Cannes 2025:ಕಾನ್ಸ್‌ನಲ್ಲಿ ಕತ್ತಲ್ಲಿ ಪಿಎಂ ಮೋದಿ ನೆಕ್ಲೆಸ್ ಧರಿಸಿ ಮಿಂಚಿದ ನಟಿ; ಏನಂತಿದ್ದಾರೆ ನೆಟ್ಟಿಗರು?

ಕಾನ್ಸ್ ಫಿಲ್ಮ್ ಫೆಸ್ಟಿವಲ್‌ 2025ನಲ್ಲಿ ವಿಶ್ವದ ಮೂಲೆ ಮೂಲೆಯಿಂದ ತಾರೆಯರು ಬಂದು ಸೇರುತ್ತಿದ್ದಾರೆ. ಪ್ರತಿಷ್ಠಿತ ಫಿಲ್ಮ್ ಫೆಸ್ಟಿವಲ್‌ನಲ್ಲಿ ಭಾರತೀಯ ಚಿತ್ರರಂಗದ ಕಲಾವಿದರು ಕೂಡ ಭಾಗವಹಿಸಿದ್ದಾರೆ. ಬಾಲಿವುಡ್ ನಟಿ ಊರ್ವಶಿ ರೌಟೇಲಾ ಸೇರಿದಂತೆ ಬೇರೆ ಬೇರೆ ಚಿತ್ರರಂಗದಿಂದ ನಟ, ನಟಿಯರು ಭಾಗವಹಿಸಿದ್ದಾರೆ. ಕನ್ನಡದಿಂದ ದಿಶಾ ಮದನ್ ಕೂಡ ಕಾನ್ಸ್‌ ಫೆಸ್ಟಿವಲ್‌ನ ರೆಡ್‌ ಕಾರ್ಪೆಟ್‌ನಲ್ಲಿ ಹೆಜ್ಜೆ ಹಾಕಿದ್ದಾರೆ. ಈಗ ಮತ್ತೊಬ್ಬ ನಟಿ ವಿಶ್ವದ ಹಾಗೂ ಭಾರತೀಯರ ಗಮನ ಸೆಳೆದಿದ್ದಾರೆ.

ರಾಜಸ್ತಾನ ಮೂಲದ ನಟಿ ರುಚಿ ಗುಜ್ಜರ್ ಕಾನ್ಸ್ ಫಿಲ್ಮ್ ಫೆಸ್ಟಿವಲ್ 2025ನಲ್ಲಿ ತಮ್ಮ ಫ್ಯಾಷನ್ ಸೆನ್ಸ್‌ನಿಂದ ಗಮನ ಸೆಳೆದಿದ್ದಾರೆ. ರಾಜಸ್ತಾನದ ಸಂಸ್ಕೃತಿಯನ್ನು ಬಿಂಬಿಸುವ ಧಿರಿಸಿನಲ್ಲಿ ಕಾನ್ಸ್‌ನ ರೆಡ್‌ ಕಾರ್ಪೆಟ್‌ ಮೇಲೆ ಹೆಜ್ಜೆ ಹಾಕಿದ್ದರು. ಈ ವೇಳೆ ಇವರ ಕಾಸ್ಟೂಮ್ ಜೊತೆಗೆ ಧರಿಸಿದ್ದ ನೆಕ್‌ಲೆಸ್ ಕೂಡ ಅಷ್ಟೇ ಗಮನ ಸೆಳೆಯಿತು. ಅದಕ್ಕೆ ಕಾರಣ ಭಾರತದ ಪ್ರಧಾನಿ ನರೇಂದ್ರ ಮೋದಿ.

Actress Ruchi Gujjar wearing PM Narendra Modi necklace at the Cannes Film Festival 2025

ಹೌದು, ನಟಿ ರುಚಿ ಗುಜ್ಜರ್ ಪ್ರಧಾನಿ ನರೇಂದ್ರ ಮೋದಿಯವರ ಭಾವ ಚಿತ್ರವಿರುವ ನೆಕ್ಸೆಸ್ ಅನ್ನು ಧರಿಸಿ ಕ್ಯಾಮರಾಗಳಿಗೆ ಪೋಸ್ ಕೊಟ್ಟಿದ್ದಾರೆ. ಈ ಮೂಲಕ ಪಿಎಂ ಮೋದಿಯ ನಾಯಕತ್ವವನ್ನು ಮೆಚ್ಚಿಕೊಂಡಿದ್ದಾರೆ. ಸದ್ಯ ರುಚಿ ಗುಜ್ಜರ್ ಈಗ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದಾರೆ. ಮೋದಿಯ ನೆಕ್ಸೆಸ್ ಧರಿಸಿ ಕಾನ್ಸ್ ಫೆಸ್ಟಿವಲ್‌ನಲ್ಲಿ ಭಾಗವಹಿಸಿದ್ದಕ್ಕೆ ಭಿನ್ನ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ಕಾನ್ಸ್‌ ಫೆಸ್ಟಿವಲ್‌ನಲ್ಲಿ ತನ್ನ ಕಾಸ್ಟ್ಯೂಮ್ ಹಾಗೂ ನೆಕ್ಲೆಸ್ ಬಗ್ಗೆ ನಟಿ ರುಚಿ ಗುಜ್ಜರ್ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರವಿರುವ ನೆಕ್ಸೆಸ್ ಅನ್ನು ಧರಿಸಿದ್ದು ಏಕೆ? ಉದ್ದೇಶ ಏನಿತ್ತು? ಎನ್ನುವುದನ್ನು ಹೇಳಿಕೊಂಡಿದ್ದಾರೆ. ಇವರ ಕೊಟ್ಟ ಪ್ರತಿಕ್ರಿಯೆ ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅದೇ ಮತ್ತೆ ಕೆಲವರು ನೆಗೆಟಿವ್ ಪ್ರತಿಕ್ರಿಯೆ ನೀಡಿದ್ದಾರೆ.

