»   » ರಾಷ್ಟ್ರ ಪ್ರಶಸ್ತಿ ಪಡೆದ 'ರುಸ್ತುಂ' ಮತ್ತು 'ನೀರ್ಜಾ'ಳ ಅಸಲಿ ಕಥೆ ಇಲ್ಲಿದೆ..

ರಾಷ್ಟ್ರ ಪ್ರಶಸ್ತಿ ಪಡೆದ 'ರುಸ್ತುಂ' ಮತ್ತು 'ನೀರ್ಜಾ'ಳ ಅಸಲಿ ಕಥೆ ಇಲ್ಲಿದೆ..

Posted By:
Subscribe to Filmibeat Kannada

2016ನೇ ಸಾಲಿನ ಪ್ರತಿಷ್ಟಿತ 64ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಟಕವಾಗಿದೆ. ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ಗೆ ಇದೇ ಮೊದಲ ಬಾರಿಗೆ 'ಅತ್ಯುತ್ತಮ ನಟ' ಪ್ರಶಸ್ತಿಯು 'ರುಸ್ತುಂ' ಚಿತ್ರದಲ್ಲಿನ ಅಭಿನಯಕ್ಕಾಗಿ ಲಭಿಸಿದೆ.

ಇನ್ನೂ ಹಿಂದಿಯ 'ನೀರ್ಜಾ' ಚಿತ್ರ ಅತ್ಯುತ್ತಮ ಪ್ರಾದೇಶಿಕ ಚಿತ್ರ ಪ್ರಶಸ್ತಿ ಪಡೆದಿದ್ದು, ಈ ಚಿತ್ರದಲ್ಲಿನ ಅಭಿನಯಕ್ಕಾಗಿ ಸೋನಮ್ ಕಪೂರ್ ವಿಶೇಷ ಮನ್ನಣೆ ಪಡೆದಿದ್ದಾರೆ.[ಪ್ರತಿಷ್ಠಿತ ರಾಷ್ಟ್ರ ಪ್ರಶಸ್ತಿ ಪ್ರಕಟ: ಸಂಪೂರ್ಣ ಪಟ್ಟಿ ಇಲ್ಲಿದೆ]

2016 ರಲ್ಲಿ ಬಿಡುಗಡೆ ಆಗಿ ಸೂಪರ್ ಹಿಟ್ ಆದ 'ರುಸ್ತುಂ' ಮತ್ತು 'ನೀರ್ಜಾ' ಸಿನಿಮಾಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ ನಿಮಗಾಗಿ ಇಲ್ಲಿದೆ.

ಸತ್ಯಘಟನೆ ಆಧರಿತ 'ರುಸ್ತುಂ'

'ರುಸ್ತುಂ' 195೦ ರ ದಶಕದಲ್ಲಿ ನೌಕಾಪಡೆಯ ನಿವೃತ್ತ ಅಧಿಕಾರಿ ಕೆ.ಎಮ್.ನಾನಾವತಿಯವರ ಜೀವನದಲ್ಲಿ ನಡೆದ ಸತ್ಯ ಘಟನೆ ಆಧರಿಸಿದ ಚಿತ್ರ.[ಪ್ರಪ್ರಥಮ ಬಾರಿಗೆ ರಾಷ್ಟ್ರ ಪ್ರಶಸ್ತಿ ಪಡೆದ ಅಕ್ಷಯ್ ಕುಮಾರ್ ಗೆ ಖುಷಿಯೋ ಖುಷಿ]

'ರುಸ್ತುಂ ಚಿತ್ರಕಥೆ

ಭಾರತೀಯ ನೌಕಾಪಡೆಯ ನಿಷ್ಠಾವಂತ ಕಮಾಂಡರ್ ರುಸ್ತುಂ(ಅಕ್ಷಯ್ ಕುಮಾರ್). ನೌಕಾಪಡೆ ಎಂದಮೇಲೆ ತಿಂಗಳು ಗಟ್ಟಲೆ ಮನೆ, ಹೆಂಡತಿಯನ್ನು ಬಿಟ್ಟು ದೂರು ಇರಬೇಕಾಗುತ್ತದೆ. ಹಲವು ದಿನಗಳ ನಂತರ ಮನೆಗೆ ಬಂದ ರುಸ್ತುಂ ಗೆ ತನ್ನ ಹೆಂಡತಿ ಇನ್ನೊಬ್ಬನ ಜೊತೆ ಅಕ್ರಮ ಸಂಬಂಧ ಹೊಂದಿರುವುದು ತಿಳಿಯುತ್ತದೆ. ಇದನ್ನ ತಿಳಿದ ರುಸ್ತುಂ ನೌಕೆಯಿಂದ ರಿವಾಲ್ವರ್ ತಂದು ಹೆಂಡತಿ ಜೊತೆ ಅಕ್ರಮ ಸಂಬಂಧ ಹೊಂದಿದ್ದವನನ್ನು ಶೂಟ್ ಮಾಡಿ ಸಾಯಿಸುತ್ತಾನೆ. ನಂತರ ಪೊಲೀಸ್ ಗೆ ಶರಣಾಗಿ, ಕೋರ್ಟ್ ನಲ್ಲಿ ತಾನೇ ವಾದಿಸಿ 'ರುಸ್ತುಂ' ಗೆಲ್ಲುತ್ತಾನೆ. ಈ ಥ್ರಿಲ್ಲಿಂಗ್ ಸಿನಿಮಾ ಸತ್ಯ ಘಟನೆ ಆಧರಿಸಿದ್ದು ಎಂಬುದು ವಿಶೇಷ.

