ದಿಶಾ ಪಟಾನಿ ಕೈಯಲ್ಲಿ 'PD'ಟ್ಯಾಟೂ; ಪ್ರಭಾಸ್ ಜೊತೆ ಡೇಟಿಂಗ್ ಮಾಡ್ತಿದ್ದಾರಾ? ನೆಟ್ಟಿಗರು ಹೇಳ್ತಿರೋದೇನು?

ಬಾಲಿವುಡ್‌ನ ಬ್ಯೂಟಿಫುಲ್ ನಟಿಯರಲ್ಲಿ ದಿಶಾ ಪಟಾನಿ ಕೂಡ ಒಬ್ಬರು. ತನ್ನ ಸೌಂದರ್ಯ ಹಾಗೂ ನಟನೆಯಿಂದ ಸಿನಿಪ್ರಿಯರ ನಿದ್ದೆ ಕದ್ದಿದ್ದಾಗಿದೆ. ಬಾಲಿವುಡ್‌ನಲ್ಲಿ ಸೂಪರ್‌ಸ್ಟಾರ್‌ಗಳ ಜೊತೆ ಸ್ಕ್ರೀನ್‌ ಶೇರ್ ಮಾಡಿಕೊಂಡಿರುವ ದಿಶಾ ಪಟಾನಿ ಬಗ್ಗೆ ಪರಿಚಯ ಕೊಡುವ ಅಗತ್ಯವಿಲ್ಲ. ಸದ್ಯ ದಿಶಾ ಪಟಾನಿ 'ಕಲ್ಕಿ 2898AD'ಸಿನಿಮಾದಲ್ಲಿ ಪ್ರಭಾಸ್ ಪ್ರೇಯಸಿಯಾಗಿ ನಟಿಸಿದ್ದಾರೆ.

ಈ ಸಿನಿಮಾದಲ್ಲಿ ದಿಶಾ ಪಟಾಣಿಗೆ ಪಾತ್ರಕ್ಕೆ ಹೆಚ್ಚು ಪ್ರಾಮುಖ್ಯತೆ ಇಲ್ಲದೆ ಹೋದರೂ, ಪಾರ್ಟ್‌ 2ನಲ್ಲೂ ಅವರ ರೋಲ್ ಮುಂದುವರೆಯುತ್ತೆ. ಆದ್ರೀಗ ಚರ್ಚೆಯಾಗುತ್ತಿರೋದು ದಿಶಾ ಪಟಾಣಿ ಪಾತ್ರದ ಬಗ್ಗೆ ಅಲ್ಲ. ಆಕೆಯ ಟ್ಯಾಟೂ ಬಗ್ಗೆ ಚರ್ಚೆಯಾಗುತ್ತಿದೆ. 'ಕಲ್ಕಿ 2898AD' ರಿಲೀಸ್ ಬಳಿಕ ದಿಶಾ ಕೈ ಮೇಲಿರುವ ಟ್ಯಾಟೂ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡುವುದಕ್ಕೆ ಶುರುಮಾಡಿದೆ.

Actress Disha Patani tattoo speculats dating Kalki 2898 AD Co-Star Prabhas

ಇತ್ತೀಚೆಗೆ ದಿಶಾ ಪಟಾನಿ ಪಾಪರಾಜಿಗಳ ಕಣ್ಣಿಗೆ ಬಿದ್ದಿದ್ದರು. ಈ ವೇಳೆ ಆಕೆಯ ಎಡಗೈನಲ್ಲಿರುವ ಟ್ಯಾಟೂ ಕ್ಯಾಮರಾದಲ್ಲಿ ಸೆರೆಯಾಗಿತ್ತು. ದಿಶಾ ಪಟಾನಿ ಎಡಗೈನಲ್ಲಿ 'PD' ಅನ್ನೋ ಟ್ಯಾಟೂ ಕಂಡಿದ್ದೇ ತಡ ವೈರಲ್ ಆಗಿದೆ. ನೆಟ್ಟಿಗರು ದಿಢೀರನೇ ಈ ಟ್ಯಾಟೂವನ್ನು ಡಿಕೋಟ್ ಮಾಡುವುದಕ್ಕೆ ಶುರು ಮಾಡಿದ್ದಾರೆ. ಕೆಲವರು ಚಿತ್ರ ವಿಚಿತ್ರವಾಗಿ ಕಮೆಂಟ್ ಮಾಡುವುದಕ್ಕೆ ಶುರು ಮಾಡಿದ್ದಾರೆ.

ಪ್ರಭಾಸ್ ಜೊತೆ ದಿಶಾ ಡೇಟಿಂಗ್?

