Rashmika Mandanna: ಶುಭ್ಮನ್‌ ಗಿಲ್ ಎನ್ನುತ್ತಿದ್ದಂತೆ ರಶ್ಮಿಕಾ ಮುಖ ಕೆಂಪಾಯ್ತು.. ಏನಂದ್ರೆ ನೆಟ್ಟಿಗರು?

'ನ್ಯಾಷನಲ್ ಕ್ರಶ್' ರಶ್ಮಿಕಾ ಮಂದಣ್ಣ ಯಶಸ್ಸಿನ ತುತ್ತತುದಿಯಲ್ಲಿದ್ದಾರೆ. ತೆಲುಗು, ಹಿಂದಿ,ತಮಿಳು ಸಿನಿಮಾಗಳಲ್ಲಿ ನಟಿಸಿರೋ ನಟಿ, ಸದ್ಯ ಬಾಲಿವುಡ್‌ನಲ್ಲಿ ನೆಲೆಯೂರಿದ್ದಾರೆ. ಬಾಲಿವುಡ್ ಸಿನಿಮಾದಲ್ಲಿ ಬ್ಯುಸಿಯಾಗಿರೋ ನಟಿ, ಆಗಾಗ ಪಾಪರಾಜಿಗಳ ಕಣ್ಣಿಗೆ ಬಿದ್ದು ಬಿಂದಾಸ್ ಪೋಸ್ ಕೊಡುತ್ತಾರೆ.

ಐಕಾಶ್ ಸ್ಟಾರ್ ಅಲ್ಲು ಅರ್ಜುನ್ ಜೊತೆ ಶ್ರೀವಲ್ಲಿಯಾಗಿ ಹೆಜ್ಜೆ ಹಾಕಿದ್ದೇ ಹಾಕಿದ್ದು, ನ್ಯಾಷನಲ್ ಸ್ಟಾರ್ ಆಗಿಬಿಟ್ಟಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾ 'ಪುಷ್ಪ' ತೆರೆಕಂಡ ಬಳಿಕ ರಶ್ಮಿಕಾಗೆ ಬಾಲಿವುಡ್‌ ಸಿನಿಮಾಗಳಲ್ಲಿ ಬೇಡಿಕೆ ಹೆಚ್ಚಾಗಿದೆ. ಈ ಮಧ್ಯೆ ರಶ್ಮಿಕಾ ಟ್ರೋಲ್ ಆಗೋದು ಹೆಚ್ಚಾಗಿದೆ. ಹಾಗೇ ಹೈಡ್‌ಲೈನ್ ಮಾಡೋದೂ ಹೆಚ್ಚಾಗಿದೆ. ಸದ್ಯ ಕ್ರಿಕೆಟರ್ ಶುಭ್ಮನ್ ಗಿಲ್ 'ಕ್ರಶ್' ಎಂದ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಇದೇ ವಿಷಯದ ಬಗ್ಗೆ ರಶ್ಮಿಕಾಗೆ ಕೇಳಿದಾಗ ನಾಚಿ ನೀರಾಗಿದ್ದಾರೆ.

Actress Rashmika Mandanna turned red after hearing cricketer Shubman Gill crush on her

ಶುಭ್ಮನ್ ಗಿಲ್‌ಗೆ ರಶ್ಮಿಕಾ 'ಕ್ರಶ್'?

ಕೆಲವು ದಿನಗಳ ಹಿಂದೆ ಇದೇ ವಿಷಯದ ಬಗ್ಗೆ ಸಿಕ್ಕಾಪಟ್ಟೆ ಸುದ್ದಿಯಾಗಿತ್ತು. ಶುಭ್ಮನ್ ಗಿಲ್‌ಗೆ ಸಂದರ್ಶನವೊಂದರಲ್ಲಿ ನಿಮ್ಮ ಅಚ್ಚು ಮೆಚ್ಚಿನ ನಟಿ ಯಾರು? ಎಂದು ಪ್ರಶ್ನೆ ಮಾಡಿದ್ದರು. ಆಗ ಹಿಂದೆ ಮುಂದೆ ನೋಡದೆ ಶುಭ್ಮನ್ ಗಿಲ್ 'ಪುಷ್ಪ' ನಟಿ ರಶ್ಮಿಕಾ ಮಂದಣ್ಣ ಹೆಸರನ್ನು ಹೇಳಿದ್ದರು. ಅಲ್ಲಿಂದ ಈ ವಿಷಯ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.

ರಶ್ಮಿಕಾ ಮಂದಣ್ಣ ಫೇವರಿಟ್ ಎಂದ ಶುಭ್ಮನ್ ಗಿಲ್ ಬಗ್ಗೆ ಎಲ್ಲಡೆ ಚರ್ಚೆಯಾಗಲು ಶುರುವಾಗಿತ್ತು. ಆದರೆ, ಮ್ಯಾಟರ್‌ ವೈರಲ್ ಆಗುತ್ತಿದ್ದಂತೆ ಶುಭ್ಮನ್ ಗಿಲ್ ಯು- ಟರ್ನ್ ಹೊಡೆದಿದ್ದರು. ರಶ್ಮಿಕಾ ಮಂದಣ್ಣ ಇಷ್ಟ ಅನ್ನುವಂತಹ ಯಾವುದೇ ಸಂದರ್ಶನವನ್ನು ನೀಡಿಲ್ಲ ಎಂದು ಹೇಳಿದ್ದರು. ಇತ್ತ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ರಶ್ಮಿಕಾಗೆ ಕ್ರಿಕೆಟರ್ ಆರ್‌ ಚಂದ್ರು ಬಗ್ಗೆ ಕೇಳುತ್ತಿದ್ದಂತೆ ನಾಚಿ ನೀರಾಗುತ್ತಿದ್ದರು.

