ಐದಲ್ಲ..ಹತ್ತಲ್ಲ...ಬರೋಬ್ಬರಿ 20 ಕೆಜಿ ತೂಕ ಇಳಿಸಿಕೊಂಡ ಬಾಲಿವುಡ್ ನಟಿ ಸೋನಮ್ ಕಪೂರ್!

ಬಾಲಿವುಡ್ ನಟಿ ಸೋನಮ್ ಕಪೂರ್ ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ಸ್ಟೋರಿಯೊಂದನ್ನು ಹಂಚಿಕೊಂಡಿದ್ದು, ಅವರ ಫ್ಯಾನ್ಸ್ ಮತ್ತು ಫಾಲೋವರ್ಸ್ ಸಕತ್ ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. ಕಾರಣ ಸೋನಮ್ ಕಪೂರ್ ಒಂದಲ್ಲ ಎರಡಲ್ಲ ಬರೋಬ್ಬರಿ ಇಪ್ಪತ್ತು ಕೆಜಿ ತೂಕ ಇಳಿಸಿಕೊಂಡಿರುವುದಾಗಿ ಹೇಳಿಕೊಂಡಿದ್ದಾರೆ.

ನಟಿ ಸೋನಮ್ ಕಪೂರ್ ಅವರಿಗೆ ಗರ್ಭಾವಸ್ಥೆಯ ನಂತರ ತೂಕ ಏರಿಕೆಯಾಗಿತ್ತು. ನಟಿ ಆಗಸ್ಟ್ 2022 ರಲ್ಲಿ ಮಗ ವಾಯುವಿಗೆ ಜನ್ಮ ನೀಡಿದರು. ಮಗು ಜನನದ ಬಳಿಕ ತೂಕ ವಿಪರೀತವಾಗಿ ಏರಿಕೆಯಾಗಿತ್ತು. ತೂಕ ಇಳಿಸಲು ಸಾಕಷ್ಟು ಶ್ರಮ ಪಡುತ್ತಿದ್ದ ಇವರು, ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ವರ್ಕೌಟ್ ವಿಡಿಯೋ ಹಾಕಿದ್ದಾರೆ.

Actress Sonam Kapoor post-pregnancy weight loss: She loses 20 kgs

ವರ್ಕೌಟ್ ಮಾಡುತ್ತಾ ಮಿರರ್ ರೀಲ್ ಹಂಚಿಕೊಂಡ ಸೋನಮ್!

ಬುಧವಾರ, ಸೋನಮ್ ಕಪೂರ್ ತನ್ನ ಇನ್‌ಸ್ಟಾಗ್ರಾಮ್ ಸ್ಟೋರೀಸ್‌ಗೆ ತನ್ನ ವರ್ಕೌಟ್ ನಂತರದ ಸಣ್ಣ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ "What a wow. 20 Kgs down..6 more to go" (ವಾವ್.... 20 ಕೆಜಿ ಕಡಿಮೆಯಾಗಿದೆ.. ಇನ್ನೂ 6 ಕೆಜಿ ಇಳಿಯಬೇಕಿದೆ" ಎಂದು ಬರೆದುಕೊಂಡಿದ್ದಾರೆ. ಬ್ಲಾಕ್ ಕಲರ್ ಜಿಮ್ ಡ್ರೆಸ್‌ನಲ್ಲಿ ಕನ್ನಡಿ ಮುಂದೆ ಪುಟ್ಟ ವಿಡಿಯೋ ಶೂಟ್ ಮಾಡಿದ್ದಾರೆ.

