ನಟಿ ಪೂಜಾ ಬೇಡಿಯನ್ನು ಗೋವಾ ಕ್ವಾರೆಂಟೈನ್‌ನಲ್ಲಿ ಇರಿಸಿರುವ ಜಾಗ ಹೇಗಿದೆ ಗೊತ್ತೇ?

ರಾಷ್ಟ್ರವ್ಯಾಪಿ ಲಾಕ್ ಡೌನ್ ಹೇರಿಕೆ ಇದ್ದಾಗಲೂ ನಟಿ ಪೂಜಾ ಬೇಡಿ ಮತ್ತು ಆಕೆಯ ಫಿಯಾನ್ಸಿ ಮಾನೆಕ್ ಕಾಂಟ್ರಾಕ್ಟರ್ ಇಬ್ಬರೂ ಇತ್ತೀಚೆಗೆ ಗೋವಾಕ್ಕೆ ಕಾರಿನಲ್ಲಿ ತೆರಳಿದ್ದರು. ಹೀಗೆ ಮೋಜು ಮಾಡಲು ತೆರಳಿದ್ದ ಪೂಜಾ ಬೇಡಿ ಮತ್ತು ಮಾನೆಕ್ ಅವರನ್ನು ಗೋವಾದ ಮುಖ್ಯ ನಗರ ಪ್ರವೇಶಿಸುವ ಮೊದಲೇ ತಡೆದು ಕಡ್ಡಾಯ ಕ್ವಾರೆಂಟೈನ್‌ನಲ್ಲಿ ಇರಿಸಲಾಗಿತ್ತು.

Recommended Video

ಅಯ್ಯೋ ಉಪ್ಪಿ ಅಂಗೆಲ್ಲಾ ಹೇಳ್ಬೇಡ ಗೀತಾ ಬೈತಾಳೆ ಅಂದ್ರು ಶಿವಣ್ಣ..! | Shivanna & Upendra On OM 25years

ತಮ್ಮನ್ನು ಕ್ವಾರೆಂಟೈನ್‌ನಲ್ಲಿ ಇರಿಸಲಾದ ಸ್ಥಳದ ವಿಡಿಯೋವನ್ನು ಪೂಜಾ ಬೇಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸರ್ಕಾರ ಒದಗಿಸಿರುವ ಸೌಲಭ್ಯ ಯಾವ ಮಟ್ಟಿಗೆ ಇದೆ. ಕ್ವಾರೆಂಟೈನ್ ಮಾಡಲು ಎಷ್ಟು ಕೊಳಕಾದ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಇಲ್ಲಿನ ಪರಿಸ್ಥಿತಿ ಕೆಟ್ಟದಾಗಿದೆ ಎಂದು ಅವರು ವಿಡಿಯೋ ಮೂಲಕ ಹೇಳಿದ್ದಾರೆ. ಮುಂದೆ ಓದಿ...

ಸ್ವಲ್ಪವಾದರೂ ಸ್ವಚ್ಛತೆ ಬೇಡವೇ?

ಸ್ವಲ್ಪವಾದರೂ ಸ್ವಚ್ಛತೆ ಬೇಡವೇ?

'ನಾವು ಕಂಫರ್ಟ್ ಆದ ಸೌಲಭ್ಯ ಬಯಸುತ್ತೇವೆ ಎನ್ನುವುದಿಲ್ಲ. ಆದರೆ ಇರುವ ಜಾಗ ಶುಚಿಯಾಗಿರಬೇಕು. ಹಾಗೆ ಒದಗಿಸಿದ್ದರೆ ಸರ್ಕಾರದ ಕ್ರಮವನ್ನು ಪ್ರಶಂಸಿಸಬಹುದಾಗಿತ್ತು. ಸ್ಯಾನಟೈಸ್ ಮಾಡುವುದಿರಲಿ, ಎಲ್ಲಿ ನೋಡಿದರೂ ಫಂಗಸ್, ಕೊಳಕು, ದೂಳು ತುಂಬಿಕೊಂಡಿದೆ' ಎಂದು ಆರೋಪಿಸಿದ್ದಾರೆ.

