"ನನ್ನ ವೆಬ್ ಸೀರಿಸ್‌ನ ಹಸಿಬಿಸಿ ದೃಶ್ಯಗಳನ್ನು ನನ್ನ ತಂಗಿಗೆ ಕಳಿಸುತ್ತಿದ್ರು"; ಬಾಲಿವುಡ್ ನಟಿ ಕಂಗನಾ ಶರ್ಮಾ
ಸಿನಿಮಾ ಜಗತ್ತಿನಲ್ಲಿ ಗಟ್ಟಿಯಾಗಿ ನೆಲೆಯೂರಬೇಕು ಅಂದರೆ ನಟಿಯರು ಸಿಕ್ಕಾಪಟ್ಟೆ ಕಷ್ಟಪಡಬೇಕಾಗುತ್ತೆ. ಅದರಲ್ಲೂ ಬಾಲಿವುಡ್ ಅಂತಹ ಮಹಾ ಸಾಗರದಲ್ಲಿ ನಟಿಯರು ಅವಕಾಶಗಳನ್ನು ಗಿಟ್ಟಿಸಿಕೊಳ್ಳುವುದಕ್ಕೆ ಕೆಲವೊಮ್ಮೆ ಗ್ಲಾಮರಸ್ ಪಾತ್ರಗಳನ್ನು ಒಪ್ಪಿಕೊಳ್ಳುತ್ತಾರೆ. ಅದೇ ಕೆಲವೊಮ್ಮೆ ಅವರ ವೃತ್ತಿ ಬದುಕಿಗೆ ಮುಳುವಾಗಿದ್ದ ಅದೆಷ್ಟೋ ಉದಾಹರಣೆಗಳು ಇವೆ.
ಬಾಲಿವುಡ್‌ನಲ್ಲಿ ಇಂತಹ ಸಾಕಷ್ಟು ಉದಾಹರಣಗಳು ಕಣ್ಮುಂದೆ ಬರುತ್ತವೆ. ಇತ್ತೀಚೆಗೆ ಬಾಲಿವುಡ್ ನಟಿ ಕಂಗನಾ ಶರ್ಮಾ ನೀಡಿದ್ದ ಸಂದರ್ಶನದಲ್ಲಿ ಇಂತಹದ್ದೇ ನೋವನ್ನು ಹಂಚಿಕೊಂಡಿದ್ದರು. ಒಂದು ವೆಬ್ ಸೀರಿಸ್‌ನಲ್ಲಿ ನಟಿಸಿದ್ದರ ಪರಿಣಾಮ ಹೇಗಿತ್ತು? ಅನ್ನುವುದನ್ನು ರಿವೀಲ್ ಮಾಡಿದ್ದಾರೆ.

'ದಿ ಗ್ರೇಟ್ ಗ್ರ್ಯಾಂಡ್ ಮಸ್ತಿ' ಸಿನಿಮಾ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದ ಕಂಗನಾ ಶರ್ಮಾ ಬಾಲಿವುಡ್‌ನಲ್ಲಿ ನೆಲೆ ಕಂಡುಕೊಳ್ಳುವುದಕ್ಕೆ ಕಷ್ಟ ಪಟ್ಟಿದ್ದರು. 2019ರಲ್ಲಿ ಆಗತಾನೇ ವೆಬ್ ಸೀರಿಸ್ ಕ್ರೇಜ್ ಹೆಚ್ಚಾಗಿತ್ತು. ಆ ವೇಳೆ ವೆಬ್ ಸೀರಿಸ್‌ನಲ್ಲಿ ಬೋಲ್ಡ್ ದೃಶ್ಯಗಳಲ್ಲಿ ನಟಿಸಿದ್ದರು. ಆ ದೃಶ್ಯಗಳನ್ನು ಪಂಜಾಬ್ ಹಾಗೂ ಹರಿಯಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದವು. ಇಷ್ಟೇ ಅಲ್ಲದೆ, ಈ ನಟಿಯ ಹಸಿಬಿಸಿ ದೃಶ್ಯಗಳನ್ನು ತಂಗಿಗೆ ಕಳಿಸುತ್ತಿದ್ದ ಕ್ಷಣಗಳನ್ನು ನೆನೆಪಿಸಿಕೊಂಡಿದ್ದಾರೆ.
"ನಾನು ಒಂದು ವೆಬ್ ಸೀರಿಸ್‌ನಲ್ಲಿ ನಟಿಸಿದ್ದೆ. ಆ ಬಳಿಕ ಮತ್ತೆ ವೆಬ್ ಸೀರಿಸ್‌ನಲ್ಲಿ ನಟಿಸಲಿಲ್ಲ. ಅದ ಹೆಸರನ್ನು ಹೇಳುವುದಕ್ಕೂ ನನಗೂ ಇಷ್ಟವಿಲ್ಲ. ಯಾಕಂದ್ರೆ, ಕೆಲಸದ ಜೊತೆ ಆ ಹೆಸರು ಸೇರಿಕೊಳ್ಳುವುದು ನನಗೆ ಇಷ್ಟವಿಲ್ಲ. ಆ ವೆಬ್ ಸೀರಿಸ್‌ನಿಂದ ನನ್ನ ಕುಟುಂಬದಲ್ಲಿ ಸಮಸ್ಯೆ ಆಗಿತ್ತು. ಆ ಕಾರಣಕ್ಕೆ ನಾನು ವೆಬ್ ಸೀರಿಸ್‌ನಲ್ಲಿ ನಟಿಸುವುದನ್ನೇ ಬಿಟ್ಟಿದ್ದೇನೆ." ಎಂದು ಇತ್ತೀಚೆಗೆ ಬಾಲಿವುಡ್ ನೌಗೆ ನೀಡಿದ ಸಂದರ್ಶನದಲ್ಲಿ ಅಳಲನ್ನು ತೋಡಿಕೊಂಡಿದ್ದಾರೆ.
'ದಿ ಕಪಿಲ್ ಶರ್ಮಾ' ಶೋನಲ್ಲೂ ಕಂಗನಾ ಶರ್ಮಾ ಕಾಣಿಸಿಕೊಂಡಿದ್ದರು. ವೃತ್ತಿ ಬದುಕು ನಿಧಾನವಾಗಿ ಹಳಿಗೆ ಬಂದಿತ್ತು. ಈ ಸಂದರ್ಭದಲ್ಲಿ ವೆಬ್ ಸೀರಿಸ್ ಒಪ್ಪಿಕೊಂಡಿದ್ದರು. ಆಗ ಬೋಲ್ಡ್ ಸೀನ್‌ನಲ್ಲಿ ನಟಿಸಲೇ ಬೇಕಾದ ಅನಿವಾರ್ಯತೆ ಎದುರಾಗಿತ್ತು. ಇದರಲ್ಲಿ ನಟಿಸಿದ ಬೋಲ್ಡ್ ಸೀನ್‌ಗಳು ರಾತ್ರೋ ರಾತ್ರಿ ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುವುದಕ್ಕೆ ಶುರುವಾಗಿದ್ದವು. ಪಂಜಾಬ್ ಹಾಗೂ ಹರಿಯಾಣ ಎರಡೂ ಕಡೆ ವೈರಲ್ ಆಗಿಬಿಟ್ಟವು.

