For Quick Alerts
  ALLOW NOTIFICATIONS  
  For Daily Alerts

  ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ ಶ್ರೀದೇವಿ ಪುತ್ರಿ ಜಾಹ್ನವಿಯ ಬಿಕಿನಿ ಫೋಟೊ

  |

  ಬಾಲಿವುಡ್ ನಟಿ ಜಾಹ್ನವಿ ಕಪೂರ್ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಆಗಾಗಾ ಗ್ಲಾಮರಸ್ ಫೋಟೊಗಳನ್ನಷ್ಟೇ ಅಲ್ಲ. ಬಿಕಿನಿ ಪೋಟೊಗಳನ್ನೂ ಹಾಕಿ ಪಡ್ಡೆ ಹುಡುಗರ ನಿದ್ದೆ ಕದಿಯುತ್ತಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಜಾಹ್ನವಿ ಕಪೂರ್ ಬಿಕಿನಿ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು. ಈಗ ಮತ್ತೊಂದು ಬಿಕಿನಿ ಫೋಟೊಗಳನ್ನು ಹಂಚಿಕೊಂಡಿದ್ದಾರೆ

  ಶ್ರೀದೇವಿ ಪುತ್ರ ಬಾಲಿವುಡ್‌ನ ಉದಯೋನ್ಮುಖ ನಟಿ. ಈಗಷ್ಟೇ ಬಾಲಿವುಡ್‌ನಲ್ಲಿ ನೆಲೆಯೂರಿರುವ ಜಾಹ್ನವಿ ಕೈಯಲ್ಲಿ ಸಾಕಷ್ಟು ಸಿನಿಮಾಗಳಿವೆ. ಸದಾ ಜಿಮ್ಮು, ಸಿನಿಮಾ ಅಂತ ಬ್ಯುಸಿಯಾಗಿರುವ ಜಾಹ್ನವಿ ಗ್ಯಾಪ್‌ನಲ್ಲಿ ಚಿಕ್ಕದೊಂದು ಬಿಡುವು ತೆಗೆದುಕೊಳ್ಳುತ್ತಾರೆ. ಆಗೆಲ್ಲಾ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಸುಂದರವಾದ ಫೋಟೊಗಳನ್ನು ಶೇರ್ ಮಾಡುತ್ತಾರೆ. ಈಗಲೂ ಬಿಕಿನಿ ಧರಿಸಿರುವ ಫೋಟೊವೊಂದನ್ನು ಶೇರ್ ಮಾಡಿದ್ದಾರೆ.

   ಬಿಕಿನಿ ತೊಟ್ಟು ನಿದ್ದೆ ಕದ್ದ ಜಾಹ್ನವಿ

  ಬಿಕಿನಿ ತೊಟ್ಟು ನಿದ್ದೆ ಕದ್ದ ಜಾಹ್ನವಿ

  ಬಾಲಿವುಡ್ ನಟಿಯರು ಗ್ಲಾಮರಸ್ ಡ್ರೆಸ್‌ನಲ್ಲಿ ಕಾಣಿಸಿಕೊಳ್ಳುವುದು ಕಾಮನ್. ಸಿನಿಮಾ ಅಷ್ಟೇ ಅಲ್ಲ, ಪಾರ್ಟಿಗಳಲ್ಲಿ, ಪ್ರವಾಸದ ಸಮಯದಲ್ಲಿ ತಮಗಿಷ್ಟ ಬಂದ ಕಾಸ್ಟ್ಯೂಮ್‌ ಧರಿಸಿ ಮಿಂಚುತ್ತಾರೆ. ಅದರಲ್ಲೂ ಬಿಡುವಿನ ವೇಳೆ ಗ್ಯಾಪ್‌ನಲ್ಲಿ ಫೋಟೊಶೂಟ್ ಮಾಡಿಸಿಕೊಳ್ಳುತ್ತಾರೆ. ಈಗ ಜಾಹ್ನವಿ ಕಪೂರ್ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಬಿಕಿನಿ ಧರಿಸಿದ ಫೋಟೊವನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

