ಐಶ್ವರ್ಯಾ ರೈ ಬಳಿ ಕ್ಷಮೆ ಕೇಳಿದ್ದ ತದ್ರೂಪಿ ಸ್ನೇಹಾ ಉಲ್ಲಾಳ್; ಆ ವೇಳೆ ಮಾಜಿ ವಿಶ್ವ ಸುಂದರಿಯ ಪ್ರತಿಕ್ರಿಯೆ ಏನಿತ್ತು?
ಬಾಲಿವುಡ್ ಕೆಲವು ವಿಚಿತ್ರ ಘಟನೆಗಳಿಗೆ ಸಾಕ್ಷಿಯಾಗಿದೆ. ಅದರಲ್ಲೂ ಐಶ್ವರ್ಯಾ ರೈ ಹಾಗೂ ಸಲ್ಮಾನ್ ಖಾನ್ ವಿಷಯದಲ್ಲಿ ಕೊಂಚ ವಿಭಿನ್ನ ಅನ್ನಬಹುದು. ಸಲ್ಮಾನ್ ಖಾನ್ ಹಾಗೂ ಐಶ್ವರ್ಯಾ ರೈ ಇಬ್ಬರೂ ಡೇಟಿಂಗ್ ಮಾಡುತ್ತಿದ್ದಿದ್ದು ಹೊಸ ವಿಷಯವೇನಲ್ಲ. ಅದು ಬ್ರೇಕಪ್ ಆಗಿದ್ಯಾಕೆ ಅನ್ನೋದು ಕೂಡ ಈಗ ತೀರಾ ಹಳೆಯ ವಿಷಯ. ಆದರೆ, ಬ್ರೇಕಪ್ ಬಳಿಕ ಬಾಲಿವುಡ್‌ನಲ್ಲಿ ಕೆಲವು ಘಟನೆಗಳು ನಡೆದಿವೆ.
ಅದರಲ್ಲೊಂದು, ಬಾಲಿವುಡ್‌ಗೆ ಸ್ನೇಹಾ ಉಲ್ಲಾಳ್ ಅನ್ನೋ ನಟಿಯ ಎಂಟ್ರಿ. ಐಶ್ವರ್ಯಾ ರೈ ಜೊತೆ ಬ್ರೇಕಪ್ ಮಾಡಿಕೊಂಡ ಮೇಲೆ ಅವರ ಮೇಲಿನ ಸಿಟ್ಟಿಗೆ ಸ್ನೇಹಾ ಉಲ್ಲಾಳ್‌ರನ್ನು ಕರೆದುಕೊಂಡು ಬಂದಿದ್ದರು. ನೋಡುವುದಕ್ಕೆ ಥೇಟ್ ಐಶ್ವರ್ಯಾ ರೈ ಹಾಗೇ ಇದ್ದ ಸ್ನೇಹಾ ಉಲ್ಲಾಳ್‌ರನ್ನು ನೋಡಿ ಇಡೀ ಬಾಲಿವುಡ್ ಒಮ್ಮೆ ಬೆಚ್ಚಿ ಬಿದ್ದಿತ್ತು. ಆ ವೇಳೆ ತನ್ನದೇ ತದ್ರೂಪಿಯನ್ನು ನೋಡಿ ಐಶ್ವರ್ಯಾ ರೈಗೆ ಹೇಗಾಗಿರಬೇಡಾ?

