'ರಾಮಾಯಣ'ದಲ್ಲಿ ರಾವಣನಿಗೆ ಪತ್ನಿ ಸಿಕ್ಕಿದ್ಲು; ಮಂಡೋದರಿ ಪಾತ್ರದಲ್ಲಿ ಯಶ್ ಜೊತೆ ನಟಿಸಿದೋ ಇವ್ರೇನಾ?

ಬಾಲಿವುಡ್‌ನ ಬಹು ನಿರೀಕ್ಷಿತ ಸಿನಿಮಾ 'ರಾಮಾಯಣ'. ಈ ಸಿನಿಮಾ ಸೆಟ್ಟೇರುವುದಕ್ಕೂ ಮುನ್ನವೇ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿದೆ. ಕೇವಲ ಸ್ಟಾರ್‌ಕಾಸ್ಟ್‌ನಿಂದಲೇ ಭಾರತದಾದ್ಯಂತ ಹಲ್‌ಚಲ್ ಎಬ್ಬಿಸಿದೆ. ಅದಕ್ಕೆ ಕಾರಣ ರಾಕಿಂಗ್‌ ಸ್ಟಾರ್ ಯಶ್ ಕೂಡ ಈ ಸಿನಿಮಾದಲ್ಲಿ ನಟಿಸುತ್ತಾರೆಂಬ ಸುದ್ದಿ. ಕಳೆದ ಕೆಲವು ದಿನಗಳಿಂದ ಈ ಸುದ್ದಿ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದೆ.

ಈಗಾಗಲೇ 'ರಾಮಾಯಣ' ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸಲಿರುವ ಸ್ಟಾರ್‌ಗಳ ಹೆಸರು ಓಡಾಡುತ್ತಿದೆ. ರಾಣ್‌ಬೀರ್ ಕಪೂರ್, ಸಾಯಿ ಪಲ್ಲವಿ, ಯಶ್ ಹಾಗೂ ಸನ್ನಿ ಡಿಯೋಲ್ ಹೆಸರುಗಳು ಈಗಾಗಲೇ ಕೇಳಿ ಬಂದಿವೆ. ರಾಮನ ಪಾತ್ರದಲ್ಲಿ ರಣ್‌ಬೀರ್ ಕಪೂರ್, ರಾವಣನಾಗಿ ಯಶ್, ಸೀತೆಯ ಪಾತ್ರದಲ್ಲಿ ಸಾಯಿ ಪಲ್ಲವಿ ಹಾಗೂ ಹನುಮಂತನಾಗಿ ಸನ್ನಿ ಡಿಯೋಲ್ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆಂಬ ಸುದ್ದಿ ಓಡಾಡುತ್ತಿದೆ.

Actress Sakshi Tanwar joins the Ramayana team will be seen as Ravan Wife Mandodari with Yash

ಈ ಮಧ್ಯೆ ಫಿಲ್ಮಿಬೀಟ್ ಇಂಗ್ಲಿಷ್‌ಗೆ ಎಕ್ಸ್‌ಕ್ಲೂಸಿವ್ ಸುದ್ದಿಯೊಂದು ಸಿಕ್ಕಿದೆ. ಇದು ಮತ್ತಷ್ಟು ಸಂಚಲನ ಸೃಷ್ಟಿಸುತ್ತಿದೆ. 'ರಾಮಾಯಣ' ತಂಡಕ್ಕೆ ಮತ್ತೊಬ್ಬ ಬಾಲಿವುಡ್ ನಟಿ ಸೇರಿಕೊಂಡಿದ್ದಾರೆ. ಒಂದು ಕಾಲದ ಕಿರುತೆರೆಯ ಲೇಡಿ ಸೂಪರ್‌ಸ್ಟಾರ್ ಆಗಿ ಮೆರೆದಿದ್ದ ನಟಿಯನ್ನು ಚಿತ್ರತಂಡ ಪ್ರಮುಖ ಪಾತ್ರವೊಂದಕ್ಕೆ ಕರೆತಂದಿದೆ ಅನ್ನೋ ವಿಷಯ ಹೊರಬಿದ್ದಿದೆ. ಹಾಗಿದ್ದರೆ, ಆ ನಟಿ ಯಾರು? ಪಾತ್ರ ಯಾವುದು? ಯಶ್ ಜೊತೆ ಕಾಣಿಸಿಕೊಳ್ಳುತ್ತಾರಾ? ಅನ್ನುವುದನ್ನು ತಿಳಿಯಲು ಮುಂದೆ ಓದಿ.

