ಬಿಕಿನಿ ಫೋಟೊಗಳಲ್ಲಿ ಪಡ್ಡೆಹುಡುಗರ ಹೃದಯದಲ್ಲಿ ಮತ್ತೆ ಕಿಚ್ಚು ಹಚ್ಚಿದ ಸನ್ನಿ ಲಿಯೋನ್

ಸನ್ನಿ ಲಿಯೋನ್! ಈ ಹೆಸರು ಈಗಲೂ ಪಡ್ಡೆ ಹುಡುಗರಲ್ಲಿ ಕಿಚ್ಚು ಹಚ್ಚಿಸುವ ಹೆಸರು. ಪಾರ್ನ್ ಚಿತ್ರಗಳಿಂದ ದೇಶ ವಿದೇಶಗಳಲ್ಲಿ ಮನೆಮಾತಾದ ಸನ್ನಿ ಲಿಯೋನ್, ಅಶ್ಲೀಲ ಸಿನಿಮಾಗಳನ್ನು ಬಿಟ್ಟುಬಂದು ಬಾಲಿವುಡ್‌ಗೆ ಕಾಲಿಟ್ಟು ವರ್ಷಗಳೇ ಉರುಳಿದೆ. ಕನ್ನಡ ಸೇರಿದಂತೆ ಇತರೆ ಭಾಷೆಗಳಲ್ಲಿಯೂ ಸನ್ನಿ ದರ್ಶನ ನೀಡಿದ್ದಾರೆ. ಹಿಂದಿಯಲ್ಲಿ ಆರಂಭದಲ್ಲಿ ಹಸಿಬಿಸಿ ದೃಶ್ಯಗಳನ್ನು ಒಳಗೊಂಡ ಸಿನಿಮಾಗಳೇ ಸಿಕ್ಕರೂ, ಬಳಿಕ ಅವರಿಗೆ ವಿಭಿನ್ನ ಪಾತ್ರಗಳು ಅರಸಿ ಬರುತ್ತಿವೆ.

Recommended Video

ನಮಗೂ ಕೂಡ ಭಯವಾಗಿದೆ ಎಂದ ಸಲ್ಮಾನ್ ಖಾನ್ | Salman Khan | Filmibeat Kannada

ಸಾಮಾಜಿಕ ಉದಾರತೆಯ ಕಾರಣದಿಂದ ಕೂಡ ಸನ್ನಿ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಹಾಗೆಂದು ಅವರ ಹಳೆಯ ಹಣೆಪಟ್ಟಿಯೇನೂ ಬದಲಾಗಿಲ್ಲ. ಈಗಲೂ ಸನ್ನಿ ಲಿಯೋನ್ ಎಂದರೆ ಜನರಿಗೆ ಅಚ್ಚುಮೆಚ್ಚು. ಪಾರ್ನ್ ವೆಬ್‌ಸೈಟ್‌ಗಳಲ್ಲಿ ಸನ್ನಿ ವಿಡಿಯೋಗಳ ಬೇಡಿಕೆ ಕಡಿಮೆಯಾಗಿಲ್ಲ. ಹಾಗೆಯೇ ಸನ್ನಿ ಲಿಯೋನ್ ಅವರೇ ನಿರ್ವಹಿಸುತ್ತಿರುವ ವೆಬ್‌ಸೈಟ್‌ನಲ್ಲಿ ಕೂಡ ಅವರ ವಿಡಿಯೋಗಳಿಗಾಗಿ ಜಾಲಾಡುತ್ತಿರುತ್ತಾರೆ. ಇತ್ತೀಚೆಗೆ ಸನ್ನಿ ಕೆಲವು ಹಸಿಬಿಸಿ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಅವರ ಅಭಿಮಾನಿಗಳ ಎದೆಯಲ್ಲಿ ಕಚಗುಳಿ ಇರಿಸಿದ್ದಾರೆ.

ಬಿಕಿನಿ ಫೋಟೊಗಳಲ್ಲಿ ಸನ್ನಿ ಮಿಂಚು

ಬಿಕಿನಿ ಫೋಟೊಗಳಲ್ಲಿ ಸನ್ನಿ ಮಿಂಚು

ಇನ್‌ಸ್ಟಾಗ್ರಾಂನಲ್ಲಿ ಸನ್ನಿ ಲಿಯೋನ್‌ಗೆ ಸುಮಾರು 33 ಮಿಲಿಯನ್ ಅಭಿಮಾನಿಗಳಿದ್ದಾರೆ. ಬಿಕಿನಿ ಫೋಟೊಗಳಲ್ಲಿ ತಮ್ಮ ದೇಹದ ಸೊಬಗನ್ನು ಪ್ರದರ್ಶಿಸುವ ಮೂಲಕ ಸನ್ನಿ, ಮತ್ತೆ ಪಡ್ಡೆ ಹೈಕಳ ಗಮನ ಸೆಳೆದಿದ್ದಾರೆ. ಬಹು ದಿನಗಳ ಬಳಿಕ ಸನ್ನಿ ಬಿಕಿನಿ ಫೋಟೊಗಳನ್ನು ಹಂಚಿಕೊಂಡಿದ್ದಾರೆ.