ದಿಶಾ ಪಟಾನಿ ಫೋಟೊ ವೈರಲ್ ಆಗುತ್ತಿದ್ದಂತೆ ಟ್ಯಾಟೂ ಬಗ್ಗೆ ಚರ್ಚೆಯಾಗುವುದಕ್ಕೆ ಶುರುವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರಿಗೆ ಈ ಟ್ಯಾಟೂ ಮ್ಯಾಟರ್ ಈಗ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿದೆ. ಕೆಲವರು ಪ್ರಭಾಸ್ ಜೊತೆ ದಿಶಾ ಪಟಾನಿ ಡೇಟಿಂಗ್ ಮಾಡುತ್ತಿದ್ದಾರೆಂಬ ಸುದ್ದಿ ಹರಿದಾಡುತ್ತಿದೆ. ಇತ್ತ ಸಿನಿಮಾ ನೋಡಿದವರಿಗೆ ಈ ಮ್ಯಾಟರ್ ನಿಜವಿದ್ದರೂ ಇರಬಹುದೇನೋ ಅಂತ ಅನಿಸುವುದಕ್ಕೆ ಶುರುವಾಗಿದೆ. 'ಕಲ್ಕಿ 2898AD'ಸಿನಿಮಾದಲ್ಲಿ ಇಬ್ಬರ ನಡುವಿನ ಕೆಮಿಸ್ಟ್ರಿ ಅಷ್ಟು ಚೆನ್ನಾಗಿ ವರ್ಕ್‌ಔಟ್ ಆಗಿದೆ ಅನ್ನೋದು ನೆಟ್ಟಿಗರ ಅಭಿಪ್ರಾಯ.

ದಿಶಾ ಪಟಾಣಿ ಟ್ಯಾಟೂ ನೋಡಿದವರಿಗೆ ಈ ಅನುಮಾನ ಸಹಜವಾಗಿ ಮೂಡಿದೆ. "P ಅಂದ್ರೆ ಪ್ರಭಾಸ್, D ಅಂದ್ರೆ ದಿಶಾ" ಎಂದು ಕಾಮೆಂಟ್ ಮಾಡುವುದಕ್ಕೆ ಶುರುವಿಟ್ಟುಕೊಂಡಿದ್ದಾರೆ. ಮತ್ತೆ ಕೆಲವರಂತೂ ದಿಶಾ ಪಟಾನಿಗೆ ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಪ್ರಭಾಸ್‌ ಮೇಲೆ ಲವ್ ಆಗಿದೆ ಅಂತಲೇ ನಂಬಿ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.

ದಿಶಾ ಪಟಾನಿ ಪೋಸ್ಟ್‌ನಲ್ಲಿ ಹೇಳಿದ್ದೇನು?

ತನ್ನ ಟ್ಯಾಟೂ ಫೋಟೊ ವೈರಲ್ ಆಗುತ್ತಿದ್ದಂತೆ ದಿಶಾ ಪಟಾನಿ ಇನ್‌ಸ್ಟಾಗ್ರಾಂನಲ್ಲಿ ಅದೇ ಫೋಟೊವನ್ನು ಶೇರ್ ಮಾಡಿಕೊಂಡಿದ್ದಾರೆ. ಬಳಿಕ "ನನ್ನ ಟ್ಯಾಟೂ ಬಗ್ಗೆ ಇಷ್ಟು ಕುತೂಹಲ ಹುಟ್ಟುಕೊಂಡಿರುವುದನ್ನು ನೋಡಿ ಅಚ್ಚರಿಯಾಗಿದೆ. ಈ ಖುಷಿಗೆ ಏನು ಕಾರಣ ಅನ್ನೋದನ್ನು ಹುಡುಕಿ" ಎಂದು #cloudnine ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ನೆಟ್ಟಿಗರನ್ನು ಮತ್ತಷ್ಟು ಗೊಂದಲಕ್ಕೆ ಎಡೆ ಮಾಡಿಕೊಟ್ಟಿದೆ.

ಅದ್ಯಾಕೆ ಈ ಟ್ಯಾಟೂ ಹಾಕಿಕೊಂಡಿದ್ದಾರೋ ಸತ್ಯ ಇನ್ನೂ ಹೊರಬಿದ್ದಿಲ್ಲ. ಆದರೆ, ನೆಟ್ಟಿಗರು ಮಾತ್ರ ಚಿತ್ರ ವಿಚಿತ್ರವಾಗಿ ಕಾಮೆಂಟ್ ಮಾಡುತ್ತಿದ್ದಾರೆ. "P ಅಂದ್ರೆ ಪ್ರಭಾಸ್, D ಅಂದ್ರೆ ಡಾರ್ಲಿಂಗ್" ಅಂತಾನೂ ಕಾಮೆಂಟ್ ಮಾಡಿದ್ದಾರೆ. ಒಟ್ನಲ್ಲಿ ದಿಶಾ ಪಟಾನಿಯ ಒಂದು ಟ್ಯಾಟೂ ಸದ್ಯಕ್ಕೀಗ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡುವುದಕ್ಕೆ ಶುರು ಮಾಡಿದೆ.

More from Filmibeat

English summary
Actress Disha Patani tattoo speculats dating Kalki 2898 AD Co-Star Prabhas
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X