ಮಾಲ್ಡೀವ್ಸ್ ಬೀಚ್‌ನಲ್ಲಿ ರಕುಲ್ ಪ್ರೀತ್ ಸಿಂಗ್ ಬಿಕಿನಿ ಅವತಾರ: CSK ಫ್ಯಾನ್ ಎಂದಿದ್ದೇಕೆ ನೆಟ್ಟಿಗರು?
ರಕುಲ್ ಪ್ರೀತ್ ಸಿಂಗ್ ದಕ್ಷಿಣ ಭಾರತದ ಹಾಗೂ ಬಾಲಿವುಡ್‌ನ ಜನಪ್ರಿಯ ನಟಿ. ತನ್ನ ಗ್ಲಾಮರಸ್ ಲುಕ್‌ನಿಂದಲೇ ಗಮನ ಸೆಳೆಯುವ ನಟಿಯೀಕೆ. ಕನ್ನಡದ 'ಗಿಲ್ಲಿ' ಸಿನಿಮಾದಿಂದಲೇ ವೃತ್ತಿ ಬದುಕು ಆರಂಭಿಸಿದ್ದರು. ಆ ಬಳಿಕ ಈ ನಟಿ ಬೆಳೆದಿದ್ದು ಮಾತ್ರ ಊಹೆಗೂ ಮೀರಿದ್ದು.
ಒಂದು ಕಾಲದಲ್ಲಿ ರಕುಲ್ ಪ್ರೀತ್ ಸಿಂಗ್ ಟಾಲಿವುಡ್‌ನ ಫೇವರಿಟ್ ನಟಿ. ಯಶಸ್ಸಿನ ಉತ್ತುಂಗದಲ್ಲಿದ್ದಾಗ ಈ ನಟಿಗೆ ತೆಲುಗಿನಲ್ಲಿ ಸಿಕ್ಕಾಪಟ್ಟೆ ಬೇಡಿಕೆ. ತೆಲುಗಿನ ಬಹುತೇಕ ಎಲ್ಲಾ ಸ್ಟಾರ್ ಹೀರೊಗಳ ಜೊತೆನೂ ನಟಿಸಿ ಸೈ ಎನಿಸಿಕೊಂಡಿದ್ದರು. ಆ ಬಳಿಕ ರಕುಲ್ ಪ್ರೀತ್ ಸಿಂಗ್ ಬಾಲಿವುಡ್‌ಗೆ ಹಾರಿದ್ದರು. ಅಲ್ಲೂ ಒಳ್ಳೊಳ್ಳೆ ಪ್ರಾಜೆಕ್ಟ್‌ಗಳು ರಕುಲ್ ಪ್ರೀತ್ ಸಿಂಗ್‌ಗೆ ಸಿಕ್ಕಿವೆ.

ಸದ್ಯ ರಕುಲ್ ಪ್ರೀತ್ ಸಿಂಗ್ ಸಿನಿಮಾಗಳಿಂದ ಕೊಂಚ ಮಟ್ಟಿಗೆ ಬ್ರೇಕ್ ಪಡೆದುಕೊಂಡು ಮಾಲ್ಡೀವ್ಸ್ ಪ್ರವಾಸಕ್ಕೆ ಹೋಗಿದ್ದಾರೆ. ಅಲ್ಲಿ ದಿನಕ್ಕೊಂದು ಫೋಟೊಶೂಟ್, ಬಣ್ಣ ಬಣ್ಣದ ಬಿಕಿನಿಯಲ್ಲಿ ಹಾಟ್ ಆಗಿ ಪೋಸ್ಟ್ ಕೊಟ್ಟು ಹುಡುಗರ ನಿದ್ದೆ ಕದಿಯುತ್ತಿದ್ದಾರೆ. ಮಾಲ್ಡೀವ್ಸ್ ಬೀಚ್‌ನಲ್ಲಿ ರಕುಲ್ ಪ್ರೀತ್ ಸಿಂಗ್ ಬಿಕಿನಿಗೆ ತೊಟ್ಟ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಕೆಂಪು ಬಿಕಿನಿಯಲ್ಲಿ ಬಿಸಿ ಹೆಚ್ಚಿಸಿದ ರಕುಲ್
ರಕುಲ್ ಪ್ರೀತ್ ಸಿಂಗ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ವೀವ್. ಎಲ್ಲೇ ಹೋದರೂ, ಏನೇ ಮಾಡಿದರೂ ಫೋಟೊಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ. ಸದ್ಯ ಮಾಲ್ಡೀವ್ಸ್‌ನಲ್ಲಿ ಕೆಂಪು ಬಿಕಿನಿ ತೊಟ್ಟು ಟೆಂಪ್ರೇಚರ್ ಹೆಚ್ಚಿಸಿದ್ದಾರೆ. ಕನಿಷ್ಠ ಮೇಕಪ್ ಮಾಡಿಕೊಂಡು ಕ್ಯಾಮರಾಗೆ ಪೋಸ್ ಕೊಟ್ಟಿರುವ ರಕುಲ್ ಪ್ರೀತ್ ಸಿಂಗ್ ಇಂಟರ್‌ನೆಟ್‌ನಲ್ಲಿ ಹಲ್‌ಚಲ್ ಎಬ್ಬಿಸಿದ್ದಾರೆ.