'ರಾಮಾಯಣ' ಚಿತ್ರತಂಡದ ಮೂಲಗಳ ಕೊಟ್ಟಿರುವ ಮಾಹಿತಿ ಪ್ರಕಾರ, ಬಾಲಿವುಡ್ ನಟಿ ಸಾಕ್ಷಿ ತನ್ವರ್ ಅನ್ನು ಪ್ರಮುಖ ಪಾತ್ರವೊಂದಕ್ಕೆ ಕರೆದುಕೊಂಡಿ ಬಂದಿದೆ. 'ರಾಮಾಯಣ'ದಲ್ಲಿ ಈ ನಟಿ ರಾವಣನ ಪತ್ನಿ ಮಂಡೋದರಿಯಾಗಿ ನಟಿಸುತ್ತಿದ್ದಾರೆ. ನಿರ್ದೇಶಕ ನಿತೇಶ್ ತಿವಾರಿ ಈಗಾಗಲೇ ಸ್ಟಾರ್‌ಕಾಸ್ಟ್ ಅನ್ನು ಆಯ್ಕೆ ಮಾಡಿಟ್ಟಿಕೊಂಡಿದ್ದಾರೆ ಎಂದು ಮೂಲಗಳು ಫಿಲ್ಮಿಬೀಟ್‌ಗೆ ತಿಳಿಸಿವೆ.

"ನಿತೀಶ್ ತಿವಾರಿ ಈಗಾಗಲೇ ಪಾತ್ರಗಳಿಗೆ ಬೇಕಿರೋ ಪರ್ಫೆಕ್ಟ್ ಸ್ಟಾರ್‌ಕಾಸ್ಟ್ ಅನ್ನು ರೆಡಿ ಮಾಡಿಟ್ಟುಕೊಂಡಿದ್ದಾರೆ. ಸಾಕ್ಷಿ ತನ್ವರ್ ಅವರನ್ನು ರಾವಣನ ಪತ್ನಿ ಮಂಡೋದರಿ ಪಾತ್ರಕ್ಕೆ ಫೈನಲ್ ಮಾಡಲಾಗಿದೆ. ಈ ನಟಿ ಸದ್ಯ ಚಿತ್ರತಂಡದೊಂದಿಗೆ ಸ್ಕ್ರಿಪ್ಟ್ ರೀಡಿಂಗ್ ಸೆಷನ್ಸ್‌ನಲ್ಲಿ ಭಾಗಿಯಾಗುತ್ತಿದ್ದಾರೆ. ಕೆಜಿಎಫ್ ಸ್ಟಾರ್ ಯಶ್ ಜೊತೆ ಸ್ಕ್ರೀನ್ ಶೇರ್ ಮಾಡಿಕೊಳ್ಳಲು ಎದುರು ನೋಡುತ್ತಿದ್ದಾರೆ" ಎಂದು ಮೂಲಗಳು ಹೇಳಿವೆ.

Actress Sakshi Tanwar joins the Ramayana team will be seen as Ravan Wife Mandodari with Yash

'ರಾಮಾಯಣ' ಚಿತ್ರತಂಡದ ಮೂಲಗಳೇ ರಿವೀಲ್ ಮಾಡಿರುವುದರಿಂದ ಇಂತಹದ್ದೊಂದು ಕಾಂಬಿನೇಷನ್ ಬರುವ ಸಾಧ್ಯತೆಯನ್ನೀಗ ತಳ್ಳಿ ಹಾಕುವಂತಿಲ್ಲ. ಒಂದು ವೇಳೆ ಯಶ್ ಈ ಸಿನಿಮಾದಲ್ಲಿ ರಾವಣನ ಪಾತ್ರದಲ್ಲಿ ನಟಿಸುವುದೇ ಆಗಿದ್ದಲ್ಲಿ, ಸಾಕ್ಷಿ ತನ್ವರ್ ತೆರೆಮೇಲೆ ಯಶ್‌ಗಿಂತ ಹಿರಿಯಳಾಗಿ ಕಾಣಿಸಿಕೊಳ್ಳಬಹುದು. ಹೀಗಾಗಿ ರಾಕಿ ಭಾಯ್ ಫ್ಯಾನ್ಸ್ ಗೊಂದಲಕ್ಕೆ ಬೀಳುವುದು ಗ್ಯಾರಂಟಿ. ಆದರೆ, ಸಾಕ್ಷಿ ತನ್ವರ್ ಬಾಲಿವುಡ್‌ನ ಅತ್ಯುತ್ತಮ ನಟಿಯರಲ್ಲಿ ಒಬ್ಬರು. ಹೀಗಾಗಿ ನಿರ್ದೇಶಕ ಆಯ್ಕೆ ಮಾಡಿರುವ ಸಾಧ್ಯತೆನೂ ಇದೆ.

