42ನೇ ವಯಸ್ಸಿನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಬಿಗ್‌ ಬಾಸ್ ಮಾಜಿ ಸ್ಪರ್ಧಿ; ಶುಭಾಶಯಗಳ ಸುರಿಮಳೆ

ಸಿನಿಮಾ ಸೆಲೆಬ್ರೆಟಿಗಳ ಕೌಟುಂಬಿಕ ಜೀವನ ತುಂಬಾನೇ ತಡವಾಗಿ ಶುರುವಾಗುತ್ತೆ. ತಮ್ಮ ಸಿನಿ ಕರಿಯರ್ ಬಗ್ಗೆನೇ ಹೆಚ್ಚು ಗಮನ ಹರಿಸುವುದರಿಂದ ಯಶಸ್ಸು ಸಿಕ್ಕಿದಂತೆ ಅವರ ವೈವಾಹಿಕ ಜೀವನ ಕೂಡ ಮುಂದೂಡಲ್ಪಡುತ್ತೆ. ಇಂತಹ ಸಾಕಷ್ಟು ಉದಾಹರಣೆಗ ಸಿಗುತ್ತವೆ. ವಯಸ್ಸು 40 ದಾಟಿದರೂ ಇನ್ನೂ ಮದುವೆ ಆಗುವುದಕ್ಕೂ ಹಿಂದೇಟು ಹಾಕುತ್ತಿರುತ್ತಾರೆ. ಇಂತಹ ಸಾಕಷ್ಟು ತಾರೆಯರು ಸಿಗುತ್ತಾರೆ.

ವಯಸ್ಸು 40 ದಾಟಿದ ಬಳಿಕ ಮದುವೆ, ಮಕ್ಕಳು ಅಂತ ಬ್ಯುಸಿಯಾಗುವ ನಟಿಯರು ಬಹಳಷ್ಟು ಮಂದಿ ಇದ್ದಾರೆ. ಇತ್ತೀಚೆಗೆ ಮಾಜಿ ಬಿಗ್‌ ಬಾಸ್ ಸ್ಪರ್ಧಿ ತನ್ನ 42ನೇ ವಯಸ್ಸಿನಲ್ಲಿ ಎರಡನೇ ಮಗುವಿಗೆ ಗರ್ಭಿಣಿಯಾಗುತ್ತಿರುವುದಾಗಿ ಘೋಷಿಸಿದ್ದರು. ಅವರು ಮತ್ಯಾರೂ ಅಲ್ಲ ಬಾಲಿವುಡ್ ನಟಿ ಹಾಗೂ ಮಾಡೆಲ್ ಗೌಹರ್ ಖಾನ್. ಈಗ ಎರಡನೇ ಮಗುವಿಗೆ ಜನ್ಮ ನೀಡಿದ್ದಾರೆ. ಪತಿ ಈ ಖುಷಿ ವಿಷಯವನ್ನು ಅವರ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

Actress Gauahar Khan Becomes Mother at 42 Blessed with Baby Boy with Zaid Darbar

ಬಾಲಿವುಡ್ ನಟಿ ಗೌಹರ್ ಖಾನ್ ಹಾಗೂ ಪತಿ ಜೈದ್ ದರ್ಬಾರ್ ದಂಪತಿ ತಮ್ಮ ಕುಟುಂಬಕ್ಕೆ ಹೊಸ ಸದಸ್ಯನನ್ನು ಬರ ಮಾಡಿಕೊಂಡಿದ್ದಾರೆ. ನಟಿ ಗೌಹರ್ ಖಾನ್ ಇಂದು (ಸೆಪ್ಟೆಂಬರ್ 3) ಎರಡನೇ ಮಗುವಿಗೆ ಜನ್ಮ ನೀಡಿದ ಈ ಖುಷಿ ವಿಷಯವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡು ಸಂಭ್ರಮಿಸಿದ್ದಾರೆ. ಈ ವಿಷಯ ಕೇಳುತ್ತಿದ್ದಂತೆ ಬಾಲಿವುಡ್ ನಟಿಯರು ಶುಭಾಶಯಗಳ ಸುರಿಮಳೆಯನ್ನೇ ಸುರಿಸಿದ್ದಾರೆ.

ನಟಿ ಗೌಹರ್ ಖಾನ್ ಹಾಗೂ ಇನ್‌ಫ್ಲುಯೆನ್ಸರ್ ಜೈದ್ ದರ್ಬಾರ್ ದಂಪತಿ ಇಂದು (ಸೆಪ್ಟೆಂಬರ್ 3) ಜಂಟಿಯಾಗಿ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮೂಲಕ ತಮ್ಮ ಎರಡನೇ ಮಗುವಿಗೆ ಜನ್ಮ ನೀಡಿದ ಖುಷಿ ವಿಷಯವನ್ನು ಹಂಚಿಕೊಂಡಿದ್ದಾರೆ. ಮೊದಲನೇ ಮಗ ಝೆಹಾನ್‌ಗೆ ಒಬ್ಬ ಕಿರಿಯ ಸಹೋದರ ಸಿಕ್ಕಿರೋ ಅತ್ಯಂತ ಸಂತೋಷಯಾಗಿದೆ ಎಂದು ದಂಪತಿ ಪೋಸ್ಟ್ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ. ಅಂದ್ಹಾಗೆ ಸೆಪ್ಟೆಂಬರ್ 1 ರಂದೇ ಇವರಿಗೆ ಗಂಡು ಮಗು ಜನಿಸಿದ್ದಾಗಿ ಹೇಳಿಕೊಂಡಿದ್ದಾರೆ.