'ಕ್ರಶ್' ಎಂದಾಗಲೇ ನಾಚಿ ನೀರಾದ ರಶ್ಮಿಕಾ

ಇತ್ತೀಚೆಗೆ ರಶ್ಮಿಕಾ ಮಂದಣ್ಣ ಲಕ್ಮೆ ಫ್ಯಾಷನ್ ವೀಕ್‌ನಲ್ಲಿ ಭಾಗವಹಿಸಿದ್ದರು. ಸೀರೆಯುಟ್ಟು ಡ್ಯಾಶಿಂಗ್ ಲುಕ್ ಕೊಟ್ಟಿದ್ದರು. ಖುಷಿ ಖುಷಿಯಾಗಿ ನಗಾಡಿಕೊಂಡಿದ್ದ ರಶ್ಮಿಕಾ ಮಂದಣ್ಣಗೆ ಪಾಪರಾಜಿಗಳು "ನೀವು ಎಲ್ಲರ ಕ್ರಶ್ ಆಗಿಬಿಟ್ಟಿದ್ದೀರಲ್ಲ.. ಕ್ರಿಕೆಟರ್‌ಗಳಿಗೂ ಕ್ರಶ್‌ ಆಗಿಬಿಟ್ಟಿದ್ದೀರ.." ಎಂದು ಪ್ರಶ್ನೆ ಮಾಡಿದ್ದರು. ಈ ಪ್ರಶ್ನೆ ಕೇಳಿದ ಕೂಡ ರಶ್ಮಿಕಾ ಮುಖ ಅರಳಿಬಿಟ್ಟಿತ್ತು.

ಸೆಲೆಬ್ರೆಟಿ ಪಾಪರಾಜಿ ವೈರಲ್ ಭಯಾನಿ ಈ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದರು. ಅದೇ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅಂದ್ಹಾಗೆ ಶುಭ್ಮನ್ ಗಿಲ್ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ರಶ್ಮಿಕಾ ಪ್ರತಿಕ್ರಿಯೆ ನೀಡದೇ ಹೋದರೂ, ನಾಚಿಕೊಂಡಿರೋದು ಮುಖದಲ್ಲಿ ಎದ್ದು ಕಾಣುತ್ತಿತ್ತು.

ರಶ್ಮಿಕಾ ಕೈಯಲ್ಲಿ ಬಿಗ್ ಸಿನಿಮಾ

ರಶ್ಮಿಕಾ ಮಂದಣ್ಣ ನ್ಯಾಷನಲ್‌ ಲೆವೆಲ್ ಸ್ಟಾರ್ ಆಗಿ ಗುರುತಿಸಿಕೊಂಡಿದ್ದಾರೆ. ಬಾಲಿವುಡ್‌ನಲ್ಲಿ ಈಗಾಗಲೇ ಎರಡು ಸಿನಿಮಾಗಳು ರಿಲೀಸ್ ಆಗಿವೆ. ಅಮಿತಾಭ್ ಬಚ್ಚನ್ ಜೊತೆ ನಟಿಸಿದ 'ಗುಡ್‌ ಬೈ' ಸೋಲು ಕಂಡಿದ್ರೆ, ಮೊದಲ ಬಾಲಿವುಡ್ ಸಿನಿಮಾ 'ಮಿಷನ್ ಮಜ್ನು' ಓಟಿಟಿಯಲ್ಲಿ ತೆರೆಕಂಡಿತ್ತು. ಈಗ ರಣ್‌ಬೀರ್ ಕಪೂರ್ ನಟಿಸುತ್ತಿರುವ 'ಎನಿಮಲ್' ಸಿನಿಮಾಗೆ ಇವರೇ ನಾಯಕಿ. ಈ ಸಿನಿಮಾ ಮೇಲೆ ಬಾಲಿವುಡ್ ಕಣ್ಣಿಟ್ಟಿದೆ.

'ಎನಿಮಲ್' ಜೊತೆ ರಶ್ಮಿಕಾ ಮಂದಣ್ಣ ಕೈಯಲ್ಲಿ ಪ್ಯಾನ್ ಇಂಡಿಯಾ ಸಿನಿಮಾ 'ಪುಷ್ಪ 2' ಇದೆ. ಅಲ್ಲು ಅರ್ಜುನ್ ಸಿನಿಮಾದ ಶೂಟಿಂಗ್ ನಡೆಯುತ್ತಿದ್ದು, ಇದೇ ವರ್ಷ ರಿಲೀಸ್ ಆಗುವ ಸಾಧ್ಯತೆಯಿದೆ. ಸದ್ಯ ಈ ಎರಡು ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಗೆಲ್ಲುವ ನಿರೀಕ್ಷೆಯಲ್ಲಿ ರಶ್ಮಿಕಾ ಮಂದಣ್ಣ ಇದ್ದಾರೆ.

More from Filmibeat

English summary
Actress Rashmika Mandanna turned red after hearing cricketer Shubman Gill crush on her, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X