ಬಾಲಿವುಡ್‌ನ ಹಿರಿಯ ನಟಿ ರೇಖಾ 'ಸೀ ಸ್ಪ್ರಿಂಗ್ಸ್' ಬಂಗಲೆ ಸೀಲ್ ಡೌನ್

ಮುಂಬೈನ ಬಾಂದ್ರಾದಲ್ಲಿರುವ ಬಾಲಿವುಡ್‌ನ ಖ್ಯಾತ ನಟಿ ರೇಖಾ ಅವರ ಬಂಗಲೆಯನ್ನು ಸೀಲ್ ಡೌನ್ ಮಾಡಲಾಗಿದೆ. ರೇಖಾ ಅವರ ಬಂಗಲೆಯ ಕಾವಲು ಸಿಬ್ಬಂದಿಗೆ ಕೊರೊನಾ ವೈರಸ್ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಸ್ಥಳೀಯ ಆಡಳಿತ ಈ ಕ್ರಮ ತೆಗೆದುಕೊಂಡಿದೆ. ರೇಖಾ ಅವರ ಬಂಗಲೆಯ ಮುಂದೆ ನೋಟಿಸ್ ಕೂಡ ಅಂಟಿಸಲಾಗಿದೆ.

Recommended Video

ಅಭಿಮಾನಿಗೆ ಧೈರ್ಯ ತುಂಬಿದ Kiccha Sudeep | Filmibeat Kannada

ಈ ಬಗ್ಗೆ ರೇಖಾ ಅವರ ವಕ್ತಾರರಿಂದ ಅಧಿಕೃತ ಹೇಳಿಕೆ ಇನ್ನೂ ಹೊರಬಂದಿಲ್ಲ. ಆದರೆ ಅವರ ಬಂಗಲೆಯನ್ನು ಕಂಟೇನ್ಮೆಂಟ್ ವಲಯವನ್ನಾಗಿ ಮಾಡಿರುವುದನ್ನು ಸೂಚಿಸುವ ನೋಟಿಸ್ ಅನ್ನು ಹೊರಗೆ ಅಂಟಿಸಲಾಗಿದೆ. ಮುಂಬೈನ ಬಾಂದ್ರಾದಲ್ಲಿ ಬಸ್‌ಸ್ಟ್ಯಾಂಡ್ ಪ್ರದೇಶದ ಸಮೀಪದಲ್ಲಿ ರೇಖಾ ಅವರ ಬಂಗಲೆ ಇದೆ. ಇದರಿಂದ ರೇಖಾ ಅವರಿಗೂ ಕೊರೊನಾ ವೈರಸ್ ಭೀತಿ ಉಂಟಾಗಿದ್ದು, ಪ್ರಸ್ತುತ ಅವರು ಯಾವುದೇ ಆರೋಗ್ಯ ಸಮಸ್ಯೆಗಳಿಲ್ಲದೆ ಸುರಕ್ಷಿತರಾಗಿದ್ದಾರೆ. ಆದರೂ ಕೊರೊನಾ ವೈರಸ್ ಪರೀಕ್ಷೆಗೆ ಒಳಪಡುವ ಸಾಧ್ಯತೆ ಇದೆ. ಮುಂದೆ ಓದಿ...

ಇಬ್ಬರಲ್ಲಿ ಒಬ್ಬರಿಗೆ ಪಾಸಿಟಿವ್

ಇಬ್ಬರಲ್ಲಿ ಒಬ್ಬರಿಗೆ ಪಾಸಿಟಿವ್

ವರದಿಗಳ ಪ್ರಕಾರ ರೇಖಾ ಅವರ ಬಂಗಲೆಯಲ್ಲಿ ಇಬ್ಬರು ಭದ್ರತಾ ಸಿಬ್ಬಂದಿ ಇದ್ದಾರೆ. ಅವರಲ್ಲಿ ಒಬ್ಬರಿಗೆ ಕೆಲವು ದಿನಗಳ ಹಿಂದೆ ಕೊರೊನಾ ವೈರಸ್ ಪಾಸಿಟಿವ್ ಇರುವುದು ಪತ್ತೆಯಾಗಿದೆ. ಅವರನ್ನು ಮುಂಬೈನ ಬಿಕೆಸಿಯಲ್ಲಿ ಚಿಕಿತ್ಸೆಗೆ ಒಳಪಡಿಸಲಾಗಿದೆ. ಸಂಪೂರ್ಣ ಪ್ರದೇಶವನ್ನು ಮುಂಬೈ ಪಾಲಿಕೆ ಸ್ಯಾನಿಟೈಸ್ ಮಾಡಿದೆ.