ಟಿನು ಸುರೇಶ್ ದೇಸಾಯಿ ನಿರ್ದೇಶನ

ಟಿನು ಸುರೇಶ್ ದೇಸಾಯಿ ನಿರ್ದೇಶನ ಮಾಡಿದ್ದ ಈ ಚಿತ್ರದಲ್ಲಿ ಅಕ್ಷಯ್ ಕುಮಾರ್, ಇಲಿಯಾನಾ ಡಿ ಕ್ರುಝ್, ಇಶಾ ಗುಪ್ತಾ ಮತ್ತು ಇತರರು ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದರು. ಚಿತ್ರಕ್ಕೆ ಅಂಕಿತ್ ತಿವಾರಿ ಮತ್ತು ಜೀತ್ ಗಂಗುಲಿ ಸಂಗೀತ ಸಂಯೋಜನೆ ಮಾಡಿದ್ದರು.

ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದ್ದ 'ರುಸ್ತುಂ'

2016 ರಲ್ಲಿ ಸೂಪರ್ ಹಿಟ್ ಆದ 'ರುಸ್ತುಂ' ಬಿಡುಗಡೆ ಆದ ಮೊದಲ ದಿನವೇ 14.11 ಕೋಟಿ ರೂ ಗಳಿಸಿತ್ತು. ಇನ್ನು 65 ಕೋಟಿ ಬಜೆಟ್ ನ ಈ ಸಿನಿಮಾದ ಒಟ್ಟು ಬಾಕ್ಸ್ ಆಫೀಸ್ ಕಲೆಕ್ಷನ್ 216.35 ಕೋಟಿ.

ಅತ್ಯುತ್ತಮ ಪ್ರಾದೇಶಿಕ ಚಿತ್ರ 'ನೀರ್ಜಾ'

2016ನೇ ಸಾಲಿನ ಅತ್ತುತ್ತಮ ಪ್ರಾದೇಶಿಕ ಚಲನಚಿತ್ರ ಪ್ರಶಸ್ತಿಯನ್ನು 'ನೀರ್ಜಾ'(ಹಿಂದಿ) ಪಡೆದುಕೊಂಡಿದೆ. ರೂಪದರ್ಶಿ ಕಮ್ ಗಗನಸಖಿಯಾಗಿದ್ದ ನೀರ್ಜಾ ಬನೋಟ್ ತಮ್ಮ 23 ನೇ ವಯಸ್ಸಿನಲ್ಲಿ ಪಾಕಿಸ್ತಾನದ ಕರಾಚಿಯಲ್ಲಿ ಹೈಜಾಕ್ ಆಗಿದ್ದ ಪ್ಯಾನ್ ಎಎಂ ಫ್ಲೈಟ್ ನಲ್ಲಿದ್ದ ನೂರಾರು ಮಂದಿಯ ಜೀವ ಉಳಿಸಿದ್ದರು. ಈ ಧೀರ ಮಹಿಳೆಯ ಬದುಕಿನ ಚಿತ್ರಣವನ್ನು ಹೊಂದಿದ ಸಿನಿಮಾ 'ನೀರ್ಜಾ'.

'ನೀರ್ಜಾ' ಪಾತ್ರದಲ್ಲಿ ಸೋನಮ್ ಕಪೂರ್

ನೀರ್ಜಾ ಬನೋಟ್ ಅವರ 28 ವರ್ಷಗಳ ಬದುಕಿನ ಚಿತ್ರಣದ 'ನೀರ್ಜಾ' ಚಿತ್ರದಲ್ಲಿ ಸೋನಮ್ ಕಪೂರ್ 'ನೀರ್ಜಾ ಅವರ ಪಾತ್ರವನ್ನು ನಿರ್ವಹಿಸಿದ್ದರು. ಈ ಚಿತ್ರದಲ್ಲಿನ ಅಭಿನಯಕ್ಕೆ ಅವರಿಗೆ 64 ನೇ ರಾಷ್ಟ್ರ ಪ್ರಶಸ್ತಿಯ ವಿಶೇಷ ಮನ್ನಣೆ ದೊರೆತಿದೆ. ಉಳಿದಂತೆ ಚಿತ್ರದಲ್ಲಿ ಶಭಾನ ಅಝ್ಮಿ, ಯೋಗೇಂದ್ರ ಟಿಕು, ಶೇಖರ್ ರಾವ್ಜಿಯಾನಿ, ಕವಿ ಶಾಸ್ತ್ರಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದರು. ಈ ಸೂಪರ್ ಹಿಟ್ ಸಿನಿಮಾವನ್ನು ರಾಮ್ ಮಾಧ್ವಾನಿ ನಿರ್ದೇಶನ ಮಾಡಿದ್ದರು. ವಿಶಾಲ್ ಕೌರಣ ಸಂಗೀತ ಸಂಯೋಜನೆ ನೀಡಿದ್ದರು.

ಬಾಕ್ಸ್ ಆಫೀಸ್ ನಲ್ಲಿ ಸಖತ್ ಸೌಂಡ್ ಮಾಡಿದ್ದ 'ನೀರ್ಜಾ'

ಫೆಬ್ರವರಿ 19, 2016 ರಲ್ಲಿ ಬಿಡುಗಡೆ ಆಗಿದ್ದ ಈ ಚಿತ್ರ 135 ಕೋಟಿ ಬಾಕ್ಸ್ ಆಫೀಸ್ ಗಳಸಿತ್ತು.

English summary
Akshay Kumar won 'Best Actor' award for his film 'Rustom' and Sonam Kapoor's 'Neerja' won Best Film (Hindi) in 64th National Film Awards. Here is the details of both the movies.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada