ಕಿಸ್ಸಿಂಗ್ ಸೀನ್ ಮಾಡೋಲ್ಲ ಅಂತಿದ್ದ ನಟಿಯರು ತೆರೆಮೇಲೆ ಚುಂಬಿಸಿದ್ದೇಕೆ? ತಮನ್ನಾ ಬಳಿಕ ಮತ್ತಿಬ್ಬರಿಂದ ರೂಲ್ಸ್ ಬ್ರೇಕ್!
ಕಾಲ ಮುಂದುವರೆದಿದೆ.. ಓಟಿಟಿ ಬಂದಿದೆ.. ಅದನ್ನು ನೋಡುವವರ ಸಂಖ್ಯೆ ಹೆಚ್ಚಾಗಿದೆ. ಕಾಲಕ್ಕೆ ತಕ್ಕಂತೆ ಸ್ಟಾರ್‌ಗಳೂ ಕೂಡ ಬದಲಾಗುತ್ತಿದ್ದಾರೆ. ಬೋಲ್ಡ್ ಸೀನ್‌ಗಳ ಸಹವಾಸವೇ ಬೇಡ ಅಂತ ದೂರ ಉಳಿದವರು ದಿಢೀರನೇ ಬದಲಾಗಿಬಿಟ್ಟಿದ್ದಾರೆ.
ಬಾಲಿವುಡ್, ಟಾಲಿವುಡ್, ಕಾಲಿವುಡ್ ಯಾವುದೇ ವುಡ್ ಆಗಿರಲಿ, ಕೆಲವು ನಾಯಕಿಯರು ತೆರೆ ಮೇಲೆ ಕಿಸ್ ಮಾಡೋದಿಲ್ಲ ಅಂತ ನಿರ್ಧರಿಸಿದ್ದರು. ನುಡಿದಂತೆ ನಡೆದುಕೊಂಡಿದ್ದರು. ಆದರೆ, ಅದ್ಯಾಕೋ ಈಗ ಅದೇ ನಾಯಕಿಯರು ತಾವೇ ಹಾಕಿಕೊಂಡ ರೂಲ್ಸ್ ಅನ್ನು ಬ್ರೇಕ್ ಮಾಡುತ್ತಿದ್ದಾರೆ.
10-20 ವರ್ಷಗಳ ರೂಲ್ಸ್ ಅನ್ನು ತೆರೆಮೇಲೆ ಬ್ರೇಕ್ ಮಾಡುತ್ತಿದ್ದಾರೆ. ಬಹುಭಾಷಾ ನಟಿ ತಮನ್ನಾ, ಬಾಲಿವುಡ್ ನಟಿ ಕಾಜೋಲ್ ದಕ್ಷಿಣ ಭಾರತದ ನಟಿ ನಂದಿತಾ ಶ್ವೇತಾ ಇವರೆಲ್ಲರೂ ಕಿಸ್ಸಿಂಗ್ ಸೀನ್‌ನಿಂದ ದೂರವೇ ಉಳಿದಿದ್ದರು. ಆದ್ರೀಗ ಈ ನಟಿಯರೆಲ್ಲರೂ ರೂಲ್ಸ್ ಬ್ರೇಕ್ ಮಾಡಿದ್ದಾರೆ. ಅಂತಹ ನಟಿಯರು ಯಾರು ಅನ್ನೋದನ್ನು ನೋಡೋಣ.
ಬಾಲಿವುಡ್ ನಟಿ ಕಾಜೋಲ್
ಬಾಲಿವುಡ್ ನಟಿ ಕಾಜೋಲ್ ಕಿಸ್ಸಿಂಗ್ ದೃಶ್ಯಗಳಲ್ಲಿ ನಟಿಸದೇ 29 ವರ್ಷಗಳಲಾಗಿತ್ತು. 'ಕರಣ್ ಅರ್ಜುನ್', 'ಡಿಡಿಎಲ್‌ಜೆ', 'ಕಭಿ ಖುಷಿ ಕಭಿ ಗಮ್' ಅಂತಹ ಮೆಗಾ ಹಿಟ್ ಸಿನಿಮಾಗಳನ್ನು ನೀಡಿದ ಕಾಜೋಲ್ ಕಿಸ್ಸಿಂಗ್ ಸೀನ್‌ನಲ್ಲಿ ಕಂಡಿರಲಿಲ್ಲ. 29 ವರ್ಷಗಳ ಹಿಂದೆ ತೆರೆಕಂಡಿದ್ದ 'ಯೇ ದಿಲ್ಲಗಿ' ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಜೊತೆ ಕಿಸ್ಸಿಂಗ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದರು.

ಆದಾದ ಬಳಿಕ ಈಗ ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ರಿಲೀಸ್ ಆಗಿರೋ 'ದಿ ಟ್ರಯಲ್' ವೆಬ್ ಸೀರಿಸ್‌ನಲ್ಲಿ ಚುಂಬಿಸಿದ್ದಾರೆ. ಅದು ಒಬ್ಬ ನಟನೊಂದಿಗೆ ಅಲ್ಲ. ಇಬ್ಬರು ನಟರೊಂದಿಗೆ ಕಿಸ್ ಮಾಡುವ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಕಾಜೋಲ್ ಅಭಿಮಾನಿಗಳ ನಿದ್ದೆ ಕೆಡಿಸಿದೆ. ಕೆಲವರು ನಟಿಯರ ವಿರುದ್ಧ ಬೇಸರವನ್ನು ವ್ಯಕ್ತಪಡಿಸಿದ್ದಾರೆ.