ಬಾಲಿವುಡ್ ತಾರೆಯರಲ್ಲಿ ಭೀತಿ

ಬಾಲಿವುಡ್ ತಾರೆಯರಲ್ಲಿ ಭೀತಿ

ಜಾಹ್ನವಿ ಕಪೂರ್, ಅಮೀರ್ ಖಾನ್ ಮತ್ತು ಕರಣ್ ಜೋಹರ್ ಅವರ ಸಿಬ್ಬಂದಿಯಲ್ಲಿ ಕೊರೊನಾ ವೈರಸ್ ಕಂಡುಬಂದ ಕೆಲವು ದಿನಗಳಲ್ಲಿಯೇ ರೇಖಾ ಅವರ ಮನೆಯ ಸಿಬ್ಬಂದಿಯಲ್ಲಿಯೂ ಕೋವಿಡ್ ಪಾಸಿಟಿವ್ ಬಂದಿದೆ. ಇದರಿಂದ ಬಾಲಿವುಡ್‌ನ ತಾರೆಯರನ್ನೂ ಕೊರೊನಾ ಭೀತಿ ಕಾಡುತ್ತಿದೆ. ಅಮೀರ್, ಬೋನಿ ಕಪೂರ್ ಮತ್ತು ಕರಣ್ ಜೋಹರ್ ಮನೆಗಳನ್ನೂ 14 ದಿನಗಳ ಮಟ್ಟಿಗೆ ಸೀಲ್ ಡೌನ್ ಮಾಡಲಾಗಿದೆ.

ಅಮೀರ್ ಖಾನ್ ಸಿಬ್ಬಂದಿಯಲ್ಲಿ ಕೊರೊನಾ

ಅಮೀರ್ ಖಾನ್ ಸಿಬ್ಬಂದಿಯಲ್ಲಿ ಕೊರೊನಾ

ಕಳೆದ ತಿಂಗಳು ನಟ ಅಮೀರ್ ಖಾನ್ ಅವರ ಕೆಲವು ಸಿಬ್ಬಂದಿಯಲ್ಲಿ ಕೊರೊನಾ ವೈರಸ್ ಇರುವುದು ದೃಢಪಟ್ಟಿತ್ತು. ಇದರಿಂದ ಆತಂಕಕ್ಕೆ ಒಳಗಾಗಿದ್ದ ಅಮೀರ್ ಖಾನ್, ಕುಟುಂಬ ಸಮೇತ ಕೊರೊನಾ ವೈರಸ್ ತಪಾಸಣೆಗೆ ಒಳಗಾಗಿದ್ದರು. ಎಲ್ಲರಲ್ಲಿಯೂ ನೆಗೆಟಿವ್ ಬಂದಿತ್ತು. ಬಳಿಕ ಅಮ್ಮನನ್ನು ತಪಾಸಣೆಗೆ ಕರೆದೊಯ್ಯುತ್ತಿದ್ದು, ಅವರಲ್ಲಿಯೂ ನೆಗೆಟಿವ್ ಬರುವಂತೆ ಪ್ರಾರ್ಥಿಸಿ ಎಂದು ಮನವಿ ಮಾಡಿದ್ದರು. ಬಳಿಕ ಅಮ್ಮನಿಗೆ ಕೋವಿಡ್ 19 ನೆಗೆಟಿವ್ ಬಂದಿದೆ ಎಂದು ಖುಷಿ ಸಂಗತಿ ಹಂಚಿಕೊಂಡಿದ್ದರು.

ಬೋನಿ ಕಪೂರ್ ಮನೆಯಲ್ಲಿ ಪಾಸಿಟಿವ್

ಬೋನಿ ಕಪೂರ್ ಮನೆಯಲ್ಲಿ ಪಾಸಿಟಿವ್

ಅದಕ್ಕೂ ಮುನ್ನ ನಿರ್ಮಾಪಕ ಬೋನಿ ಕಪೂರ್ ಮನೆಯ ಸಹಾಯಕರೊಬ್ಬರಲ್ಲಿ ಕೊರೊನಾ ವೈರಸ್ ಕಂಡುಬಂದಿತ್ತು. ಮನೆಯಲ್ಲಿ ಉಳಿದವರೆಲ್ಲರೂ ಸುರಕ್ಷಿತರಾಗಿದ್ದಾರೆ ಎಂದು ಬೋನಿ ಕಪೂರ್ ತಿಳಿಸಿದ್ದರು. ವಿನ್ಯಾಸಗಾರ್ತಿ ಫರಾಹ್ ಅಲಿ ಅವರ ಮನೆಯ ಸಿಬ್ಬಂದಿಗೂ ಕೋವಿಡ್ 19 ಬಂದಿತ್ತು. 'ಹಾಲಿಡೇ' ಚಿತ್ರದ ನಟ ಫ್ರೆಡ್ಡಿ ದಾರೂವಾಲಾ ಅವರ ತಂದೆ, ಗಾಯಕಿ ಮೋನಿಕಾ ಡೂಗ್ರಾ ತಾಯಿ ಕೂಡ ಕೊರೊನಾ ವೈರಸ್‌ನಿಂದ ಚೇತರಿಸಿಕೊಳ್ಳುತ್ತಿದ್ದಾರೆ.

More from Filmibeat

English summary
Bollywood actress Rekha's Sea Springs bungalow has been sealed after security gaurd test positive for coronavirus.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X