ಬೇಸರಕ್ಕೆ ಸನ್ನಿ ಮುಲಾಮು

ಬೇಸರಕ್ಕೆ ಸನ್ನಿ ಮುಲಾಮು

ಲಾಕ್‌ಡೌನ್‌ ಕಾರಣದಿಂದ ಮನೆಯೊಳಗೇ ಇರಬೇಕಾದ ಸ್ಥಿತಿಯಲ್ಲಿ ಕೆಲವರು ಬೇಸರದಲ್ಲಿದ್ದಾರೆ. ಹೊಸ ಸಿನಿಮಾಗಳಿಲ್ಲ, ಮನರಂಜನೆಗಳಿಲ್ಲ. ಹೀಗಿರುವಾಗ ಖುಷಿ ಪಡಲು ಹೊಸತೇನೂ ಸಿಗುತ್ತಿಲ್ಲ ಎಂಬ ನೋವಿಗೆ ಸನ್ನಿ ಲಿಯೋನ್ ಮುಲಾಮು ಹಚ್ಚಿದ್ದಾರೆ.

ಕಲಾವಿದರ ಜತೆಗೆ ಸನ್ನಿ ಕಾರ್ಯಕ್ರಮ

ಕಲಾವಿದರ ಜತೆಗೆ ಸನ್ನಿ ಕಾರ್ಯಕ್ರಮ

ಸನ್ನಿ ಲಿಯೋನ್ ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ಅಪ್‌ಡೇಟ್‌ಗಳನ್ನು ಮಾಡುವ ಮೂಲಕ ತಮ್ಮ ಅಭಿಮಾನಿಗಳಲ್ಲಿ ಉತ್ತೇಜನ ನೀಡಲು ಮತ್ತು ಸಕಾರಾತ್ಮಕವಾಗಿ ಇರುವಂತೆ ನೋಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. 'ಲಾಕ್ಡ್ ಅಪ್ ವಿತ್ ಸನ್ನಿ' ಎಂಬ ಇನ್‌ಸ್ಟಾಗ್ರಾಂ ಕಾರ್ಯಕ್ರಮದ ಮೂಲಕ ಬೇರೆ ಬೇರೆ ಕಲಾವಿದರೊಂದಿಗೆ ಲೈವ್ ಬರುತ್ತಿದ್ದಾರೆ.

ದುರುಗುಟ್ಟಿ ನೋಡಿ ಪರ್ವಾಗಿಲ್ಲ!

ದುರುಗುಟ್ಟಿ ನೋಡಿ ಪರ್ವಾಗಿಲ್ಲ!

ಸನ್ನಿ ಲಿಯೋನ್ ಸತತ ವರ್ಕೌಟ್ ಮೂಲಕ ತಮ್ಮ ದೇಹದ ಸೌಂದರ್ಯವನ್ನು ಹಾಗೆಯೇ ಉಳಿಸಿಕೊಂಡು ಬಂದಿದ್ದಾರೆ. ಹೀಗಾಗಿ ಯಾವುದೇ ಮುಚ್ಚುಮರೆ, ಹಿಂಜರಿಕೆಯಿಲ್ಲದೆ ದಿಟ್ಟತನದಿಂದ ಬಿಕಿನಿ ಫೋಟೊಗಳನ್ನು ಹಂಚಿಕೊಳ್ಳುತ್ತಿದ್ದಾರೆ. 'ನೀವು ದುರುಗುಟ್ಟಿ ನೋಡುವುದು ತೊಂದರೆಯೇನಿಲ್ಲ' ಎಂಬ ಕ್ಯಾಪ್ಷನ್ ಹಾಕಿ ಮತ್ತಷ್ಟು ಕಿಚ್ಚು ಹಚ್ಚಿಸುತ್ತಿದ್ದಾರೆ.

ದೀಪ ಬೆಳಗಿದ ಸನ್ನಿ

ದೀಪ ಬೆಳಗಿದ ಸನ್ನಿ

ಸದ್ಯಕ್ಕೆ ಮನೆಯಲ್ಲಿ ಪತಿ ಹಾಗೂ ಮೂವರು ಮಕ್ಕಳೊಂದಿಗೆ ಲಾಕ್‌ಡೌನ್ ಅವಧಿಯನ್ನು ಕಳೆಯುತ್ತಿದ್ದಾರೆ. ಮನೆಯಲ್ಲಿಯೇ ಕುಳಿತು ಸಮ್ಮರ್ ಫೋಟೊಗಳೆಂದು ಬೇಸಿಗೆಯಲ್ಲಿ ಹೆಚ್ಚಿನ ಬಟ್ಟೆಯ ಅಗತ್ಯವಿಲ್ಲ ಎಂಬಂತೆ ಹಸಿಬಿಸಿ ಫೋಟೊಗಳನ್ನು ಪೋಸ್ಟ್ ಮಾಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಸಲಹೆಯಂತೆ ಭಾನುವಾರ ರಾತ್ರಿ ದೀಪ ಬೆಳಗಿದ್ದಾರೆ.

More from Filmibeat

English summary
Bollywood actress Sunny Leone has shared some bikini photos in Instagram. She said her fans 'it's ok to stare'.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X