FIFA World Cup 2026:ಅಫಿಷಿಯಲ್ ಸಾಂಗ್‌ನಲ್ಲಿ ಮಿಂಚಿದ "ಸರ್ಸೆ ಸೆರಗ ಸರ್ಸೆ" ಎಂದಿದ್ದ ನಟಿ ನೋರಾ ಫತೇಹಿ
ಇಡೀ ವಿಶ್ವವೇ ಎದುರು ನೋಡುತ್ತಿರುವ 'ಫಿಫಾ ಫುಟ್‌ಬಾಲ್ ವಿಶ್ವಕಪ್ 2026' (FIFA World Cup 2026) ಆರಂಭಕ್ಕೆ ಇನ್ನೇನು ಕ್ಷಣಗಣನೆ ಆರಂಭವಾಗಿದೆ. ಈ ಬೆನ್ನಲ್ಲೇ, ಬಾಲಿವುಡ್‌ನ ಜನಪ್ರಿಯ ನಟಿ ನೂರಾ ಫತೇಹಿಯ ಆಲ್ಬಮ್ ಗೀತೆ 'Siir Siir' (ಸೀರ್ ಸೀರ್) ಬಿಡುಗಡೆಯಾಗಿದೆ. ಈ ಹಾಡು ಈ ವಿಶ್ವದಾದ್ಯಂತ ದೊಡ್ಡ ಮಟ್ಟಕ್ಕೆ ಸಂಚಲನ ಸೃಷ್ಟಿಸಿದೆ.
'ಕೆಡಿ' ಸಿನಿಮಾದ "ಸರ್ಸೆ ಸೆರಗ ಸರ್ಸೆ" ಹಾಡಿನ ಮೂಲಕ ವಿವಾದಕ್ಕೆ ಸಿಲುಕಿದ್ದ ನೋರಾ ಫತೇಹಿ ಫುಟ್‌ಬಾಲ್ ಪ್ರಿಯರ ಕಣ್ಣು ಅರಳಿಸಿದ್ದಾರೆ. ಫಿಫಾ ವಿಶ್ವಕಪ್ 2026ರ ಅಧಿಕೃತ ಮ್ಯೂಸಿಕ್ ಪ್ರಾಜೆಕ್ಟ್‌ನ ಭಾಗವಾಗಿದ್ದು, ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಮಿಲಿಯನ್‌ಗಟ್ಟಲೆ ವೀವ್ಸ್ ಅನ್ನು ಪಡೆದು ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿದೆ.

ಫುಟ್‌ಬಾಲ್ ಫೀವರ್ ವೇಳೆ ನಡೆಯುವ ಈ ಹಾಡು ಸಂಚಲನ ಸೃಷ್ಟಿಸುತ್ತಿದೆ. ನೋರಾ ಫತೇಹಿ ಜೊತೆ ಮ್ಯೂಸಿಕ್ ಪ್ರೊಡ್ಯೂಸರ್ 'ಸಂಜಯ್' ಹಾಗೂ ಫ್ರೆಂಚ್ ಗಾಯಕ 'ವೇಗಡ್ರೀಮ್' ಅವರೊಂದಿಗೆ ಒಟ್ಟಿಗೆ ಸೇರಿಕೊಂಡು ಸಿದ್ಧಪಡಿಸಿದ್ದಾರೆ. ಜೂನ್ 12 ರಂದು ಕೆನಡಾದ ಟೊರೊಂಟೊದಲ್ಲಿರುವ ಬಿಎಂಒ ಫೀಲ್ಡ್ (BMO Field) ಕ್ರೀಡಾಂಗಣದಲ್ಲಿ ನಡೆಯಲಿರುವ ಫಿಫಾ ವಿಶ್ವಕಪ್ 2026ರ ಅದ್ಧೂರಿ ಉದ್ಘಾಟನಾ ಸಮಾರಂಭದಲ್ಲಿ ನೂರಾ ಫತೇಹಿ ಅವರು ಈ ಹಾಡಿಗೆ ಲೈಫ್ ಫರ್ಫಾಮೆನ್ಸ್ ನೀಡಲಿದ್ದಾರೆ. ಕತಾರ್ ವಿಶ್ವಕಪ್ ಬಳಿಕ ಫಿಫಾ ವೇದಿಕೆಯಲ್ಲಿ ನೂರಾ ಅವರಿಗೆ ಸಿಗುತ್ತಿರುವ ಮತ್ತೊಂದು ದೊಡ್ಡ ಗೌರವ ಇದಾಗಿದೆ.
ನೋರಾ ಹಾಡಿನ ವಿಶೇಷತೆ ಏನು?
ಫಿಫಾ ವಿಶ್ವಕಪ್ 2026ಗಾಗಿ ನೋರಾ ಫತೇಹಿಯ 'Siir Siir' ಸಾಂಗ್ ಸದ್ದು ಮಾಡುತ್ತಿದ್ದಂತೆ ಭಾವನಾತ್ಮಕವಾಗಿ ಮಾತನಾಡಿದ್ದಾರೆ. "ಈ ಸಾಂಗ್ ನನ್ನ ಹೃದಯಕ್ಕೆ ತುಂಬಾ ಹತ್ತಿರವಾಗಿದೆ. ಈ ಹಾಡಿನಲ್ಲಿ ವಿವಿಧ ದೇಶಗಳ ಸಾಂಸ್ಕೃತಿಕಯ ಪ್ರಭಾವವನ್ನು ನೋಡಬಹುದು. ನನ್ನದು ಮೊರಾಕ್ಕೊ ಮೂಲ, ನಾನು ಬೆಳೆದಿದ್ದು ಕೆನಡಾದಲ್ಲಿ.ನನ್ನ ವೃತ್ತಿಜೀವನಕ್ಕೆ ಅಪಾರ ಪ್ರೀತಿ ಕೊಟ್ಟು, ಯಶಸ್ಸು ತಂದುಕೊಟ್ಟಿದ್ದು ಭಾರತ. ಈ ಹಾಡಿನಲ್ಲಿ ಈ ಎಲ್ಲಾ ಸಂಸ್ಕೃತಿಯನ್ನು ಬೆರೆಸಲು ನಾನು ಬಯಸಿದ್ದೆ. ಇದು ಜಾಗತಿಕ ಮಟ್ಟದ ಹಾಡಾಗಿದ್ದರೂ ತನ್ನದೇ ಆದ ವಿಶಿಷ್ಟ ಮೂಡ್ ಹೊಂದಿದೆ" ಎಂದು ನೋರಾ ಫತೇಹಿ ಹೇಳಿಕೊಂಡಿದ್ದಾರೆ.