"ವೆಬ್ ಸೀರಿಸ್‌ನಲ್ಲಿ ಏನಾಗುತ್ತೆ ಅಂದರೆ, ಬೋಲ್ಡ್ ಸೀನ್‌ಗಳನ್ನೇ ಮಾಡಬೇಕಾಗುತ್ತೆ. ಆ ಸಮಯದಲ್ಲಿ ನಾನು ನಟಿಸಿಬಿಟ್ಟೆ. 2019ರಲ್ಲಿ ಓಟಿಟಿ ಪ್ಲಾಟ್‌ಫಾರ್ಮ್ ಆಗಷ್ಟೇ ಬಂದಿತ್ತು. ಆ ಸಮಯದಲ್ಲಿ ನಾನು ಕೆಲಸ ಕೂಡ ಮಾಡುತ್ತಿರಲಿಲ್ಲ. ಅದರಲ್ಲಿನ ತುಣುಕುಗಳು ಸಿಕ್ಕಾಪಟ್ಟೆ ವೈರಲ್ ಆಗಿದ್ದವು. ಆ ಕ್ಲಿಪ್‌ಗಳು ಪಂಜಾಬ್ ಹಾಗೂ ಹರಿಯಾಣದಲ್ಲಿ ಹೆಚ್ಚು ವೈರಲ್ ಆಗಿಬಿಟ್ಟವು." ಎಂದು ಕಂಗನಾ ಶರ್ಮಾ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಬೋಲ್ಡ್ ಸೀನ್‌ಗಳು ವೈರಲ್ ಆಗುತ್ತಿದ್ದಂತೆ ಅವುಗಳನ್ನು ಕಂಗನಾ ಶರ್ಮಾ ಅವರ ತಂಗಿಗೆ ಕಳುಹಿಸುತ್ತಿದ್ದರಂತೆ. ಕೆಲವರು ಸಂಬಂಧಿಗಳಿಗೆ ಕಳಿಸಿ, ಏನು ಹೀಗೆ ಮಾಡಿಬಿಟ್ಟಿದ್ದಾರೆ ಅಂತ ಟೀಕೆ ಮಾಡುತ್ತಿದ್ದರಂತೆ. ಇದರಿಂದ ತನ್ನ ಫ್ಯಾಮಿಲಿ ಲೈಫ್‌ಗೆ ಸಿಕ್ಕಾಪಟ್ಟೆ ತೊಂದರೆ ಆಗಿತ್ತು ಎಂದು ಅಲವತ್ತುಕೊಂಡಿದ್ದಾರೆ. "ಆ ವೆಬ್ ಸೀರಿಸ್‌ನ ತುಣುಕುಗಳನ್ನು ಎಲ್ಲರೂ ನನ್ನ ತಂಗಿಗೆ ಕಳುಹಿಸುತ್ತಿದ್ದರು. ನಮ್ಮ ಸಂಬಂಧಿಕರಿಗೆ ಕಳುಹಿಸುತ್ತಿದ್ದರು. ಹೀಗೆ ಮಾಡಿ ಬಿಟ್ಟಿದ್ದಾಳೆ. ಹಾಗೆ ಮಾಡಿಬಿಟ್ಟಿದ್ದಾಳೆ ಅನ್ನೋರು." ಎಂದು ನಟಿ ಕಂಗನಾ ಶರ್ಮಾ ಬಾಲಿವುಡ್ ನೌ ಜೊತೆಗಿನ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.


Click it and Unblock the Notifications











