'ಕಾಂತಾರ ಭಾರತದಿಂದ ಆಸ್ಕರ್‌ಗೆ ಅಧಿಕೃತ ಎಂಟ್ರಿ ಆಗಬೇಕು': 'ಕ್ವೀನ್' ಆಗ್ರಹ
'ಕೆಜಿಎಫ್ 2' ಹಾಗೂ RRR ಸಿನಿಮಾ ಬಳಿಕ ವಿಶ್ವದ ಮಟ್ಟದಲ್ಲಿ 'ಕಾಂತಾರ' ಸಿನಿಮಾ ಗಮನ ಸೆಳೆಯುತ್ತಿದೆ. ಸಿನಿಮಾ ರಿಲೀಸ್ ಆದ ಬಳಿಕ ಎಲ್ಲರ ಬಾಯಲ್ಲೂ 'ಕಾಂತಾರ'ನೇ ಕೇಳಿ ಬರುತ್ತಿದೆ. ಡಬ್ ಆಗಿ ರಿಲೀಸ್ ಆಗಿದ್ದ ಎಲ್ಲಾ ಭಾಷೆಯಲ್ಲಿಯೂ ರಿಷಬ್ ಶೆಟ್ಟಿ ಸಿನಿಮಾ ಬಗ್ಗೆನೇ ಚರ್ಚೆ.
ಬಾಕ್ಸಾಫೀಸ್‌ನಲ್ಲೂ 'ಕಾಂತಾರ' ಸಿಕ್ಕಾಪಟ್ಟೆ ಧೂಳೆಬ್ಬಿಸುತ್ತಿದೆ. ಈಗಾಗಲೇ ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಭಾಷೆಯಲ್ಲಿ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ನಿನ್ನೆ (ಅಕ್ಟೋಬರ್ 20) ಮಲಯಾಳಂ ಭಾಷೆಯಲ್ಲೂ ಡಬ್ ಆಗಿ 'ಕಾಂತಾರ' ರಿಲೀಸ್ ಆಗಿದೆ. ಹಾಗೇ ಸಿನಿಮಾ ನೋಡಿದ ಸೆಲೆಬ್ರೆಟಿಗಳೂ ಕೂಡ ಮೆಚ್ಚಿ ಕೊಂಡಾಡಿದ್ದಾರೆ. ಅದರಲ್ಲಿ ಬಾಲಿವುಡ್‌ನಲ್ಲಿ ವಿವಾದಾತ್ಮಕ ನಟಿ ಕಂಗನಾ ರನೌತ್ ಕೂಡ ಒಬ್ಬರು.
ಬಾಲಿವುಡ್ ಕ್ವೀನ್ ಕಂಗನಾ ನಿನ್ನೆಯಷ್ಟೇ (ಅಕ್ಟೋಬರ್ 20) ಕಾಂತಾರ ಸಿನಿಮಾವನ್ನು ಕುಟುಂಬದೊಂದಿಗೆ ವೀಕ್ಷಿಸಿದ್ದಾರೆ. ಸಿನಿಮಾ ನೋಡಿ ಥ್ರಿಲ್ ಆಗಿರೋ ನಟಿ 'ಕಾಂತಾರ' ಆಸ್ಕರ್‌ಗೆ ಹೋಗಬೇಕು ಅಂತ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

'ಕಾಂತಾರ ಆಸ್ಕರ್‌ಗೆ ಹೋಗಬೇಕು'
'ಕಾಂತಾರ' ಸಿನಿಮಾ ನೋಡಿದ ಬಳಿಕ ಕಂಗನಾ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಆಸ್ಕರ್‌ಗೆ ಹೋಗಬೇಕು ಅಂತ ಒತ್ತಾಯಿಸಿದ್ದಾರೆ. " ಕಾಂತಾರ ಮುಂದಿನ ವರ್ಷ ಭಾರತದಿಂದ ಆಸ್ಕರ್ ಎಂಟ್ರಿ ಆಗಬೇಕು ಅನ್ನೋದು ನನ್ನ ಭಾವನೆ. ಈ ವರ್ಷ ಮುಗಿಯುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಅದ್ಭುತ ಸಿನಿಮಾಗಳು ಬರಬಹುದು ಎನ್ನುವುದು ನನಗೆ ಗೊತ್ತಿದೆ. ಆದರೆ, ಆಸ್ಕರ್‌ಗಿಂತ ಭಾರತ ವಿಶ್ವಮಟ್ಟದಲ್ಲಿ ಸರಿಯಾದ ರೀತಿಯಲ್ಲಿ ಪ್ರತಿನಿಧಿಸುವ ಅಗತ್ಯವಿದೆ." ಎಂದು ಕಂಗನಾ ಇನ್‌ಸ್ಟಾಗ್ರಾ ರೀಲ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಇಡೀ ವಿಶ್ವಕ್ಕೆ 'ಕಾಂತರ' ಅನುಭವ ಆಗಬೇಕು
ಕಂಗನಾ ರನೌತ್ 'ಕಾಂತಾರ' ಸಿನಿಮಾ ಆಸ್ಕರ್ ಯಾಕೆ ಹೋಗಬೇಕು ಅಂತಾನೂ ಹೇಳಿದ್ದಾರೆ. " ಭಾರತ ಒಂದು ಪವಾಡವಿದ್ದಂತೆ. ನೀವು ಅದನ್ನು ಅನುಭವಿಸಲು ಹೋದರೆ ನಿಮಗೆ ನಿರಾಶೆ ಆಗಬಹುದು. ಅದೇ ನೀವು ಆ ಪವಾಡಕ್ಕೆ ಶರಣಾದರೆ, ನೀವೂ ಅದರೊಳಗೆ ಒಬ್ಬರಾಗುತ್ತೀರ. 'ಕಾಂತಾರ' ವಾಸ್ತವದ ಅನುಭವ ಆಗಿದ್ದು, ಆ ಅನುಭವವನ್ನು ಇಡೀ ವಿಶ್ವಕ್ಕೆ ತಿಳಿಯಬೇಕು." ಎಂದು ಕಂಗನಾ ಅಭಿಪ್ರಾಯ ಪಟ್ಟಿದ್ದಾರೆ. ಈ ಮೂಲಕ 'ಕಾಂತಾರ' ಮುಂದಿನ ವರ್ಷ ಯಾಕೆ ಹೋಗಬೇಕು ಅಂತ ಹೇಳಿದ್ದಾರೆ.

