ದಾದಾ ಸಾಹೇಬ್ ಪ್ರಶಸ್ತಿ ವಿರುದ್ಧ ಕಂಗನಾ ಅಸಮಧಾನ: ತನ್ನದೇ ಲಿಸ್ಟ್ ರಿಲೀಸ್ ಮಾಡಿದ ನಟಿ

ಬಾಲಿವುಡ್‌ನ ವಿವಾದಾತ್ಮಕ ನಟಿ ಕಂಗನಾ ರನೌತ್. ಸದಾ ಒಂದಲ್ಲ ಒಂದು ವಿವಾದಗಳಿಂದ ಸುದ್ದಿಯಲ್ಲಿ ಇರುತ್ತಾರೆ. ಬಾಲಿವುಡ್ ವಿರುದ್ಧ ಆಗಾಗ ತನ್ನ ಅಸಮಧಾನವನ್ನು ಹೊರ ಹಾಕುತ್ತಲೇ ಇರುತ್ತಾರೆ. ಈಗ ದಾದಾ ಸಾಹೇಬ್ ಫಾಲ್ಕೆ ಅಂತರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ ಪ್ರಶಸ್ತಿ ವಿರುದ್ಧ ತಿರುಗಿಬಿದ್ದಿದ್ದಾರೆ.

ದಾದಾ ಸಾಹೇಬ್ ಫಾಲ್ಕೆ ಅಂತರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ ಪ್ರಶಸ್ತಿ ನೀಡಿದ್ದು ಬಾಲಿವುಡ್‌ ಕ್ವೀನ್‌ಗೆ ಸಮಾಧಾನ ಕೊಟ್ಟಿಲ್ಲ. ಹೀಗಾಗಿ ಈ ಪ್ರಶಸ್ತಿಗೆ ಆಯ್ಕೆಯಾದವರನ್ನು ನಯವಾಗಿಯೇ ತಿರಸ್ಕರಿಸಿದ್ದಾರೆ. ಅಷ್ಟೇ ಅಲ್ಲ. ಅವರ ದೃಷ್ಟಿಯಲ್ಲಿ ಯಾರು ಪ್ರಶಸ್ತಿ ಗೆಲ್ಲಬೇಕು? ಅನ್ನೋ ಪಟ್ಟಿಯನ್ನು ರಿಲೀಸ್ ಮಾಡಿದ್ದಾರೆ.

ಆಲಿಯಾ, ರಣ್‌ವೀರ್ ಟಾರ್ಗೆಟ್?

ಆಲಿಯಾ, ರಣ್‌ವೀರ್ ಟಾರ್ಗೆಟ್?

ಪ್ರತಿಷ್ಠಿತ ದಾದಾ ಸಾಹೇಬ್ ಅಂತರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ ಪ್ರಶಸ್ತಿಯ ಅತ್ಯುತ್ತಮ ನಟಿ ಹಾಗೂ ಅತ್ಯುತ್ತಮ ನಟ ಪ್ರಶಸ್ತಿಯನ್ನು ಆಲಿಯಾ ಭಟ್ ಹಾಗೂ ರಣ್‌ಬೀರ್ ಕಪೂರ್‌ಗೆ ನೀಡಲಾಗಿದೆ. ಇದು ಕಂಗನಾ ರನೌತ್‌ಗೆ ಅಸಮಧಾನ ತಂದಿದೆ ಅನ್ನೋದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಹೀಗಾಗಿ ಪ್ರಶಸ್ತಿ ನೀಡಿದ ಪ್ರಮುಖ ಕ್ಯಾಟಗರಿಯ ಪಟ್ಟಿಯನ್ನು ಅವರೇ ಸಿದ್ಧಪಡಿಸಿದ್ದಾರೆ.

ಕಂಗನಾ ಪ್ರಶಸ್ತಿ ಪಟ್ಟಿ ಹೇಗಿದೆ?

ಕಂಗನಾ ಪ್ರಶಸ್ತಿ ಪಟ್ಟಿ ಹೇಗಿದೆ?