ಈ ಪ್ರಶ್ನೆ ಸಿನಿಮಾ ಪ್ರೇಮಿಗಳನ್ನು ಕಾಡಿರಲಿಕ್ಕೂ ಸಾಧ್ಯವಿದೆ. ಆದೇ ಒಂದು ವೇಳೆ ಐಶ್ವರ್ಯಾ ರೈ ಹಾಗೂ ಸ್ನೇಹಾ ಉಲ್ಲಾಳ್ ಇಬ್ಬರೂ ಮುಖಾಮುಖಿಯಾಗಿದ್ದರೆ ಇಬ್ಬರು ಹೇಗೆ ಪ್ರತಿಕ್ರಿಯೆ ನೀಡಿರಬಹುದು? ಈ ಪ್ರಶ್ನೆ ಮೂಡುವುದು ಸಹಜ. ಆದರೆ, ಇಂತಹದ್ದೊಂದು ಸಂದರ್ಭ ಸ್ನೇಹಾ ಉಲ್ಲಾಳ್‌ಗೆ ಬಂದಿತ್ತು. ಮೊದಲ ಬಾರಿಗೆ ಮಾತಾಡಿಸಿದಾಗ ಐಶ್ವರ್ಯಾ ಪ್ರತಿಕ್ರಿಯೆ ಹೇಗಿತ್ತು? ಅನ್ನೋದನ್ನು ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ.
ಐಶ್ವರ್ಯಾ ರೈ ಜೊತೆಗಿನ ಬ್ರೇಕಪ್ ಬಳಿಕ ಸಲ್ಮಾನ್ ಖಾನ್ 'ಲಕ್ಕಿ:ನೋ ಟೈಮ್ ಫಾರ್ ಲವ್' ಸಿನಿಮಾ ಶುರು ಮಾಡಿದ್ದರು. ಈ ಸಿನಿಮಾಗೆ ನಾಯಕಿಯ ಹುಡುಕಾಟದಲ್ಲಿ ಇದ್ದರು. ಈ ವೇಳೆ ಸ್ನೇಹಾ ಉಲ್ಲಾಳ್ ಇನ್ನೂ ಕಾಲೇಜಿನಲ್ಲಿ ಓದುತ್ತಿದ್ದರು. ಅದೇ ಕಾಲೇಜಿನಲ್ಲಿ ಸಲ್ಮಾನ್ ಖಾನ್ ಸಹೋದರಿ ಅರ್ಪಿತಾ ಅವರ ಸ್ನೇಹಿತರು ಇದ್ದರು. ಅವರು ಸ್ನೇಹಾ ಉಲ್ಲಾಳ್‌ರನ್ನು ಗುರುತಿಸಿ, ಸಲ್ಮಾನ್ ಖಾನ್‌ಗೆ ಹೇಳಿದಾಗ 'ಲಕ್ಕಿ' ಸಿನಿಮಾದಲ್ಲಿ ನಟಿಸೋ ಅವಕಾಶ ಸಿಕ್ಕಿತು ಎಂದು ಹೇಳಿಕೊಂಡಿದ್ದಾರೆ. ಈ ವೇಳೆ ಸಲ್ಮಾನ್ ಖಾನ್ ಜೊತೆ ನಟಿಸಿದ ಅನುಭವ ಹಾಗೂ ಐಶ್ವರ್ಯಾ ರೈ ಮೊದಲ ಭೇಟಿಯ ಬಗ್ಗೆ ಮಾತಾಡಿದ್ದಾರೆ.
ಆಲ್ಫಾನಿಯಾನ್ ಸ್ಟುಡಿಯೋಜ್ ನೀಡಿದ್ದ ಸಂದರ್ಶನದಲ್ಲಿ ಐಶ್ವರ್ಯಾ ರೈ ಜೊತೆಗಿನ ಭೇಟಿಯ ಬಗ್ಗೆ ಮಾತಾಡಿದ್ದಾರೆ. ಐಶ್ವರ್ಯಾ ರೈ ಅವರನ್ನು ಭೇಟಿಯಾಗುತ್ತಿದ್ದಂತೆ ಮಧ್ಯಮದವರು ತಮ್ಮನ್ನು 'ದೇವದಾಸ್' ಎಂದು ಹೋಲಿಕೆ ಮಾಡಿದ್ದಕ್ಕೆ ಕ್ಷಮೆ ಕೇಳಿದ್ದಾಗಿ ಈ ಸಂದರ್ಶದಲ್ಲಿ ಸ್ನೇಹಾ ಉಲ್ಲಾಳ್ ಹೇಳಿಕೊಂಡಿದ್ದಾರೆ.

ಮೊದಲ ಭೇಟಿಯ ವೇಳೆ ಐಶ್ವರ್ಯಾ ರೈ ಪ್ರತಿಕ್ರಿಯೆ ಹೇಗಿತ್ತು? ಅನ್ನೋದನ್ನು ವಿವರಿಸಿದ್ದಾರೆ. "ನಾನು ಐಶ್ವರ್ಯಾ ರೈ ಅವರನ್ನು ಭೇಟಿ ಮಾಡಿದಾಗ, ಅವರು ಈ ಫ್ಯಾಮಿಲಿಗೆ ಸ್ವಾಗತ.. ಬಾಲಿವುಡ್‌ಗೆ ಸ್ವಾಗತ ಎಂದು ಹೇಳಿದ್ದರು. ಆಗ ನಾನು ದಯವಿಟ್ಟು ನನ್ನನ್ನು ಕ್ಷಮಿಸಿ, ನನ್ನನ್ನು ದ್ವೇಷ ಮಾಡಬೇಡಿ ಎಂದು ಹೇಳಿದ್ದೆ. ಆ ಸಮಯದಲ್ಲಿ ನಮ್ಮಿಬ್ಬರನ್ನು ಮಾಧ್ಯಮಗಳು ತುಂಬಾನೇ ಹೋಲಿಕೆ ಮಾಡುತ್ತಿದ್ದವು. ಇದನ್ನು ಹೇಗೆ ತೆಗೆದುಕೊಂಡಿದ್ದಾರೆ ಅನ್ನೋದು ನನಗೆ ಗೊತ್ತಿಲ್ಲ" ಎಂದು ಸ್ನೇಹಾ ಉಲ್ಲಾಳ್ ಹೇಳಿದ್ದಾರೆ.
ಇದ ವೇಳೆ ಸಲ್ಮಾನ್ ಖಾನ್ ಜೊತೆಗೆ ನಟಿಸಿದ ಅನುಭವವನ್ನೂ ಹಂಚಿಕೊಂಡಿದ್ದಾರೆ. "ಲಕ್ಕಿ ಸಿನಿಮಾದ ಸಮಯದಲ್ಲಿ ಅವರು ನನಗೆ ತುಂಬಾನೇ ಸಪೋರ್ಟ್ ಮಾಡಿದ್ದಾರೆ. ಯಾವತ್ತೂ ಅವರು ಕಿರಿಕಿರಿ ಮಾಡಿಕೊಂಡಿಲ್ಲ. ನನ್ನ ಜೊತೆ ತುಂಬಾನೇ ತಾಳ್ಮೆಯಿಂದ ಇದ್ದರು. ತುಂಬಾನೇ ಸಪೋರ್ಟ್ ಮಾಡುತ್ತಿದ್ದರು. ಅವರು ಸಲ್ಮಾನ್ ಖಾನ್ ಯಾವತ್ತೂ ಜನರು ಅಂದುಕೊಂಡಿರೋ ಅವರ ಆಟಿಟ್ಯೂಡ್ ಅನ್ನು ತೋರಿಸಲಿಲ್ಲ." ಎಂದು ನಟಿ ಸ್ನೇಹಾ ಉಲ್ಲಾಳ್ ಹೇಳಿದ್ದಾರೆ.


Click it and Unblock the Notifications