ದಿನಕ್ಕೆ ಒಂದೊಂದು ಬಿಕಿನಿಯಲ್ಲಿ ಕಾಣಿಸಿಕೊಳ್ಳುತ್ತಿರೋ ರಕುಲ್ ಪ್ರೀತ್ ಸಿಂಗ್‌ಗೆ ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಅದರಲ್ಲೂ ಮಾಲ್ಡೀವ್ಸ್ ಬೀಚ್‌ನಲ್ಲಿ ಕೆಂಪುಬಿಕಿನಿ ತೊಟ್ಟಿರುವ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. " ವೈಲ್ಡ್ ಅಂಡ್ ಫ್ರೀ, ಜಸ್ಟ್ ಲೈಕ್ ದಿ ಸೀ" ಎಂದು ಕಮೆಂಟ್ ಮಾಡುತ್ತಿದ್ದಾರೆ.
ಹಳದಿ ಸ್ವಿಮ್ ಸೂಟ್‌ನಲ್ಲಿ ರಕುಲ್
ಇನ್ನು ಹಳದಿ ಸ್ವಿಮ್ ಸೂಟ್ ತೊಟ್ಟು ರಕುಲ್ ಪ್ರೀತ್ ಸಿಂಗ್ ನಾನಾ ಭಂಗಿಯಲ್ಲಿ ಪೋಸ್ ಕೊಟ್ಟಿದ್ದಾರೆ. ಈ ಪೋಟೊಗಳನ್ನು ನೋಡಿದ ಬಳಿಕ ನೆಟ್ಟಿಗರು ಮಜವಾಗಿ ಕಮೆಂಟ್ ಮಾಡಿದ್ದಾರೆ. ಸನ್ ಗ್ಲಾಸ್ ತೊಟ್ಟು, ವೈಟ್ ಅಂಡ್ ಬ್ಲ್ಯಾಕ್ ಚಕ್ಸ್ ಹ್ಯಾಟ್ ತೊಟ್ಟು ಕ್ಯಾಮರಾಗಳಿಗೆ ಪೋಸ್ ಕೊಟ್ಟಿದ್ದಾರೆ. ಈ ಫೋಟೊಗಳನ್ನು ನೋಡುತ್ತಿದ್ದಂತೆ ನೆಟ್ಟಿಗರು ಸಿಎಸ್‌ಕೆ ಫ್ಯಾನ್ ಎಂದು ಕಮೆಂಟ್ ಮಾಡಿದ್ದಾರೆ.
ಇನ್ನೊಂದು ದಿನ ಕೇಸರಿ ಬಣ್ಣ ಬೀಚ್ ಔಟ್‌ಫಿಟ್‌ನಲ್ಲಿ ಮಿಂಚಿದ್ದಾರೆ. ಮಾಲ್ಡೀವ್ಸ್‌ನ ಬೀಚ್‌ನಲ್ಲಿ ರಕುಲ್ ಪ್ರೀತ್ ಸಿಂಗ್ ಪಳ ಪಳ ಅಂತ ಹೊಳೆಯುತ್ತಿದ್ದಾರೆ. ಈ ಎಲ್ಲಾ ಫೋಟೊಗಳಿಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಿನಿಮಾಗಳಲ್ಲೂ ಬ್ಯುಸಿ
ರಕುಲ್ ಪ್ರೀತ್ ಸಿಂಗ್ ಸಿನಿಮಾಗಳಲ್ಲೂ ಬ್ಯುಸಿಯಾಗಿದ್ದಾರೆ. ವಿಭಿನ್ನ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಚಿಕ್ಕದೊಂದು ಗ್ಯಾಪ್ ಬಳಿಕ ಮತ್ತೆ ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಅಯಾಲನ್ (ಏಲಿಯನ್) ಸಿನಿಮಾದಲ್ಲಿ ನಟಿಸಿದ್ದು, ಶಿವಕಾರ್ತಿಕೇಯನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ನವೆಂಬರ್ 2023ಗೆ ಈ ಸಿನಿಮಾ ರಿಲೀಸ್ ಆಗುತ್ತಿದೆ.
ಹಾಗೇ ಕಮಲ್ ಹಾಸನ್ ನಟಿಸುತ್ತಿರುವ 'ಇಂಡಿಯನ್ 2' ಸಿನಿಮಾದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಹಾಗೇ 'ಮೇರಿ ಪತ್ನಿ ಕಾ ರಿಮೇಕ್' ಅನ್ನೋ ಬಾಲಿವುಡ್ ಸಿನಿಮಾದಲ್ಲಿ ಅರ್ಜುನ್ ಕಪೂರ್,ಭೂಮಿ ಪಡ್ನೇಕರ್ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಕೆಲಸದ ಜೊತೆ ಜೊತೆಗೆ ಲೈಫ್ ಎಂಜಾಯ್ ಮಾಡೋದನ್ನೂ ಮರೆಯುತ್ತಿಲ್ಲ.


Click it and Unblock the Notifications











