ಕಾನ್ಸ್ ನಲ್ಲಿ ಐಶ್ವರ್ಯ ರೈ'ಗೆ ಹೋಲಿಸಿದ್ದಕ್ಕೆ ಸೋನಮ್ ಕಪೂರ್ ಗರಂ
ನಟ ಅನಿಲ್ ಕಪೂರ್ ಮಗಳು ಎಂಬುದನ್ನೂ ಹೊರತುಪಡಿಸಿಯೂ ಬಾಲಿವುಡ್ ಅಂಗಳದಲ್ಲಿ ತಮ್ಮ ಛಾಪನ್ನು ಮೂಡಿಸಿದವರು ನಟಿ ಸೋನಮ್ ಕಪೂರ್. ಅಲ್ಲದೇ ಸಿನಿಮಾ ಕ್ಷೇತ್ರದಲ್ಲಿ ತಮ್ಮದೇ ಆದ ಫ್ಯಾಶನ್ ನಿಂದ ಗುರುತಿಸಿಕೊಂಡವರು.[ರಾಷ್ಟ್ರ ಪ್ರಶಸ್ತಿ ಪಡೆದ 'ರುಸ್ತುಂ' ಮತ್ತು 'ನೀರ್ಜಾ'ಳ ಅಸಲಿ ಕಥೆ ಇಲ್ಲಿದೆ..]
ನಟಿ ಸೋನಮ್ ಕಪೂರ್ ಫ್ರಾಂನ್ಸ್ ನಲ್ಲಿ ನಡೆಯುವ ಕಾನ್ಸ್ ಚಲನಚಿತ್ರೋತ್ಸವದಲ್ಲಿ ಹಲವು ವರ್ಷಗಳಿಂದ ಪಾಲ್ಗೊಳ್ಳುತ್ತಿದ್ದಾರೆ. ಇದರಲ್ಲಿ ಏನು ವಿಶೇಷತೆ ಅಂದ್ರೆ ಸೋನಮ್ ಕಪೂರ್ ಭಾಗವಹಿಸಿದ ಪ್ರತಿ ವರ್ಷದ ಕಾನ್ಸ್ ಫಿಲ್ಮ್ ಫೆಸ್ಟಿವಲ್ ನಲ್ಲಿಯೂ ಅವರನ್ನು ಮಾಧ್ಯಮದವರು ಐಶ್ವರ್ಯ ರೈ ಬಚ್ಚನ್ ಗೆ ಹೋಲಿಸುತ್ತಾರಂತೆ. ಇದರಿಂದ ಬೇಸರಗೊಂಡ ಸೋನಮ್ ಕಪೂರ್ ಪ್ರಸ್ತುತ ನಡೆಯುತ್ತಿರುವ 70 ನೇ ವಾರ್ಷಿಕ ಕಾನ್ಸ್ ಚಲನಚಿತ್ರೋತ್ಸವದಲ್ಲಿ ಗರಂ ಆಗಿದ್ದಾರಂತೆ. ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ ಬಚ್ಚನ್ ಗೆ ಹೋಲಿಸಿದ್ದಕ್ಕೆ ಸೋನಮ್ ಕಪೂರ್ ಕೋಪಗೊಂಡು ಹೇಳಿದ್ದಾದರೂ ಏನು ಗೊತ್ತಾ?

ಈ ರೀತಿ ಅಲೋಚನೆ ನನ್ನಲ್ಲಿಲ್ಲ..
ಸೋನಮ್ ಕಪೂರ್ ಇಂಡಿಯನ್ ಎಕ್ಸ್‌ಪ್ರೆಸ್ ಗೆ ನೀಡಿದ ಸಂದರ್ಶನದಲ್ಲಿ, " ಈ ಹೋಲಿಕೆಗಳ ಬಗ್ಗೆ ಯಾವ ಅಲೋಚನೆಯು ನನ್ನ ತಲೆಯಲ್ಲಿಲ್ಲ. ಆದರೆ ಇದೆಲ್ಲವನ್ನು ಮಾಡ್ತಿರೋದು ಮಾಧ್ಯಮಗಳು" ಎಂದು ಹೇಳಿದ್ದಾರೆ.