ಕಂಗನಾ ರನೌತ್‌ಗೆ ಅಸಮಧಾನ ಆಗಿದೆ ಅನ್ನೋದು ಗೊತ್ತಾಗಿದೆ. ಅದಕ್ಕೆ ಅವರೇ ಒಂದು ಪಟ್ಟಿಯನ್ನು ಸಿದ್ಧಪಡಿಸಿದ್ದು, ಇದರಲ್ಲಿ ರಿಷಬ್ ಶೆಟ್ಟಿಯ 'ಕಾಂತಾರ' ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದ್ದಾರೆ. ಕಂಗನಾ ರೆಡಿ ಮಾಡಿದ ಪ್ರಶಸ್ತಿ ಪಟ್ಟಿ ಹೀಗಿದೆ..

ಅತ್ಯುತ್ತಮ ನಟ - ರಿಷಬ್ ಶೆಟ್ಟಿ (ಕಾಂತಾರ)
ಅತ್ಯುತ್ತಮ ಸಿನಿಮಾ - ಕಾಂತಾರ
ಅತ್ಯುತ್ತಮ ನಿರ್ದೇಶಕ - ಎಸ್‌ಎಸ್ ರಾಜಮೌಳಿ (RRR)
ಅತ್ಯುತ್ತಮ ಪೋಷಕ ನಟ - ಅನುಪಮ್ ಖೇರ್ (ಕಾಶ್ಮೀರ್ ಫೈಲ್ಸ್)
ಅತ್ಯುತ್ತಮ ಪೋಷಕ ನಟಿ - ಟಬು (ದೃಶ್ಯಂ 2, ಭೂಲ್ ಭುಲಯ್ಯ 2)

'ಕಾಂತಾರ' ಕಂಗನಾ ಫಿದಾ

'ಕಾಂತಾರ' ಕಂಗನಾ ಫಿದಾ

ಕಂಗನಾ ಪಟ್ಟಿ ಮಾಡಿದ ಪ್ರಶಸ್ತಿಗಳ ಪಟ್ಟಿಯಲ್ಲಿ 'ಕಾಂತಾರ'ಗೆ ಹೆಚ್ಚು ಪ್ರಶಸ್ತಿ ಬರಬೇಕು. ಅತ್ಯುತ್ತಮ ನಟ ರಿಷಬ್ ಶೆಟ್ಟಿ ಹಾಗೂ ಅತ್ಯುತ್ತಮ ಸಿನಿಮಾ 'ಕಾಂತಾರ' ಎಂದಿದ್ದಾರೆ. ಈ ಹಿಂದೆ 'ಕಾಂತಾರ' ಸಿನಿಮಾ ನೋಡಿ ಬಂದಾಗಲೂ ಕಂಗನಾ ರನೌತ್ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಸಿನಿಮಾವನ್ನು ಹೊಗಳಿಕೊಂಡಾಡಿದ್ದರು. 'ಇದು ಸಿನಿಮಾ' ಎಂದು ಮೆಚ್ಚುಗೆ ಸೂಚಿಸಿದ್ದರು.

'ನೆಪೋಟಿಸಂ ಪ್ರಶಸ್ತಿಗಳು'

'ನೆಪೋಟಿಸಂ ಪ್ರಶಸ್ತಿಗಳು'

ನಟಿ ಕಂಗನಾ ರನೌತ್ ದಾದಾ ಸಾಹೇಬ್ ಅಂತರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ ಪ್ರಶಸ್ತಿಯನ್ನು ನೆಪೋಟಿಸಂಗೆ ಎಫೆಕ್ಟ್ ಎಂದು ಜರಿದಿದ್ದಾರೆ. ಈ ಪ್ರಶಸ್ತಿಯನ್ನು ಮುಂಬೈನ ಚೆಂಬೂರ್‌ನಲ್ಲಿ ಆಯೋಜಿಸಲಾಗಿತ್ತು. 'ದಿ ಕಾಶ್ಮೀರ್ ಫೈಲ್ಸ್' ಅತ್ಯುತ್ತಮ ಸಿನಿಮಾ ಎಂದು ಅನೌನ್ಸ್ ಮಾಡಿದ್ದಾರೆ. ಹಾಗೇ ಅತ್ಯುತ್ತಮ ನಟ ರಣ್‌ಬೀರ್ ಕಪೂರ್, ಅತ್ಯುತ್ತಮ ನಟಿ ಆಲಿಯಾ ಭಟ್ ಪ್ರಶಸ್ತಿಯನ್ನು ನೀಡಿದ್ದಾರೆ.

More from Filmibeat

English summary
Actress Kangana Ranaut disagree with Dadasaheb Award winners shares her own list, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X