ಗಲೀಜು ತುಂಬಿದೆ

'ಇದರ ಅರ್ಥ ಈ ಸ್ಥಳವನ್ನು ಸ್ಯಾನಿಟೈಸ್ ಮಾಡುತ್ತಿಲ್ಲ. ಜನರು ಸುಮ್ಮನೆ ಇಲ್ಲಿಗೆ ಬರುತ್ತಾರೆ, ಹೋಗುತ್ತಾರೆ. ಇಲ್ಲಿ ಒಂದೇ ಒಂದು ದಿನವೂ ಸ್ವಚ್ಛತೆಯ ಕಾರ್ಯ ಮಾಡಿಲ್ಲ. ಇಂತಹ ಗಲೀಜು ಸೌಲಭ್ಯ ಇಲ್ಲಿರುವಾಗ, ಅಷ್ಟೊಂದು ಜನರು ಇಲ್ಲಿಗೆ ಏಕೆ ಪದೇ ಪದೇ ಅಡ್ಡಾಡುತ್ತಿದ್ದಾರೆ ಎನ್ನುವುದು ಸಹ ಅರ್ಥವಾಗುತ್ತಿಲ್ಲ' ಎಂದು ಕಿಡಿಕಾರಿದ್ದಾರೆ.

ಈ ವ್ಯವಸ್ಥೆಯಿಂದಲೇ ಹೆಚ್ಚು ಅಪಾಯ

ಈ ವ್ಯವಸ್ಥೆಯಿಂದಲೇ ಹೆಚ್ಚು ಅಪಾಯ

'ಒಂದು ಸುರಕ್ಷಿತವಾಗಿ ಮನೆಯಿಂದ ಇನ್ನೊಂದು ಸುರಕ್ಷಿತವಾದ ಮನೆಗೆ ಹೋಗುವ ಪ್ರಯಾಣಕ್ಕಿಂತ, ಇಂತಹ ಸೌಲಭ್ಯದಿಂದ ಆಗುವ ಅಪಾಯವೇ ಹೆಚ್ಚು. ಸ್ವಚ್ಛತೆ ಕಾಪಾಡಿಕೊಳ್ಳದೆ ಇರುವುದು, ಸ್ಯಾನಿಟೈಸ್ ಮಾಡದೆ ಇರುವುದು ವೈರಸ್‌ಗಳು ಹರಡಲು ಅವಕಾಶ ನೀಡುತ್ತದೆ. ಕೊರೊನಾ ಇಲ್ಲದೆಯೇ ಗೋವಾ ಬಂದವರಿಗೆ ಕ್ವಾರೆಂಟೈನ್ ಕೇಂದ್ರದ ಕೊಳಕು ವ್ಯವಸ್ಥೆಯಿಂದಲೇ ಕೊರೊನಾ ವೈರಸ್ ಬರುವಂತಿದೆ' ಎಂದಿದ್ದಾರೆ.

ಸೆಲೆಬ್ರಿಟಿ ಗೋವಾಕ್ಕೆ

ಸೆಲೆಬ್ರಿಟಿ ಗೋವಾಕ್ಕೆ

'ಬೇರೆಯವರ ಸುರಕ್ಷತೆಯ ದೃಷ್ಟಿಯಿಂದ ಈ ಟ್ವೀಟ್ ಮಾಡಿದ್ದೇನೆ. ಆದರೆ ಎಲ್ಲ ಜನರೂ 'ಒಬ್ಬ ಸೆಲೆಬ್ರಿಟಿ ಗೋವಾ ಪ್ರವೇಶಿಸಿದ್ದಾರೆ' ಎಂಬುದರ ಮೇಲೆ ಮಾತ್ರವೇ ಗಮನ ಹರಿಸುತ್ತಿದ್ದಾರೆ' ಎಂದು ಸಮಸ್ಯೆ ಕುರಿತು ಮಾತನಾಡದ ಜನರ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

More from Filmibeat

English summary
Bollywood actress Pooja Bedi who was quarantined with her pooja bedi fiance Maneck Contractor by Goa has shared a video of the dirty facility.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X