Actress Gauahar Khan Becomes Mother at 42 Blessed with Baby Boy with Zaid Darbar

ಗೌಹರ್ ಖಾನ್ 42ನೇ ವಯಸ್ಸಿನಲ್ಲಿ ಎರಡನೇ ಮಗುವನ್ನು ಪಡೆದಿದ್ದಕ್ಕೆ ಬಾಲಿವುಡ್ ತಾರೆಯರು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಬಾಲಿವುಡ್ ಸೆಲೆಬ್ರಿಟಿಗಳಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಗಾಯಕಿ ನೀತಿ ಮೋಹನ್, "ಓ ಮೈ ಗಾಡ್.. ಈ ವಿಷಯ ಕೇಳಿ ಬಹಳ ಖುಷಿ ಆಯ್ತು. ನಿಮ್ಮಿಬ್ಬರಿಗೂ ಅಭಿನಂದನೆಗಳು" ಎಂದು ಕಮೆಂಟ್ ಮಾಡಿದ್ದಾರೆ. ಹಾಗೇ ಸೋಫಿ ಚೌಧುರಿ, ದಿಯಾ ಮಿರ್ಜಾ, ಅಮೈರಾ ದಸ್ತೂರ್, ಆಯೇಷಾ ಖಾನ್, ಕೃತಿ ಖರ್ಬಂದಾ, ಸುಗಂಧ ಮಿಶ್ರಾ, ಜಸ್ಲೀನ್ ಮಥಾರು, ರಿಚಾ ಚಡ್ಡಾ ಮತ್ತು ಸ್ವರಾ ಭಾಸ್ಕರ್ ಸೇರಿದಂತೆ ಹಲವು ಸೆಲೆಬ್ರೆಟಿಗಳು ಈ ದಂಪತಿಗೆ ಶುಭಾಶಯ ಕೋರಿದ್ದಾರೆ.

ಗೌಹರ್ ಖಾನ್ ಹಾಗೂ ಜೈದ್ ದರ್ಬಾರ್ ಬಹಳ ಸಮಯದಿಂದ ಡೇಟಿಂಗ್ ಮಾಡುತ್ತಿದ್ದರು. ಬಳಿಕ ಇಬ್ಬರೂ 2020ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇವರಿಗೆ 2022 ರಲ್ಲಿ ಮೊದಲ ಗಂಡು ಮಗುವಿಗೆ ಜನ್ಮ ನೀಡಿದರು. ಸೆಪ್ಟೆಂಬರ್ 2ರಂದು ಎರಡನೇ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಗೌಹರ್ ಕುಟುಂಬದಲ್ಲಿ ಹೊಸ ಸದಸ್ಯನ ಆಗಮನದಿಂದ ಎಲ್ಲರೂ ಖುಷಿಯಾಗಿದ್ದಾರೆಂದು ಈ ದಂಪತಿ ಹೇಳಿಕೊಂಡಿದೆ.

ಇನ್ನು ಬಾಲಿವುಡ್ ನಟಿಯರು ವಯಸ್ಸು 40 ದಾಟಿದ ಬಳಿಕ ಮಕ್ಕಳನ್ನು ಪಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ಇದಕ್ಕೆ ಸಾಕಷ್ಟು ಉದಾಹರಣೆಗಳು ಕೂಡ ಸಿಗುತ್ತವೆ. 40 ದಾಟಿದ ಬಳಿಕ ಮಹಿಳೆಯರಲ್ಲಿ ಕೆಲವು ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಈ ವಯಸ್ಸಿನಲ್ಲಿ ಮಗುವನ್ನು ಪಡೆಯುವುದು ಕೂಡ ಕಷ್ಟ. ಆದರೂ ಸೆಲೆಬ್ರೆಟಿಗಳು 40ರ ನಂತರವೇ ಮಗುವನ್ನು ಪಡೆಯುವುದಕ್ಕೆ ಮುಂದಾಗುತ್ತಿದ್ದಾರೆ. ಇವರಲ್ಲಿ ಗೌಹರ್ ಖಾನ್ ಕೂಡ ಒಬ್ಬರು. ಆದರೆ, ಗೌಹರ್ ಖಾನ್ ಆರೋಗ್ಯವಾಗಿದ್ದು,ಮಗು ಕೂಡ ಆರೋಗ್ಯವಾಗಿದೆ ಎನ್ನಲಾಗಿದೆ.

More from Filmibeat

English summary
Bollywood actress Gauahar Khan Blessed with Baby Boy at the age of 42. Husband Zaid Darbar shared the joyful news with fans.
Read more about: actress mother baby boy
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X