ಭಾರತೀಯರದ್ದೇ ಹವಾ
ನೋರಾ ಫತೇಹಿಯ 'Siir Siir' ಹಾಡಿನ ವಿಶೇಷ ಅಂದರೆ, ಭಾರತದ ಪ್ರತಿಭೆಗಳು ತೆರೆಯ ಹಿಂದೆ ಕೆಲಸ ಮಾಡಿದ್ದಾರೆ. ಬಾಲಿವುಡ್‌ನ ಖ್ಯಾತ ನೃತ್ಯ ಸಂಯೋಜಕ ರಂಜಿತ್ ದೇವ್ ಈ ಅಂತರರಾಷ್ಟ್ರೀಯ ಫಿಫಾ ಗೀತೆಗೆ ಕೊರಿಯೋಗ್ರಫಿ ಮಾಡಿದ್ದಾರೆ. ಜಾಗತಿಕ ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸಿರುವ ಕುರಿತು ನೃತ್ಯ ನಿರ್ದೇಶಕ ರಂಜಿತ್ ದೇವ್ ಮಾಧ್ಯಮಗಳಿಗೆ ಸಂತಸ ಹಂಚಿಕೊಂಡಿದ್ದಾರೆ. "ಮುಂಬೈನಿಂದ ನೃತ್ಯದ ಕನಸು ಹೊತ್ತು ಬಂದ ನನಗೆ ಇಡೀ ಜಗತ್ತೇ ವೀಕ್ಷಿಸುವ ಫಿಫಾ ಆಫೀಶಿಯಲ್ ಆಲ್ಬಮ್‌ಗೆ ಕೋರಿಯೋಗ್ರಫಿ ಮಾಡುವ ಅವಕಾಶ ಸಿಕ್ಕಿರುವದೇ ಹೆಮ್ಮೆ. ಭಾರತೀಯ ನೃತ್ಯವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ನನ್ನ ಕನಸು ನನಸಾಗಿದೆ" ಎಂದು ಹೇಳಿದ್ದಾರೆ.
ಮೊರಾಕ್ಕೊದಲ್ಲಿ ಶೂಟಿಂಗ್
ನೋರಾ ಫತೇಹಿಯ 'Siir Siir' ಸಾಂಗ್ ಅನ್ನು ಮೊರಾಕ್ಕೊದ ಖ್ಯಾತ ನಿರ್ದೇಶಕ ಅಬ್ದೆರಾಫಿಯಾ ಈ ಮ್ಯೂಸಿಕ್ ವಿಡಿಯೋವನ್ನು ನಿರ್ದೇಶಿಸಿದ್ದಾರೆ. ಮೊರಾಕ್ಕೋದ ಕ್ಯಾಸಾಬ್ಲಾಂಕಾ ಸೇರಿದಂತೆ ಮೊರಾಕ್ಕೊದ ಅತ್ಯಂತ ರೋಮಾಂಚಕ ನಗರಗಳು ಮತ್ತು ರಬತ್‌ನ ಪ್ರಿನ್ಸ್ ಮೌಲಾಯ್ ಅಬ್ದುಲ್ಲಾ ಸ್ಟೇಡಿಯಂನಲ್ಲಿ ಫಿಫಾದ ಈ ಹಾಡನ್ನು ಭವ್ಯವಾಗಿ ಶೂಟಿಂಗ್ ಮಾಡಲಾಗಿದೆ.
ಫುಟ್‌ಬಾಲ್ ಅಭಿಮಾನಿಗಳು ದಿಲ್ ಖುಷ್
ನೋರಾ ಫತೇಹಿಯ 'Siir Siir' ಸಾಂಗ್ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಇಂಟರ್ನೆಟ್‌ನಲ್ಲಿ ಭಾರಿ ಟ್ರೆಂಡ್ ಸೃಷ್ಟಿಸಿದೆ. ನೋರಾ ಫತೇಹಿ, ಸಂಗೀತ ನಿರ್ದೇಶಕ ಸಂಜಯ್, ವೇಗಡ್ರೀಮ್ ಕಾಂಬಿನೇಷನ್ ಪಕ್ಕಾ ಗ್ಲೋಬಲ್ ಹಿಟ್ ಆಗಿದೆ. ಫುಟ್‌ಬಾಲ್ ಅಭಿಮಾನಿಗಳು ಈ ಹಾಡಿಗೆ ಕಮೆಂಟ್ ಮಾಡುತ್ತಿದ್ದಾರೆ. ಜೂನ್ 11 ರಿಂದ ಆರಂಭವಾಗಲಿರುವ ವಿಶ್ವಕಪ್‌ನ ರೋಮಾಂಚನವನ್ನು ಈ ಹಾಡು ಮತ್ತಷ್ಟು ಹೆಚ್ಚಿಸಲಿದೆ.


Click it and Unblock the Notifications