ಲಾಕ್‌ಡೌನ್ ನಡುವೆ ಬೇಸನ್ ಲಡ್ಡು ಮಾಡುವುದನ್ನು ಕಲಿತ ಮಲೈಕಾ ಅರೋರಾ
ಲಾಕ್‌ಡೌನ್ ಕಾರಣದಿಂದ ಎರಡು ವಾರಗಳಿಂದ ತಾರೆಯರ ದಿನಚರಿ ಬದಲಾಗಿದೆ. ಶೂಟಿಂಗ್, ಕಾರ್ಯಕ್ರಮಗಳು, ಪಾರ್ಟಿ ಹೀಗೆ ಬೇರೆ ಬೇರೆ ಚಟುವಟಿಕೆಗಳಲ್ಲಿ ತೊಡಗಿರುತ್ತಿದ್ದ ಅವರು ಈಗ ಮನೆಯೊಳಗೆ ಕಾಲ ಕಳೆಯಲು ವಿಭಿನ್ನ ಪ್ರಯತ್ನಗಳನ್ನು ಮಾಡುತ್ತಿದ್ದಾರೆ.
ದೀಪಿಕಾ ಪಡುಕೋಣೆ, ಅಲಿಯಾ ಭಟ್, ಹೃತಿಕ್ ರೋಷನ್, ಸಲ್ಮಾನ್ ಖಾನ್, ಕತ್ರಿನಾ ಕೈಫ್ ಮುಂತಾದವರು ಮನೆ ಸ್ವಚ್ಛಗೊಳಿಸುವ, ಪಾತ್ರೆ ತೊಳೆಯುವ, ವರ್ಕೌಟ್ ಮಾಡುವ ವಿಡಿಯೋಗಳನ್ನು ಹಂಚಿಕೊಂಡು ಸಂಭ್ರಮಿಸುತ್ತಿದ್ದಾರೆ. ಈ ಪಟ್ಟಿಗೆ ಈಗ ಮಲೈಕಾ ಅರೋರಾ ಸೇರಿದ್ದಾರೆ.
ಕ್ವಾರೆಂಟೀನ್‌ನ ಅವಧಿಯಲ್ಲಿ ಅಡುಗೆ, ಸ್ವಚ್ಛಗೊಳಿಸುವುದು, ಪಾಸಿಟಿವ್ ಆಗಿ ಇರುವುದು, ಒಂದನ್ನು ಚಿಂತನೆಗಳು, ಕುಟುಂಬದೊಂದಿಗೆ ಸಮಯ... ಇವುಗಳನ್ನೇ ಮನೆಯಲ್ಲಿ ಪುನರಾವರ್ತಿಸುತ್ತಿದ್ದೇನೆ ಎಂದು ಮಲೈಕಾ ಬರೆದುಕೊಂಡಿದ್ದರು.

ಅಡುಗೆಯ ಮನೆಯಲ್ಲಿಯೇ ಹೆಚ್ಚು ಸಮಯ ಕಳೆಯುತ್ತಿರುವ ಮಲೈಕಾ, ಮನೆಯಲ್ಲಿ ಬೇಸನ್ ಲಡ್ಡು ತಯಾರಿಸುವ ವಿಡಿಯೋ ವೈರಲ್ ಆಗಿದೆ. ಮೊದಲ ಬಾರಿಗೆ ಬೇಸನ್ ಲಡ್ಡು ತಯಾರಿಸುವ ಖುಷಿಯನ್ನು ಮಲೈಕಾ ಹಂಚಿಕೊಂಡಿದ್ದಾರೆ.
ಕೆಲವು ದಿನಗಳ ಹಿಂದೆ ಮಲೈಕಾ, ಮಲಬಾರಿ ವೆಜ್ ಸ್ಟ್ಯೂ ಮಾಡುವುದರ ವಿಡಿಯೋ ಹಂಚಿಕೊಂಡಿದ್ದರು. ಅದಕ್ಕೆ ಸುದೀರ್ಘ ವಿವರವನ್ನೂ ಬರೆದುಕೊಂಡಿದ್ದರು. ಅಡುಗೆ ಮಾಡುವುದು ತಮ್ಮ ಇಷ್ಟದ ಸಂಗತಿ. ಆದರೆ ಬಿಜಿ ಷೆಡ್ಯೂಲ್ ಮಧ್ಯೆ ಅದಕ್ಕೆ ಸಮಯ ಸಿಗುತ್ತಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ.


Click it and Unblock the Notifications