ಹೋಲಿಕೆ ಎಂಬುದು ಇಷ್ಟವಿಲ್ಲ
"ಮಾಧ್ಯಮಗಳು ತಾವು ಮಾಡುತ್ತಿರುವ ಹೋಲಿಕೆ ಸರಿಯೋ ಅಥವಾ ತಪ್ಪೋ ಎಂಬುದನ್ನು ಅವರೇ ತೀರ್ಮಾನಿಸಬೇಕು. ಕಾರಣ ಈ ಹೋಲಿಕೆ ಎಂಬುದು ಆಚರಣೆಯ ಖುಷಿಯಲ್ಲಿರುವ ಒಬ್ಬ ಮಹಿಳೆ ವಿರುದ್ಧ ಇತರರನ್ನು ಎತ್ತಿಕಟ್ಟಿದ ಹಾಗೆ" - ಸೋನಮ್ ಕಪೂರ್, ಬಾಲಿವುಡ್ ನಟಿ

ಇದೊಂದು ಮೂರ್ಖತನ
"ನನ್ನನ್ನು ಮಾತ್ರವಲ್ಲ, ಇತರೆ ಯಾರೊಂದಿಗೂ ಯಾರನ್ನೇ ಹೋಲಿಕೆ ಮಾಡಿದರೂ ನಾನು ಈ ಕಲ್ಚರ್ ಪರಿಗಣಿಸುವುದಿಲ್ಲ. ಇದನ್ನೂ ಮೂರ್ಖತನ ಎಂದು ಹೇಳುತ್ತೇನೆ. ಅಲ್ಲದೇ ಅದರಲ್ಲಿ ನಾನು ಪಾಲ್ಗೊಳ್ಳುವುದಿಲ್ಲ" -ಸೋನಮ್ ಕಪೂರ್, ಬಾಲಿವುಡ್ ನಟಿ.

ದೀಪಿಕಾ ಪಡುಕೋಣೆ ಬಗ್ಗೆ ಸೋನಮ್ ಮೆಚ್ಚುಗೆ
ಸಂದರ್ಶನದ ವೇಳೆ ಮಾತು ಮುಂದುವರೆಸಿ ಸೋನಮ್ ಕಪೂರ್ ರವರು ದೀಪಿಕಾ ಪಡುಕೋಣೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, "ದೀಪಿಕಾ ಪಡುಕೋಣೆ ತಮ್ಮ ಎಲ್ಲಾ ನೋಟದಿಂದಲೂ ಅದ್ಭುತವಾಗಿ ಕಾಣುತ್ತಿದ್ದರು. ಅಲ್ಲದೇ ಹೆಚ್ಚು ಸಂತೋಷವಾಗಿದ್ದರು" ಎಂದು ಹೇಳಿದ್ದಾರೆ.

ಕಾನ್ಸ್ ನಲ್ಲಿ ಜನರು ನನ್ನನ್ನು ಸೆಲೆಬ್ರೇಟ್ ಮಾಡಿದ್ದಾರೆ
"ಕಾನ್ಸ್ ಚಲನಚಿತ್ರೋತ್ಸವದಲ್ಲಿ ನೆರೆದಿದ್ದವರು ನಾನು ಅದ್ಭುತವಾಗಿ ಕಾಣಿಸಿಕೊಂಡಿರುವ ಬಗ್ಗೆ ಹೇಳಿದ್ದಾರೆ. ನಾನು ಧರಿಸಿದ್ದ ಡ್ರೆಸ್ ಬಗ್ಗೆಯೂ ಹೊಗಳಿದ್ದಾರೆ. ಆದರೆ ನಾನು ಧರಿಸಿದ್ದ ಉಡುಪಿನ ಶೈಲಿ ಬಗ್ಗೆ ಆಗಲಿ ಅಥವಾ ನನ್ನ ಲುಕ್ ಬಗ್ಗೆ ಆಗಲಿ ಯಾರು ವಿಮರ್ಶೆ ಮಾಡಲಿಲ್ಲ" - ಸೋನಮ್ ಕಪೂರ್, ಬಾಲಿವುಡ್ ನಟಿ