"ಈ ನೆಕ್ಲೆಸ್ ಜ್ಯುವೆಲರಿ ಎನ್ನುವುದಕ್ಕಿಂತ ಹೆಚ್ಚಾಗಿ ಬಲದ ಸಂಕೇತ, ಗುರಿ ಹಾಗೂ ವಿಶ್ವ ಮಟ್ಟದಲ್ಲಿ ಭಾರತ ಬೆಳವಣೆಯಾಗುತ್ತಿರುವುದರ ಸಂಕೇತ. ಕಾನ್ಸ್‌ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ನಾನು ಈ ನೆಕ್ಸೆಸ್ ಅನ್ನು ಧರಿಸಿ ಬಂದಿದ್ದೇನೆ. ಈ ಮೂಲಕ ಪ್ರಧಾನಿ ನರೇಂದ್ರ ಮೋದಿಯವರಿಗೆ ಗೌರವ ಸೂಚಿಸುತ್ತಿದ್ದೇನೆ. ಅವರ ನಾಯಕತ್ವದಿಂದ ಭಾರತವನ್ನು ಇನ್ನೊಂದು ಎತ್ತರಕ್ಕೆ ಕೊಂಡೊಯ್ಯುತ್ತದೆ" ಎಂದು ನಟಿ ರಚಿ ಗುಜ್ಜರ್ ಪ್ರತಿಕ್ರಿಯೆ ನೀಡಿದ್ದಾರೆ.

ಇನ್ನು ರುಚಿ ಗುಜ್ಜರ್ ಧರಿಸಿದ್ದ ಕಾಸ್ಟ್ಯೂಮ್‌ ಕಡೆ ಬರೋದಾರೆ, ರಾಜಸ್ತಾನಿ ಟ್ರೆಡಿಷನಲ್ ಸ್ಟೈಲ್‌ನಲ್ಲಿ ಈ ಧಿರಿಸು ಇತ್ತು. ಪ್ರಧಾನಿ ನರೇಂದ್ರ ಮೋದಿಯ ಸ್ಟೈಲ್‌ನಿಂದ ಪ್ರೇರಣೆ ಹೊಂದಿದ್ದು, ಕಾನ್ಸ್ ರೆಡ್‌ ಕಾರ್ಪೆಟ್ ಮೇಲೆ ಸಂಸ್ಕೃತಿ ಹಾಗೂ ಭಾವನಾತ್ಮಕ ಸಂದೇಶವನ್ನು ಸಾರಲಾಗಿದೆ. ಡಿಸೈನರ್ ರೂಪಾ ಶರ್ಮಾ ವಿನ್ಯಾಸಗೊಳಿಸಿದ ಬಂಗಾರದ ಬಣ್ಣದ ಲೆಹೆಂಗಾ ಮೇಲೆ ಮಿರರ್ ವರ್ಕ್, ಕಸೂತಿ ಜಗತ್ತಿನ ಗಮನವನ್ನು ಸೆಳೆದಿತ್ತು. ಇದು ರಾಜಸ್ತಾನದ ಜೈಪುರದ ಕಲೆಯನ್ನು ಪ್ರದರ್ಶಿಸಲಾಯ್ತು.

ರುಚಿ ಗುಜ್ಜರ್ ಕಾಸ್ಟ್ಯೂಮ್ ಗಮನ ಸೆಳೆದಿದ್ದರೂ, ಪ್ರಧಾನಿ ನರೇಂದ್ರ ಮೋದಿಯ ನೆಕ್ಲೆಸ್ ಹೆಚ್ಚು ಗಮನ ಸೆಳೆದಿದೆ. ಇದೇ ವೇಳೆ ಪ್ರಧಾನಿ ಮೋದಿ ಬಗ್ಗೆನೂ ನಟಿ ರುಚಿ ಗುಜ್ಜರ್ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. "ಜಗತ್ತಿನ ಮುಂದೆ ಪ್ರಧಾನಿ ನರೇಂದ್ರ ಮೋಡಿ ಭಾರತದ ಹೆಸರನ್ನು ಪುನರ್ ವ್ಯಾಖ್ಯಾನ ಮಾಡಿದ್ದಾರೆ. ನಾನು ಗೌರವವನ್ನು ನನ್ನೊಂದಿಗೆ ತೆಗೆದುಕೊಂಡು ಬರಬೇಕೆಂದು ಬಯಸಿದ್ದೆ. ಈ ನೆಕ್ಲೆಸ್ ಅವರ ನಾಯಕತ್ವಕ್ಕೆ ಗೌರವ ಕೊಟ್ಟಂತೆ. ಕಾನ್ಸ್‌ನಲ್ಲಿ ಭಾರತ ಹಾಗೂ ರಾಜಸ್ತಾನವನ್ನು ಪ್ರತಿನಿಧಿಸಿದ್ದು ನನಗೆ ಕೇವಲ ಒಂದು ಕ್ಷಣವಲ್ಲ. ಅದು ನಾವು ಎನ್ನುವುದಕ್ಕೆ ಪ್ರಪಂಚಕ್ಕೆ ಸಾರಿದ ಹೇಳಿದ ಸಂದೇಶ" ಎಂದು ನಟಿ ರುಚಿ ಗುಜ್ಜರ್ ಹೇಳಿದ್ದಾರೆ.

More from Filmibeat

English summary
Actress Ruchi Gujjar wearing PM Narendra Modi necklace at the Cannes Film Festival 2025.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X