ತನ್ನ ಡಯಟ್ ಪ್ಲ್ಯಾನ್ ಹೇಳಿದ್ದ ಸೋನಮ್

ಈ ತಿಂಗಳ ಆರಂಭದಲ್ಲಿ, ಸೋನಮ್ ಕಪೂರ್ ತಮ್ಮ ಫೋಟೋಗಳ ಗುಚ್ಛ ಹಂಚಿಕೊಂಡು ತಮ್ಮ ಡಯಡ್ ಪ್ಲ್ಯಾನ್ ಬಗ್ಗೆ ಮಾಹಿತಿ ನೀಡಿದ್ದರು. "ನಾನು ಮತ್ತೆ ನನ್ನಂತೆಯೇ ಆಗಲು 16 ತಿಂಗಳುಗಳನ್ನು ತೆಗೆದುಕೊಂಡಿದ್ದೇನೆ. ಯಾವುದೇ ಕ್ರ್ಯಾಶ್ ಫುಡ್ ಮತ್ತು ಕ್ರೇಜಿ ವರ್ಕೌಟ್‌ಗಳು ಇಲ್ಲದೆ ನಿಧಾನವಾಗಿ ಕೇವಲ ಸ್ಥಿರವಾದ ಸ್ವಯಂ ಆರೈಕೆ ಮತ್ತು ಮಗುವಿನ ಆರೈಕೆಯಲ್ಲಿಯೇ ಮಾಡಿದ್ದೇನೆ. ನಾನು ಇನ್ನೂ ಎಲ್ಲಿ ಇರಬೇಕೆಂದು ಬಯಸುತ್ತೇನೋ ಅಲ್ಲಿ ಇಲ್ಲ. ಆದರೂ ನನ್ನ ದೇಹಕ್ಕೆ ತುಂಬಾ ಕೃತಜ್ಞಳಾದ್ದೇನೆ" ಎಂದು ಹೇಳಿದ್ದರು.

Actress Sonam Kapoor post-pregnancy weight loss: She loses 20 kgs

ನಟಿ ಸೋನಮ್ ಕಪೂರ್ ಉದ್ಯಮಿ ಆನಂದ್ ಅಹುಜಾ ಅವರನ್ನು ಮೇ 2018 ರಲ್ಲಿ ವಿವಾಹವಾದರು. ಅವರು ಆಗಸ್ಟ್ 20, 2022 ರಂದು ಮೊದಲ ಮಗು ವಾಯುವಿಗೆ ಜನ್ಮ ನೀಡಿದರು. ಈ ವರ್ಷದ ಆರಂಭದಲ್ಲಿ ವಾಯುವಿಗೆ ಒಂದು ವರ್ಷವಾಗಿದೆ. ಅಹುಜಾ ಮತ್ತು ಕಪೂರ್ ಕುಟುಂಬವು ಮೊಮ್ಮಗನ ಮೊದಲ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿತ್ತು.

ನಟಿ ಸೋನಮ್ ಕಪೂರ್ ಸಾವರಿಯಾ ಸಿನಿಮಾ ಮೂಲಕ ಬಾಲಿವುಡ್‌ಗೆ ಕಾಲಿಟ್ಟಿದ್ದರು. ಸುಮಾರು ಹತ್ತು ವರ್ಷಗಳ ಕಾಲ ಬಾಲಿವುಡ್‌ನಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿದ್ದರು. ಸೋನಂ ಕಪೂರ್ ಕೊನೆಯದಾಗಿ ಬ್ಲೈಂಡ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಜಿಯೋ ಸಿನಿಮಾದಲ್ಲಿ ಬಿಡುಗಡೆಯಾದ ಈ ಚಿತ್ರವನ್ನು ಶೋಮ್ ಮಖಿಜಾ ನಿರ್ದೇಶಿಸಿದ್ದಾರೆ. ಇದರಲ್ಲಿ ಪುರಬ್ ಕೊಹ್ಲಿ ಕೂಡ ನಟಿಸಿದ್ದರು. ತೀಕ ಇಳಿಸಿಕೊಂಡಿರುವ ಇವರು ಮತ್ತೆ ಬಾಲಿವುಡ್‌ಗೆ ಮರಳಲಿದ್ದಾರೆ ಎಂಬ ವರದಿಗಳಿವೆ.

More from Filmibeat

English summary
Actress Sonam Kapoor post-pregnancy weight loss journey.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X