'ಲಸ್ಟ್ ಸ್ಟೋರೀಸ್ 2' ತಮನ್ನಾ
ಬಾಲಿವುಡ್ ನಟಿ ತಮನ್ನಾ ಕೂಡ ನೋ ಕಿಸ್ಸಿಂಗ್ ಪಾಲಿಸಿಯನ್ನು ಪಾಲಿಸುತ್ತಿದ್ದರು. ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸಿದ್ದರೂ, ಕಿಸ್ಸಿಂಗ್ ಸೀನ್‌ಗಳಿಂದ ದೂರವೇ ಉಳಿದಿದ್ದರು. ಆದರೆ, ಮಿಲ್ಕಿ ಬ್ಯೂಟಿ ಕೂಡ ತಾವೇ ಹಾಕಿಕೊಂಡ ರೂಲ್ಸ್ ಬ್ರೇಕ್ ಮಾಡಿದ್ದಾರೆ. ಅದು ಒಂದಿಷ್ಟು ದಿನ ಚರ್ಚೆಯಾಗಿದ್ದು ಗೊತ್ತೇ ಇದೆ.
ಇತ್ತೀಚೆಗೆ ಬಾಲಿವುಡ್ ನಟಿ ತಮನ್ನಾ 'ಜೀ ಕರ್ದಾ' ಹಾಗೂ 'ಲಸ್ಟ್ ಸ್ಟೋರೀಸ್ 2'ನಲ್ಲಿ ನಟಿ ತಮನ್ನಾ ಬೋಲ್ಡ್ ಸೀನ್‌ಗಳಲ್ಲಿ ಕಾಣಿಸಿಕೊಂಡಿದ್ದರು. ಇದು ಮಿಲ್ಕಿ ಬ್ಯೂಟಿಯ ಅಭಿಮಾನಿಗಳ ನಿದ್ದೆ ಕೆಡಿಸಿತ್ತು. ಈ ಬಗ್ಗೆ ತಮನ್ನಾ ತಮ್ಮ ಅಭಿಮಾನಿಗಳಿಗೆ ಕ್ಲಾರಿಟಿಯನ್ನು ಕೊಟ್ಟಿದ್ದರೂ ಸಮಾಧಾನ ಆಗಲಿಲ್ಲ.
'ಜಿಂಕೆಮರಿ' ಖ್ಯಾತಿಯ ನಂದಿತಾ ಶ್ವೇತಾ
ಲೂಸ್ ಮಾದ ಜೊತೆ 'ನಂದಾ ಲವ್ಸ್ ನಂದಿತಾ'ದಲ್ಲಿ ನಟಿಸಿದ್ದ ಕನ್ನಡದ ನಟಿ ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ಬ್ಯುಸಿ. ಹಲವು ವರ್ಷಗಳಿಂದ ಪರಭಾಷೆಯ ಸಿನಿಮಾಗಳಲ್ಲಿಯೇ ನಟಿಸಿದ್ದಾರೆ. ಆದರೂ, ಇಷ್ಟು ದಿನ ರೊಮ್ಯಾಂಟಿಕ್ ಸೀನ್‌ಗಳಿಂದ ನಂದಿತಾ ದೂರವೇ ಉಳಿದಿದ್ದರು. ಆದರೆ, ಈಗ ಅವರೂ ಕೂಡ ನೋ ಕಿಸ್ಸಿಂಗ್ ಸೀನ್ ರೂಲ್ಸ್ ಅನ್ನು ಬ್ರೇಕ್ ಮಾಡಿದ್ದಾರೆ.
ಇದೇ ಜುಲೈ 20ರಂದು ತೆರೆಕಾಣುತ್ತಿರುವ 'ಹಿಂಡಿಬಾ' ಸಿನಿಮಾದಲ್ಲಿ ನಂದಿತಾ ಶ್ವೇತಾ ಕಿಸ್ಸಿಂಗ್ ಸೀನ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಆಕೆಯ ಅಭಿಮಾನಿಗಳಿಗೆ ಅಚ್ಚರಿ ತಂದಿದೆ. ಕಿಸ್ಸಿಂಗ್ ಬಗ್ಗೆ ಶ್ವೇತಾ ಈಗಾಗಲೇ ಪ್ರತಿಕ್ರಿಯೆ ಕೂಡ ನೀಡಿದ್ದಾರೆ. "ಸಾಮಾನ್ಯವಾಗಿ ನಾನು ರೊಮ್ಯಾಂಟಿಕ್ ಸೀನ್‌ಗಳಿಂದ ದೂರವೇ ಉಳಿದ್ದೆ. ಆದರೆ ಈ ಬಾರಿ ಕಥೆಯ ದೃಷ್ಠಿಯಿಂದ ಕಿಸ್ಸಿಂಗ್ ದೃಶ್ಯದಲ್ಲಿ ನಟಿಸಬೇಕಾಯ್ತು." ಎಂದು ಹೇಳಿದ್ದರು. ಟ್ರೈಲರ್‌ನಲ್ಲೇ ಚಿತ್ರತಂಡ ಈ ಸೀನ್ ಅನ್ನು ರಿವೀಲ್ ಮಾಡಿತ್ತು.


Click it and Unblock the Notifications











