ಕಣ್ಣು ಕಳೆದುಕೊಳ್ಳುವ ಭೀತಿಯಲ್ಲಿ ಪರಿಣಿತಿ ಚೋಪ್ರಾ ಪತಿ: ಲಂಡನ್‌ನಲ್ಲಿ ಶಸ್ತ್ರ ಚಿಕಿತ್ಸೆ

ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಆಮ್ ಆದ್ಮಿ ಪಕ್ಷದ ಮುಖಂಡ ರಾಘವ್ ಚಡ್ಡಾ ಜೊತೆ ಸಪ್ತಪದಿ ತುಳಿದಿದ್ದರು. ರಾಘವ್ ಚಡ್ಡ ಆಮ್ ಆದ್ಮಿ ಪಕ್ಷದ ಅತ್ಯಂತ ಕಿರಿಯ ನಾಯಕ. ಅದ್ಧೂರಿಯಾಗಿ ಮದುವೆ ಆಗಿದ್ದ ಈ ಜೋಡಿಗೆ ಸಂಕಷ್ಟ ಎದುರಾಗಿದೆ. ಪರಿಣಿತಿ ಚೋಪ್ರಾ ಪತಿ ರಾಘವ್ ಚಡ್ಡಗೆ ದಿಢೀರನೇ ಕಣ್ಣಿನ ಶಸ್ತ್ರಗೆ ಒಳಗಾಗಿದ್ದಾರೆ.

ಚುನಾವಣೆ ಸಮಯದಲ್ಲಿ ಆಮ್ ಆದ್ಮಿ ಪಕ್ಷದ ನಾಯಕ ರಾಘವ್ ಪ್ರಚಾರದಿಂದ ದೂರ ಉಳಿದಿದ್ದರು. ಅಲ್ಲದೆ ಸೋಶಿಯಲ್ ಮೀಡಿಯಾದಿಂದಲ್ಲೂ ಆಕ್ಟಿವ್ ಆಗಿರಲಿಲ್ಲ. ಈ ಬೆನ್ನಲ್ಲೇ ರಾಘವ್ ಚಡ್ಡ ಲಂಡನ್‌ನಲ್ಲಿ ಕಣ್ಣಿನ ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವ ಬಗ್ಗೆ ಸುದ್ದಿ ಬಂದಿದೆ. ರಾಘವ್ ಚಡ್ಡ ಗಂಭೀರವಾದ ಕಣ್ಣಿನ ಸಮಸ್ಯೆಯನ್ನು ಎದುರಿಸುತ್ತಿದ್ದರು ಎನ್ನಲಾಗಿದೆ.

Actress Parineeti Chopra husband Raghav Chadha underwent surgery could have lost his eyesight

ಸದ್ಯ ಲಂಡನ್‌ನಲ್ಲಿ ನಡೆದ ಶಸ್ತ್ರ ಚಿಕಿತ್ಸೆ ನಡೆದಿದ್ದು, ವೈದ್ಯರು ಬೆಡ್ ರೆಸ್ಟ್ ಹೇಳಿದ್ದಾರೆ ಅಂತ ಸುದ್ದಿಯಾಗಿದೆ. ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಕೂಡ ಲಂಡನ್‌ನಲ್ಲಿ ಇದ್ದು, ಪತಿ ಆರೋಗ್ಯ ನೋಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ರಾಘವ್ ಚಡ್ಡ ರೆಟಿನಾದಲ್ಲಿ ರಂಧ್ರ ಕಾಣಿಸಿಕೊಂಡಿಕೊಂಡಿದ್ದು, ಕಣ್ಣು ಕಳೆದುಕೊಳ್ಳುವ ಆತಂಕ ಎದುರಾಗಿತ್ತು.

