ನಟಿಗಾಗಿ 'ಬಜೆಟ್' ಹೆಚ್ಚಿಸಲು ಸಿದ್ಧ, ಆದರೆ ಷರತ್ತು ಅನ್ವಯ ಎಂದಿದ್ದ ನಿರ್ಮಾಪಕ

ಚಿತ್ರರಂಗದಲ್ಲಿ ಒಳಿತು ಮತ್ತು ಕೆಡಕು ಎರಡೂ ಇವೆ. ಅನೇಕ ನಟಿಯರು ತಾವು ಎದುರಿಸಿದ ಸಂಕಟಗಳ ಬಗ್ಗೆ ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಕಾಸ್ಟಿಂಗ್ ಕೌಚ್ ಬಗ್ಗೆ ಆಗಾಗ್ಗೆ ಮಾತನಾಡುವ ಧೈರ್ಯವನ್ನು ನಟಿಯರು ಪ್ರದರ್ಶಿಸುತ್ತಿರುತ್ತಾರೆ. ಆದರೆ ತಮಗೆ ಕಿರುಕುಳ ನೀಡಿದ ವ್ಯಕ್ತಿಯ ಹೆಸರು ಬಾಯಿಬಿಡಲು ಅವರಿಗೆ ಸಾಧ್ಯವಾಗುವುದಿಲ್ಲ. ಏಕೆಂದರೆ ಅದು ತಮ್ಮ ವೃತ್ತಿ ಬದುಕಿಗೇ ಕುತ್ತು ತರುತ್ತದೆ ಎಂಬ ಭಯ.

'ಟಿವಿಎಫ್ ಟ್ರಿಪ್ಲಿಂಗ್', 'ಫೋರ್ ಮೋರ್ ಶಾಟ್ಸ್ ಪ್ಲೀಸ್' ಸೇರಿದಂತೆ ಕೆಲವು ಪ್ರಸಿದ್ಧ ವೆಬ್ ಸೀರೀಸ್‌ಗಳಲ್ಲಿ ನಟಿಸಿರುವ ಮಾನ್ವಿ ಗಗ್ರೂ ಇಂತಹದೇ ಕೆಟ್ಟ ಅನುಭವವನ್ನು ತಾವು ಎದುರಿಸಿದ್ದಾಗಿ ಹೇಳಿಕೊಂಡಿದ್ದಾರೆ. ವೆಬ್ ಸೀರೀಸ್ ಒಂದರಲ್ಲಿ ಅವಕಾಶ ಗಿಟ್ಟಿಸಿಕೊಳ್ಳಲು ಕಾಂಪ್ರೊಮೈಸ್ ಮಾಡಿಕೊಳ್ಳುವಂತೆ ಹೇಳಿದ್ದರೆಂಬ ಆಘಾತಕಾರಿ ಮಾಹಿತಿ ಹೊರಗೆಡವಿದ್ದಾರೆ. ಮುಂದೆ ಓದಿ..

ವೆಬ್‌ ಸೀರೀಸ್‌ನಲ್ಲಿ ನಟಿಸಲು ಆಫರ್

ವೆಬ್‌ ಸೀರೀಸ್‌ನಲ್ಲಿ ನಟಿಸಲು ಆಫರ್

ವೆಬ್ ತಾಣವೊಂದಕ್ಕೆ ಇತ್ತೀಚಿಗೆ ಸಂದರ್ಶನ ನೀಡಿದ್ದ 34 ವರ್ಷದ ನಟಿ ಮಾನ್ವಿ ಗಗ್ರೂ, ತಮಗೆ ಕಳೆದ ವರ್ಷ ಅನಾಮಿಕ ಸಂಖ್ಯೆಯೊಂದರಿಂದ ಕರೆ ಬಂದಿತ್ತು. ವೆಬ್ ಸೀರೀಸ್ ಒಂದರಲ್ಲಿ ನಟಿಸುವಂತೆ ಆಫರ್ ನೀಡಿದ್ದರು. ಆಗ ಮಾನ್ವಿ, ತಮಗೆ ಬಜೆಟ್ ನಿರೀಕ್ಷಿತ ಮಟ್ಟದಲ್ಲಿ ಇಲ್ಲ ಎಂದು ತಿಳಿಸಿದ್ದರು. ಆಗ ಆ ನಿರ್ಮಾಪಕ, ಬಜೆಟ್‌ಅನ್ನು ಮೂರು ಪಟ್ಟು ಹೆಚ್ಚಿಸುತ್ತೇನೆ, ಆದರೆ ಒಂದು ಷರತ್ತು ಅನ್ವಯ ಎಂದಿದ್ದರು.