  ಜಾಲಿ ಮೂಡ್‌ನಲ್ಲಿರುವ ಜಾಹ್ನವಿ

  ಜಾಹ್ನವಿ ಕಪೂರ್ ಕೇವಲ ಬಿಕಿನಿ ಪೋಟೊಗಳನ್ನಷ್ಟೇ ಶೇರ್ ಮಾಡಿಲ್ಲ. ಇದೇ ವೇಳೆ ಸ್ನೇಹಿತೆಯರೊಂದಿಗೆ ಕಾಣಿಸಿಕೊಂಡಿದ್ದಾರೆ. ಗೆಳೆತಿಯರಾದ ತಾನಿಶಾ ಸಂತೋಷಿ ಹಾಗೂ ಓರ್ಹಾನ್ ಅವ್ತಾಮಣಿ ಜೊತೆಗಿನ ಫೋಟೊಗಳನ್ನೂ ಶೇರ್ ಮಾಡಿಕೊಂಡಿದ್ದಾರೆ. ಆದರೆ, ಜಾಹ್ನವಿ ಅಭಿಮಾನಿಗಳು ಸ್ವಿಮ್ಮಿಂಗ್ ಪೂಲ್ ಬಳಿ ಬ್ಲ್ಯಾಕ್ ಬಿಕಿನಿ ತೊಟ್ಟು ನೀಡಿದ ಮಾದಕ ಪೋಸ್‌ಗೆ ಮರುಳಾಗಿದ್ದು, ಫೋಟೊ ವೈರಲ್ ಆಗುತ್ತಿದೆ.

   ಕೋವಿಡ್‌ನಿಂದ ಜಾಹ್ನವಿ ಗುಣಮಖ

  ಕೋವಿಡ್‌ನಿಂದ ಜಾಹ್ನವಿ ಗುಣಮಖ

  ಇತ್ತೀಚೆಗೆ ಶ್ರೀದೇವಿಯ ಇಬ್ಬರೂ ಮಕ್ಕಳಿಗೂ ಕೊರೊನಾ ಸೋಂಕು ತಗುಲಿತ್ತು. ಜಾಹ್ನವಿ ಕಪೂರ್ ಹಾಗೂ ಸಹೋದರಿ ಖುಷಿ ಕಪೂರ್ ಇಬ್ಬರೂ ಕ್ವಾರಂಟೈನ್ ಆಗಿದ್ದರು. ಬಳಿಕ ಈಗ ಜಾಹ್ನವಿ ಕಪೂರ್ ಕೊರೊನಾದಿಂದ ಗುಣಮುಖರಾಗಿರುವ ಸುದ್ದಿಯನ್ನು ಅಭಿಮಾನಿಗಳ ಬಳಿ ಹಂಚಿಕೊಂಡಿದ್ದರು. ಇದಾದ ಬಳಿಕ ಗ್ಯಾಪ್ ತೆಗೆದುಕೊಂಡು ಜಾಹ್ನವಿ ಕಪೂರ್ ಸ್ನೇಹಿತರೊಂದಿಗೆ ಪ್ರವಾಸ ಮಾಡುತ್ತಿದ್ದಾರೆ.

   ಬಾಲಿವುಡ್ ಸಿನಿಮಾದಲ್ಲಿ ಜಾಹ್ನವಿ ಬ್ಯುಸಿ

  ಬಾಲಿವುಡ್ ಸಿನಿಮಾದಲ್ಲಿ ಜಾಹ್ನವಿ ಬ್ಯುಸಿ

  ಜಾಹ್ನವಿ ಕಪೂರ್ 'ಧಡಕ್' ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪ್ರವೇಶ ಮಾಡಿದ್ದರು. ಸ್ವತಃ ಶ್ರೀದೇವಿ ಪುತ್ರಿಯ ಬಾಲಿವುಡ್ ಎಂಟ್ರಿಗೆ ಪ್ಲ್ಯಾನ್ ಮಾಡಿದ್ದರು. 'ಧಡಕ್' ಬಳಿಕ 'ಗುಂಜನ್ ಸಕ್ಸೇನಾ' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಆದರೆ, ಈ ಸಿನಿಮಾ ನೇರವಾಗಿ ಓಟಿಟಿಯಲ್ಲಿ ಬಿಡುಗಡೆಯಾಗಿತ್ತು. ಆದರೂ, ಈ ಚಿತ್ರಕ್ಕೆ ವೀಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿರಲಿಲ್ಲ. ಸದ್ಯಕ್ಕೀಗ ಜಾಹ್ನವಿ ಕಪೂರ್ 'ದೋಸ್ತಾನಾ 2' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅಲ್ಲದೆ ಗುಡ್ ಲಕ್ಕಿ ಜೆರ್ರಿ ಚಿತ್ರದಲ್ಲೂ ನಟಿಸುತ್ತಿದ್ದಾರೆ.

  English summary
  Bollywood actress Janhvi Kapoor bikini Photos is grabbing the attention of her fans. Janhvi Kapoor, the daughter of producer Boney Kapoor and late actress Sridevi, is seen wearing a black bikini with her legs dipped in water.
  Friday, January 21, 2022, 9:32
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X