ಹೋಲಿಕೆಯಿಂದ ನನ್ನ ಮೇಲೆ ಯಾವ ಪ್ರಭಾವವು ಬೀರುವುದಿಲ್ಲ
ಹೋಲಿಕೆ ಬಗ್ಗೆ ಬೇಸರ ವ್ಯಕ್ತಪಡಿಸಿ ಮಾತನಾಡಿದ ಸೋನಮ್ ಕಪೂರ್, "ಹೋಲಿಕೆಯಿಂದ ನನ್ನ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ. ನಾನು ತುಂಬಾ ವಿಭಿನ್ನ ವ್ಯಕ್ತಿತ್ವದವಳು. ನನಗೆ ಇಷ್ಟವಾದದ್ದನ್ನು ಮಾತ್ರ ನಾನು ಮಾಡುತ್ತೇನೆ. ಇದೇ ರೀತಿ ಎಲ್ಲಾ ಹುಡುಗಿಯರು ಇಷ್ಟಪಡುತ್ತಾರೆ ಎಂದುಕೊಂಡಿದ್ದೇನೆ" ಎಂದು ಸಂದರ್ಶನದ ವೇಳೆ ಹೇಳಿದರು.

ರೆಡ್ ಕಾರ್ಪೆಟ್ ಮೇಲೆ ಕಾಣಿಸಿಕೊಳ್ಳುವುದು ಇಷ್ಟ
"ವಿಭಿನ್ನ ಉಡುಪುಗಳನ್ನು ಧರಿಸಿ ರೆಡ್ ಕಾರ್ಪೆಟ್ ಮೇಲೆ ವಾಕ್ ಮಾಡುವುದನ್ನು ಎಂಜಾಯ್ ಮಾಡುತ್ತೇನೆ. ಅದ್ರೆ ಅದೆಲ್ಲಾ ಆಗಿದ್ದು, ನನ್ನ ಸಹೋದರಿ ನನಗೆ ಸ್ಟೈಲಿಸ್ಟ್ ಆದ ನಂತರ ಮಾತ್ರ" -ಸೋನಮ್ ಕಪೂರ್, ಬಾಲಿವುಡ್ ನಟಿ

ನಾನು ಯಾವುದಕ್ಕೂ ಕ್ರೆಡಿಟ್ ತೆಗೆದುಕೊಳ್ಳುವುದಿಲ್ಲ
"ಕಾನ್ಸ್ ಚಲನಚಿತ್ರೋತ್ಸವದಲ್ಲಿ ನಾನು ಹೇಗೆ ಕಾಣುತ್ತಿದ್ದೆ ಎಂಬುದನ್ನು ನನ್ನ ಸಹೋದರಿ ಮತ್ತು ನನ್ನ ಟೀಮ್ ಖಚಿತ ಪಡಿಸುತ್ತಾರೆ. ಅದನ್ನು ಮಾತ್ರ ನಾನು ಇಷ್ಟಪಡುತ್ತೇನೆ. ಅದನ್ನು ಬಿಟ್ಟು ನಾನು ಅಲ್ಲಿ ಕಾಣಿಸಿಕೊಂಡಿದ್ದಕ್ಕೆ, ನಕ್ಕಿದಕ್ಕೆ ಯಾವುದೇ ಕ್ರೆಡಿಟ್ ಪಡೆಯಲು ಇಷ್ಟಪಡುವುದಿಲ್ಲ" - ಸೋನಮ್ ಕಪೂರ್, ಬಾಲಿವುಡ್ ನಟಿ


Click it and Unblock the Notifications