ಸಾಕ್ಷಿ ತನ್ವರ್ ಬಾಲಿವುಡ್‌ನ ಜನಪ್ರಿಯ ನಟಿ. ಕಿರುತೆರೆ ಲೋಕದಲ್ಲಿ ತನ್ನದೇ ಸಾಮ್ರಾಜ್ಯ ಕಟ್ಟಿಕೊಂಡಿದ್ದರು. ಹಿಂದಿ ಧಾರಾವಾಹಿ ವೀಕ್ಷಿಸುವ ಪ್ರತಿಯೊಂದು ಮನೆಗೂ ಸಾಕ್ಷಿಯ ಪರಿಚಯವಿದೆ. ಏಕ್ತಾ ಕಪೂರ್ ನಿರ್ಮಾಣದ 'ಕಹಾನಿ ಘರ್ ಘರ್ ಕೀ', 'ಬಡೆ ಅಚ್ಚೇ ಲಗ್ತೆ ಹೇ' ಧಾರಾವಾಹಿಗಳಲ್ಲಿ ಈಕೆಯನ್ನು ಕಿರುತೆರೆಯ ಸ್ಟಾರ್ ಆಗಿ ಮಾಡಿತ್ತು. ಆ ಬಳಿಕ ಕಿರುತೆರೆ ಬ್ರೇಕ್ ಕೊಟ್ಟು ಸಿನಿಮಾದಲ್ಲಿ ನಟಿಸಿದ್ದರು. ಆಮಿರ್ ಖಾನ್ ನಟಿಸಿದ 'ದಂಗಲ್'ನಲ್ಲಿ ಆಮಿರ್ ಪತ್ನಿಯಾಗಿ ನಟಿಸಿದ್ದರು. ಬಳಿಕ ಅಕ್ಷಯ್ ಕುಮಾರ್ ನಟಿಸಿದ 'ಸಾಮ್ರಾಟ್ ಪೃಥ್ವಿರಾಜ್', 'ಮಿಷನ್ ಓವರ್ ಮಾರ್ಸ್' ಅಂತಹ ಸಿನಿಮಾಗಳಲ್ಲಿ ನಟಿಸಿ ಗೆದ್ದಿದ್ದಾರೆ.

ಇನ್ನು ಸಾಕ್ಷಿ ತನ್ವರ್ ಜೊತೆಗೆ ಬಾಲಿವುಡ್‌ನ ಇನ್ನಿಬ್ಬರು ನಟಿಯರು ಆಯ್ಕೆ ಆಗಿರುವ ಬಗ್ಗೆ ಮೂಲಗಳು ಸುಳಿವು ಬಿಟ್ಟಿಕೊಟ್ಟಿವೆ. ಬಾಲಿವುಡ್ ನಟಿಯರಾದ ಲಾರಾ ದತ್ತ ಹಾಗೂ ರಕುಲ್ ಪ್ರೀತ್ ಸಿಂಗ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರಂತೆ. ಇವರು ಕೈಕೇಯಿ ಹಾಗೂ ಶೂರ್ಪಣಕಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಅನ್ನೋ ಮಾತು ಕೇಳೀ ಬರುತ್ತಿದೆ. ಇವೆಲ್ಲ ಏನೇ ಸುದ್ದಿಯಿದ್ದರೂ, ಚಿತ್ರತಂಡ ಈ ಬಗ್ಗೆ ಇನ್ನೂ ಅಧಿಕೃತವಾಗಿ ಮಾಹಿತಿಯನ್ನು ಹೊರಹಾಕಿಲ್ಲ.

More from Filmibeat

English summary
Actress Sakshi Tanwar will be seen as Ravan wife in Ramayana with Yash:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X