ಪರಿಣಿತಿ ಚೋಪ್ರಾ ಕಣ್ಣಿನ ಬಗ್ಗೆ ದೆಹಲಿ ಮಂತ್ರಿ ಸೌರಭ್ ಭಾರದ್ವಾಜ್ ಮಾಧ್ಯಮಗಳ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ. ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಕಣ್ಣಿನ ಗಂಭೀರ ಸಮಸ್ಯೆಯಿಂದ ರಾಘವ್ ಚಡ್ಡ ಪ್ರಚಾರದಲ್ಲಿ ಗೈರಾಗಿದ್ದಾರೆಂದು ಹೇಳಿದ್ದಾರೆ. ಸದ್ಯ ಕಣ್ಣಿನ ಶಸ್ತ್ರ ಚಿಕಿತ್ಸೆ ಬಳಿಕ ಪ್ರರಿಣಿತಿ ಚೋಪ್ರಾ ಪತಿ ಸುಧಾರಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

Actress Parineeti Chopra husband Raghav Chadha underwent surgery could have lost his eyesight

"ರಾಘವ್ ಚಡ್ಡ ಸದ್ಯಕ್ಕೀಗ ಲಂಡನ್‌ನಲ್ಲಿ ಇದ್ದಾರೆ. ಅವರಿಗೆ ಸಂಪೂರ್ಣ ಬೆಡ್ ರೆಸ್ಟ್ ನೀಡಲಾಗಿದೆ. ಒಂದು ಕಣ್ಣಿನ ರೆಟಿನಾದಲ್ಲಿ ರಂಧ್ರವಿತ್ತು. ಇದರಿಂದ ರಾಘವ್ ಚಡ್ಡ ಕಣ್ಣನ್ನೇ ಕಳೆದುಕೊಳ್ಳುವ ಸಾಧ್ಯತೆಯಿತ್ತು. ಹೀಗಾಗಿ ದಿಢೀರನೇ ಶಸ್ತ್ರ ಚಿಕಿತ್ಸೆಗೆ ಒಳಗಾಗಬೇಕಾಯ್ತು." ಕುಟುಂಬದ ಸದಸ್ಯರು ಹಿಂದೂಸ್ತಾನ್ ಟೈಮ್ಸ್‌ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ.

ಶಸ್ತ್ರ ಚಿಕಿತ್ಸೆಗೂ ಮುನ್ನ ಕಣ್ಣನ್ನು ಉಳಿಸಿಕೊಳ್ಳುವ ಬಗ್ಗೆ ವೈದ್ಯರು ಗ್ಯಾರಂಟಿ ನೀಡಿರಲಿಲ್ಲ. ಇದು ಒಂದು ಗಂಭೀರವಾದ ಶಸ್ತ್ರ ಚಿಕಿತ್ಸೆ. ಆದರೆ, ಶಸ್ತ್ರ ಚಿಕಿತ್ಸೆ ಯಶಸ್ಸಿಯಾಗಿದ್ದು, ಗುಣಮುಖರಾಗುತ್ತಿದ್ದಾರೆಂದು ಹೆಚ್ಚಿನ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಶಸ್ತ್ರ ಚಿಕಿತ್ಸೆಯ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಬೆಡ್ ರೆಸ್ಟ್‌ನಲ್ಲಿದ್ದಾರೆ.

ಇತ್ತ ಪರಿಣಿತಿ ಚೋಪ್ರಾ ಲಂಡನ್‌ಗೆ ವಿಸಿಟ್ ಹಾಕಿ ಬರುತ್ತಿದ್ದಾರೆ. ಅವರ ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದರಿಂದ ಅಲ್ಲಿ ಇಲ್ಲಿ ಓಡಾಡಿಕೊಂಡಿದ್ದಾರೆ. ಶಸ್ತ್ರ ಚಿಕಿತ್ಸೆಗೂ ಪತಿ ಸರ್ಜರಿಯ ಸಂಪೂರ್ಣ ಜವಾಬ್ದಾರಿಯನ್ನು ನೋಡಿಕೊಂಡಿದ್ದಾರೆ. ಪರಿಣಿತಿ ಚೋಪ್ರಾ ಹಾಗೂ ರಾಘವ್ ಚಡ್ಡಾ 2023, ಸೆಪ್ಟೆಂಬರ್ ತಿಂಗಳಲ್ಲಿ ಉದಯ್‌ಪುರದಲ್ಲಿ ಕುಟುಂಬಸ್ಥರು ಹಾಗೂ ಆತ್ಮೀಯರ ಸಮ್ಮುಖದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.

More from Filmibeat

English summary
Parineeti Chopra husband Raghav Chadha underwent eye surgery
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X