ಕುಟುಂಬದೊಂದಿಗೆ 'ಕಾಂತಾರ' ವೀಕ್ಷಣೆ
ಹಲವು ಮಂದಿ ಸೆಲೆಬ್ರೆಟಿಗಳು 'ಕಾಂತಾರ' ನೋಡಿ ಹಾಡಿಹೊಗಳಿದ್ದರು. ಹಾಗೇ ಕಂಗನಾ ಕೂಡ ಕುಟುಂಬದ ಜೊತೆ ಸಿನಿಮಾ ವೀಕ್ಷಿಸಿದ್ದು, ಕಾಂತಾರ ನೋಡಿ ಥ್ರಿಲ್ ಆಗಿದ್ದಾರೆ. ಜೊತೆಗೆ ವಿಡಿಯೋ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದರು. "ನಾನು ನನ್ನ ಕುಟುಂಬದ ಜೊತೆ ಒಂದು ಸಿನಿಮಾ ನೋಡಿಕೊಂಡು ಬರುತ್ತಿದ್ದೇನೆ. ಅದುವೇ ಕಾಂತಾರ. ನಾನು ಇನ್ನೂ ನಡುಗುತ್ತಿದ್ದೇನೆ. ಇದೊಂದು ಎಕ್ಸ್‌ಪ್ಲೋಸಿವ್ ಎಕ್ಸ್‌ಪೀರಿಯನ್ಸ್. ರಿಷಬ್ ಶೆಟ್ಟಿ ನಿಮಗೊಂದು ಸಲಾಂ. ರಚನೆ, ನಿರ್ದೇಶನ, ನಟನೆ, ಆಕ್ಷನ್ ಎಲ್ಲವೂ ಅದ್ಭುತ. ನಂಬೋಕೆ ಆಗುತ್ತಿಲ್ಲ." ಎಂದು ಕಂಗನಾ ಪ್ರತಿಕ್ರಿಯಿಸಿದ್ದರು.

'ಕಾಂತಾರ' ಕಲೆಕ್ಷನ್ 150 ಕೋಟಿ ರೂ.
'ಕಾಂತಾರ' ಸಿನಿಮಾ ಬಿಡುಗಡೆಯಾದಲ್ಲೆಲ್ಲಾ ಸುಮಾರು 150 ಕೋಟಿ ರೂ.ಗೂ ಅಧಿಕ ಗಳಿಕೆ ಕಂಡಿದೆ. ಕನ್ನಡ ಒಂದರಲ್ಲೇ ಬಾಕ್ಸಾಫೀಸ್ ಕಲೆಕ್ಷನ್ ಸುಮಾರು 150 ಕೋಟಿ ರೂ. ದಾಟಿದೆ. ಹಾಗೇ ಹಿಂದಿ, ತೆಲುಗು ಭಾಷೆಯಲ್ಲಿಯೂ 'ಕಾಂತಾರ' ಸಿನಿಮಾದ ಕಲೆಕ್ಷನ್ ಅದ್ಭುತವಾಗಿದೆ. ಇನ್ನು ಮಲಯಾಳಂಗೂ ಡಬ್ ಆಗಿ ಬಿಡುಗಡೆಯಾಗಿದ್ದರಿಂದ ಅಲ್ಲಿವೂ ಅದ್ಭುತ ರೆಸ್ಪಾನ್ಸ್ ಸಿಕ್ಕರೆ, 'ಕಾಂತಾರ' ಮತ್ತೊಂದು ಲೆವೆಲ್‌ಗೆ ಹೋಗುವುದರಲ್ಲಿ ಅನುಮಾನವಿಲ್ಲ.


Click it and Unblock the Notifications