ಮೊದಲು ಕಥೆ ಹೇಳಿ ಎಂದೆ

ಮೊದಲು ಕಥೆ ಹೇಳಿ ಎಂದೆ

'ಅವರು ನನಗೆ ಬಜೆಟ್ ಬಗ್ಗೆ ಹೇಳಿದರು. ಆಗ ನಾನು ಇಲ್ಲ ಸಾಧ್ಯವಾಗದು. ಇದು ತೀರಾ ಕಡಿಮೆಯಾಯಿತು. ಅದಿರಲಿ, ನಾವೇಕೆ ಬಜೆಟ್ ಬಗ್ಗೆ ಮಾತನಾಡುತ್ತಿದ್ದೇವೆ? ಮೊದಲು ನನಗೆ ಕಥೆ ಹೇಳಿ. ನನಗೆ ಆಸಕ್ತಿ ಇದ್ದರೆ ಮಾತ್ರ ಮತ್ತು ನಿಮಗೂ ನನ್ನನ್ನು ಚಿತ್ರದಲ್ಲಿ ಹಾಕಿಕೊಳ್ಳಬೇಕೆಬ ಆಸಕ್ತಿ ಇದ್ದರೆ ನಾವು ಸಂಭಾವನೆ, ಡೇಟ್ಸ್ ಮುಂತಾದವುಗಳ ಬಗ್ಗೆ ಮಾತನಾಡೋಣ' ಎಂದು ಹೇಳಿದ್ದಾಗಿ ಮಾನ್ವಿ ತಿಳಿಸಿದ್ದಾರೆ.

ಮೂರು ಪಟ್ಟು ಹಣ ಕೊಡುತ್ತೇನೆ...

ಮೂರು ಪಟ್ಟು ಹಣ ಕೊಡುತ್ತೇನೆ...

'ನಾವು ಬಜೆಟ್ ಓಕೆ ಅನಿಸಿದರೆ ಮುಂದುವರಿಯಬಹುದು ಎಂಬ ಕಾರಣಕ್ಕೆ ಜನರನ್ನು ಕೇಳುತ್ತಿದ್ದೇವೆ ಎಂದರು. ನಾನು ಬಜೆಟ್ ಕಡಿಮೆಯಾಯಿತು, ಆಗುವುದಿಲ್ಲ ಎಂದಿದ್ದಕ್ಕೆ, ಮರು ಮಾತಿನಲ್ಲಿಯೇ ಬಜೆಟ್‌ಅನ್ನು ಮೂರು ಪಟ್ಟು ಹೆಚ್ಚಿಸುವುದಾಗಿ ಹೇಳಿದರು. ನಾನು ಇಷ್ಟು ಪ್ರಮಾಣದ ಹಣವನ್ನೂ ನಿಮಗೆ ನೀಡಬಲ್ಲೆ. ಆದರೆ ಅದಕ್ಕೆ ನೀವು ಕೆಲವು ಕಾಂಪ್ರೊಮೈಸ್ ಮಾಡಿಕೊಳ್ಳಬೇಕಾಗುತ್ತದೆ' ಎಂದಿದ್ದಾಗಿ ವಿವರಿಸಿದ್ದಾರೆ.

ಮೀ ಟೂ ಚಳವಳಿ ಬಳಿಕವೂ ಬದಲಾಗಿಲ್ಲ

ಮೀ ಟೂ ಚಳವಳಿ ಬಳಿಕವೂ ಬದಲಾಗಿಲ್ಲ

ಈ ಫೋನ್ ಕರೆಯಿಂದ ಮಾನ್ವಿ ಬಹಳ ಅಪ್‌ಸೆಟ್ ಆಗಿದ್ದರಂತೆ. ಮೀ ಟೂ ಚಳವಳಿ ನಡೆದ ಬಳಿಕವೂ ಉದ್ಯಮದಲ್ಲಿ ಇಂತಹ ಘಟನೆಗಳು ನಡೆಯುತ್ತಿರುವುದು ಅವರಿಗೆ ಬೇಸರ ತಂದಿದೆ. 'ನನ್ನನ್ನು ಯಾವುದು ರೊಚ್ಚಿಗೆಬ್ಬಿಸಿತೋ ಗೊತ್ತಿಲ್ಲ. ಇದ್ದಕ್ಕಿದ್ದಂತೆ ಆತನನ್ನು ನಾನು ಬೈಯತೊಡಗಿದೆ. ಫೋನಿಡು ಎಷ್ಟು ಧೈರ್ಯ ನಿನಗೆ. ಪೊಲೀಸರಿಗೆ ದೂರು ನೀಡುತ್ತೇನೆ ಎಂದೆ. ನಿಜಕ್ಕೂ ನನಗೆ ಹುಚ್ಚು ಹಿಡಿದಂತೆ ಆಗಿತ್ತು' ಎಂದಿದ್ದಾರೆ.

More from Filmibeat

English summary
Actress Maanvi Gagroo has revealed that she was asked to compromise to get a role in web series.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X