಹಾಗೂ ಸಂಗೀತ್ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ರಕುಲ್ ಹಾಗೂ ಜಾಕಿ ಆಪ್ತರು, ಸ್ನೇಹಿತರು, ಕುಟುಂಬಸ್ಥರು ಹಾಗೂ ಬಾಲಿವುಡ್‌ನ ಗಣ್ಯರು ಭಾಗವಹಿಸಿದ್ದರು. ಸಂಗೀತ್ ಕಾರ್ಯಕ್ರಮದಲ್ಲಿ ಶಿಲ್ಪಾ ಶೆಟ್ಟಿ ತಮ್ಮ ಪತಿ ರಾಜ್ ಕುಂದ್ರಾರೊಂದಿಗೆ ಪರ್ಫಾಮೆನ್ಸ್ ಕೊಟ್ಟಿರುವ ಬಗ್ಗೆ ವರದಿಯಾಗಿದೆ.

Actors Rakul Preet Singh and Jackky Bhagnani got married in Goa

ಹಾಗೇ ರಕುಲ್ ಪ್ರೀತ್ ಸಿಂಗ್ ಮದುವೆಗೆ ಅಕ್ಷಯ್ ಕುಮಾರ್, ಟೈಗರ್ ಶ್ರಾಫ್, ಅನನ್ಯ ಪಾಂಡೇ, ಆದಿತ್ಯ ರಾಯ್ ಕಪೂರ್, ಭೂಮಿ ಪಡ್ನೇಕರ್, ವರುಣ್ ಧವನ್ ಸೇರಿದಂತೆ ಹಲವು ಬಾಲಿವುಡ್ ಗಣ್ಯರು ಗೋವಾಗೆ ತೆರಳಿದ್ದಾರೆ. ದಕ್ಷಿಣ ಗೋವಾದ ಪ್ರತಿಷ್ಠಿತ ಐಟಿಸಿ ಗ್ರ್ಯಾಂಡ್‌ನಲ್ಲಿ ರಕುಲ್ ಪ್ರೀತ್ ಸಿಂಗ್ ಹಾಗೂ ಜಾಕಿ ಭಗ್ನಾನಿ ಮದುವೆ ಸಮಾರಂಭ ನಡೆದಿದೆ. ವಿವಾಹದ ಬಳಿಕ ರಕುಲ್ ಪ್ರೀತ್ ಸಿಂಗ್ ಹಾಗೂ ಜಾಕಿ ಭಗ್ನಾನಿ ಇಬ್ಬರೂ ಆಪ್ತರಿಗೆ ಹಾಗೂ ಗಣ್ಯರಿಗೆ ವಿಶೇಷ ಪಾರ್ಟಿಯನ್ನು ಆಯೋಜಿಸಲಿದ್ದಾರೆ.

ವಿವಾಹದ ಬಳಿಕ ರಕುಲ್ ಪ್ರೀತ್ ಸಿಂಗ್‌ಗಾಗಿ ಜಾಕಿ ಭಗ್ನಾನಿ ವಿಶೇಷವಾದ ಹಾಡನ್ನು ಡೆಡಿಕೇಟ್ ಮಾಡಲಿದ್ದಾರೆ. ಮಯೂರಿ ಪುರಿ ಸಾಹಿತ್ಯ ಬರೆದಿದ್ದು, ತನಿಷ್ ಬಾಗ್ಚಿ ಟ್ಯೂನ್ ಹಾಕಿರುವ ಈ ಹಾಡಿಗೆ ಜಾಕಿ ಧ್ವನಿ ನೀಡಿದ್ದಾರೆ. ಜಾಕಿ ಜೊತೆಗೆ ಜಹ್ರ ಎಸ್ ಖಾನ್ ಹಾಗೂ ರೋಮಿ ಕೂಡ ಹಾಡಿದ್ದಾರೆ. ಈ ಹಾಡಿನಲ್ಲಿ ರಕುಲ್ ಪ್ರೀತ್ ಸಿಂಗ್ ಹಾಗೂ ಜಾಕಿ ಭಗ್ನಾನಿಯ ಭೇಟಿ ಹೇಗಾಯ್ತು? ಪ್ರೀತಿ ಹುಟ್ಟಿದ್ದೇಗೆ? ಅನ್ನೋದನ್ನು ಹೇಳಲಾಗಿದೆ ಎನ್ನಲಾಗಿದೆ.

ರಕುಲ್ ಪ್ರೀತ್ ಸಿಂಗ್ ಹಾಗೂ ಜಾಕಿ ಭಗ್ನಾನಿ ವಿದೇಶದ ಲೋಕೇಶನ್‌ಗಳಲ್ಲಿ ಮದುವೆ ಆಗುವುದಕ್ಕೆ ನಿರ್ಧರಿಸಿದ್ದರು. ಆದರೆ, ಪ್ರಧಾನಿ ನರೇಂದ್ರ ಮೋದಿ ಸಂದೇಶ ಹಿನ್ನೆಲೆಯಲ್ಲಿ ಈ ಜೋಡಿ ಗೋವಾದಲ್ಲಿ ಮದುವೆ ಆಗಲು ನಿರ್ಧರಿಸಿದ್ದರು. ಇಬ್ಬರ ಮದುವೆಗೆ ಕಾಸ್ಟ್ಯೂಮ್‌ಗಳನ್ನು ತರುಣ್ ತಹಿಲಿಯಾನಿ ಡಿಸೈನ್ ಮಾಡಿದ್ದಾರೆ. ಮದುವೆ ಬಳಿಕ ಒಂದು ವಾರ ಗ್ಯಾಪ್ ಕೊಟ್ಟು ಮತ್ತೆ ಸಿನಿಮಾಗೆ ಮರಳಲಿದ್ದಾರೆ ಎನ್ನಲಾಗಿದೆ.

More from Filmibeat

English summary
Rakul Preet Singh and Jackky Bhagnani married
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X